Wednesday, December 30, 2009
ಅವರು ಮತ್ತೆ ಹುಟ್ಟಿ ಬರಲಿ...
ಕನ್ನಡ ಮೇರು ವ್ಯಕ್ತಿಗಳಾದ ಡಾ.ಸಿ.ಅಶ್ವತ್ಥ್ ಹಾಗೂ ಡಾ. ವಿಷ್ಣುವರ್ಧನ್ ಇನ್ನಿಲ್ಲವಾಗಿದ್ದಾರೆ... ಅವರಿಬ್ಬರೂ ಮತ್ತೆ ಹುಟ್ಟಿಬರಲಿ...
ಅವರನ್ನು ತನ್ನೂರಿಗೆ ಕರೆದೊಯ್ದ ಜವರಾಯನಿಗೆ ನನ್ನ
ದೊಂದು ಶಾಪ...
Wednesday, December 2, 2009
ಪುಸ್ತಕ ಬಿಡುಗಡೆ...
ರೈತ ಹೋರಾಟಗಾರ, ಎಂದು ಅಧಿಕಾರದ ಗದ್ದುಗೆ ಕಡೆ ಮುಖ ಮಾಡದೆ ಕೇವಲ ರೈತರ ಏಳಿಗೆಗಾಗಿ ಅವರ ಒಗ್ಗಟ್ಟಿಗಾಗಿ ಶ್ರಮಿಸಿದ ದೀಮಂತ ನಾಯಕ ಕಡಿದಾಳು ಶಾಮಣ್ಣ ಅವರ "ಆ ದಶಕ" ಪುಸ್ತಕ ಬುದುಗದೆ ಸಮಾರಂಭ.
ಪುಸ್ತಕ ಬಿಡುಗಡೆ ಮುನ್ನ...
ದೇವನೂರು ಮಹಾದೇವ ಅವರು ಮಾತನಾಡುತ್ತಿರುವುದು.
ಕಡಿದಾಳು ಶಾಮಣ್ಣ ಅವರ ತಾಯಿಗೆ ಸನ್ಮಾನ..
ಸಮಾರಂಭಕ್ಕೆ ಆಗಮಿಸಿದ ಸಭಿಕರು...
ಪ್ರೊ. ರವಿವರ್ಮ ಕುಮಾರ ಅವರ ಜೊತೆಗೆ...
ಕಡಿದಾಳು ಶಾಮಣ್ಣ ಅವರ ಜೊತೆ...
ದೇವನೂರು ಮಹಾದೇವ ಹಾಗು ಡಿ.ಎಸ್. ನಾಗಭೂಷಣ್ ಅವರ ಜತೆ ಅಭಿಮಾನಿಗಳು...
ಶಾಮಣ್ಣ ಹಾಗು ದೇವನೂರು ಜೆತೆಗೆ ಅಭಿಮಾನಿಗಳು...

Friday, October 23, 2009
ಅಮ್ಮಾ ನಿನ್ನ ಎದೆ ಹಾಲಲ್ಲಿ ಬೆಳೆಯಲಿ ‘ಅಮೃತ’ ಬಳ್ಳಿ
ಅದು ಅಕ್ಷರಶಃ ಅಮೃತಧಾರೆ. ತಾಯ ಹೃದಯಾಂತರಾಳದಿಂದ ಉಕ್ಕುವ ಆ ವಾತ್ಸಲ್ಯ ಧಾರೆಗೆ ಸರಿಸಮನಾದುದು ಈ ಜಗತ್ತಿನಲ್ಲಿ ಬೇರಾವುದೂ ಸಿಗಲಾರದು. ಜೀವವನ್ನು ಪೊರೆದು ಒಂದಿಡೀ ಬದುಕಿಗೆ ಭದ್ರ ಬುನಾದಿ ಹಾಕಿಕೊಡುವ ಅಮ್ಮನಕ್ಕರೆಯ ಸವಿ ಸಕ್ಕರೆಯ ಆ ಒಂದೊಂದು ಹನಿಯೂ ಈ ಭೂಮಿಯ ಮೇಲೆ ನಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಾ ಹೋಗುತ್ತದೆ. ಅಂಥ ಅಮ್ಮನ ಅತ್ಯಮೂಲ್ಯ ಎದೆ ಹಾಲಿನಿಂದಲೇ ವಂಚಿತರಾಗಿಬಿಟ್ಟರೆ ? ಆ ಜೀವಿ ಕಳಕೊಳ್ಳುವುದಕ್ಕೆ ಬೇರೇನು ಬಾಕಿ ಉಳಿದೀತು ? ಬಹುಶಃ ಇದೀಗ ಮೊಳಕೆಯೊಡೆ ಯುತ್ತಿರುವ ಈ ಕನಸು ಸಾಕಾರಗೊಂಡರೆ ಭಾರತದ ಯಾವ ಮಗುವೂ ತಾಯ ಹಾಲಿಂದ ವಂಚಿತವಾಗಲಾರದು.
ಭಾರತದಲ್ಲಿ ತಾಯಂದಿರಿಗೆ ಸರಿಯಾದ ಪೌಷ್ಟಿಕ ಆಹಾರ ದೊರೆಯುತ್ತಿಲ್ಲ. ಅದರ ಫಲವಾಗಿ ಜನಿಸಿದ ೨೪ ಗಂಟೆಗಳಲ್ಲಿ ನಿತ್ಯವೂ ೪ ಲಕ್ಷ ಮಕ್ಕಳು ಕೊನೆಯುಸಿರೆಳೆಯುತ್ತಿದ್ದಾರೆ. ಅದರ ನಡುವೆಯೂ ಬದುಕುವ ಬಹಳಷ್ಟು ಮಕ್ಕಳಿಗೆ ಮತ್ತೆ ಎದುರಾಗುವ ಸಮಸ್ಯೆ ಎದೆಹಾಲು !
ಇಂಥ ಸೂಕ್ಷ್ಮ ಸಮಸ್ಯೆಯನ್ನು ಪರಿಹರಿಸಲು ಗುಜರಾತ್‌ನಲ್ಲಿ ‘ತಾಯಿ ಎದೆಹಾಲು ಕೇಂದ್ರ’ ಸ್ಥಾಪಿಸಲಾಗಿದೆ. ಇಲ್ಲಿ ಪ್ರತಿಯೊಬ್ಬ ತಾಯಂದಿರೂ ತಮ್ಮ ಮಕ್ಕಳಿಗೆ ಆಗಿ ಉಳಿಯುವ ಬಹುಪಾಲು ಹಾಲನ್ನು ಈ ಕೇಂದ್ರಕ್ಕೆ ತಂದು ನೀಡುತ್ತಾರೆ !! ಆಶ್ಚರ್ಯವಾದರೂ ಇದು ನಿಜ.
ಇದೊಂದು ವಿನೂತನ ಪ್ರಯೋಗ. ಆದರೆ ಪ್ರಪಂಚದ ಪರಿವೆಯೇ ಇಲ್ಲದೆ ಭುವಿಗೆ ಬರುವ ಮಗುವಿನ ಪುಟ್ಟ ಹೊಟ್ಟೆಯನ್ನೂ ತುಂಬಿಸಲಾಗದೆ ಲಕ್ಷಾಂತರ ತಾಯಂದಿರು ಕೊರಗುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ ಗುಜರಾತ್‌ನಲ್ಲಿ ‘ಮದರ್ ಮಿಲ್ಕ್ ಬ್ಯಾಂಕ್’ ನಿರ್ಮಾಣ ಮಾಡಲಾಗಿದೆ. ಈ ಬ್ಯಾಂಕ್‌ನ ಹಾಲು ಕುಡಿದು ಇಂದು ಅದೆಷ್ಟೊ ಮಕ್ಕಳು ಹಸಿವು ನೀಗಿಸಿಕೊಳ್ಳುತ್ತಿವೆ.
ಸರಿಯಾಗಿ ಬೆಳವಣಿಗೆಯಾಗದ, ಅನಾರೋಗ್ಯದಿಂದ ಬಳಲುವ ಹಾಗೂ ದತ್ತು ಪಡೆದ ಮಕ್ಕಳಿಗೆ, ಎದೆ ಹಾಲಿಲ್ಲದೆ ಬಳಲುವ ತಾಯಂದಿರ ಮಕ್ಕಳಿಗೆ, ಅನಾಥ ಶಿಶುಗಳಿಗೆ ಇಂಥ ‘ದೂರದ ತಾಯಂದಿರು’ ತಮ್ಮ ಎದೆ ಹಾಲನ್ನು ಧಾರೆ ಎರೆಯುತ್ತಿದ್ದಾರೆ. ಎಲ್ಲೋ ಹುಟ್ಟಿ ಬಳಲುವ ಮಕ್ಕಳು ಇದನ್ನು ಕುಡಿಯುವ ಮೂಲಕ ಚೇತರಿಸಿಕೊಳ್ಳುತ್ತಿವೆ...
ಇದು ಇದೇ ಮೊದಲಲ್ಲ, ದಕ್ಷಿಣ ಅಮೇರಿಕದಲ್ಲಿ ಕನಿಷ್ಠ ೬ ಮಿಲಿಯನ್ ತಾಯಿ ಎದೆ ಹಾಲು ಕೇಂದ್ರಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಜತೆಗೆ ಈ ಬ್ಯಾಂಕ್‌ಗಳು ಮೊಲೆ ಹಾಲು ದಾನ ಮಾಡುವ ತಾಯಂದಿರಿಗೆ ಗೌರವಧನವನ್ನೂ ನೀಡುತ್ತಿವೆ.
ಆರೋಗ್ಯವಂತ ತಾಯಂದಿರಿಂದ ಪಡೆದ ಮೊಲೆ ಹಾಲನ್ನು ಈ ಬ್ಯಾಂಕ್‌ಗಳು ಪರೀಕ್ಷಿಸಿ, ಶೇಖರಿಸಿಡುತ್ತವೆ. ಆನಂತರ ನಿಗದಿತ ತಜ್ಞರನ್ನು ಸಂಪರ್ಕಿಸಿ ಅಗತ್ಯವಿರುವ ಮಕ್ಕಳಿಗೆ ಪೂರೈಕೆ ಮಾಡುತ್ತವೆ. ಆ ಮೂಲಕ ಕಣ್ಣಿಗೆ ಕಾಣದ, ದೂರದ ಯಾವುದೋ ಮಗುವಿಗೆ ಇನ್ನಾವುದೋ ಮಹಿಳೆ ‘ತಾಯಿ’ಯಾಗುವ ಭಾಗ್ಯ ಒದಗಿಸುತ್ತಿವೆ.
ಈ ‘ಮದರ್ ಮಿಲ್ಕ್ ಬ್ಯಾಂಕ್’ ಮೊದಲು ಆರಂಭವಾಗಿದ್ದು ೧೯೮೫ರಲ್ಲಿ. ಕೊಲೊರಾಡೊದಲ್ಲಿ ಮೊಟ್ಟ ಮೊದಲ ಬಾರಿ ಮದರ್ ಮಿಲ್ಕ್ ಕ್ಲಿನಿಕ್ ಆರಂಭವಾದಾಗ ಆರಂಭದಲ್ಲಿ ಕೆಲವರು ಮೂಗು ಮುರಿದರೂ ಆನಂತರ ಅದೇ ಜನಮನ್ನಣೆ ಗಳಿಸಿತು. ಮುಂದಿನ ದಿನಗಳಲ್ಲಿ ಅದೇ ‘ಮದರ್ ಮಿಲ್ಕ್ ಬ್ಯಾಂಕ್’ ಆಗಿ ಮಾರ್ಪಾಡಾಯಿತು.
ಅಲ್ಲಿಂದ ಮುಂದೆ ಅಮೆರಿಕದಲ್ಲಿ ೬, ಉತ್ತರ ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೋದಲ್ಲಿ ತಲಾ ಒಂದೊಂದು ಎದೆ ಹಾಲಿನ ಬ್ಯಾಂಕ್‌ಗಳಿವೆ. ಆನಂತರ ವಿಶ್ವದ ೫ ದೇಶಗಳ ೪೬ ರಾಜ್ಯಗಳಲ್ಲಿ ಎದೆ ಹಾಲು ಕೆಂದ್ರಗಳ ಬಗ್ಗೆ ನುರಿತ ತಜ್ಞರಿಂದ ಮಾಹಿತಿ ಹಾಗೂ ತರಬೇತಿ ಮೂಲಕ ತಿಳಿ ಹೇಳಲಾಗುತ್ತಿದೆ.
ಗುಜರಾತ್‌ನಲ್ಲಿ ನ್ಯಾಷನಲ್ ಡೈರಿ ಡೆವಲಪ್‌ಮೆಂಟ್ ಬೋರ್ಡ್(ಎನ್‌ಡಿಡಿಬಿ) ಹಾಗೂ ಅಮುಲ್ ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೇಟಿಂಗ್ ಫೆಡರೇಷನ್ (ಜಿಸಿಎಂಎಂಎಫ್) ಸಹಯೋಗದೊಂದಿಗೆ ಎದೆ ಹಾಲಿನ ಪ್ಯಾಕ್‌ಗಳನ್ನು ತಯಾರಿಸಲಾಗುತ್ತಿದೆ. ಗಾಂನಗರದಲ್ಲಿ ತಯಾರಾಗುವ ಈ ‘ಅಮುಲ್’ ಎದೆಹಾಲನ್ನು ೪೫೦೦ ಡೀಲರ‍್ಸ್ ಮೂಲಕ ರಾಜ್ಯಾದ್ಯಂತ ವಿತರಣೆ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಈ ಎದೆ ಹಾಲು ಲಭ್ಯವಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಜಿಸಿಎಂಎಂಎಫ್‌ನ ಪ್ರಧಾನ ವ್ಯವಸ್ಥಾಪಕ ಆರ್.ಎಸ್. ಸೋ.
೨೦ ವರ್ಷಗಳಿಂದ ‘ಅಮುಲ್’ ಮಾರುಕಟ್ಟೆಯಲ್ಲಿದ್ದು, ಈಗ ೨೦೦೫ರಲ್ಲಿ ‘ಸುಗಮ್’ ಎಂಬ ಹೊಸ ಬ್ರಾಂಡ್ ನೇಮ್‌ನೊಂದಿಗೆ ಮತ್ತೊಂದು ಪರಿಷ್ಕೃತ ಎದೆ ಹಾಲಿನ ಪ್ಯಾಕ್‌ಗಳನ್ನು( ಅಲಹಾಬಾದ್‌ನಲ್ಲಿ ಶೇಖರಣೆ) ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈ ಹಾಲಿನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಇಲ್ಲಿನ ಜಿಸಿಎಂಎಂಎಫ್ ಹೊಸದಿಲ್ಲಿಯ ಮದರ್ ಡೈರಿ ಇಂಡಿಯಾ ಲಿಮಿಟೆಡ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಇದರಿಂದ ‘ಸುಗಮ್’ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇಷ್ಟು ದಿನ ರಕ್ತದಾನ, ನೇತ್ರದಾನ ಸೇರಿದಂತೆ ಮನುಷ್ಯನ ದೇಹದ ಅಮೂಲ್ಯವಾದ ನಾನಾ ಭಾಗಗಳನ್ನು ದಾನ ಮಾಡುವುದು ವಾಡಿಕೆಯಾಗಿತ್ತು. ಆದರೆ ಸದ್ಯದ ಮಟ್ಟಿಗೆ ಹಾಗೂ ಭಾರತದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸೋರಿ ಹೋಗುತ್ತಿರುವ ಮಾನವ ಸಂಪನ್ಮೂಲವನ್ನು ಸರಿಯಾದ ರೀತಿ ಸದ್ಬಳಕೆ ಮಾಡಿಕೊಳ್ಳಬೇಕಾದರೆ ಇಂಥ ‘ಎದೆ ಹಾಲು ದಾನ ಕೂಡ ಅತ್ಯಮೂಲ್ಯ’.
ಆ ಮೂಲಕ ಹುಟ್ಟಿದ ಮರುಕ್ಷಣದಿಂದಲೇ ಹಸಿವಿನ ರುಚಿ ನೋಡುತ್ತಲೇ ನೊಂದು, ಬೆಂದು ಬದುಕುವ ಅಥವಾ ಅರ್ಧಕ್ಕೇ ಕಣ್ಣು ಮುಚ್ಚುವ ಮಕ್ಕಳಿಗೆ ಬದುಕು, ಜೀವ ಎರಡೂ ದೊರೆತಂತಾಗುತ್ತದೆ. ಒಂದು ಮಗುವಿಗೆ ಹೆಣ್ಣು ಜನ್ಮ ನೀಡಿ ‘ತಾಯಿ’ ಎನಿಸಿಕೊಳ್ಳಬಹುದು; ಆದರೆ ಅದೇ ಮಗುವಿಗೆ ಆಕೆಯಿಂದ ಎದೆ ಹಾಲು ನೀಡಲಾಗಲಿಲ್ಲ ಎಂದರೆ ಆ ತಾಯಿಯ ಕರುಳಿನ ಕೂಗು ಅರ್ಥವಾಗುವುದಾದರೂ ಯಾರಿಗೆ? ಅದು ಮತ್ತೊಬ್ಬ ತಾಯಿಗೆ ಮಾತ್ರ.
ಆದ್ದರಿಂದ ಪ್ರತಿಯೊಬ್ಬ ತಾಯಂದಿರೂ ಕೂಡ ತಮ್ಮ ಮಗುವಿಗೆ ಉಣಬಡಿಸಿ ಉಳಿಯುವ ಹಾಲನ್ನು ಹಿಂಡಿ ಅದನ್ನು ಒಂದು ಬಾಟಲಿಯಲ್ಲಿ ಭದ್ರವಾಗಿ ಶೇಖರಿಸಿ ಇಂಥ ‘ಮದರ್ ಮಿಲ್ಕ್ ಬ್ಯಾಂಕ್’ಗಳಿಗೆ ನೀಡುವುದು ಉತ್ತಮ. ಇದರಿಂದ ಅವರು ಕಳೆದುಕೊಳ್ಳುವುದು ಏನೂ ಇಲ್ಲ. ಜತೆಗೆ ನೆನಪಿರಲಿ, ಇದು ಕೃತಕವಾಗಿ ತಯಾರಿಸುವ ಪೇಯವಲ್ಲ. ನಿಜವಾದ ‘ಅಮೃತ’. ಇಂಥ ಕೇಂದ್ರಗಳು ಕರ್ನಾಟಕದಲ್ಲೂ ಸ್ಥಾಪನೆಯಾದರೆ ಒಳ್ಳೆಯದು. ಆ ಮೂಲಕ ರಾಜ್ಯದ ಬೀದಿ ಬೀದಿಗಳಲ್ಲಿ ಅನಾಥವಾಗಿ, ಅಪೌಷ್ಟಿಕತೆಯಿಂದ ಪ್ರಪಂಚ ನೋಡುವ ಲಕ್ಷಾಂತರ ಎಳೆಯ ಕಂದಮ್ಮಗಳಿಗೆ ಮಹಾತಾಯಂದಿರ ಅಮೂಲ್ಯವಾದ ಎದೆ ಹಾಲು ಜೀವನ ಜ್ಯೋತಿಯಾಗಲಿ...

ಇದು ನೆನಪಿರಲಿ...
- *ನಿಮ್ಮ ಮಗು ಮೊಲೆ ಹಾಲು ಕುಡಿಯುವುದನ್ನು ಬಿಟ್ಟಿದ್ದರೆ ನೀವು ನಿಮ್ಮ ಹಾಲನ್ನು ದಾನ ಮಾಡಬಹುದು.
- *ಹಾಲು ದಾನ ಮಾಡುವುದರಿಂದ ನಿಮ್ಮ ಎದೆಯಲ್ಲಿ ಹಾಲು ಉತ್ಪಾದನೆ ನಿಲ್ಲುವುದಿಲ್ಲ.
- *ನಿಮ್ಮ ದೇಹದಲ್ಲಿ ಎದೆ ಹಾಲಿನ ಪ್ರಮಾಣ ಹೆಚ್ಚಿದ್ದರೂ ಅಥವಾ ನಿಮ್ಮ ಮಗುವಿಗೆ ಬೇಕಾದ ಪ್ರಮಾಣಕ್ಕಿಂತ ಹೆಚ್ಚಿದ್ದರೂ ದಾನ ಮಾಡಬಹುದು.
- *ಒಂದು ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿದ್ದ ಆರೋಗ್ಯವಂತ ತಾಯಂದಿರು ಹಾಲು ದಾನ ಮಾಡಬಹುದು.
- * ದಾನ ಮಾಡುವ ತಾಯಂದಿರು ಮದ್ಯಪಾನ, ಧೂಮಪಾನ, ಅತಿಯಾದ ಔಷಧ ಸೇವನೆ, ಗಿಡಮೂಲಿಕೆ ಅಥವಾ ಮಾದಕ ವಸ್ತುಗಳಿಗೆ ಅಂಟಿಕೊಂಡಿರಬಾರದು.
- * ದಾನ ಮಾಡುವ ಮುನ್ನ ಬ್ಯಾಂಕ್‌ಗಳಲ್ಲಿ ನಿಮ್ಮ ರಕ್ತ ಹಾಗೂ ಆರೋಗ್ಯ ಪರೀಕ್ಷೆ ನಡೆಸಲಾಗುತ್ತದೆ. ನೀವು ಆರೋಗ್ಯವಾಗಿದ್ದರೆ ಮಾತ್ರ ದಾನಕ್ಕೆ ಅವಕಾಶ.
- *ರಕ್ತ ಪರೀಕ್ಷೆಯ ಜತೆಗೆ ಸಿಫಿಲಿಸ್, ಹೆಪಟೈಟಿಸ್ ಬಿ ಮತ್ತು ಸಿ, ಎಚ್‌ಐವಿ ೧ ಮತ್ತು ೨, ಎಚ್‌ಟಿಎಲ್‌ವಿ ಪರೀಕ್ಷೆ ಮಾಡಲಾಗುತ್ತದೆ.
- *ಯಾವ ಪರೀಕ್ಷೆಗೂ ಎದೆ ಹಾಲು ದಾನಿಗಳಿಂದ ಹಣ ಪಾವತಿಸಿಕೊಳ್ಳುವುದಿಲ್ಲ.
- *ನಿಮ್ಮ ಮಗು ಆಸ್ಪತ್ರೆಯಲ್ಲಿದ್ದರೆ ಅಥವಾ ನಿಮ್ಮ ಎದೆ ಹಾಲನ್ನು ಸಂಪೂರ್ಣವಾಗಿ ಮಗು ಕುಡಿಯದಿದ್ದಾಗ ಅದನ್ನು ಅನಾವಶ್ಯಕವಾಗಿ ಹಾಳು ಮಾಡಬೇಡಿ.
ತಾಯಂದಿರಿಗೊಂದು ಟಿಪ್ಸ್
ನಿಮ್ಮ ಮಗು ಎಷ್ಟು ಹಾಲು ಕುಡಿಯುತ್ತದೆ ಎಂದು ಮೊದಲು ತಿಳಿದುಕೊಳ್ಳಿ. ನೀವು ಉದ್ಯೋಗಕ್ಕೆ ಹೋಗುವವರಾದರೆ ನಿಮ್ಮ ಎದೆ ಹಾಲನ್ನು ಒಂದು ಫೀಡಿಂಗ್ ಬಾಟಲಿಯಲ್ಲಿ ತುಂಬಿ ಅದನ್ನು ನಿಮ್ಮ ಮಗು ಮನೆಯಲ್ಲಿದ್ದರೆ ಮನೆಯವರಿಗೆ ತೋರಿಸಿ ಹೋಗಿ, ಇಲ್ಲವೇ ಡೇ ಕೇರ್‌ಗೆ ಮಗುವನ್ನು ಬಿಡುವುದಾದರೆ ಮಗುವಿನ ಜತೆ ಕೊಟ್ಟುಬಿಡಿ. ಆಗ ನಿಮ್ಮ ಮಗು ಆರೋಗ್ಯಕರವಾಗಿ ಬೆಳೆಯುತ್ತದೆ. ನೀವು ಎಲ್ಲೇ ಇದ್ದರೂ ನಿಮ್ಮ ಮಗು ನಿಮ್ಮ ಎದೆ ಹಾಲನ್ನೇ ಕುಡಿದು ಬೆಳೆಯುತ್ತದೆ. ಆದರೆ ಎದೆ ಹಾಲನ್ನು ಹಾಳು ಮಾಡಬೇಡಿ. ಅದಕ್ಕೆ ಒಂದು ಜೀವವನ್ನೊ ಪೊರೆಯುವ ಶಕ್ತಿ ಇದೆ. ನಿಮ್ಮ ಎದೆ ಹಾಲು ಅಮೃತಕ್ಕೆ ಸಮಾನ ಎಂಬುದನ್ನು ಮರೆಯದಿರಿ. ಅದು ನೀಡುವ ಆರೋಗ್ಯವನ್ನು ಯಾವುದೇ ಹಾಲು ಅಥವಾ ಸಿದ್ಧ ಆಹಾರವೂ ನೀಡಲಾರದು.
ಅನ್ಯ ದೇಶಗಳ ಪಾಲಾಗುತ್ತಿರುವ ದೇಸಿ ತಳಿಗಳು
ಬದಲಾಯಿಸಲು ಸಾಧ್ಯವೇ ಇಲ್ಲ(!?) ಎನ್ನುವಷ್ಟರಮಟ್ಟಿಗೆ ಕೃಷಿ ಕ್ಷೇತ್ರದ ಮೇಲೆ ಜಾಗತಿಕರಣದ ಕರಾಳ ಬಾಹುಗಳು ಚಾಚಿಕೊಂಡಿರುವುದು ಈಗ ಇತಿಹಾಸ. ಆದರೆ ಇದರ ವ್ಯತಿರಿಕ್ತ ಪರಿಣಾಮ ಕೃಷಿಗೆ ಬೆನ್ನೆಲುಬಾಗಿ ನಿಂತ ರಾಸುಗಳ ಮೇಲೂ ಆಗಿದೆ. ಭಾರದತಲ್ಲಿದ್ದ ಬಹುತೇಕ ಬಲಾಢ್ಯ ಗೋ ತಳಿಗಳನ್ನೆಲ್ಲಾ ವಿದೇಶೀಯರು ತಮ್ಮ ಕೈ ವಶ ಮಾಡಿಕೊಂಡಿದ್ದಾರೆ. ಅವುಗಳಿಂದ ಇಂದಿಗೂ ಹೊಸ ಹೊಸ ರೀತಿಯ ತಳಿಗಳನ್ನು ಆವಿಷ್ಕರಿಸುತ್ತಲೇ ಇದ್ದಾರೆ.
ಇಡೀ ವಿಶ್ವದಲ್ಲಿಯೇ ಉತ್ಕೃಷ್ಟ ಹಾಗೂ ಬಲಾಡ್ಯ ಜಾನುವಾರು ತಳಿಗಳಿದ್ದುದು ಭಾರತದಲ್ಲಿ ಮಾತ್ರ. ಜಾಗತಿಕ ಮಟ್ಟದಲ್ಲಿ ಇಂದು ಗುರುತಿಸಿಕೊಂಡಿರುವ ಕೃಷ್ಣವೇಣಿ, ಒಂಗಲ್, ಅಮೃತಮಹಲ್, ಕಾಂಗಾಯಾಮ್, ದೇವಣಿ, ಪುಂಗನೂರು ಮುಂತಾದ ತಳಿಗಳು ಈಗ ಭಾರತದ ರೈತರಿಗೆ ಕನಸಾಗಿವೆ. ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಬಳಕೆ ಮಾಡುವ ಹೊಸ ತಂತ್ರeನವನ್ನು ಇಲ್ಲಿನ ರೈತರ ಮೇಲೆ ಹೇರಿದ ವಿದೇಶಿಯ ಲಾಭಿಕೋರರು, ಇಲ್ಲಿನ ಬಲಾಢ್ಯ ತಳಿಗಳನ್ನು ತೆಗೆದುಕೊಂಡು ಹೋಗಿ ತಮ್ಮ ನೆಲದಲ್ಲಿ ಅವುಗಳ ಹೊಸ ಆವಿಷ್ಕಾರಕ್ಕೆ ಕೈ ಹಾಕಿದ್ದಾರೆ.
ಬ್ರಿಟೀಷರ ಕಾಲದಿಂದಲೂ ಭಾರತದ ರೈತರ ರೈತಾಪಿ ಶೈಲಿಯನ್ನು ಮನಗಂಡ ವಿದೇಶಿಯರು, ಆರೋಗ್ಯಯುತ ಬೆಳೆ ಬೆಳೆಯಲು ಭಾರತದ ದೇಸಿ ಪದ್ಧತಿ ಹಾಗೂ ಇಲ್ಲಿನ ರಾಸುಗಳ ಬಳಕೆಯೇ ಸೂಕ್ತ ಎಂಬುದನ್ನು ಅಣುಅಣುವಾಗಿ ಗಮನಿಸಿದ್ದಾರೆ. ಆದರೆ ಅದ್ಯಾವುದೂ ನಮ್ಮ ರೈತರ ಗಮನಕ್ಕೆ ಬರಲೇ ಇಲ್ಲ. ಜಾಗತಿಕರಣದ ಪ್ರಭಾವಕ್ಕೆ ಸಿಕ್ಕಿ ವೇಗವಾಗಿ ಬೆಳೆಯುವ ಹಾಗೂ ಪ್ರಗತಿ ಸಾಸುವ ಹುಂಬತನದ ಹಂಬಲದಲ್ಲಿ ನಮ್ಮತನವನ್ನೇ ಗಾಳಿಗೆ ತೂರಿ, ಅನ್ಯರ ಪದ್ಧತಿಯನ್ನು ಅನುಸರಿಸಲಾರಂಭಿಸಿದೆವು. ಅದರ ಪರಿಣಾಮ ಯಾವುದೇ ಬೆಳೆಯ ಕಾಳುಗಳನ್ನು ಇಟ್ಟುಕೊಂಡು ಮತ್ತೆ ಬಿತ್ತನೆಗೆ ಬೀಜವನ್ನಾಗಿ ಬಳಸಿಕೊಳ್ಳುವ ಹಳೇಯ ‘ನಾಟಿ ಪದ್ಧತಿ’ ನೀರಿನಲ್ಲಿ ಕೊಚ್ಚಿ ಹೋಗಿದೆ!
ಅದೊಂದೇ ಅಲ್ಲ, ಜಾನುವಾರುಗಳ ಸಾಕುವಿಕೆಯಲ್ಲೂ ರೈತರು ಮಾಡಿದ ತಪ್ಪು ಅದೇ. ಅದರ ಲಾಭವನ್ನು ವಿದೇಶೀಯರು ಚೆನ್ನಾಗಿ ಬಳಸಿಕೊಂಡರು. ಅದರ ಪರಿಣಾಮ ಕೃಷ್ಣವೇಣಿ, ಒಂಗಲ್, ಅಮೃತಮಹಲ್, ಕಾಂಗಾಯಾಮ್, ದೇವಣಿ, ಪುಂಗನೂರು ಮುಂತಾದ ತಳಿಗಳು ಇಂದು ಇಂಗ್ಲೇಂಡ್, ಅಮೇರಿಕಾ,ಬೆಜಿಲ್, ಈಜಿಪ್ಟ್ ಮುಂತಾದ ದೇಶಗಳ ಪಾಲಾಗಿವೆ.
ಕೃಷ್ಣವೇಣಿ:
ರಾಜ್ಯದ ಮೈಸೂರು ಪ್ರಾಂತ್ಯದಲ್ಲಿ ಉದ್ಭವವಾದ ತಳಿಗಳಲ್ಲಿ ಕೃಷ್ಣವೇಣಿ ಕೂಡ ಒಂದು. ೧೯ನೇ ಶತಮಾನದಲ್ಲಿ ಇದನ್ನು ಕೃಷ್ಣಾ, ಘಟಪ್ರಭ ಹಾಗೂ ಮಲಪ್ರಭ ನದಿ ತೀರಗಳಲ್ಲಿ ಮೈಸೂರು ಭಾಗದಲ್ಲಿದ್ದ ಎರಡ್ಮೂರು ಜಾತಿಯ ತಳಿಗಳನ್ನು ಸಮೀಕರಿಸಿ ಆ ಮೂಲಕ ಕೃಷ್ಣವೇಣಿಯನ್ನು ತಯಾರು ಮಾಡಲಾಯಿತು. ಇದರಲ್ಲಿ ಕಾಥೆವಾಡದ ಗೀರ್ ಹಾಗೂ ಆಂದ್ರದ ನೆಲ್ಲೂರಿನ ಒಂಗಲ್ ಜಾತಿ ತಳಿಗಳನ್ನು ಮಿಶ್ರಣ ಮಾಡಿರಬಹುದು ಎನ್ನಲಾಗಿದೆ. ಆ ಕಾರಣಕ್ಕಾಗಿಯೇ ಕೃಷ್ಣವೇಣಿ ತಳಿಯ ಹೋರಿಗಳು ಉಳುಮೆಗೆ ಹಾಗೂ ಹಸುಗಳು ಅತ್ಯಕ ಹಾಲು ಕರೆಯಲು ಸಹಾಯಕವಾಗಿದ್ದವು.
ಈ ತಳಿ ಅತ್ಯಂತ ಶಕ್ತಿಯುತವಾದದ್ದು. ಯಾವುದೇ ಕೆಲಸ ಕಾರ್ಯಗಳಿಗಾದರೂ ಸರಿ ಸೈ ಎನ್ನುವಂಥದ್ದು. ಆದರೆ ಈಗ ಈ ತಳಿಯೇ ಮಾಯವಾಗುತ್ತಿದೆ. ಅದಕ್ಕೆ ಮೂಲ ಕಾರಣ ಇಲ್ಲಿನ ರೈತರ ನಿರ್ಲಕ್ಷ್ಯ, ಪಶು ಸಂಗೋಪನ ಇಲಾಖೆಯ ಬೇಜವಾಬ್ದಾರಿ ಹಾಗೂ ಅನ್ಯ ದೇಶಗಳ ಹುನ್ನಾರ. ಈ ಎಲ್ಲ ಹಿನ್ನೆಲೆಯಲ್ಲಿ ೧೯೪೬ರಲ್ಲಿ ೬.೫ ಲಕ್ಷ ಇದ್ದ ಕೃಷ್ಣವೇಣಿ ತಳಿ ಈಗ ಕೇವಲ ೨೮೧ಮಾತ್ರ! ಅದೂ ಈಗ ಎಲ್ಲ ಕಡೆ ಸಿಗುವುದಿಲ್ಲ. ಜಮಖಂಡಿ, ಅಥಣಿ, ಮುಧೋಳ್, ಚಿಕ್ಕೋಡಿ, ಚಿಂಚಿಲಿ, ರಾಯಭಾಗ, ಬೆಳಗಾವಿ, ಬಿಜಾಪು ಭಾಗಲಕೋಟೆ ಪ್ರದೇಶಗಳಲ್ಲಿ ಮಾತ್ರ ಕಾಣಬರುತ್ತದೆ. ಉಳಿದಂತೆ ದಕ್ಷಿಣ ಮಹಾರಾಷ್ಟ್ರದ ಸಾಂಗ್ಲಿ, ಈಚಲ, ಮಿರಾಜ್, ಈರಂದವಾಡ, ಕೊಲ್ಲಾಪುರ, ಸತಾರ ಜಿಲ್ಲೆಗಳಲ್ಲಿ ಕಂಡು ಬರುತ್ತದೆ.
ಇವು ಆಕಾರ ಹಾಗೂ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಹೆಚ್ಚು ತೂಕ ಕೂಡ ಹೊಂದಿರುತ್ತವೆ. ಇವುಗಳ ಸಾಮರ್ಥ್ಯ ಹಾಗೂ ಕಷ್ಟ ಸಹಿಷ್ಣತೆಯನ್ನು ಮನಗಂಡ ಬ್ರೆಜಿಲ್ ಹಾಗೂ ಅಮೆರಿಕಾದ ಜಾನುವಾರು ತಳಿ ಅಭಿವೃದ್ಧಿ ಪರಿಣಿತರು ಅವುಗಳನ್ನು ತಮ್ಮ ದೇಶಗಳಿಗೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಈ ಕೃಷ್ಣವೇಣಿ ಈಗ ಆವಿಷ್ಮಾರಗೊಂಡ ರಾಜ್ಯದಲ್ಲಿಯೇ ಅವನತಿಯ ಹಾದಿಯಲ್ಲಿವೆ.
ಇದರಿಂದಾಗಿ ಈ ತಳಿ ಕೂಡ ಇಲ್ಲಿ ಇಲ್ಲದಾಗಿದ್ದು, ಅವನತಿಯ ಹಾದಿಯಲ್ಲಿದೆ. ತರಿಕೆರೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮಾತ್ರ ಅಂದಾಜು ಒಂದು ಸಾವಿರ ಹೋರಿಗಳು ಮಾತ್ರ ಸಿಗಬಹುದು ಎನ್ನಲಾಗಿದೆ. ಇನ್ನು ಅಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಆವಿಷ್ಕಾರಗೊಳಿಸಲಾದ ಪುಂಗನೂರು ತಳಿ ಕೂಡ ವಿದೇಶಿಗರ ಓರೆಗಣ್ಣಿಗೆ ತುತ್ತಾಗಿ ಈಗ ಸಂಪೂರ್ಣವಾಗಿ ನಾಶವಾಗಿದೆ. ಈ ತಳಿಗಳನ್ನು ಹುಡುಕಾಡಿದರೆ ಆಂಧ್ರದ ಕೆಲವೇ ಕೆಲವು ಕಡೆಗಳಲ್ಲು ೧೦೦ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಸಿಗಬಹುದು.
ಈ ಎಲ್ಲ ತಳಿಗಳೂ ಕೂಡ ಉಬಯ ರೀತಿಯ ಕೆಲಸಕ್ಕೆ ಉಪಯುಕ್ತವಾದವು. ಈ ಜಾತಿಯ ಹಸುಗಳು ಕನಿಷ್ಠ ೫ರಿಂದ ೬ಲೀ. ಹಾಲು ನೀಡುತ್ತವೆ. ಹೋಗಿಗಳು ಕನಿಷ್ಠ ೧೦ಗಂಟೆ ನಿರಂತರವಾಗಿ ಕೆಲಸ ಮಾಡಬಲ್ಲವು. ಆದರೆ ಈ ಎಲ್ಲ ತಳಿಯ ರಾಸುಗಳನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಅನಂತರದ ಹತ್ತು ವರ್ಷಗಳ ಕಾಲ ನಿರಂತರವಾಗಿ ಭಾರತದಿಂದ ಇಂಗ್ಲೇಂಡ್ ಮತ್ತಿರರ ದೇಶಗಳಿಗೆ ಕೊಂಡೊಯ್ದಿದ್ದಾರೆ. ೧,೮೬೦ರಲ್ಲಿಯೇ ಈಜಿಪ್ಟ್‌ನ ರಾಜ ಪಾಷಾ ಏಕ ಕಾಲಕ್ಕೆ ಸಾವಿರಾರು ರಾಸುಗಳನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ. ಅವುಗಳನ್ನು ಆರಂಭದಲ್ಲಿ ಮಿಲಿಟರಿಗೆ ಬಳಸಿಕೊಳ್ಳಲಾಗುತ್ತಿತ್ತು. ಅನಂತರ ಅವುಗಳ ದುಡಿಯುವ ಸಾಮರ್ಥ್ಯವನ್ನು ಅರಿತು ಅವುಗಳನ್ನೇ ಬಳಸಿ ಹೊಸ ಹೊಸ ತಳಿಗಳನ್ನು ಕಂಡು ಹಿಡಿಯಲು ವಿದೇಶಗಳಲ್ಲಿರುವ ಕ್ಯಾಟಲ್‌ಬ್ರೀಡರ್ ಅಸೋಸಿಯೇಷ್‌ನ್‌ಗಳು (ಜಾನುವಾರು ತಳಿ ಅಭಿವೃದ್ಧಿ ಕೇಂದ್ರಗಳು) ಆರಂಭಿಸಿದವು.
ಅದೇ ಸಮಯದಲ್ಲಿ ಭಾರತದ ಕೃಷಿಯ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳು ಒಂದೊಂದಾಗಿ ಹಿಡಿತ ಸಾಸಲು ಆರಂಭಿಸಿದ್ದವು. ಹೀಗಾಗಿ ಪಾಶ್ಚಾತ್ಯೀಕರಣ, ಜಾಗತಿಕರಣದ ವ್ಯಾಮೋಹಕ್ಕೆ ಬಲಿಯಾದ ಇಲ್ಲಿನ ರೈತರು ಕೂಡ ಈ ದೇಸಿ ತಳಿಯ ಹಸು, ಹೋರಿಗಳ ಮೇಲೆ ಹಂತ ಹಂತವಾಗಿ ನಿರ್ಲಕ್ಷ್ಯ ತೋರತೊಡಗಿದರು. ಅದರ ಪರಿಣಾಮ ಇಂದು ಭಾರತದ ಬಹುತೇಕ ಬಲಾಡ್ಯ ತಳಿಗಳು ವಿದೇಶಗಳ ಪಾಲಾಗಿವೆ.
ಬಲಿಷ್ಠ ಹಾಗೂ ಶಕ್ತಿಯುತವಾದ ಬಹುತೇಕ ತಳಿಗಳ ಹಸುಗಳಿಗೆ ಅಸಮರ್ಥ ಜಾತಿಯ ಹೋರಿಗಳ ವೀರ್ಯವನ್ನು ಕೃತಕವಾಗಿ ಹಾಕುವುದನ್ನು ಅಳವಡಿಸಿಕೊಂಡ ಹಿನ್ನೆಲೆಯಲ್ಲಿಯೂ ಇಲ್ಲಿನ ದೇಸಿ ತಳಿಗಳು ಸರ್ವನಾಶವಾಗಿವೆ. ಆದ್ದರಿಂದ ಕೃಷಿ ನಿಜಕ್ಕೂ ಉಳಿಯಬೇಕೆಂದರೆ ದೇಸಿ ತಳಿಗಳನ್ನು ಮೊದಲು ಉಳಿಸಿಕೊಳ್ಳುವ ಪ್ರಯತ್ನವನ್ನು ರೈತರು ಮಾಡಬೇಕಿದೆ. ಇಲ್ಲವಾದರಲ್ಲಿ ಇರುವ ತಳಿಗಳೂ ನಾಶವಾಗುವುದರಲ್ಲಿ ಸಂಶಯವಿಲ್ಲ...
ಇಡೀ ವಿಶ್ವದಲ್ಲಿಯೇ ಉತ್ಕೃಷ್ಟ ಹಾಗೂ ಬಲಾಡ್ಯ ಜಾನುವಾರು ತಳಿಗಳಿದ್ದುದು ಭಾರತದಲ್ಲಿ ಮಾತ್ರ. ಜಾಗತಿಕ ಮಟ್ಟದಲ್ಲಿ ಇಂದು ಗುರುತಿಸಿಕೊಂಡಿರುವ ಕೃಷ್ಣವೇಣಿ, ಒಂಗಲ್, ಅಮೃತಮಹಲ್, ಕಾಂಗಾಯಾಮ್, ದೇವಣಿ, ಪುಂಗನೂರು ಮುಂತಾದ ತಳಿಗಳು ಈಗ ಭಾರತದ ರೈತರಿಗೆ ಕನಸಾಗಿವೆ. ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಬಳಕೆ ಮಾಡುವ ಹೊಸ ತಂತ್ರeನವನ್ನು ಇಲ್ಲಿನ ರೈತರ ಮೇಲೆ ಹೇರಿದ ವಿದೇಶಿಯ ಲಾಭಿಕೋರರು, ಇಲ್ಲಿನ ಬಲಾಢ್ಯ ತಳಿಗಳನ್ನು ತೆಗೆದುಕೊಂಡು ಹೋಗಿ ತಮ್ಮ ನೆಲದಲ್ಲಿ ಅವುಗಳ ಹೊಸ ಆವಿಷ್ಕಾರಕ್ಕೆ ಕೈ ಹಾಕಿದ್ದಾರೆ.
ಬ್ರಿಟೀಷರ ಕಾಲದಿಂದಲೂ ಭಾರತದ ರೈತರ ರೈತಾಪಿ ಶೈಲಿಯನ್ನು ಮನಗಂಡ ವಿದೇಶಿಯರು, ಆರೋಗ್ಯಯುತ ಬೆಳೆ ಬೆಳೆಯಲು ಭಾರತದ ದೇಸಿ ಪದ್ಧತಿ ಹಾಗೂ ಇಲ್ಲಿನ ರಾಸುಗಳ ಬಳಕೆಯೇ ಸೂಕ್ತ ಎಂಬುದನ್ನು ಅಣುಅಣುವಾಗಿ ಗಮನಿಸಿದ್ದಾರೆ. ಆದರೆ ಅದ್ಯಾವುದೂ ನಮ್ಮ ರೈತರ ಗಮನಕ್ಕೆ ಬರಲೇ ಇಲ್ಲ. ಜಾಗತಿಕರಣದ ಪ್ರಭಾವಕ್ಕೆ ಸಿಕ್ಕಿ ವೇಗವಾಗಿ ಬೆಳೆಯುವ ಹಾಗೂ ಪ್ರಗತಿ ಸಾಸುವ ಹುಂಬತನದ ಹಂಬಲದಲ್ಲಿ ನಮ್ಮತನವನ್ನೇ ಗಾಳಿಗೆ ತೂರಿ, ಅನ್ಯರ ಪದ್ಧತಿಯನ್ನು ಅನುಸರಿಸಲಾರಂಭಿಸಿದೆವು. ಅದರ ಪರಿಣಾಮ ಯಾವುದೇ ಬೆಳೆಯ ಕಾಳುಗಳನ್ನು ಇಟ್ಟುಕೊಂಡು ಮತ್ತೆ ಬಿತ್ತನೆಗೆ ಬೀಜವನ್ನಾಗಿ ಬಳಸಿಕೊಳ್ಳುವ ಹಳೇಯ ‘ನಾಟಿ ಪದ್ಧತಿ’ ನೀರಿನಲ್ಲಿ ಕೊಚ್ಚಿ ಹೋಗಿದೆ!
ಅದೊಂದೇ ಅಲ್ಲ, ಜಾನುವಾರುಗಳ ಸಾಕುವಿಕೆಯಲ್ಲೂ ರೈತರು ಮಾಡಿದ ತಪ್ಪು ಅದೇ. ಅದರ ಲಾಭವನ್ನು ವಿದೇಶೀಯರು ಚೆನ್ನಾಗಿ ಬಳಸಿಕೊಂಡರು. ಅದರ ಪರಿಣಾಮ ಕೃಷ್ಣವೇಣಿ, ಒಂಗಲ್, ಅಮೃತಮಹಲ್, ಕಾಂಗಾಯಾಮ್, ದೇವಣಿ, ಪುಂಗನೂರು ಮುಂತಾದ ತಳಿಗಳು ಇಂದು ಇಂಗ್ಲೇಂಡ್, ಅಮೇರಿಕಾ,ಬೆಜಿಲ್, ಈಜಿಪ್ಟ್ ಮುಂತಾದ ದೇಶಗಳ ಪಾಲಾಗಿವೆ.
ಕೃಷ್ಣವೇಣಿ:
ರಾಜ್ಯದ ಮೈಸೂರು ಪ್ರಾಂತ್ಯದಲ್ಲಿ ಉದ್ಭವವಾದ ತಳಿಗಳಲ್ಲಿ ಕೃಷ್ಣವೇಣಿ ಕೂಡ ಒಂದು. ೧೯ನೇ ಶತಮಾನದಲ್ಲಿ ಇದನ್ನು ಕೃಷ್ಣಾ, ಘಟಪ್ರಭ ಹಾಗೂ ಮಲಪ್ರಭ ನದಿ ತೀರಗಳಲ್ಲಿ ಮೈಸೂರು ಭಾಗದಲ್ಲಿದ್ದ ಎರಡ್ಮೂರು ಜಾತಿಯ ತಳಿಗಳನ್ನು ಸಮೀಕರಿಸಿ ಆ ಮೂಲಕ ಕೃಷ್ಣವೇಣಿಯನ್ನು ತಯಾರು ಮಾಡಲಾಯಿತು. ಇದರಲ್ಲಿ ಕಾಥೆವಾಡದ ಗೀರ್ ಹಾಗೂ ಆಂದ್ರದ ನೆಲ್ಲೂರಿನ ಒಂಗಲ್ ಜಾತಿ ತಳಿಗಳನ್ನು ಮಿಶ್ರಣ ಮಾಡಿರಬಹುದು ಎನ್ನಲಾಗಿದೆ. ಆ ಕಾರಣಕ್ಕಾಗಿಯೇ ಕೃಷ್ಣವೇಣಿ ತಳಿಯ ಹೋರಿಗಳು ಉಳುಮೆಗೆ ಹಾಗೂ ಹಸುಗಳು ಅತ್ಯಕ ಹಾಲು ಕರೆಯಲು ಸಹಾಯಕವಾಗಿದ್ದವು.
ಈ ತಳಿ ಅತ್ಯಂತ ಶಕ್ತಿಯುತವಾದದ್ದು. ಯಾವುದೇ ಕೆಲಸ ಕಾರ್ಯಗಳಿಗಾದರೂ ಸರಿ ಸೈ ಎನ್ನುವಂಥದ್ದು. ಆದರೆ ಈಗ ಈ ತಳಿಯೇ ಮಾಯವಾಗುತ್ತಿದೆ. ಅದಕ್ಕೆ ಮೂಲ ಕಾರಣ ಇಲ್ಲಿನ ರೈತರ ನಿರ್ಲಕ್ಷ್ಯ, ಪಶು ಸಂಗೋಪನ ಇಲಾಖೆಯ ಬೇಜವಾಬ್ದಾರಿ ಹಾಗೂ ಅನ್ಯ ದೇಶಗಳ ಹುನ್ನಾರ. ಈ ಎಲ್ಲ ಹಿನ್ನೆಲೆಯಲ್ಲಿ ೧೯೪೬ರಲ್ಲಿ ೬.೫ ಲಕ್ಷ ಇದ್ದ ಕೃಷ್ಣವೇಣಿ ತಳಿ ಈಗ ಕೇವಲ ೨೮೧ಮಾತ್ರ! ಅದೂ ಈಗ ಎಲ್ಲ ಕಡೆ ಸಿಗುವುದಿಲ್ಲ. ಜಮಖಂಡಿ, ಅಥಣಿ, ಮುಧೋಳ್, ಚಿಕ್ಕೋಡಿ, ಚಿಂಚಿಲಿ, ರಾಯಭಾಗ, ಬೆಳಗಾವಿ, ಬಿಜಾಪು ಭಾಗಲಕೋಟೆ ಪ್ರದೇಶಗಳಲ್ಲಿ ಮಾತ್ರ ಕಾಣಬರುತ್ತದೆ. ಉಳಿದಂತೆ ದಕ್ಷಿಣ ಮಹಾರಾಷ್ಟ್ರದ ಸಾಂಗ್ಲಿ, ಈಚಲ, ಮಿರಾಜ್, ಈರಂದವಾಡ, ಕೊಲ್ಲಾಪುರ, ಸತಾರ ಜಿಲ್ಲೆಗಳಲ್ಲಿ ಕಂಡು ಬರುತ್ತದೆ.
ಇವು ಆಕಾರ ಹಾಗೂ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಹೆಚ್ಚು ತೂಕ ಕೂಡ ಹೊಂದಿರುತ್ತವೆ. ಇವುಗಳ ಸಾಮರ್ಥ್ಯ ಹಾಗೂ ಕಷ್ಟ ಸಹಿಷ್ಣತೆಯನ್ನು ಮನಗಂಡ ಬ್ರೆಜಿಲ್ ಹಾಗೂ ಅಮೆರಿಕಾದ ಜಾನುವಾರು ತಳಿ ಅಭಿವೃದ್ಧಿ ಪರಿಣಿತರು ಅವುಗಳನ್ನು ತಮ್ಮ ದೇಶಗಳಿಗೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಈ ಕೃಷ್ಣವೇಣಿ ಈಗ ಆವಿಷ್ಮಾರಗೊಂಡ ರಾಜ್ಯದಲ್ಲಿಯೇ ಅವನತಿಯ ಹಾದಿಯಲ್ಲಿವೆ.
ಅಮೃತ ಮಹಲ್ ಮತ್ತು ಪುಂಗನೂರು:
ಇದು ಕೂಡ ರಾಜ್ಯದಲ್ಲಿಯೇ ಅಸ್ತಿತ್ವ ಪಡೆದ ಕ್ರಾಸ್ ಬೀಡ್ ತಳಿ. ದೈಹಿಕ ಸಾಮರ್ಥ್ಯ ಹಾಗೂ ಶ್ರಮಶಕ್ತಿಯಿಂದ ಎಂಥ ಕೆಲಸಗಳನ್ನಾದರೂ ಮಾಡಬಹುದು ಎಂಬುದನ್ನು ಅರಿತ ಅಮೆರಿಕಾ, ಬ್ರೆಜಿಲ್ ಮುಂತಾದ ದೇಶಗಳನ್ನು ೧,೯೫೬ಕ್ಕಿಂತ ಮುಂಚಿತವಾಗಿಯೇ ಬಹುತೇಕ ರಾಸುಗಳನ್ನು ತಮ್ಮ ದೇಶಗಳಿಗೆ ಆಮದು ಮಾಡಿಕೊಂಡಿದ್ದಾರೆ.ಇದರಿಂದಾಗಿ ಈ ತಳಿ ಕೂಡ ಇಲ್ಲಿ ಇಲ್ಲದಾಗಿದ್ದು, ಅವನತಿಯ ಹಾದಿಯಲ್ಲಿದೆ. ತರಿಕೆರೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮಾತ್ರ ಅಂದಾಜು ಒಂದು ಸಾವಿರ ಹೋರಿಗಳು ಮಾತ್ರ ಸಿಗಬಹುದು ಎನ್ನಲಾಗಿದೆ. ಇನ್ನು ಅಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಆವಿಷ್ಕಾರಗೊಳಿಸಲಾದ ಪುಂಗನೂರು ತಳಿ ಕೂಡ ವಿದೇಶಿಗರ ಓರೆಗಣ್ಣಿಗೆ ತುತ್ತಾಗಿ ಈಗ ಸಂಪೂರ್ಣವಾಗಿ ನಾಶವಾಗಿದೆ. ಈ ತಳಿಗಳನ್ನು ಹುಡುಕಾಡಿದರೆ ಆಂಧ್ರದ ಕೆಲವೇ ಕೆಲವು ಕಡೆಗಳಲ್ಲು ೧೦೦ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಸಿಗಬಹುದು.
ದೇವಣಿ:
ಮಹಾರಾಷ್ಟ್ರದ ದೇವಣಿಯಲ್ಲಿ ಹಲವು ಜಾತಿಯ ತಳಿಗಳನ್ನು ಸೇರಿಸಿ ರೂಪಿಸಲಾದ ತಳಿಯೇ ದೇವಣಿ. ಇದೂ ಕೂಡ ಕೃಷ್ಣವೇಣಿಯಂತೆಯೇ ಬಲಾಢ್ಯ ಹಾಗೂ ಶಕ್ತಿಯುತವಾದ ತಳಿ. ಆದರೆ ಈಗ ಭಾರತದ ಯಾವ ಮೂಲೆಯಲ್ಲಿಯೂ ಇದರ ಮೂಲ ತಳಿ ಕಾಣಸಿಗುವುದಿಲ್ಲ. ಬದಲಿಗೆ ರೈತರು ಹಾಗೂ ಪಶುಸಂಗೋಪನೆ ಇಲಾಖೆಯ ಅಕಾರಿಗಳು ಇದರೊಂದಿಗೆ ಬೇರೆ ಕೀಳು ಜಾತಿಯ ತಳಿಗಳನ್ನು ಮಿಶ್ರಣ ಮಾಡಿ ಮೂಲ ತಳಿಯನ್ನೇ ಕುಲಗೆಡಿಸಿದ್ದಾರೆ. ಹೀಗಾಗಿ ಇದೂ ಕ್ರಾಸ್ ಬೀಡ್ ಆಗಿದೆ. ಮಹಾರಾಷ್ಟ್ರದ ಕೆಲವು ಕಡೆಗಳಲ್ಲಿ ಮಾತ್ರ ಸುಮಾರು ೨೦ ಸಾವಿರ ಹೋರಿ ಹಾಗೂ ಆಕಳುಗಳು ಕಾಣಬರುತ್ತವೆ.ಒಂಗಲ್ ಮತ್ತು ಕಾಂಗಾಯಾಮ್
ಆಂಧ್ರಪ್ರದೇಶದ ಗೋದಾವರಿ ನದಿ ತೀರದಲ್ಲಿ ಆವಿಷ್ಕಾರಗೊಳಿಸಿದ ಇನ್ನೊಂದು ದೇಸಿ ತಳಿ ಒಂಗಲ್. ಇದೂ ಕೂಡ ಬಲಿಷ್ಠ ತಳಿ. ಒಂದೇ ಒಂದು ಸಮಾಧಾನದ ಸಂಗತಿಯೆಂದರೆ ಆಂಧ್ರದ ಎಲ್ಲೆಡೆ ಇದು ಕಂಡು ಬರುತ್ತಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಈ ತಳಿಯ ರಾಸುಗಳು ಸಿಗುತ್ತವೆ. ಇದರ ಜತೆಗೆ ದೇಶದಲ್ಲಿ ಉಳಿದಿರುವ ಇನ್ನೊಂದು ತಳಿ ಕಾಂಗಾಯಾಮ್. ಇದೂ ಸಹ ತಮಿಳುನಾಡಿನ ಕೋಯಿಮತ್ತೂರು, ಸೇಲಂ, ಪಟ್ಟಾಯಾಮ್ ಮುಂತಾದ ಪ್ರದೇಶಗಳಲ್ಲಿ ಕಾಣಬರುತ್ತದೆ.ಈ ಎಲ್ಲ ತಳಿಗಳೂ ಕೂಡ ಉಬಯ ರೀತಿಯ ಕೆಲಸಕ್ಕೆ ಉಪಯುಕ್ತವಾದವು. ಈ ಜಾತಿಯ ಹಸುಗಳು ಕನಿಷ್ಠ ೫ರಿಂದ ೬ಲೀ. ಹಾಲು ನೀಡುತ್ತವೆ. ಹೋಗಿಗಳು ಕನಿಷ್ಠ ೧೦ಗಂಟೆ ನಿರಂತರವಾಗಿ ಕೆಲಸ ಮಾಡಬಲ್ಲವು. ಆದರೆ ಈ ಎಲ್ಲ ತಳಿಯ ರಾಸುಗಳನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಅನಂತರದ ಹತ್ತು ವರ್ಷಗಳ ಕಾಲ ನಿರಂತರವಾಗಿ ಭಾರತದಿಂದ ಇಂಗ್ಲೇಂಡ್ ಮತ್ತಿರರ ದೇಶಗಳಿಗೆ ಕೊಂಡೊಯ್ದಿದ್ದಾರೆ. ೧,೮೬೦ರಲ್ಲಿಯೇ ಈಜಿಪ್ಟ್‌ನ ರಾಜ ಪಾಷಾ ಏಕ ಕಾಲಕ್ಕೆ ಸಾವಿರಾರು ರಾಸುಗಳನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ. ಅವುಗಳನ್ನು ಆರಂಭದಲ್ಲಿ ಮಿಲಿಟರಿಗೆ ಬಳಸಿಕೊಳ್ಳಲಾಗುತ್ತಿತ್ತು. ಅನಂತರ ಅವುಗಳ ದುಡಿಯುವ ಸಾಮರ್ಥ್ಯವನ್ನು ಅರಿತು ಅವುಗಳನ್ನೇ ಬಳಸಿ ಹೊಸ ಹೊಸ ತಳಿಗಳನ್ನು ಕಂಡು ಹಿಡಿಯಲು ವಿದೇಶಗಳಲ್ಲಿರುವ ಕ್ಯಾಟಲ್‌ಬ್ರೀಡರ್ ಅಸೋಸಿಯೇಷ್‌ನ್‌ಗಳು (ಜಾನುವಾರು ತಳಿ ಅಭಿವೃದ್ಧಿ ಕೇಂದ್ರಗಳು) ಆರಂಭಿಸಿದವು.
ಅದೇ ಸಮಯದಲ್ಲಿ ಭಾರತದ ಕೃಷಿಯ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳು ಒಂದೊಂದಾಗಿ ಹಿಡಿತ ಸಾಸಲು ಆರಂಭಿಸಿದ್ದವು. ಹೀಗಾಗಿ ಪಾಶ್ಚಾತ್ಯೀಕರಣ, ಜಾಗತಿಕರಣದ ವ್ಯಾಮೋಹಕ್ಕೆ ಬಲಿಯಾದ ಇಲ್ಲಿನ ರೈತರು ಕೂಡ ಈ ದೇಸಿ ತಳಿಯ ಹಸು, ಹೋರಿಗಳ ಮೇಲೆ ಹಂತ ಹಂತವಾಗಿ ನಿರ್ಲಕ್ಷ್ಯ ತೋರತೊಡಗಿದರು. ಅದರ ಪರಿಣಾಮ ಇಂದು ಭಾರತದ ಬಹುತೇಕ ಬಲಾಡ್ಯ ತಳಿಗಳು ವಿದೇಶಗಳ ಪಾಲಾಗಿವೆ.
ಪೇಟೆಂಟ್‌ಗೆ ಲಾಭಿ:
ಬೆರಳು ಸಿಕ್ಕರೆ ಹಸ್ತವನ್ನೇ ನುಂಗುವ ಜಾಯಮಾನದವರಾದ ವಿದೇಶೀಯರು ಭಾರತದ ಪ್ರಾದೇಶಿಕ ತಳಿಯ ರಾಸುಗಳ ರುಚಿ ನೋಡಿದ್ದರಿಂದ ಇಲ್ಲಿನ ಬಹುತೇಕ ಎಲ್ಲ ತಳಿಗಳ ಮೇಲು ಕಣ್ಣು ಹಾಕಿದ್ದರು. ಇಲ್ಲಿನ ಪಶು ಸಂಗೋಪನಾ ಇಲಾಖೆ ಹಾಗೂ ರೈತರು ಸಹ ಇದನ್ನು ನೋಡುತ್ತಾ ಕುಳಿತಿದ್ದರು. ಅದರ ಪರಿಣಾಮವಾಗಿ ಈ ಎಲ್ಲ ಬಲಾಡ್ಯ ತಳಿಗಳ ಆವಿಷ್ಕಾರಕ್ಕೆ ಕಾರಣವಾದ ತಳಿಗಳಲ್ಲಿ ಒಂದಾದ ಅಪ್ಪಟ ದೇಸಿ ದನ ‘ಮಲೆನಾಡು ಗಿಡ್ಡ’ದ ಮೇಲೂ ಕೆಲ ದಿನಗಳ ಹಿಂದಷ್ಟೇ ಪೇಟೆಂಟ್ ಪಡೆಯುವ ಯತ್ನಗಳು ನಡೆದಿದ್ದವು. ಅದು ಅನಂತರ ಕೈ ತಪ್ಪಿತು. ಮಲೆನಾಡು ಗಿಡ್ಡದ ಹಾಲಿನಲ್ಲಿ ಕೊಬ್ಬಿನ ಅಂಶ (ಕೊಲೆಷ್ಟ್ರಾಲ್) ಕಡಿಮೆ ಇರುವುದರಿಂದ ಇದು ಆರೋಗ್ಯಕ್ಕೆ ಬೇರೆ ತಳಿಯ ಹಾಲಿಗಿಂತ ಅತ್ಯುತ್ತಮ ಎಂಬ ಅಂಶ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಪೇಟೆಂಟ್ ಲಾಭಿ ನಡೆದಿತ್ತು.ಬಲಿಷ್ಠ ಹಾಗೂ ಶಕ್ತಿಯುತವಾದ ಬಹುತೇಕ ತಳಿಗಳ ಹಸುಗಳಿಗೆ ಅಸಮರ್ಥ ಜಾತಿಯ ಹೋರಿಗಳ ವೀರ್ಯವನ್ನು ಕೃತಕವಾಗಿ ಹಾಕುವುದನ್ನು ಅಳವಡಿಸಿಕೊಂಡ ಹಿನ್ನೆಲೆಯಲ್ಲಿಯೂ ಇಲ್ಲಿನ ದೇಸಿ ತಳಿಗಳು ಸರ್ವನಾಶವಾಗಿವೆ. ಆದ್ದರಿಂದ ಕೃಷಿ ನಿಜಕ್ಕೂ ಉಳಿಯಬೇಕೆಂದರೆ ದೇಸಿ ತಳಿಗಳನ್ನು ಮೊದಲು ಉಳಿಸಿಕೊಳ್ಳುವ ಪ್ರಯತ್ನವನ್ನು ರೈತರು ಮಾಡಬೇಕಿದೆ. ಇಲ್ಲವಾದರಲ್ಲಿ ಇರುವ ತಳಿಗಳೂ ನಾಶವಾಗುವುದರಲ್ಲಿ ಸಂಶಯವಿಲ್ಲ...
Thursday, October 22, 2009
Wednesday, October 14, 2009
ನೆರೆ ಪರಿಹಾರ: ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ !
ಉತ್ತರ ಕರ್ನಾಟಕದ ಮಂದಿ ‘ನೆರೆಯ ತೊರೆ’ಯಲ್ಲಿ ತೇಲಿ ಹೋಗುತ್ತಿದ್ದಾರೆಂಬ ಕಾರಣಕ್ಕೆ ಕರ್ನಾಟಕದ ಉದ್ದಗಲಕ್ಕೂ ಮಾನವೀಯತೆ, ಮಮಕಾರ ಧಾರಾಕಾರವಾಗಿ ಹರಿಯುತ್ತಿದೆ. ಅದರ ಜತೆಗೆ ಕೋಟಿ ಕೋಟಿ ರೂ. ಹಣ ಕೂಡ ಕೋಡಿಯಾಗಿ ಉತ್ತರ ದಿಕ್ಕಿಗೆ ಹರಿಯುತ್ತಲೇ ಇದೆ. ಜತೆಗೆ ದವಸ, ಧಾನ್ಯ, ಬಟ್ಟೆ, ದಿನಸಿ ವಸ್ತುಗಳು, ಸಿದ್ಧ ಆಹಾರಗಳು ಕೂಡ ಲೋಡುಗಟ್ಟಲೆ ಸಾಗುತ್ತಿದೆ...
ಕೆಲವರು ದಾನವನ್ನು ನೇರವಾಗಿ ಹೋಗಿ ತಮಗೆ ಸಿಕ್ಕ ಅಮಾಯಕ ಜನರಿಗೆ ತಲುಪಿಸಿ, ಅವರ ಕಷ್ಟ ನಷ್ಟಗಳನ್ನು ಕೇಳಿ ‘ಭರವಸೆಯ ಬೆಳಕು’ ನೀಡಿ ಬರುತ್ತಿದ್ದಾರೆ (ಅದರಲ್ಲೂ ಕೆಲವರು ಕೇವಲ ಮಂತ್ರಾಲಯಕ್ಕೆ ತೆರಳಿ ಪುನೀತರಾಗುತ್ತಿದ್ದಾರೆ!). ಇನ್ನು ಕೆಲವರು ಸರಕಾರಕ್ಕೆ, ಕೆಲವು ಸಂಘ ಸಂಸ್ಥೆಗಳಿಗೆ, ಮಾಧ್ಯಮ ಕೇಂದ್ರಗಳಿಗೆ ತಲುಪಿಸುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈಗೊಂಡ ‘ನಿಧಿ ಸಂಗ್ರಹ ಯಾತ್ರೆ’ಯಲ್ಲಿ ಬೆಂಗಳೂರಿನ ಒಂದೆರಡು ಗಲ್ಲಿಗಳಲ್ಲಿ (ಕೇವಲ ಮೂರು ದಿನ ಪಾದಯಾತ್ರೆ ಮಾಡಿದ್ದಕ್ಕೆ) ಬರೊಬ್ಬರಿ ೭೦೦ ಕೋಟಿ ರೂ. ಹಣ ಸಂಗ್ರಹವಾಗಿದೆ.
ಕೇಂದ್ರ ಸರಕಾರದಿಂದ ಈಗಾಗಲೇ ೧೫೨ ಕೋಟಿ ರೂ. ಗಳನ್ನು ನೆರೆ ಸಂತ್ರಸ್ತರ ಪರಿಹಾರ ನಿಗೆ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರಕಾರ ಕೂಡ ೩೦೦೦ಕ್ಕೂ ಹೆಚ್ಚು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಆದರೆ ಇದೆಲ್ಲ ಮೇಲ್ನೋಟಕ್ಕೆ ಕಾಣುವ ಸತ್ಯ! ರಾಜ್ಯ ಸರಕಾರವೇ ಸಾಮಾನ್ಯ ಖಾತೆ ಭೂಮಿಗೆ ಎಕರೆಗೆ ೮೦೦ ರೂ., ನೀರಾವರಿ ಜಮೀನಿನ ಎಕರೆ ಬೆಳೆಗೆ ೧೬೦೦ರೂ., ತೋಟಗಾರಿಕೆ ಬೆಳೆ ನಾಶಕ್ಕೆ ಎಕರೆಗೆ ೨೬೦೦ ರೂ. ಪರಿಹಾರ ನೀಡಲಾಗುವುದೆಂದು ಆದೇಶಿಸಿದೆ. ಇದರ ಜತೆಗೆ ಸಂಪೂರ್ಣ ಮನೆ ಕಳೆದುಕೊಂಡವರಿಗೆ ೫೦೦೦ರೂ. ನೀಡುವುದಾಗಿ ಸರಕಾರ ಘೋಷಣೆ ಮಾಡಿದೆ. ಇದೆಲ್ಲ ಯಾವ ಪುರುಷಾರ್ಥಕ್ಕೆ ? ಸರಕಾರ ನೀಡುವ ಸಾವಿರಾರು ರೂ. ಹಣದಿಂದ ಕಳೆದು ಹೋದ ಬದುಕನ್ನು ಒಬ್ಬ ರೈತ ಅಥವಾ ಸಾಮಾನ್ಯ ಪ್ರಜೆ ಮತ್ತೆ ಕಟ್ಟಿಕೊಳ್ಳಲು ಸಾಧ್ಯವೆ ?
ರಾಜ್ಯದಲ್ಲಿ ನೆರೆ ಹಾವಳಿಯಿಂದ ಈಗಾಲೇ ೨೦ ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಸರಕಾರವೇ ಘೋಷಿಸಿದೆ. ಇಷ್ಟಾದರೂ ಪರಿಹಾರ ನೀಡುತ್ತಿರುವುದು ಮಾತ್ರ ಪುಡಿಗಾಸು ! ‘ಮಠ, ಮಂದಿರಗಳ ಏಳಿಗೆ’ಗೆ ಹಿಂದು ಮುಂದು ನೋಡದೆ ನೂರಾರು ಕೋಟಿ ರೂ. ನೀಡಿದ ರಾಜ್ಯ ಸರಕಾರಕ್ಕೆ ಸಮಾಜದ ಹಿತ ಕಾಯುವ ದೂರದೃಷ್ಟಿ ಮೊದಲೇ ಇರಲಿಲ್ಲ. ಈಗ ಪ್ರಕೃತಿ ವಿಕೋಪ ಸಂಭವಿಸಿದ ನಂತರ ಅದನ್ನು ಸರಿದೂಗಿಸಲು ನೇರವಾಗಿ ಜನರ ಬಳಿ ಬಂದು ‘ದಾನ ಮಾಡಿ’ ಎಂದು ಬೇಡುವುದರ ಜತೆಗೆ ಹಲವು ಕಸರತ್ತುಗಳನ್ನು ನಡೆಸಿದೆ. ನಡೆಸುತ್ತಲೂ ಇದೆ.
ಇಷ್ಟಾದರೂ ಈಗಾಲೇ ರಾಜ್ಯ ಸರಕಾರದ ಬೊಕ್ಕಸಕ್ಕೆ ಹತ್ತಿರತ್ತಿರ ಸಾವಿರ ಕೋಟಿ ರೂ. ಹಣ ಜನ ಸಾಮಾನ್ಯರಿಂದ ಸಂಗ್ರಹವಾಗಿದೆ. ಆದರೆ ಅದಕ್ಕೆಲ್ಲಾ ಲೆಕ್ಕವೇ ಇಲ್ಲ. ಸಾಧ್ಯವಾದರೆ ಅದೆಲ್ಲವನ್ನು ಪಾರದರ್ಶಕವಾಗಿ ಲೆಕ್ಕ ನೀಡಲಿ. ನಿರ್ಗತಿಕರಿಗೆ ಹಣ ನೀಡಲು ಇನ್ನೂ ಕೆಲವರು ಹಿಂದು ಮುಂದು ನೋಡುತ್ತಿದ್ದಾರೆ. ಕಾರಣ ಸರಕಾರದ ಬೊಕ್ಕಸಕ್ಕೆ ಹೋದ ಹಣ ಸ್ಮಶಾನಕ್ಕೆ ಹೋದ ಹೆಣ ಎರಡೂ ವಾಪಸ್ ಬರುವುದಿಲ್ಲ. ಅದರಿಂದ ಯಾವುದೇ ಪ್ರಯೋಜನವೂ ಇಲ್ಲ ಎಂಬ ಭಯ, ಗಾಬರಿ ಅವರನ್ನು ಕಾಡುತ್ತಿದೆ.
ರಾಜ್ಯದಲ್ಲಿ ಮಾನವೀಯತೆಗೆ ಬರವಿಲ್ಲ. ಆದರೆ ಅದರ ನೆಪದಲ್ಲಿ ಹರಿಯುವ ಹಣ ನೇರವಾಗಿ ಸಂತ್ರಸ್ತರಿಗೆ ತಲುಪುವುದೋ ಇಲ್ಲವೋ ಎಂಬ ಆತಂಕ ರಾಜ್ಯದ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ನೆರವು ನೀಡಲು ಎಲ್ಲ ಮಾಧ್ಯಮಗಳು(ಮುದ್ರಣ ಹಾಗೂ ದೃಶ್ಯ) ಪ್ರತ್ಯೇಕವಾಗಿ ಹಣ, ದವಸ ಧಾನ್ಯ, ನಿತ್ಯ ಬಳಕೆಯ ಸಾಮಗ್ರಿಗಳನ್ನು ಸಂಗ್ರಹಿಸುತ್ತಲೇ ಇವೆ. ಅವುಗಳನ್ನು ಪ್ರಾಮಾಣಿಕವಾಗಿ ತಲುಪಿಸುತ್ತಲೇ ಇವೆ. ಈ ವಿಚಾರ ರಾಜ್ಯದ ಪ್ರತಿಯೊಬ್ಬರಿಗೂ ಗೊತ್ತು. ಆದರೂ ರಾಜ್ಯ ಬಿಜೆಪಿ ಸರಕಾರ ಪ್ರತಿನಿತ್ಯ ಲಕ್ಷಾಂತರ ರೂ. ಮೌಲ್ಯದ ಜಾಹೀರಾತುಗಳನ್ನು ಎಲ್ಲ ಮಾಧ್ಯಮಗಳಿಗೆ ನೀಡುತ್ತಲೇ ಇದೆ.
ಸಾಲದ್ದಕ್ಕೆ ಪ್ರತಿಯೊಂದು ಇಲಾಖೆಯ ಸಚಿವರೂ ತಮ್ಮ ಮುಖಚಿತ್ರವನ್ನು ಒಳಗೊಂಡ ಹಾಗೂ ಇಲಾಖೆಯ ಅಕಾರಿಗಳ ಹೆಸರನ್ನು ಹೊಂದಿದ ಜಾಹೀರಾತನ್ನು ನೀಡುತ್ತಲೇ ಇವೆ. ಇದಕ್ಕೆ ಒಂದು ರಾಜ್ಯ ಮಟ್ಟದ ದಿನಪತ್ರಿಕೆಗೆ ಅಥವಾ ದೃಶ್ಯ ಮಾಧ್ಯಮಕ್ಕೆ ಒಂದು ದಿನಕ್ಕೆ ಲಕ್ಷಾನುಗಟ್ಟಲೆ ಹಣ ನೀಡಬೇಕು. ಆದರೆ ಆ ಹಣ ಯಾರ ಮನೆಯದು !? ಪ್ರತಿನಿತ್ಯ ಹೀಗೆ ಸರಕಾರಿ ಬೊಕ್ಕಸದಿಂದ ಅನಾವಶ್ಯಕವಾಗಿ ಮಾಧ್ಯಮ ಕೇಂದ್ರಗಳಿಗೆ ಜಾಹೀರಾತು ಹೆಸರಿನಲ್ಲಿ ಹಣ ಸರಬರಾಜು ಮಾಡುವ ಮೂಲಕ ಬಿಜೆಪಿ ಸರಕಾರ ಮಾಧ್ಯಮಗಳ ಜತೆಗೆ ಅಮೂರ್ತ ಸ್ವರೂಪದ ‘ಸ್ನೇಹ ಸಂಬಂಧ’ ಬೆಳೆಸಿಕೊಳ್ಳಲು ಹವಣಿಸುತ್ತಿದೆ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ.
ಪ್ರತಿನಿತ್ಯ ಮುಖ್ಯಮಂತ್ರಿ ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಿದಾಗೆಲ್ಲ ಒಂದಲ್ಲಾ ಒಂದು ರೀತಿ ನೆರೆ, ಪರಿಹಾರದ ಬಗ್ಗೆಯೇ ಮಾತನಾಡುತ್ತಿದ್ದಾರೆ. ಹೀಗಿರುವಾಗಿ ಅದಕ್ಕೆ ಲಕ್ಷಾಂತರ ಮೌಲ್ಯದ ಜಾಹೀರಾತು ಅಗತ್ಯವೇ ? ಪತ್ರಿಕಾಗೋಷ್ಠಿಯಲ್ಲಿಯೇ ಈ ವಿಚಾರವನ್ನು ಹೇಳಿದರೆ ಮಾಧ್ಯಮಗಳು ಅದನ್ನು ಪ್ರಕಟಿಸುವುದಿಲ್ಲ ಎನ್ನುತ್ತವೆಯೇ? ಅವರೂ ಕೂಡ ತಮ್ಮದೇ ಆದ ರೀತಿ ನಿ ಸಂಗ್ರಹಣೆ ಮೂಲಕ ಮಾನವೀಯತೆ ಮೆರೆಯುತ್ತಿರುವುದು ಮುಖ್ಯಮಂತ್ರಿಯ ಗಮನಕ್ಕೆ ಬಂದೇ ಇಲ್ಲವೆ ?
ಕೇವಲ ಪ್ರಚಾರ ಪಡೆಯುವ ಹುನ್ನಾರವನ್ನಿಟ್ಟುಕೊಂಡು ‘ಪೇಪರ್ ಟೈಗರ್’ಗಳಾಗಲು ಸರಕಾರದ ಸಚಿವರು, ಶಾಸಕರು, ಹಿರಿಯ ಅಕಾರಿಗಳು ಯತ್ನಿಸಿದರೆ ಅದರ ಪರಿಣಾಮ ಆಗುವುದು ಜನ ಸಾಮಾನ್ಯರ ಮೇಲೆ ಎಂಬ ಸಣ್ಣ ಸತ್ಯವನ್ನು ಅವರು ಮನಗಾಣಬೇಕಿದೆ. ಅನಾವಶ್ಯಕವಾಗಿ ಜಾಹೀರಾತಿಗಾಗಿ ಸುರಿಯುವ ಲಕ್ಷಾಂತರ ರೂ. ಹಣವನ್ನು ಅದೇ ನಿರ್ಗತಿಕ, ಬಡಬಗ್ಗರ ಬದುಕಿನ ಏಳಿಗೆಗೆ, ಅವರಿಗೆ ‘ಬೆಳಕು ನೀಡಲು’ ಉಪಯೋಗಿಸಿದರೆ ಕನಿಷ್ಠ ಒಂದಷ್ಟು ಮಂದಿಯಾದರೂ ನೆಮ್ಮದಿ ಕಂಡುಕೊಂಡಾರು... ಆದರೆ ಯಾರದ್ದೋ ದುಡ್ಡು ಯಲ್ಲಮನ ಜಾತ್ರೆ ಎಂಬಂತೆ ಜನಪ್ರತಿನಿಗಳು ಬರೀ ಪ್ರಚಾರ, ಮೋಜು ಮಸ್ತಿಗೆ ನಿಂತರೆ ಜನರೇ ಬುದ್ದಿ ಕಲಿಸಿಯಾರು ಎಚ್ಚರವಿರಲಿ... ನೊಂದವರು ನೋವಿನ ನಿಟ್ಟುಸಿರ ಬಿಸಿ ತಟ್ಟದೆ ಇರದು.

Friday, October 2, 2009
ಉತ್ತರ ತತ್ತರ: ಸರಕಾರಕ್ಕಾಗಲಿಲ್ಲ ಎಚ್ಚರ...!
ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇಡೀ ಉತ್ತರ ಕರ್ನಾಟಕ ತತ್ತರಗೊಂಡಿದೆ. ಆದರೆ ವಿಧಾನಸೌಧದಲ್ಲಿ ಮಾತ್ರ ಒಬ್ಬರೇ ಒಬ್ಬ ಸಚಿವರೂ ಇಲ್ಲ! ಎಲ್ಲರೂ ಸುತ್ತೂರು ಮಠದಲ್ಲಿ ‘ವ್ಯಾಯಾಮ’ ಮಾಡುತ್ತ, ಚಿಂತನ ಬೈಠಕ್ ನಡೆಸಿಕೊಂಡಿದ್ದರು. ಇದ್ದಕ್ಕಿಂದ್ದಂತೆ ವರುಣ ಮಂತ್ರಾಲಯದ ಒಳಗೆ ನುಗ್ಗಿದ್ದಾನೆ. ಆಗ ಸಚಿವೋದಯರೆಲ್ಲಾ ವಿಧಾನಸೌಧದ ಕಡೆ ಮುಖ ಮಾಡಿ ನಿಂತಿದ್ದಾರೆ!!
ಬಳ್ಳಾರಿ, ಬಿಜಾಪುರ, ಕೊಪ್ಪಳ, ರಾಯಚೂರು, ಬೆಳಗಾವಿ, ಧಾವಣಗೆರೆ, ಚಿತ್ರದುರ್ಗ, ದಾರವಾಡ, ಗದಗ ಜಿಲ್ಲೆಗಳಲ್ಲಿ ಮೂರು ದಿನಗಳಿಂದಲೂ ನಿರಂತರವಾಗಿ ಆಕಾಶಕ್ಕೆ ತೂತು ಬಿದ್ದಿದೆಯೇನೋ ಎಂಬಂತೆ ಮಳೆ ಸುರಿಯುತ್ತಲೇ ಇದೆ. ಅಲ್ಲಿಯ ಜನರಿಗೆ ವರುಣ ಯಮನಂತೆ ಗೋಚರಿಸುತ್ತಿದ್ದಾನೆ. ಮಾಧ್ಯಮಗಳು ಮೇಲಿಂದ ಮೇಲೆ ಅವುಗಳ ಬಗ್ಗೆ ವರದಿ ಮಾಡುತ್ತಲೇ ಇವೆ. ಆದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಹೋದ್ಯೋಗಿ ಮಂತ್ರಿಗಳ ‘ಚಿಂತನ ಬೈಠಕ್’ ಮುಗಿದಿರಲಿಲ್ಲ.
ಇವರಿಗೆಲ್ಲ ಜನತೆಯ ಕಷ್ಟ ಕಾರ್ಪಣ್ಯಗಳಿಗಿಂತ ಮೋದಿಯ ‘ಪಾಠ ’ವೇ ಮುಖ್ಯವಾಗಿತ್ತು. ಪ್ರತಿಯೊಂದನ್ನೂ ರಾಜಕೀಯದ ನಾಸಿಕದಿಂದಲೇ ಮೂಸಿ ನೋಡುವ ಜನಪ್ರತಿನಿಗಳಿಗೆ ಜನತೆಯ ಆರ್ಥನಾದ ಮಾತ್ರ ಕೇಳಲೇ ಇಲ್ಲ. ಮೊದಲ ದಿನವೇ ಬಿಜಾಪುರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ೨೨ಮಂದಿ ಸಾವಿಗೀಡಾದರು. ಆದರೆ ಅದು ಮುಖ್ಯಮಂತ್ರಿಗಳ ಹಾಗೂ ರಾಜ್ಯಸರಕಾರದೊಳಗಿರುವ ಮಂತ್ರಿ ಮಹೋದಯರ ಹೃದಯವನ್ನು ಕರಗಿಸಲಿಲ್ಲ. ಏಕೆಂದರೆ ಅವರೆಲ್ಲ ಜನ‘ಸಾಮಾನ್ಯರು’.
ಪ್ರತಿಪಕ್ಷದ ನಾಯಕರು ಇದನ್ನು ಗಮನಿಸಿ ಮುಖ್ಯಮಂತ್ರಿಗಳನ್ನು ಮಾತಿನ ಮೂಲಕ ತಿವಿದರೂ ಯಡಿಯೂರಪ್ಪ ಮಾತ್ರ ಎಚ್ಚೆತ್ತುಕೊಳ್ಳಲೇ ಇಲ್ಲ. ಪ್ರತಿಪಕ್ಷಗಳ ಮಾತನ್ನು ಕೇವಲ ಟೀಕೆ ಎಂತಲೇ ನೋಡುವ ಜಾಯಮಾನದ ಯಡಿಯೂರಪ್ಪ ಮಾತ್ರ ‘ಪ್ರತಿಪಕ್ಷದವರ ತಟ್ಟೆಯಲ್ಲಿ ಆನೆಯೇ ಬಿದ್ದಿದೆ. ಅದನ್ನು ಎತ್ತಿಕೊಳ್ಳಲಿ’ ಎಂದು ಕೇಂದ್ರದ ಕಡೆ ಕೈ ತೋರಿಸಿ ಪ್ರತಿ ಟೀಕೆ ಮಾಡಿದರೆ ಹೊರತು, ಜನ ಸಾಮಾನ್ಯರ ರಕ್ಷಣೆಗೆ ಮುಂದಾಗಲೇ ಇಲ್ಲ. ಅದರ ಫಲವಾಗಿ ಮಳೇ ಶುರುವಾದ ಮೂರೇ ದಿನಕ್ಕೆ ಇಡೀ ಉತ್ತರ ಕರ್ನಾಟಕದಲ್ಲಿ ೧೦೯ ಮಂದಿ ಕೊನೆಯುಸಿರೆಳೆದಿದ್ದಾರೆ. ಇದು ಮುಖ್ಯಮಂತ್ರಿಗಳಿಗೆ ರಾಜ್ಯದ ರೈತರ, ಜನ ಸಾಮಾನ್ಯರ ಬಗ್ಗೆ ಇರುವ ‘ಕಾಳಜಿ’ !!
ಅಂದರೆ ಸಿಎಂ ಹೋಗಿ ಮಳೆ ನಿಲ್ಲಿಸುತ್ತಾರೆ ಎಂದಲ್ಲ. ಕೊನೇ ಪಕ್ಷ ಅದಕ್ಕೆ ಸ್ಪಂದಿಸಿ ನಡುಗಡೆಗಳಲ್ಲಿ, ನೀರಿನಲ್ಲಿ ಸಿಕ್ಕಿಕೊಂಡವರನ್ನು ತಮ್ಮ ನಿರ್ದೇಶನದ ಮೂಲಕ ರಕ್ಷಿಸಬಹುದು. ನಿರಾಶ್ರಿತರಿಗೆ ಎಲ್ಲಾದರೂ ಸುರಕ್ಷಿತ ಸ್ಥಳದಲ್ಲಿ ಆಶ್ರಯ ನೀಡಬಹುದು. ಆದರೆ ಆ ಸಣ್ಣ ಕೆಲಸವನ್ನೇ ಮಾಡಲು ಇವರಿಗೆ ಮನಸಿರಲಿಲ್ಲ.
ಸರಕಾರದ ಮೇಲೆ ಟೀಕೆ ಸಾಮಾನ್ಯ. ಆದರೆ ಅದರಲ್ಲೂ ಒಂದು ಕಾಳಜಿ ಇರುತ್ತದೆ ಎನ್ನುವುದನ್ನೇ ಮರೆತ ಸಿಎಂ, ಥೇಟ್ ತೊಗಲಕ್ ರೀತಿ ವರ್ತಿಸುತ್ತಿರುವುದು ಮಾತ್ರ ನಿಜಕ್ಕೂ ನಾಚಿಕೆಗೇಡು. ನಿತ್ಯವೂ ಉತ್ತರ ಕರ್ನಾಟಕ ತತ್ತರಗೊಳ್ಳುತ್ತಿದ್ದು, ಸಾವು, ನೋವು ಸಂಭವಿಸುತ್ತಲೇ ಇದೆ. ಆದರೂ ಅತ್ತ ಕಡೆ ತಿರುಗಿ ಕೂಡ ನೋಡಲಿಲ್ಲ. ಸಾರ್ವಜನಿಕರ ಆಸ್ತಿಪಾಸ್ತಿ ಹಾಳಾದರೆ, ಅವರ ಸಾಕು ದನ, ಕುರಿಗಳು ಸಾವಿಗೀಡಾದರೆ, ಜನ ಬೀದಿಗೆ ಬಂದರೆ ಇವರಿಗೆ ನಷ್ಟ, ಕಷ್ಟ ಎನಿಸುವುದೇ ಇಲ್ಲ.
ಮಾತೆತ್ತಿದರೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಯಡಿಯೂರಪ್ಪ ರಾಜ್ಯಸರಕಾರದಿಂದ ಜನ ಸಾಮಾನ್ಯರ ಏಳಿಗೆಗೆ ಏನೆಲ್ಲಾ ಮಾಡಿದ್ದಾರೆ ಎಂದು ಪಟ್ಟಿ ಮಾಡಲಿ. ಪ್ರತಿಯೊಂದನ್ನು ‘ರಾಜಕೀಯ ಲಾಭ’ದ ದೃಷ್ಟಿಯಿಂದಲೇ ನೋಡುವ ಹಳದಿ ಕಣ್ಣಿನ ಯಡಿಯೂರಪ್ಪ ಅವರಿಗೆ ರಾಜ್ಯದಲ್ಲಿ ಬಿಜೆಪಿ ಅಕಾರಕ್ಕೆ ಬರಲು ತಮ್ಮನ್ನು ಕೈ ಹಿಡಿದಿದ್ದರು ಅದೇ ಉತ್ತರ ಕರ್ನಾಟಕದ ಮಂದಿ ಎನ್ನುವುದನ್ನು ಮರೆತಂತಿದೆ.
ಅಕಾರಕ್ಕೇರುವಾಗ ರೈತರ ಹೆಸರಿನಲ್ಲಿ ಪ್ರಮಾಣ ವಚನ ಮಾಡಿದರು. ಅದೇ ಸಮಯದಲ್ಲಿ ಬರ ಬಂದು ರೈತರು ಸಂಕಷ್ಟದಲ್ಲಿದ್ದಾರೆಂದು ಮಾಧ್ಯಮಗಳು ಆಕ್ರೋಶ ವ್ಯಕ್ತಪಡಿಸಿದಾಗ ‘ಇನ್ನು ಜನ ಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವುದೇ ನನ್ನ ಕೆಲಸ. ಹಾರ ತುರಾಯಿಗಳನ್ನು ನನಗೆ ಹಾಕಬೇಡಿ, ಅಂಥ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯಬೇಡಿ’. ಎಂದ ಸಿಎಂ ಗೆ ಈಗ ತಾವು ಹೇಳಿದ ಮಾತು ಮರೆತುಹೋದಂತಿದೆ. ಆ ಕಾರಣಕ್ಕೇ ಜಲಪ್ರಳಯದಿಂದ ನೂರಾರು ಮಂದಿ ಕೊನೆಯುಸಿರೆಳೆಯುತ್ತಿದ್ದರೂ ಯಡಿಯೂರಪ್ಪ ಮಾತ್ರ ಡಾಬಸ್‌ಪೇಟೆಯಲ್ಲಿ ಬೆಳ್ಳಿ ಕಿರೀಟ ತೊಟ್ಟುಕೊಂಡು, ಸನ್ಮಾನ ಮಾಡಿಸಿಕೊಳ್ಳಲು ಬೆಂಗಳೂರಿನಿಂದ ತೆರಳಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿದೆಯಾ...?
ನೆರೆಯ ಆಂಧ್ರ ಪ್ರದೇಶದಲ್ಲೂ ಕೂಡ ಪ್ರವಾಹ ಬಂದಿದೆ. ಆದರೆ ಅಲ್ಲಿನ ಸರಕಾರ ಸ್ಪಂದಿಸಿದ ರೀತಿಗೂ ಕರ್ನಾಟಕದ ಬಿಜೆಪಿ ಸರಕಾರ ಸ್ಪಂದಿಸಿದ ರೀತಿ ಎರಡನ್ನೂ ನೋಡಿದರೆ ಇದು ನಿಜಕ್ಕೂ ಮಾನವೀಯತೆ ಮರೆತ ಸರಕಾರ ಎಂದು ಎನಿಸದಿರದು.
೨೦೦೮-೦೯ನೇ ಸಾಲಿನಲ್ಲಿ ಸಿಆರ್‌ಎಫ್ ಯೋಜನೆಯಡಿ ೯೯.೫೫ ಕೋಟಿ ರೂ. (ರಾಜ್ಯದ ಪಾಲು ೩೩.೧೮ಕೋಟಿ.), ಎನ್‌ಸಿಸಿಎಫ್ ಅನುದಾನ ೧೦೯.೯೧ ಕೋಟಿ ರೂ. (ರಾಜ್ಯದ ಪಾಲು ೭೭.೩೩ ಕೋಟಿ ರೂ.) ಸೇರಿ ಪ್ರಕೃತಿ ವಿಕೋಪ ಪರಿಹಾರ ನಿಯಡಿ ೩೨೧.೮೩ ಕೋಟಿ ರೂ. ಬಳಕೆ ಮಾಡಬೇಕಿದೆ. ೨೦೦೯-೧೦ನೇ ಸಾಲಿನಲ್ಲಿ ಸಿಆರ್‌ಎಫ್, ಎನ್‌ಸಿಸಿಎಪ್ ೧೫೩.೫೧ ಕೋಟಿ ರೂ. ಬಳಕೆಯಾಗಬೇಕಿದೆ. ಆದರೆ ಈ ಹಣದಲ್ಲಿ ಒಂದು ಪೈಸೆ ಕೂಡ ಬಳಕೆ ಮಾಡಿಕೊಂದಿಲ್ಲ. ಆದರೆ ಕೇಂದ್ರದ ಕಡೆ ಕೈ ತೋರಿಸಿ ಪ್ರತಿಪಕ್ಷದ ನಾಯಕರಂತೆ ವರ್ತಿಸುವುದು ಇನ್ನೂ ನಿಂತಿಲ್ಲ. ಇದು ನಿಜಕ್ಕೂ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ವರ್ತಿಸುವವರ ಲಕ್ಷಣವೇ?
ಮಂತ್ರಾಲಯದಲ್ಲಿ ಸ್ವಾಮೀಜಿಯೊಬ್ಬರು ಜಲ ಪ್ರವಾಹಕ್ಕೆ ಸಿಕ್ಕು ೨ನೇ ಮಹಡಿ ಏರಿ ಕುಳಿತಿದ್ದಾರೆ ಎಂಬ ಸುದ್ದಿ ಬಂದ ನಂತರ ಹೋಗಿ ದಿಢೀರ್ ಸಭೆ ಕರೆದು ಬೆಂಗಳೂರಿನಿಂದ ಎರಡು ಹೆಲಿಕ್ಯಾಪ್ಟರ್ ಕಳುಹಿಸಿದ್ದಾರೆ ಮುಖ್ಯಮಂತ್ರಿ. ಇವರಿಗೆ ಸ್ವಾಮೀಜಿಗಳು ಮಾತ್ರ ಮನುಷ್ಯರಂತೆ ಕಾಣಿಸುತ್ತಾರೆಯೇ? ಜನ ಸಾಮಾನ್ಯರದ್ದು ಕೂಡ ಜೀವ ಎಂದು ಒಮ್ಮೆಯೂ ಅನ್ನಿಸುವುದಿಲ್ಲವೆ ? ಹೋರಾಟದ ಹಾದಿಯಲ್ಲೇ ಬೆಳದು ಬಂದ ಮುಖ್ಯಮಂತ್ರಿ ಯಡಿಯೂರಪ್ಪ , ಈ ರೀತಿ ಅಮಾನವೀಯವಾಗಿ ವರ್ತಿಸುವ ಬದಲು ಗೌರವಯುತವಾದ ಆ ಸ್ಥಾನಕ್ಕೆ ರಾಜೀನಾಮೆ ಗೀಚಿ, ತಾವೇ ಒಂದು ‘ಮಠ’ ಕಟ್ಟಿ ಅಲ್ಲಿಗೆ ತಾವೇ ಸ್ವಾಮೀಜಿಯಾಗಿ ಕುಳಿತುಕೊಳ್ಳುವುದು ಒಳ್ಳೆಯದು. ಆಗಲಾದರೂ ಕೆಲವರಿಗೆ ಒಳ್ಳೆಯದಾದರೂ ಆಗಬಹುದು...

Thursday, September 10, 2009
ಪುಸ್ತಕ ಪ್ರೀತಿ ಸಾರಿದ ಮದುವೆ
ಸಾಮಾನ್ಯವಾಗಿ ‘ಮದುವೆ’ ಎಂಬ ಮಧುರ ಪದ ಕೇಳುತ್ತಿದ್ದ ಹಾಗೆಯೇ ಬಹಳಷ್ಟು ಜನರ ಮೈ ರೋಮಾಂಚನಗೊಳ್ಳುತ್ತದೆ. ಮತ್ತೆ ಕೆಲಸವರ ಮನ ಮುಂಜಾನೆಯ ಮಂಜಿನ ಹಾಗೆ ತಂಪಾಗುತ್ತದೆ. ಮತ್ತೆ ಕೆಲವರಿಗೆ ಕನಸುಗಳು ಗರಿಗೆದರುತ್ತವೆ. ಮನಸಿನ ಹಾಸಿಗೆಯಲ್ಲಿ ಹೂಮಳೆ ಚೆಲ್ಲುತ್ತದೆ. ಹೀಗೆ ಒಬ್ಬೊಬ್ಬರ ಮನದಲ್ಲು ಒಂದೊಂದು ಭಾವನಾ ಲಹರಿ ಪಾರಿಜಾತವಾಗಿ ಹಾರಾಡುತ್ತದೆ.
ಆದರೆ ಮದುವೆ ಜೀವನದ ಒಂದು ಮಧುರ ಕ್ಷಣ ನಿಜ, ಆದರೆ ಅದು ಆಡಂಭರವಾಗಿಯೇ ಇರಬೇಕು ಎಂದು ಬಹಳಷ್ಟು ಜನ ಇಷ್ಟಪಡುತ್ತಾರೆ. ಮದುವೆಗೆ ಬಂದವರಿಗೆ ಒಳ್ಳೊಳ್ಳೆ ಉಡುಗೊರೆ ಕೊಡಬೇಕು ಎಂದು ಸಾಮಾನ್ಯ ವರ್ಗದವರೂ ಅಂದುಕೊಳ್ಳುವುದು ಸಾಮಾನ್ಯ. ಇನ್ನು ಉಳ್ಳವರಂತೂ ಅದೇ ತಮ್ಮ ಶ್ರೀಮಂತಿಕೆಯ ತೋರಿಕೆಗೆ ‘ಸಾಕ್ಷಿ’ಯಾಗಲಿ ಎಂದುಕೊಳ್ಳುತ್ತಾರೆ.
ಜೀವನದ ಆ ಸುಮಧುರ ಗಳಿಗೆಯನ್ನು ಜೀವನ ಪೂರ್ತಿ ತಾವು ಮಾತ್ರವಲ್ಲ, ಇತರರೂ ನೆನಪಿನಲ್ಲಿಟ್ಟುಕೊಂಡು ಬದುಕುವಂತೆ ಸ್ಪೂರ್ತಿ ನೀಡುವ ಮಂದಿ ಬಹಳ ವಿರಳ. ಅಂಥವರ ಸಾಲಿನಲ್ಲಿದ್ದಾರೆ ಸ್ನೇಹಿತ ಕೆ.ವಿ.ಧರಣೇಶ್. ಸದ್ಯಕ್ಕಿವರು ‘ವಿಜಯ ಕರ್ನಾಟಕ’ದಲ್ಲಿ ಪೇಜಿನೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೊನ್ನೆ ಹಾಗೇ ಸುಮ್ಮನೆ ಕೈಗೆ ಸಿಕ್ಕ ಒಂದು ಚಿಕ್ಕ ಹೊತ್ತಿಗೆಯನ್ನು ಕಣ್ಣಾಯಿಸಿದಾಗ ನಿಜಕ್ಕೂ ಆಶ್ಚರ್ಯ ! ಆ ಕಾರಣಕ್ಕಾಗಿಯೇ ಸುಮಾರು ೯ ವರ್ಷಗಳ ಹಿಂದಿನ ಘಟನೆಯೊಂದನ್ನು ಇಲ್ಲಿ ಮೆಲುಕು ಹಾಕುತ್ತಿದ್ದೇನೆ.
ನನ್ನ ಕೈಗೆ ಸಿಕ್ಕ ಆ ಕಿರು ಹೊತ್ತಿಗೆಯ ಹೆಸರು “ವಚನ ತಾಂಬೂಲ". ಮದುವೆಗೆ ಬರುವ ಎಲ್ಲರಿಗೂ ಸಾಮಾನ್ಯವಾಗಿ ಅಡಕೆ, ಎಲೆ, ಸುಣ್ಣ ಅಥವಾ ಒಂದು ಕಾಯಿಯನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯ. ಇದು ಸಾಮಾನ್ಯ ವರ್ಗದ ಕುಟುಂಬಗಳ ಕಾರ್ಯವೈಖರಿ. ಆದರೆ ಶ್ರೀಮಂತರ ಮಾತು ಬೇರೆ ಬಿಡಿ.
ಇಲ್ಲಿ ಧರಣೇಶ್ ಕೂಡ ಶ್ರೀಸಾಮಾನ್ಯ ಕುಟುಂಬದಿಂದಲೇ ಬಂದವರು. ಆದರೆ ೨೦೦೦ನೇ ಇಸ್ವಿ ಸೆಪ್ಟಂಬರ್ ೬ರಂದು ಚಿತ್ರದುರ್ಗದಲ್ಲಿ ನಡೆದ ತಮ್ಮ ಮದುವೆಯಲ್ಲಿ ಇವರು ಉಡುಗೊರೆ ನೀಡಿದ್ದು ಇದೇ ‘ವಚನ ತಾಂಬೂಲ’ವನ್ನು... ನಿಜಕ್ಕೂ ನಾವೆಲ್ಲಾ ಈಗ ಪುಸ್ತಕ ಪ್ರೀತಿ ಕಡಿಮೆಯಾಗುತ್ತಿದೆ. ಸಿನಿಮಾ, ದೂರದರ್ಶನ ಹಾಗೂ ಪಾಶ್ಚಾತ್ಯೀಕರಣದ ಸಾಂಸ್ಕೃತಿಕ ದಾಳಿಗೆ ಸಿಕ್ಕಿ ಯುವಜನತೆ ದಿಕ್ಕು ತಪ್ಪುತ್ತಿದೆ ಎಂದೆಲ್ಲಾ ಬೊಬ್ಬೆ ಹೊಡೆಯುತ್ತೇವೆ. ಆದರೆ ಅದರ ಉಳಿವಿಗೆ ಮಾಡಬೇಕಾದದ್ದು ಏನು ? ಎಂಬುದನ್ನು ಒಂದೇ ಒಂದು ಕ್ಷಣ ಕೂಡ ಯೋಚಿಸುವುದಿಲ್ಲ. ಆದರೆ ಧರಣೇಶ್ ಬೇರೆಯವರನ್ನು ನಿಂಸುವ ಗೊಡವೆಗೇ ಹೋಗದೆ ಸದ್ದಿಲ್ಲದೆ ತಮ್ಮ ಮದುವೆಗೆ ಬಂದ ಎಲ್ಲರಿಗೂ ‘ವಚನ ತಾಂಬೂಲ’ ನೀಡಿ ಪುಸ್ತಕ ಪ್ರೀತಿ ಮೆರೆದಿದ್ದಾರೆ. ಅವರಿಗೆ ನಿಜಕ್ಕೂ ಹ್ಯಾಟ್ಸ್ ಆಫ್...
ಈ ಕಿರು ಹೊತ್ತಿಗೆಯಲ್ಲಿ ಆರಂಭದಲ್ಲಿಯೇ ಮುರುಘ ರಾಜೇಂದ್ರ ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮೀಜಿಯ ಲೋಕ ಸಂದೇಶವಿದೆ. ಬಸವ ತತ್ತ್ವದ ಸೂತ್ರಗಳಿವೆ. ಚನ್ನಬಸವಣ್ಣ, ಶರಣೆ ಸತ್ಯಕ್ಕ, ಶರಣೆ ಆಯ್ದಕ್ಕಿ ಲಕ್ಕಮ್ಮ, ಬಸವಣ್ಣ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ, ಷಣ್ಮುಖ ಶಿವಯೋಗಿಗಳು, ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಮೊಗ್ಗೆಯ ಮಾಯಿದೇವರು, ಅಲ್ಲಮ ಪ್ರಭುದೇವರು, ಸರ್ವಜ್ಞನವರ ವಚನಗಳನ್ನು ಮುದ್ರಿಸಿ ಕಿರು ಹೊತ್ತಿಗೆ ಮಾಡಿ, ಎಲ್ಲರಿಗೆ ಹಂಚಲಾಗಿದೆ. ಇದು ನಿಜಕ್ಕೂ ಅರ್ಥಪೂರ್ಣ ನಿಲುವು. ಅಂದ ಹಾಗೆ ಅವರ ಕೈ ಹಿಡಿದಿದ್ದು ಸಿ.ಜೆ.ಪದ್ಮಾ. ಪುಸ್ತಕ ಪ್ರೀತಿಯನ್ನು ಸದ್ದಿಲ್ಲದೆ ಪಸರಿಸಿದ ಈ ದಂಪತಿ ಶೀಘ್ರದಲ್ಲಿಯೇ ದಶಮಾನೋತ್ಸವ ಆಚರಿಸಲಿದ್ದಾರೆ... ಅವರಿಗೆ ಮತ್ತೊಂದು ಹ್ಯಾಟ್ಸ್ ಆಫ್...

Sunday, September 6, 2009
ಬಂದಿದೆ ರೆಡಿಮೇಡ್ ‘ಹಸಿರು ಹಾಸಿಗೆ’
ಕೃಷಿ ಕ್ಷೇತ್ರದಲ್ಲಿ ಇದೊಂದು ಹೊಸ ಆವಿಷ್ಕಾರ. ಒಂದೆಡೆ ಹಸಿರು ಮಾಯವಾಗುತ್ತಿದ್ದರೆ ಈಗಿನ ದುನಿಯಾಗೆ ಅನುಕೂಲವಾಗುವ ಹಾಗೆ ಹಸಿರು ಬೆಳೆಸುವ ಹೊಸ ಆವಿಷ್ಕಾರಕ್ಕೆ ಕೇಂದ್ರ ನಾರು ಮಂಡಳಿ ಕೈ ಹಾಕಿದೆ. ಆಧುನಿಕತೆಗೆ ಎಷ್ಟೇ ಒಗ್ಗಿಕೊಂಡಿದ್ದರೂ ಮನುಷ್ಯನಿಗೆ ಹಸಿರಿನಿಂದ ದೂರ ಇರುವ ಸಾಮರ್ಥ್ಯವೇ ಇಲ್ಲ ಎಂಬುದು ನಿಶ್ಚಿತ. ಅದನ್ನು ಮನಗಂಡಿರುವ ಇಲ್ಲಿನ ಸಂಶೋಧಕರು ಆಧುನಿಕ ಜಗತ್ತಿಗೆ ಸರಿ ಹೊಂದುವಂಥ ‘ಹುಲ್ಲಿನ ಹಾಸಿಗೆ’ ತಯಾರಿಸಿದ್ದಾರೆ!
ಆಶ್ಚರ್ಯ ಆಗುತ್ತಿದೆಯೇ ? ನಿಜ, ಇದು ರೆಡಿಮೇಡ್ ಹಸಿರು ಹಾಸಿಗೆ (Green Lawn). ಹಸಿರು ನೆಲವೇ ಕಾಣದ ಈ ದಿನಮಾನಗಳಲ್ಲಿ ಪ್ರತಿ ಮನೆಗೂ ಹೊಂದಿಕೊಳ್ಳುವಂಥ ನೈಸರ್ಗಿಕ ಹಸಿರು ಹಾಸಿಗೆಯನ್ನು ತಯಾರಿಸುವ ತಂತ್ರeನವನ್ನು ನಾರು ಮಂಡಳಿಯ ಸಂಶೋಧಕರು ಕಂಡು ಹಿಡಿದಿದ್ದು, ಅದಕ್ಕೆ ಪೇಟೆಂಟ್ ಕೂಡ ಪಡೆದಿದ್ದಾರೆ. ಕೇರಳದ ಯಾಲಪಿಯಲ್ಲಿರುವ ಕೇಂದ್ರೀಯ ನಾರು ಸಂಶೋಧನ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಈ ಆವಿಷ್ಕಾರ ಮಾಡಲಾಗಿದ್ದು, ಈಗ ಕರ್ನಾಟಕದಲ್ಲೂ ಇದರ ಪ್ರಯೋಗವಾಗಿದೆ. ಈಗಾಗಲೇ ಮೂವರು ಇದರ ಸೌಲಭ್ಯ ಪಡೆದಿದ್ದಾರೆ.
ಭಾರತದಲ್ಲಿ ನ್ಯಾಷನಲ್ ರೂರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಹಾಗೂ ನಾರು ಮಂಡಳಿ ಎರಡೂ ಕಡೆ ಇದನ್ನು ಹೇಗೆ ರೂಪಿಸುವುದು ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಈ ಹಾಸಿಗೆ ರೆಡಿ ಮಾಡಲು ಕೆಲವು ತಂತ್ರeನಗಳಿವೆ. ಅದನ್ನು ಅದೇ ಮಾದರಿಯಲ್ಲಿ ತಯಾರಿಸಬೇಕು. ಹೀಗಾಗಿ ಇದಕ್ಕೆ ಪರವಾನಗಿ ಪಡೆದು ಆರ್ಥಿಕ ಒಪ್ಪಂದಕ್ಕೆ (MOU)ಸಹಿ ಹಾಕಬೇಕು. ಜತೆಗೆ ತರಬೇತಿಯನ್ನು ಪಡೆಯಬೇಕು. ಅದನ್ನು ನಾರು ಮಂಡಳಿ ಹಾಗೂ ರೂರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಮಾಡುತ್ತಿವೆ.
ಇದರಿಂದ ಅನುಕೂಲಗಳು:
ನಾರು ಹಾಗೂ ನಾರಿನ ಪುಡಿಯನ್ನು ಹಾಸಿಗೆ ರೂಪದಲ್ಲಿ ಬಳಸಿ ಹಸಿರನ್ನು ಬೆಳೆಸಲಾಗುತ್ತದೆ. ಇದರಲ್ಲಿ ಗರಿಕೆ ಸೇರಿದಂತೆ ಎಲ್ಲ ರೀತಿಯ ಹುಲ್ಲು ಹಾಸಿಗೆಯನ್ನೂ ತಯಾರಿಸಬಹುದು. ಒಂದೇ ಬಾರಿ ಹಲವು ಹಂತಗಳಲ್ಲಿ ಹಾಸಿಗೆ ತಯಾರಿಸಬಹುದು. ಇದರ ಮೇಲೆ ಹುಲ್ಲುಬೆಳೆಯಲು ಕನಿಷ್ಠ ಒಂದರಿಂದ ಒಂದೂವರೆ ತಿಂಗಳು ಬೇಕು. ಈ ಹಾಸಿಗೆಯಲ್ಲಿ ಹುಲ್ಲು ಬೆಳೆದ ನಂತರ ಅದನ್ನು ಬೆಡ್ ಶೀಟ್ ರೀತಿ ಮಡಚಿ ಇಡಬಹುದು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಲೀಸಾಗಿ ಇದನ್ನು ಸುತ್ತಿಕೊಂಡು ಹೋಗಬಹುದು ಅಥವಾ ಸ್ಥಳಾಂತರಿಸಬಹುದು. ಜತೆಗೆ ಯಾವ ಸ್ಥಳಕ್ಕೆ ಬೇಕೋ ಹಾಗೆ ಈ ಹುಲ್ಲನ್ನು ಕಟ್ ಮಾಡಿ ಜೋಡಿಸಬಹುದು. ಮನೆ ಮುಂದೆ ಈ ಹಾಸಿಗೆ ಜೋಡಿಸಿದರೆ ಇಡೀ ಮನೆ ಬೃಂದಾವನ !
ಈ ಹುಲ್ಲಿನ ಹಾಸಿಗೆಯನ್ನು ಕೇವಲ ಸಾಮಾನ್ಯ ಮನೆಗಳ ಮುಂದೆ ಹೊರಾಂಗಣಕ್ಕೆ ಮಾತ್ರವಲ್ಲ, ಮಹಡಿ ಮನೆಯಲ್ಲೂ ಅಲಂಕಾರಕ್ಕಾಗಿ ಬಳಸಬಹುದು. ಕಾಲುದಾರಿಯಲ್ಲೂ ಬಳಸಬಹುದು. ಮನೆಯ ಚಾವಣಿಗೆ ಕೂಡ ಬಳಸಬಹುದು. ಇದರಿಂದ ಮನೆ ಕೂಡ ತಂಪಾಗಿರುತ್ತದೆ. ರೆಸ್ಟೋರೆಂಟ್, ಆಸ್ಪತ್ರೆ ಹೀಗೆ ಎಲ್ಲೆಂದರೆ ಇದನ್ನು ಉಪಯೋಗಿಸಬಹುದು. ಎಲ್ಲ ಋತುಗಳಿಗೂ ಹೊಂದಿಕೊಳ್ಳುವ ಈ ಹುಲ್ಲಿನ ಹಾಸಿಗೆಯನ್ನು ಸುಲಭವಾಗಿ ಪೋಷಣೆ ಮಾಡಬಹುದು. ಜತೆಗೆ ಇದು ಶೇ. ೮೦೦ರಷ್ಟು ತಂಪಾಗಿರುವುದರಿಂದ ಸುತ್ತಮುತ್ತಲಿನ ವಾತಾವರಣ ಕೂಡ ತಂಪಾಗಿರುತ್ತದೆ.
ಹಾಸಿಗೆ ಬೆಳೆಸುವ ವಿಧಾನ:
ನಾರನ್ನು ಮೊದಲು ತಾಂತ್ರ್ರಿಕವಾಗಿ ಜೋಡಿಸಿಕೊಂಡು (ನೀಡಲ್ ಫಿಲ್ಟ್ ಮಾಡಿ) ಒಂದು ಸ್ಥಳದಲ್ಲಿ ಅದನ್ನು ಸಮನಾಗಿ ಹರಡಿಕೊಳ್ಳಬೇಕು. ಅದರ ಮೇಲೆ ಜಿಯೋಟೆಕ್ಸೆಲ್ಸ್ ( ತಿಳಿ ಮಣ್ಣಿನಾಕಾರದ ನಾರು ಪುಡಿ) ಅದರ ಮೇಲೆ ಪಿಥ್(ಸಂಸ್ಕರಿಸಿದ ನಾರು ಪುಡಿ) ಹಾಕಿ, ಸ್ವಲ್ಪ ನೀರು ಚಿಮುಕಿಸಬೇಕು. ಅದರಲ್ಲಿ ನಿಮಗೆ ಯಾವ ಹುಲ್ಲು ಬೇಕೋ ಆ ಹುಲ್ಲಿನ ಬೀಜ ಬಿತ್ತಬೇಕು, ಇಲ್ಲವೇ ಬೇರು ಹೊಂದಿರುವ ಹುಲ್ಲಿನ ಚೂರುಗಳನ್ನು ನೆಟ್ಟರೂ ಸಾಕು. ಅನಂತರ ಇದಕ್ಕೆ ಪ್ರತಿನಿತ್ಯ ನೀರು ಚಿಮುಕಿಸುತ್ತಿರಬೇಕು. ಹೀಗೆ ಮಾಡಿದರೆ ಕೇವಲ ಒಂದೂವರೆ ತಿಂಗಳಿನಲ್ಲಿ ನಿಮಗೆ ಹುಲ್ಲಿನ ಹಾಸಿಗೆ ತಯಾರಾಗುತ್ತದೆ. ಹುಲ್ಲಿನ ಬೇರುಗಳು ಕೂಡ ಭದ್ರವಾಗುತ್ತವೆ. ಆಗ ನೀವು ಯಾವ ಆಕಾರಕ್ಕೆ ಬೇಕೋ ಆ ಆಕಾರಕ್ಕೆ ಸಲೀಸಾಗಿ ಕಟ್ ಮಾಡಿ ಅದನ್ನು ನಿಮಗೆ ಬೇಕಾದ ಸ್ಥಳಗಳಲ್ಲಿ ಜೋಡಿಸಿಕೊಳ್ಳಬಹುದು.

Thursday, September 3, 2009
ಉಳ್ಳವರಿಗೆ ದೇವರು ಹತ್ತಿರವಂತೆ! ಹೌದಾ...?
ಇವತ್ತು ದೇವರ ಹೆಸರು ಹೇಳಿಕೊಂಡು ಅದೆಷ್ಟೋ ಮಂದಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ದೇವರಿದ್ದಾನೋ ಇಲ್ಲವೋ ಬೇರೆ ವಿಚಾರ, ಆದರೆ ಅವನ ಹೆಸರು ಹೇಳಿಕೊಂಡು ಬದುಕುವವರು ಮಾತ್ರ ‘ಸೊಂಪಾಗಿದ್ದಾರೆ’. ಮೊನ್ನೆ ಸಣ್ಣದೊಂದು ಪ್ರವಾಸಕ್ಕೆಂದು ಬೇರೆ ಕಡೆಗೆ ಹೋಗಿದ್ದೆ. ಆ ಸ್ಥಳದಲ್ಲಿ ಒಬ್ಬ ಆತ್ಮೀಯ ಗೆಳೆಯನಿದ್ದ. ಅವನ ಮನೆಗೆಂದು ಹೋದಾಗ ಅವನು ತನ್ನ ಹಬ್ಬದ ದಿನವಾಗಿದ್ದರಿಂದ ತನ್ನ ಎಳೆಯ ಮಕ್ಕಳಿಗೆ ಪ್ರಸಾದ ತರಬೇಕೆಂದು ಒಂದು ‘ಭವ್ಯ ದೇವಸ್ಥಾನ’ಕ್ಕೆ ಕರೆದುಕೊಂಡು ಹೋಗಿದ್ದ.
ದೇವರು ಎಂದರೆ ನನಗೆ ಮೊದಲಿನಿಂದಲೂ ದೂರ. ಆದರೆ ‘ಆ ದೇವಸ್ಥಾನದಲ್ಲಿ ಶೂದ್ರರೇ ಪೂಜೆ ಮಾಡ್ತಾರೆ. ಬೇಕಾದವರು ಪೂಜೆ ಮಾಡಿಸ್ಕೊಳ್ಳಬಹುದು, ಇಲ್ಲದಿದ್ರೆ ಸುಮ್ನೆ ದೇವಾಲಯ ಸುತ್ತಿಕೊಂಡು ಬರಬಹ್ದು, ದೇವಸ್ಥಾನದ ಸುತ್ತ ಉತ್ತಮ ವಾತಾವರಣ ನಿರ್ಮಾಣ ಮಾಡಲಾಗಿದೆ. ಅಲ್ಲಿ ಕೊಳ ಇದೆ, ಸುಂದರ ಪಾರ್ಕ್ ಇದೆ’ ಎಂದು ಅವನು ತಿಳಿಸಿದ. ಜತೆಗೆ ಆ ದೇವಸ್ಥಾನದಿಂದ ಮಕ್ಕಳಿಗೆ ಪ್ರಸಾದ ತರಬೇಕೆಂಬುದು ಅವನ ತಾಯಿಯ ಒತ್ತಾಸೆ ಕೂಡ ಆಗಿತ್ತು. ಆದ್ದರಿಂದ ಅವನು ಹೋಗಲೇಬೇಕಿತ್ತು. ಅವನ ಒತ್ತಾಯ ಹಾಗೂ ಆತ ಹೇಳಿದ ಕೆಲವು ಮಾತುಗಳಿಂದ ಕುತೂಹಲ ಶುರುವಾಯಿತು. ಸರಿ ಇಬ್ಬರೂ ಹೋದೆವು.
ದೇವಸ್ಥಾನದಲ್ಲಿ ಮಕ್ಕಳ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಲು ಅವನು ರಶೀದಿ ಖರೀದಿಸಿದ. ಆರಂಭದಲ್ಲೇ ಅವನು ಹೇಳಿದ ಮಾತು ಅಲ್ಲಿ ಸುಳ್ಳಾಗಿತ್ತು. ಅಷ್ಟೆಲ್ಲಾ ಹೇಳಿದ ಅವನೇ ಹೋಗಿ ಹಣ ಕೊಟ್ಟು ವಿಶೇಷ ಪೂಜೆ ಮಾಡಿಸಿದ್ದ. ದೇವಸ್ಥಾನ ಸುಂದರ ಹಾಗೂ ಪ್ರಶಾಂತವಾಗಿದ್ದರಿಂದ ಸ್ವಲ್ಪ ಸುತ್ತಾಡುತ್ತಿದೆ. ಅವನು ಪ್ರಸಾದಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದ. ಅಲ್ಲಿ ನವಗ್ರಹ ದೇವತೆಗಳು, ಅನ್ನಪೂರ್ಣೇಶ್ವರಿ, ವಿಘ್ನ ನಿವಾರಕ ಗಣೇಶ, ಶಿವ ಪಾರ್ವತಿ, ಶಾರದೆ ಹೀಗೆ ಎಲ್ಲ ಬಗೆಯ ದೇವಾನು ದೇವತೆಗಳಿದ್ದರು!
ಅಷ್ಟು ಸಾಲದೆಂಬಂತೆ ದೇವಾಲಯದ ಬಳಿ ಪಾರ್ಕ್ ಹಾಗೂ ಕೊಳಗಳಿದ್ದವು. ಅವು ತುಂಬಾ ಸುಂದರವಾಗಿದ್ದವು. ಮಕ್ಕಳಿಗಂತೂ ಅಲ್ಲಿ ಹೋದರೆ ಹಬ್ಬ. ಇವೆಲ್ಲದರ ಜೊತೆಗೆ ದೇವಸ್ಥಾನದ ಹಿಂದೆ ಬಡವರಿಗಾಗಿಯೇ ಒಂದು ವಿವಾಹ ಮಂಟಪ, ಶ್ರೀಮಂತರಿಗಾಗಿ ಪಕ್ಕದಲ್ಲಿ ಮತ್ತೊಂದು ಮಂಟಪ. ಇದೂವರೆಗೆ ಕಂಡ ಹಾಗೆ ಬಹುತೇಕ ಕಡೆಗಳಲ್ಲಿ ದೇವಸ್ಥಾನ ಅಥವಾ ಮಠಗಳನ್ನು ನಿರ್ಮಾಣ ಮಾಡಿದರೆ ಹಣ ಗಳಿಕೆಗಾಗಿಯೇ ಅಲ್ಲೊಂದು ‘ಕಲ್ಯಾಣ’ ಮಂಟಪ ಇದ್ದೇ ಇರುತ್ತದೆ. ಆದರೆ ಇದು ಸ್ವಲ್ಪ ವಿಭಿನ್ನ. ಶ್ರೀಮಂತರ ಕಲ್ಯಾಣ ಮಂಟಪದಿಂದ ಬಂದ ಹಣದಿಂದ ಬಡವರ ಕಲ್ಯಾಣಕ್ಕಾಗಿಯೂ ತುಸು ಉಪಯೋಗಿಸುತ್ತಿದ್ದಾರೆ.
ಆದರೆ ಇಲ್ಲಿ ವಿಚಾರ ಅದಲ್ಲ, ತಿರುಪತಿಯಲ್ಲಿರುವಂತೆ ಎಲ್ಲ ದೇವಾಲಯಗಳಲ್ಲೂ ಹುಂಡಿಗೆ ಹೆಚ್ಚು ಹಣ ಹಾಕುವ ಶ್ರೀಮಂತರಿಗಾಗಿಯೇ ವಿಶೇಷ ಮಾರ್ಗ ಇದ್ದೇ ಇರುತ್ತವೆ. ಅದು ಕಾಣುವುದಿಲ್ಲ ಅಷ್ಟೆ. ಅವರಿಗೆಲ್ಲಾ ಅಲ್ಲಿ ದೇವರು ತುಂಬಾ ಬೇಗ ಸಿಗುತ್ತಾನೆ. ಆದರೆ ಬಡವರು ಮಾತ್ರ ಅದೇ ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಂತು, ಬೆವರಿಳಿಸಿ ದೇವರ ದರ್ಶನ ಪಡೆಯಬೇಕು! ಕೇಳಿದ್ದಕ್ಕೆಲ್ಲ ತಥಾಸ್ತು ಎನ್ನುತ್ತಾನೋ ಇಲ್ಲವೋ ಅದು ಬೇರೆ ವಿಚಾರ. ಆದರೆ ಉಳ್ಳವರಿಗೆ ಹಾಗಿಲ್ಲ...
ಮೊನ್ನೆ ಅಲ್ಲಿ ಆಗಿದ್ದೂ ಅದೇ; ಸರದಿಯಲ್ಲಿ ನಿಂತಿದ್ದ ನನ್ನ ಸ್ನೇಹಿತನನ್ನು ಕಂಡ ಆ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು ಅವನನ್ನು ಕರೆದು ಮಾತನಾಡಿಸಿದರು. ‘ಇದೇನ್ ಸರ್ ನೀವು ಕ್ಯೂನಲ್ಲಿ ನಿಂತಿದ್ದೀರಿ. ನಂಗೆ ಒಂದ್ ಮಾತ್ ಹೇಳೋದ್ ಬ್ಯಾಡ್ವಾ... ಬನ್ನಿ..’ ಎಂದು ಅವನನ್ನು ಕರೆದುಕೊಂಡು ಗರ್ಭ ಗುಡಿಯ ಎದುರು ಹೋಗಿದ್ದಾರೆ. ಅಷ್ಟೊತ್ತಿಗೆ ಅಲ್ಲಿ ಅವರು ಮತ್ತಷ್ಟು ಶ್ರೀಮಂತ ಸ್ನೇಹಿತರು ಆಗಮಿಸಿದ್ದಾರೆ. ಎಲ್ಲರೂ ಕೂಡಿ ಅಲ್ಲಿ ಮಾತಿಗಿಳಿದಾಗ ನನ್ನ ಸ್ನೇಹಿತ ‘ನಾನು ಹಾಗೂ ನನ್ನ ಸ್ನೇಹಿತ ಬಂದಿದ್ದೇವೆ’ ಎಂದಿದ್ದಾನೆ. ತಕ್ಷಣ ‘ಅವರನ್ನು ಕರ್‍ಕೊಂಡು ಬನ್ನಿ...’ ಎಂದು ಕಳುಹಿಸಿದರು.
ಬರುವುದಿಲ್ಲ ಎಂದರೂ ನನ್ನ ಗೆಳೆಯ ಬಿಡಲಿಲ್ಲ. ‘ನಾನು ಅವರ ಬಳಿ ಹೇಳಿಬಿಟ್ಟಿದ್ದೇನೆ, ನೀನು ಬರದೆ ಹೋದ್ರೆ ಅವರು ಬೇಸರ ಮಾಡಿಕೊಳ್ಳುತ್ತಾರೆ. ಬರಲೇಬೇಕು’ ಎಂದು ದುಂಬಾಲು ಬಿದ್ದ. ಅವನ ಕಾಟ ತಾಳದೆ ಹೋದರೆ ಹೇಳದೆ ಇದ್ದರೂ ವಿಶೇಷ ಪೂಜೆ! ಶುಲ್ಕ ಪಾವತಿ ಮಾಡದಿದ್ದರೂ ವಿಶೇಷ ಪ್ರಸಾದ, ಕುಂಕುಮ, ಹೂವು, ಹಣ್ಣು, ಕಾಯಿ ಹಾಕಿ ಪ್ಯಾಕ್ ಮಾಡಿ ಕೊಟ್ಟರು!! ನನ್ನ ಸ್ನೇಹಿತ ಶುಲ್ಕ ಪಾವತಿ ಮಾಡಿ ಪೂಜೆ ಮಾಡಿಸಿದ್ದಕ್ಕೆ ಒಂದು, ಅಧ್ಯಕ್ಷರ ಒತ್ತಾಯದ ಮೇರೆಗೆ ಮತ್ತೊಂದು ಪ್ರಸಾದ ಚೀಲ!! ಹೇಗಿದೆ ನೋಡಿ ಕಾಲ...ಇಂಥ ಮನೋಧರ್ಮ ಈಗ ಎಲ್ಲೆಲ್ಲೂ ತಾಂಡವವಾಡುತ್ತಿದೆ. ಶೂದ್ರರು ಪೂಜೆ ಮಾಡುವ ದೇವಸ್ಥಾನಗಳಲ್ಲಿಯೇ ಹೀಗಾದರೆ, ಪೂಜೆಯನ್ನೇ ಕುಲ ಕಸುಬಾಗಿಸಿಕೊಂಡು ಬಂದವರ ದೇವಸ್ಥಾನಗಳಲ್ಲಿ ಇನ್ನು ಹೆಂಗೆ..?
ಆದರೆ ನಮ್ಮ ಮುಂದೆ ಬಂದ ಅದೆಷ್ಟೋ ಬಡಪಾಯಿಗಳು ಪೂಜೆಗಾಗಿ ಕಾಯುತ್ತಿದ್ದವರು ಕಾಯುತ್ತಿಲೇ ಇದ್ದವು. ನಾವು ಮಾತ್ರ ಮನೆಯ ಕಡೆ ಹೆಜ್ಜೆ ಹಾಕಿದೆವು. ಆಗ ಕಾಡಿದ ಒಂದೇ ಪ್ರಶ್ನೆ ಉಳ್ಳವರಿಗೆ ದೇವರು ತುಂಬಾ ಹತ್ತಿರನಾ...?

Thursday, August 27, 2009
ಹಂದಿಜ್ವರ: ಯಾಕೆ ಈ ಥರ ?
ಕುಟುಂಬ ಸಮೇತ ಶಿವಮೊಗ್ಗಕ್ಕೆ ಹೊರಡಲೆಂದು ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಾಗ ಸರಿ ಸುಮಾರು ೧೦ ಗಂಟೆ. ರಾಷ್ಟ್ರದಾದ್ಯಂತ ಈಗ ಹಂದಿ ಜ್ವರ(ಎಚ್೧ಎನ್೧)ದ್ದೇ ಸುದ್ದಿ. ಸುಖಾ ಸುಮ್ಮನೆ ಸಾಯುವುದು ಎಂದರೆ ಯಾರಿಗೆ ತಾನೆ ಭಯ ಆಗುವುದಿಲ್ಲ? ಅದಕ್ಕೇ ರೈಲ್ವೆ ನಿಲ್ದಾಣಕ್ಕೆ ಬರುವ ಕೆಲವರು ಮುಖಕ್ಕೆ ಮಾಸ್ಕ್(ಮುಖಗವಸು) ಹಾಕಿಕೊಂಡಿದ್ದರು.
ರೈಲ್ವೆ ನಿಲ್ದಾಣದಲ್ಲಿರುವ ಕೆಲವು ಮೆಡಿಕಲ್ ಸ್ಟೋರ್‌ಗಳಲ್ಲಿ ೧೦ರೂ.ಗೆ ಮಾರುವ ಮಾಸ್ಕ್‌ಗಳನ್ನು ೨೦, ೩೦ರೂ.ಗೆ ಮಾರಿಕೊಳ್ಳುತ್ತಿದ್ದರು. ಅದು ವ್ಯಾಪಾರಿ ವಂಚಕತನ. ಇರಲಿ, ಆದರೆ ಮಾಸ್ಕ್ ಹಾಕಿಕೊಂಡು ನಿಲ್ದಾಣದ ಒಳಗೆ ಹೋಗುವವರನ್ನು ಮಾಸ್ಕ್ ಹಾಕಿಕೊಳ್ಳದವರು ನೋಡುತ್ತಿದ್ದ ಹಾಗೂ ಗಮನಿಸುತ್ತಿದ್ದ ರೀತಿ ನೋಡಿದರೆ ನಿಜಕ್ಕೂ ಭಯವಾಗುತ್ತಿತ್ತು. ದೇಶ ವಿದೇಶಗಳ ಎಲ್ಲ ಮೀಡಿಯಾಗಳಲ್ಲಿಯೂ ಅದು ರೋಗ ತಡೆಗೆ ಬಳಸುವ ಒಂದು ವಿಧಾನ ಎಂದು ಬೊಬ್ಬೆ ಹೊಡೆಯುತ್ತಿದ್ದರೂ ಅವರೇನೋ ತಪ್ಪು ಮಾಡುತ್ತಿದ್ದಾರೆ ಎನ್ನುವಂತೆ ಜನ ವಿಚಿತ್ರವಾಗಿ ನೋಡುತ್ತಿದ್ದರು. ಹತ್ತಿರ ಹೋದರೆ ಬೆದರಿದ ಹೋರಿಗಳಂತಾಡುತ್ತಿದ್ದರು !
ಶಿವಮೊಗ್ಗದ ನಂತರ ಉಡುಪಿ, ಮಂಗಳೂರಿಗೂ ಹೋಗಬೇಕಾದ್ದರಿಂದ ನಾವು ಕುಟುಂಬವರೆಲ್ಲ ಮಾಸ್ಕ್ ತೆಗೆದುಕೊಂಡಿದ್ದೆವು. ಆದರೆ ಕಟ್ಟಿಕೊಂಡಿರಲಿಲ್ಲ. ನಾನು ಹಾಗೇ ಸುಮ್ಮನೆ ಕೆಲವರನ್ನು ಗಮನಿಸುತ್ತಲೇ ಸಾಗುತ್ತಿದ್ದೆ. ಮಾಸ್ಕ್ ಹಾಕಿಕೊಂಡವರು ಹತ್ತಿರ ಬಂದ ಕೂಡಲೇ ಬಹುತೇಕರು ಭಯ ಭೀತಿಯಿಂದ ಓಡುತ್ತಿದ್ದರು! ಇಲ್ಲವೇ ದೂರ ಸರಿದು ಮೂಗು ಮುಚ್ಚಿಕೊಳ್ಳುತ್ತಿದ್ದರು. ಮಾಸ್ಕ್ ಹಾಕಿಕೊಂಡವರು ಹತ್ತಿರ ಬಂದರೆ ಹಂದಿಜ್ವರ ಬರುತ್ತದೆ ಎಂಬಂತೆ ನಡೆದುಕೊಳ್ಳುತ್ತಿದ್ದರು. ಒಂದೇ ಮಾತಲ್ಲಿ ಹೇಳುಬೇಕೆಂದರೆ ಮಾಸ್ಕ್ ಹಾಕಿಕೊಂಡವರೆಲ್ಲ ಒಂದು ರೀತಿ ಅಲ್ಲಿ ಅಸ್ಪೃಶ್ಯರಾಗಿದ್ದರು!
ಹೀಗಿದ್ದಾಗಲೇ ಮಾಸ್ಕ್ ಹಾಕಿಕೊಂಡವನೊಬ್ಬ ಸಹಜವಾಗಿ ಸೀನಿಬಿಟ್ಟ. ದೂರದಲ್ಲಿ ಅವನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದ ಕೆಲವರು ಕ್ಷಣಾರ್ಧದಲ್ಲಿ ನೆಲಕ್ಕೆ ಎಸೆದ ಚಂಡು ಪುಟಿದೇಳುವ ಹಾಗೆ ದೂರಕ್ಕೆ ಓಡಿದರು. ಅದನ್ನು ಕಂಡು ನಿಜಕ್ಕೂ ನಾನು ತಬ್ಬಿಬ್ಬಾದೆ. ಹಂದಿ ಜ್ವರ ಜನ ಸಾಮಾನ್ಯರಲ್ಲಿ ಅಷ್ಟೊಂದು ಭೀತಿ ಹುಟ್ಟಿಸಿದೆಯಾ? ಎಂಬ ಆತಂಕ ಒಂದೆಡೆಯಾದರೆ, ಇಷ್ಟೆಲ್ಲಾ ಜಾಗೃತಿ ಇದ್ದು, ಸಮಾಜ ಮುಂದುವರಿದಿದ್ದರೂ ಇಂಥ ನಡವಳಿಕೆಗೆ ಕಾರಣವೇನು? ಎಂಬ ಪ್ರಶ್ನೆ ಕಾಡತೊಡಗಿತು. ಆದರೆ ಉತ್ತರ ಇನ್ನೂ ಸಿಕ್ಕಿಲ್ಲ.
ಸರಕಾರಗಳು ಹಂದಿ ಜ್ವರಕ್ಕೆ ಮದ್ದಿದೆ. ಅದು ಬರದಂತೆ ತಡೆಯಲು ಕೆಲವೇ ಮುಂಜಾಗೃತ ಕ್ರಮಗಳನ್ನು ಅನುಸರಿಸಿದರೆ ಸಾಕು, ಜತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಎಲ್ಲ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿವೆ. ಆದರೂ ಈ ರೀತಿಯ ಭಯವೇಕೆ? ಒಂದು ರೀತಿಯಲ್ಲಿ ಈ ಭಯಕ್ಕೆ ಮಾಧ್ಯಮಗಳೂ ಕಾರಣವೇ? ಎಂಬ ಅನುಮಾನ ನಿಜಕ್ಕೂ ಕಾಡುತ್ತಿದೆ. ವೈದ್ಯರು ‘ಇದೇನೂ ಅಂಥ ಭಯಾನಕ ಕಾಯಿಲೆ ಅಲ್ಲ, ಇದಕ್ಕೆ ಚಿಕಿತ್ಸೆ ಇದೆ’ ಎನ್ನುತ್ತಾರೆ. ಇಷ್ಟಾದರೂ ಮೀಡಿಯಾಗಳು ಹಂದಿ ಜ್ವರ ಭಯಾನಕ ಎನ್ನುವಂತೆ ಬಿಂಬಿಸಿ ನಿತ್ಯವೂ ವರದಿ ಮಾಡುತ್ತಿವೆ. ಇಲ್ಲಿ ಎಡವುತ್ತಿರುವುದು ಎಲ್ಲಿ ಎಂಬ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸರಕಾರಗಳು ಕೂಡ ಸದ್ದಿಲ್ಲದೆ ಬಂದ ಈ ಕಾಯಿಲೆಗೆ ಮದ್ದು ಹಾಗೂ ಸೂಕ್ತ ಚಿಕಿತ್ಸೆಗೆ ವೈದ್ಯರ ನೇಮಕ ಮಾಡುವ ಬದಲು ‘ನಮ್ಮ ರಾಜ್ಯದಲ್ಲಿ ಇನ್ನೂ ಯಾರೂ ಸತ್ತಿಲ್ಲ, ಜ್ವರದ ತೀವ್ರತೆ ಇಲ್ಲ.’ಎಂದು ಹೇಳಿ ಆರಂಭದಲ್ಲಿ ಕೈ ತೊಳೆದುಕೊಂಡವು. ಆದರೆ ಈಗ ?
ಯಾವುದೇ ಕಾಯಿಲೆಗಾದರೂ ಸರಿ, ಮುಂಜಾಗೃತೆ ವಹಿಸುವುದು ಒಳ್ಳೆಯದು. ಆದರೆ ಜಾಗೃತಿವಹಿಸುವ ಬದಲು ಅಂಥವರನ್ನು ನೋಡಿ ಇತರರು ಅಣಕಿಸುವಂತೆ ನೋಡುವುದು ಎಷ್ಟು ಸರಿ?

ಈ ಲೇಖನ ವಿಜಯ ಕರ್ನಾಟಕ ದಿನಪತ್ರಿಕೆಯ ಸಿಂಪ್ಲಿಸಿಟಿ ಪೇಜ್ನಲ್ಲಿ ಅಗಸ್ಟ್ ೨೭ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. ಆದರೂ ಹಂದಿ ಜ್ವರದ ಬಗ್ಗೆ ಜನರಲ್ಲಿ ಇರುವ ಭಯ ಕೊಂಚವಾದರೂ ದೂರ ಮಾಡಲು ಇದು ಕೆಲವರಲ್ಲಾದರೂ ಅರಿವು ಮೂಡಿಸೀತು ಎಂಭ ಆಸೆಯಿಂದ ಇಲ್ಲಿ ಬಿತ್ತರಿಸಿದ್ದೇನೆ...
Monday, August 17, 2009
ನೀರಾ... ಏಕೆ ಈ ನಿರಾಸಕ್ತಿ...?
‘ನೀರಾದಿಂದ ಬೆಲ್ಲ ತಯಾರಿಸಬಹುದು. ಅದು ತುಂಬಾ ಸಿಹಿ. ಕಬ್ಬಿನ ಬೆಲ್ಲಕ್ಕಿಂತ ಈ ಬೆಲ್ಲ ಅತ್ಯಂತ ಉತ್ಕೃಷ್ಟದ್ದು. ನೀರಾದಿಂದ ತಯಾರಿಸುವ ಬೆಲ್ಲ ಸಿಹಿ ಹಾಗೂ ಸ್ವಾದಿಷ್ಟಯುಕ್ತ ಕೂಡ. ಇದರಿಂದ ಕೋಟಿಗಟ್ಟಲೆ ಹಣ ಸಂಪಾದಿಸಬಹುದು. ಎಲ್ಲಿ ತೆಂಗು ಬೆಳೆಯಲಾಗುತ್ತದೆಯೋ ಅಲ್ಲಿ ಅದರ ಬೆಲ್ಲ ತಯಾರಿಸಬಹುದು. ಇದು ಬಡತನ ನಿರ್ಮೂಲನೆಗೆ ದಾರಿ ಕೂಡ. ಆ ಮೂಲಕ ಈ ಧರೆಯಿಂದಲೇ ಬಡತನವನ್ನು ದೂರ ಮಾಡಬಹುದು’. -ಮಹಾತ್ಮ ಗಾಂಧಿ .
ಹೀಗೆ ಮಹಾತ್ಮ ಗಾಂಜಿ ಅವರೇ ನೀರಾ ಇಳಿಸುವುದನ್ನು ಸಮರ್ಥಿಸಿದ್ದರು. ಅಲ್ಲದೆ ಅವರ ‘ಹರಿಜನ’ ಪತ್ರಿಕೆಯಲ್ಲೂ ದಿ.ಗಜಾನನ ನಾಯಕ್ ಅವರು ೧೯೩೯ರ ಜನವರಿ೭ರ ಸಂಚಿಕೆಯಲ್ಲಿ ‘ಗರ್ಭಿಣಿಯರು ವಾರಕ್ಕೆ ಎರಡ್ಮೂರು ಬಾರಿ ನೀರಾ ಸೇವಿಸಿದರೆ ಹುಟ್ಟುವ ಮಗು ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯಪೂರ್ಣವಾಗಿ ಹಾಗೂ ಸೌಂದರ್ಯಯುತವಾಗಿ ಹುಟ್ಟುತ್ತವೆ’ ಎಂದು ಬರೆದಿದ್ದರು.
ಇಷ್ಟೆಲ್ಲಾ ನಿದರ್ಶನಗಳು ಕಣ್ಮುಂದೆ ಇದ್ದರೂ ನಮ್ಮ ಸರಕಾರಗಳಿಗೆ ಮಾತ್ರ ನೀರಾವನ್ನು ಅಭಿವೃದ್ಧಿಪಡಿಸುವ ಬಗ್ಗೆಯಾಗಲಿ, ಅದರ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದಕ್ಕಾಗಲಿ, ರೈತರ ಬದುಕನ್ನು ಆ ಮೂಲಕ ಹಸನು ಮಾಡುವುದಕ್ಕಾಗಲಿ ಕಾಳಜಿ ಇದ್ದಂತಿಲ್ಲ. ಕರ್ನಾಟಕದಲ್ಲಿ ‘ನೀರಾ ಚಳವಳಿ’ ನಡೆದು ೯ ವರ್ಷಗಳಾಗುತ್ತಿವೆ. ೨೦೦೧ರ ಅಕ್ಟೋಬರ್ ೯ಕ್ಕೆ ಇದೇ ಚಳವಳಿಗೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ವಿಠಲೇನಹಳ್ಳಿಯ ಇಬ್ಬರು ರೈತರು ಬಲಿಯಾದರೂ ಸರಕಾರ ಮಾತ್ರ ಕೇವಲ ಭರವಸೆಯ ‘ಮತ್ತಿನಲ್ಲಿ’ಯೇ ತೇಲಾ(ಡುತ್ತಿದೆ.) ಡಿಸುತ್ತಿದೆ.
ಬೆಂಗಳೂರಿನ ಗಾಂ ಭವನದಲ್ಲಿ ಅದೇ ೨೦೦೧ರ ಆಗಸ್ಟ್೧೩ರಂದು ‘ನುಸಿಪೀಡೆ ಹಾಗೂ ನೀರಾ’ಎಂಬ ವಿಷಯದ ಕುರಿತು ನಡೆಸಿದ ರಾಷ್ಟ್ರೀಯ ಕಾರ್ಯಾಗಾರವೇ ನೀರಾ ಚಳವಳಿಗೆ ಪ್ರಮುಖ ಪ್ರೇರಣೆಯಾಯಿತು. ಚಳವಳಿಗೆ ಆದೇ ಆ.೨೭ರಂದು ಸರಕಾರ ಸ್ಪಂದಿಸುವ ನಾಟಕವಾಡಿ ಮೊಸಳೆ ಕಣ್ಣೀರು ಸುರಿಸಿ ನೀರಾ ಇಳಿಸಲು ಅನುಮತಿ ನೀಡುವುದಾಗಿ ತಿಳಿಸಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಅದರ ಫಲವಾಗಿಯೇ ಚಳವಳಿ ತೀವ್ರ ಸ್ವರೂಪ ಪಡೆಯಿತು. ಚನ್ನಪಟ್ಟಣದ ವಿಠಲೇನಹಳ್ಳಿಯಲ್ಲಿ ಅದೇ ವರ್ಷ ಅಕ್ಟೋಬರ್ ೯ರಂದು ನಡೆದ ಹೋರಾಟ ತೀವ್ರ ಸ್ವರೂಪ ಪಡೆದಾಗ ಸರಕಾರ ಉತ್ತರ ನೀಡಿದ್ದು ಬಂದೂಕಿನ ನಳಿಕೆಯ ಮೂಲಕ! ಅದಕ್ಕೆ ತಮ್ಮಯ್ಯ ಹಾಗೂ ಪುಟ್ಟನಂಜಯ್ಯ ಎಂಬ ಇಬ್ಬರು ಅಮಾಯಕ ರೈತರು ಬಲಿಯಾದರು. ಆದರೆ ಅವರ ಬಲಿದಾನವಾದರೂ ಸರಕಾರಗಳು ಇಂದಿಗೂ ಬಗ್ಗದಿರುವುದು ಇತ್ತೀಚಿನ ಸರಕಾರಗಳು ಎಷ್ಟರಮಟ್ಟಿಗೆ ಜನಪರ, ರೈತಪರವಾಗಿವೆ ಎಂಬುದನ್ನು ತೋರಿಸುತ್ತವೆ.
ಅಂದು ಅದೇ ಚಳವಳಿಯನ್ನು ರಾಜಕೀಯ ದಾಳವಾಗಿಸಿಕೊಂಡ ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್, ಎಚ್.ಕೆ.ಪಾಟೀಲ್ ಹಾಗೂ ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರು ರಾಜಕೀಯವಾಗಿ ಮತ್ತಷ್ಟು ಬೆಳೆದುನಿಂತರು. ದೇವೇಗೌಡರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಠಲೇನಹಳ್ಳಿಯಿಂದ ವಿಧಾನಸೌಧದ ವರೆಗೆ ಪಾದಯಾತ್ರೆ ಮಾಡಿದರು. ಆದರೆ ಅದರಿಂದ ಬಡ ರೈತರಿಗೆ ಮಾತ್ರ ಸಿಕ್ಕಿದ್ದು ಕೋರ್ಟ್‌ಗೆ ಅಲೆಯುವ ಕಾಯಕ. ಆ ರೈತರ ಮೇಲೆ ಹಾಕಲಾಗಿರುವ ಪ್ರಕರಣಗಳು ಇಂದಿಗೂ ಇತ್ಯರ್ಥವಾಗಿಲ್ಲ, ಜತೆಗೆ ಚಳವಳಿಯ ಆಶಯವೂ ಈಡೇರಿಲ್ಲ! ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಪದ್ಮರಾಜ್ ಆಯೋಗವನ್ನು ನೇಮಕ ಮಾಡಲಾಯಿತು. ಆ ಆಯೋಗ ವರದಿ ತಯಾರಿಸಿ ಸರಕಾರಕ್ಕೆ ನೀಡಿತಾದರೂ ಅದರಲ್ಲಿ ಏನಿದೆ ಎಂಬುದು ಇಂದಿಗೂ ಬಹಿರಂಗವಾಗಲಿಲ್ಲ.
ಲಕ್ಷಾಂತರ ರೈತರ ಬದುಕನ್ನು ಹಸನುಗೊಳಿಸಿದ ಕಲ್ಪವೃಕ್ಷಕ್ಕೆ ನುಸಿ ಪೀಡೆ ಕಾಣಿಸಿಕೊಂಡ ನಂತರ ಅವರು ಕಂಡುಕೊಂಡಿದ್ದು ನೀರಾ ಉತ್ಪನ್ನವನ್ನು. ನೀರಾ ಚಳವಳಿ ಆರಂಭವಾದ ನಂತರ ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ವಿಶ್ವವೇ ಬೆರಗಾಗುವ ರೀತಿಯಲ್ಲಿ ನೀರಾದಿಂದ ಸಕ್ಕರೆ ತಯಾರಿಸುವ ಪ್ರಶಿಕ್ಷಣ ತರಬೇತಿ ನೀಡಲಾಯಿತು. ಆದರೆ ಅನಂತರ ಅದಕ್ಕೆ ಮಾರುಕಟ್ಟೆ ಸಮಸ್ಯೆ ಹಾಗೂ ಸರಕಾರದ ನಿರುತ್ಸಾಹ ಎದುರಾಯಿತು. ಅಂದಿನಿಂದ ತೆಂಗು ಬೆಳೆಗಾರರು ಮತ್ತೆ ಅತಂತ್ರವಾದರು.
೨೦೦೦ರಿಂದ ೨೦೦೩ರ ವರೆಗೆ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಕಡೆ ಬೀದಿ ಬೀದಿಗಳಲ್ಲಿ ಚಳವಳಿ ನಡೆಸಿದರು. ನೀರಾ ಬಗ್ಗೆ ರೈತರು ಹಾಗೂ ಸರಕಾರದ ಕಣ್ಣು ತೆರೆಸಿದರು. ೨೦೦೮ರಲ್ಲಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಭಾರತೀಯ ಸತ್ಸಂಗ ಸಮಾಜದ ಅಧ್ಯಕ್ಷರಾದ ಶ್ರೀ ಭಕ್ತಿ ತೀರ್ಥ ಸ್ವಾಮೀಜಿ ಕೂಡ ನೀರಾಗೆ ಸಂಬಂಸಿದಂತೆ ಹೋರಾಟ ನಡೆಸಿದರು. ಕರ್ನಾಟಕ ನೀರಾ ಮಹಾಮಂಡಳಿ ರಚನೆಗೆ ಒತ್ತಾಯಿಸಿದ್ದರು. ಬಜೆಟ್‌ನಲ್ಲಿ ೧೦ ಕೋಟಿ ರೂ.ಗಳನ್ನು ನೀರಾ ಉತ್ಪಾದನೆ, ಅಭಿವೃದ್ಧಿ ಹಾಗೂ ವಹಿವಾಟಿಗಾಗಿಯೇ ಮೀಸಲಿಡಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದರು. ರಾಜ್ಯದ ಬಹುತೇಕ ಕಡೆಗಳಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸಿದರು. ಆದರೂ ಸರಕಾರ ಮಾತ್ರ ಅಕಾರದ ಅಮಲಿನಲ್ಲಿ ಬೀದಿ ಬೀದಿಯಲ್ಲಿ ಹೆಂಡದಂಗಡಿ, ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಮುಂದಾಗುತ್ತಿದೆಯೇ ಹೊರತು ನೀರಾ ಉತ್ಪಾದನೆಗೆ ಸಹಕಾರ ನೀಡಲೇ ಇಲ್ಲ.
ನೀರಾ ಉತ್ಪಾದನೆಯ ಹಿನ್ನೆಲೆ:
ಭಾರತದಲ್ಲಿ ಅನಾದಿ ಕಾಲದಿಂದಲೂ ನೀರಾ ತಯಾರಿಸಲಾಗುತ್ತಿದೆ. ಇದು ಆಯುರ್ವೇದದಲ್ಲಿ ಹೆಚ್ಚು ಚಿರಪರಿಚಿತವೂ ಹೌದು. ಎಲ್ಲ ರೀತಿಯ ರೋಗಗಳಿಗೂ ಇದು ಮದ್ದು. ಆದರೆ ರಾಜ್ಯದಲ್ಲಿ ೧೯೫೧ರಲ್ಲಿ ಮೊದಲ ಬಾರಿಗೆ ನೀರಾ ಉತ್ಪಾದಿಸಲಾಯಿತು. ಆಗಲೇ ಕರ್ನಾಟಕದಲ್ಲಿ ೧೬೭ ಪಟ್ಟಣ ಹಾಗೂ ೧೫೨ ಪ್ರಮುಖ ಗ್ರಾಮೀಣ ಭಾಗಗಳಲ್ಲಿ ನೀರಾ ಮಾರಾಟ ಕೇಂದ್ರಗಳು ಸ್ಥಾಪನೆಯಾದವು. ೧೭ ನೀರಾ ಮತ್ತು ಪನೆ ಬೆಲ್ಲ ಸಹಕಾರಿ ಸಂಘಗಳು ಕಾರ್ಯನಿರ್ವಹಿಸತೊಡಗಿದವು. ೧೯೫೮ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ನೀರಾ ಮತ್ತು ಪನೆ ಬೆಲ್ಲ ಸಂಯುಕ್ತ ಸಂಘಗಳು ಆಸ್ತಿತ್ವಕ್ಕೆ ಬಂದವು.
ಕೇವಲ ಹತ್ತು ವರ್ಷಗಳ ನಂತರ ಸರಕಾರ ತಂದ ೧೯೬೮ರ ಶಾಸನದಿಂದ ನೀರಾ ಉದ್ಯಮ ಸಂಪೂರ್ಣ ನೆಲ ಕಚ್ಚಿತು. ಆದರೆ ೨೦೦೧ರಲ್ಲಿ ಎಲ್ಲೆಡೆ ತೆಂಗಿಗೆ ನುಸಿಪೀಡೆ ಕಾಣಿಸಿಕೊಂಡಾಗ ಮತ್ತೆ ನೀರಾ ಕುರಿತ ಚಿಂತನೆ, ಚಳವಳಿ ಆರಂಭವಾಗಿದ್ದು.
ಉಪಯೋಗ ಹಾಗೂ ಸಾಧ್ಯತೆ:
ನೀರಾ ಬಗ್ಗೆ ಜನಪ್ರತಿನಿಗಳಿಗೆ ಹಾಗೂ ಅಕಾರಿಗಳಿಗೆ ಸರಿಯಾದ ಅರಿವು ಇಲ್ಲದಿರುವುದೇ ನಿರುತ್ಸಾಹಕ್ಕೆ ಕಾರಣ ಎನ್ನಲಾಗಿದೆ. ಅದನ್ನು ಮರದಿಂದ ಇಳಿಸಿದ ಕೆಲವೇ ಗಂಟೆಗಳಲ್ಲಿ ಇದು ಹುಳಿ ಬಂದು ಹೆಂಡವಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ನೀರಾ ನಿಜಕ್ಕೂ ಪರಿಪೂರ್ಣ ಪೇಯ. ಕೋಕಾ ಕೋಲಾ, ಪೆಪ್ಸಿಯಂತ ವಿದೇಶಿ ಹಾಗೂ ಹಾನಿಕಾರಕ ಪಾನೀಯಗಳ ವಿರುದ್ಧ ಜಾಗತಿಕ ಮಟ್ಟದಲ್ಲಿ ಎದುರು ನಿಂತು ಬೆಳೆಯಬಲ್ಲ ಸಾಮರ್ಥ್ಯ ಇರುವುದು ಎಳೆನೀರು ಹಾಗೂ ನೀರಾಗೆ ಮಾತ್ರ! ಹೌದು, ಇವೆರಡೂ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ.
ನೀರಾ ಎಂದರೆ ಹೆಂಡ(ಸರಾಯಿ) ಎಂದಲ್ಲ. ಇದು ಎಲ್ಲ ವಯೋಮಿತಿಯ ಜನರಿಗೂ ಉಪಯುಕ್ತವಾಗುವ ಆರೋಗ್ಯದಾಯಕ ಪಾನೀಯ. ಆದರೆ ಕೆಲವರು ನೀರಾ ಹೆಸರಿನಲ್ಲಿ ಅಬಕಾರಿ ಅಕಾರಿಗಳ ಜತೆ ಸೇರಿಕೊಂಡು ಹೆಂಡವನ್ನು ಮಾರುವ ದಂಧೆ ಆರಂಭಿಸಿದ್ದಾರೆ. ಇಂಥವರು ನಿಜಕ್ಕೂ ರೈತರಲ್ಲ ಎಂಬುದು ಬಹಿರಂಗ ಸತ್ಯ. ನೀರಾ, ನೀರಿನಂತೆ ಪರಿಶುದ್ಧ, ಪಾರದರ್ಶಕ ಹಳದಿ ಬಣ್ಣದಿಂದ ಕೂಡಿರುತ್ತದೆ. ಇದನ್ನು ಇಳಿಸಿದ ನಂತರ ಮೂರು ಗಂಟೆಯವರೆಗೆ ಹಾಗೆಯೇ ಇಟ್ಟರೂ ಮತ್ತಿನ ಅಂಶ ಇರುವುದಿಲ್ಲ. ೧೨ ಗಂಟೆಯ ನಂತರವಷ್ಟೇ ಶೇ.೦.೭ ರಿಂದ ಶೇ.೦.೮ರಷ್ಟು ಮತ್ತು ಬರುತ್ತದೆ. ಆದರೆ ವೈeನಿಕವಾಗಿ ಇದನ್ನು ಸಂಸ್ಕರಿಸಿದರೆ ೬ ತಿಂಗಳ ಕಾಲ ರುಚಿ ಕೆಡದಂತೆ ಹಾಗೆಯೇ ಇಡಬಹುದು ಎಂಬುದು ತಜ್ಞರ ಅಭಿಪ್ರಾಯ.
ನೀರಾ ನಿಜಕ್ಕೂ ಆರೋಗ್ಯದಾಯಕ, ರೋಗನಿರೋಧಕ ಶಕ್ತಿ ಹೊಂದಿದ ಹಾಗೂ ನರದೌರ್ಬಲ್ಯ ಹೊಂದಿದವರಿಗೆ ದಿವ್ಯ ಔಷಧ ಕೂಡ ಹೌದು. ಇದರಿಂದ ಬೆಲ್ಲ, ಕಲ್ಲು ಸಕ್ಕರೆ, ಜ್ಯೂಸ್, ಜಾಮ್, ಚಾಕೋಲೇಟ್, ಬಿಸ್ಕೆಟ್, ಸಿರಪ್ ಹಾಗೂ ಇನ್ನಿತರೆ ಸಿಹಿ ತಿಂಡಿಗಳನ್ನು ತಯಾರಿಸಬಹುದು! ಆಯುರ್ವೇದದಲ್ಲಿ ತೆಂಗಿನ ಉತ್ಪಾದನೆಗಳಿಗೆ ಶ್ರೇಷ್ಠ ಸ್ಥಾನವಿದೆ. ಆದರೆ ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಈಗಿನ ಯಾವ ಜನಪ್ರತಿನಿಗಳಿಗೂ ಇಲ್ಲ.
ನೆರೆಯ ಕೇರಳ, ತಮಿಳು ನಾಡು, ಮಹಾರಾಷ್ಟ್ರದಲ್ಲಿ ನೀರಾ ಉದ್ಯಮ ಬೆಳೆದಂತೆ ಕರ್ನಾಟಕದಲ್ಲಿ ಬೆಳೆದಿಲ್ಲ. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಅಕಾರಿಗಳಿಗೆ ಹಾಗೂ ಜನಪ್ರತಿನಿಗಳಿಗೆ ಇದರ ಬಗ್ಗೆ ಇರುವ ಅರಿವಿನ ಕೊರತೆ ಹಾಗೂ ರೈತರ ಬಗ್ಗೆ ಇವರಿಗಿರುವ ನಿಷ್ಕಾಳಜಿ. ನೀರಾ ನಿಜಕ್ಕೂ ರೈತರ ಪಾಲಿನ ಆಶಾಕಿರಣ. ಇಲ್ಲಿ ಕೃಷಿಕರಿಗೆ ವಿಫುಲವಾದ ಅವಕಾಶಗಳಿವೆ. ಅವುಗಳನ್ನು ಸರಕಾರ ಕಂಡುಕೊಳ್ಳಬೇಕಿದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೆಂಡದ ಅಮಲಿನಲ್ಲಿ ಕುಣಿದಾಡುವುದಕ್ಕಿಂತ ವೈಜ್ಞಾನಿಕವಾಗಿ ನೀರಾದಿಂದಾಗುವ ಉಪಯೋಗಗಳನ್ನು ಪತ್ತೆ ಹಚ್ಚಬೇಕಿದೆ. ಜತೆಗೆ ಸರಕಾರದಿಂದ ಪರವಾನಗಿ ಪಡೆದು ನೀರಾ ಉತ್ಪಾದನೆಗೆ ಕೈ ಹಾಕುವಂತೆ ಮಾಡಬೇಕಿದೆ. ಜತೆಗೆ ನೀರಾ ಉತ್ಪನ್ನಗಳ ಅಭಿವೃದ್ಧಿ ಬಗ್ಗೆ ಚಿಂತಿಸಿದರೆ ರೈತರ ಬಾಳು ಕೂಡ ಹಸನಾಗುವುದರಲ್ಲಿ ಸಂಶಯವಿಲ್ಲ.
ಇಂದು ಕರ್ನಾಟಕದಲ್ಲಿ ಶೇ.೩೫ ರಿಂದ ಶೇ.೪೦ ರಷ್ಟು ಕೃಷಿ ಹಾಗೂ ತೋಟಗಾರಿಕೆ ಉತ್ಮನ್ನಗಳು ವಿನಾಕಾರಣ ಹಾಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಮಗ್ರ ಕೃಷಿ ನೀತಿಯನ್ನು ಜಾರಿಗೆ ತರುವ ತುರ್ತು ಅಗತ್ಯವಿದೆ. ವಿಶ್ವದಲ್ಲಿ ಇಂದು ರೈತರು ಜಾಗತಿಕರಣ, ಉದಾರೀಕರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಗೆ ಇಳಿಯಬೇಕಿದ್ದು, ಮೌಲ್ಯರ್ವತ ವಸ್ತುಗಳನ್ನು ಉತ್ಪಾದಿಸುವ ಮೂಲಕ ಸ್ಪರ್ಧೆಯಲ್ಲಿ ತನ್ನದೇ ಆದ ಸ್ಥಾನ ಉಳಿಸಿಕೊಳ್ಳಬೇಕಿದೆ. ಈ ಕಾರಣಕ್ಕಾಗಿಯೇ ಸರಕಾರಗಳು ಕೃಷಿಗೆ ಹೆಚ್ಚಿನ ಆದ್ಯತೆ ನೀಡುವುದರ ಜತೆಗೆ ಕೃಷಿ ಉತ್ಪನ್ನಗಳನ್ನು ಉದ್ಯಮವಾಗಿ ನಿರ್ಮಾಣ ಮಾಡುವ ಇಚ್ಛಾಶಕ್ತಿ ತೋರಬೇಕಿದೆ.

Sunday, August 2, 2009
ಅವಳು ಮಮತೆಯ ಮಡಿಲು...
My Dear Friend,
ಆಗಿನ್ನೂ ಮೈಸೂರಿಗೆ ಬಂದಿಳಿದು ಮೂರು ದಿನಗಳಾಗಿರಲಿಲ್ಲ. ಮೈಸೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಆ ಹಸಿರು ಹಾಸಿಗೆ ಮೇಲೆ ಕುಳಿತು ನಾ ಏನೋ ಗೀಚುತ್ತಿದ್ದ ಸಮಯದಲ್ಲಿ ನೀ ಬಂದು ಮಾತನಾಡಿಸಿದ ದೃಶ್ಯ ಇನ್ನೂ ಕಣ್ಣಂಚಿನಲ್ಲೇ ಇದೆ. ಪರಿಚಯ ಮಾಡಿಕೊಂಡ ಕೆಲವೇ ಕ್ಷಣಗಳಲ್ಲಿ ಸ್ನೇಹದ ಚಿಗುರೊಡೆದಿತ್ತು. ಅಂದು ನಿನ್ನ ಧ್ವನಿಯಿಂದ ಹೊರ ಬಂದ ಮಮತೆಯ ನಾದ ಇಂದಿಗೂ ನನ್ನೆದೆಯಲ್ಲಿ ಝೇಂಕರಿಸುತ್ತಲೇ ಇದೆ. ಅದಕ್ಕೆ ಅಲ್ಲಿನ ಆ ಹಸಿರೇ ಸಾಕ್ಷಿ!
ಅಲ್ಲಿಂದ ಶುರುವಾದ ನಮ್ಮಿಬ್ಬರ ಸ್ನೇಹ ಹೆಮ್ಮರವಾಗಿದ್ದು ನಿನಗೂ ಗೊತ್ತು. ತುಂಟಾಟ, ತರಲೆಗಳು, ವಿಚಾರಗಳ ವಿನಿಮಯ, ಚಿಂತನೆಗಳು ನಮ್ಮೊಳಗೆ ಬ್ರೇಕಿಲ್ಲದ ಕಾರಿನಂತೆ ಓಡಿದ್ದೂ ಉಂಟು. ಗಂಡು ಹೆಣ್ಣು ಕೇವಲ ಸ್ನೇಹಿತರಾಗಿರಲು ಸಾಧ್ಯವಿಲ್ಲ ಎಂಬ ಮಾತಿಗೆ ಅಪವಾದ ನೀನು. ನಿನ್ನೊಂದಿಗೆ ಕಳೆದ ಎರಡು ವರ್ಷಗಳು ಇನ್ನೂ ಆ ಹಸಿರಿನಂತೆಯೇ ಹಸಿರಾಗಿ ಉಸಿರಾಡುತ್ತಿವೆ. ಸ್ನೇಹದ ಹಾಳೆಗೆ ಮಮತೆಯ ಬಣ್ಣ ಹಚ್ಚಿ ಅಂದಗೊಳಿಸಿದವಳು ನೀನು. ಆ ಇಡೀ ಎರಡು ವರ್ಷಪೂರ್ತಿ ನಿನ್ನ ‘ಮಮತೆಯ ಸಿಹಿ’ ಉಂಡು ಕೊಬ್ಬಿದ ನನಗೆ ಮತ್ಯಾಕೊ ಕೊರಗು ಶುರುವಾಯಿತಲ್ಲ! ಕಾರಣ, ನೀನು ದಿಢೀರ್ ಮರೆಯಾದದ್ದೇ ಇರಬೇಕು!?
ಪ್ರತಿನಿತ್ಯ ನಿನ್ನ ಮಾತು ಕೇಳುತ್ತಲೇ ನಿನ್ನ ತುಂಟತನ, ನಿರ್ಮಲ ನಗು, ವಿಚಾರಲಹರಿಗಳಿಗೆ ತಲೆ ದೂಗುತ್ತಲೇ ಇದ್ದವನು ನಾನು. ನೀ ಹೇಳದೆ, ಕೇಳದೆ, ಒಂದು ಮಾತೂ ಉಲಿಯದೆ ನಾಪತ್ತೆಯಾಗೊದೆ? ಅಂದಿನಿಂದ ನಾನು ಧ್ವನಿಯಿಲ್ಲದ ಕೋಗಿಲೆಯಾಗಿದ್ದೆ. ಅಂದವಿಲ್ಲದ ಅರಗಿಣಿಯಾಗಿದ್ದೆ. ರೆಕ್ಕೆಪುಕ್ಕಗಳೆಲ್ಲ ಇದ್ದೂ ಕುಣಿಯಲಾಗದ ನವಿಲಾಗಿದ್ದೆ.
ಈ ಜಗತ್ತಿನಲ್ಲಿ ಪ್ರೀತಿ, ಸ್ನೇಹಕ್ಕೆ ಬರವಿಲ್ಲ(?). ಆದರೆ ನಿರ್ಮಲ ಪ್ರೀತಿ, ‘ಮುಕ್ತಮನದ ಸ್ನೇಹ’ ಅದೆಷ್ಟು ಜನರಿಗೆ ಸಿಕ್ಕಿದೆ ಹೇಳು? ಅಪ್ಪಟ ಗೆಳೆಯರೆಂದು ನಂಬಿ ಕಷ್ಟ ಸುಖಗಳೆಲ್ಲವನ್ನೂ ಬಿಚ್ಚಿಟ್ಟ ಮಾರನೆ ದಿನವೇ ಸಹಾಯ ಮಾಡುವ ಗೋಜಿಗೂ ಹೋಗದೆ ಸಮಯ ಸಾಧಕತನವನ್ನು ತೋರಿಸಿ, ಅದನ್ನೇ ಬಂಡವಾಳ ಮಾಡಿಕೊಂಡು ಬೇಳೆ ಬೇಯಿಸಿಕೊಳ್ಳುವ ಈ ದಿನಮಾನಗಳಲ್ಲಿ ನೀನು ನಿಜಕ್ಕೂ ‘ಕಡಲಾಳದ ಮುತ್ತು’. ಆ ವಿಚಾರದಲ್ಲಿ ನಾ ನಿಜಕ್ಕೂ ಆದೃಷ್ಟವಂತ; ಆಂದುಕೊಂಡಿದ್ದೆ. ನೀ ಮರೆಯಾದಾಗ ಅದೇ ಕಡಲಲ್ಲಿ ಈ ಮುತ್ತು ಕಳೆದು ಹೋಯಿತು ಎಂದುಕೊಂಡೆ. ಆ ಗಳಿಗೆಯಿಂದ ಸುಮಾರು ಐದು ವರ್ಷ ನಮ್ಮ ನಿರ್ಮಲ ಸ್ನೇಹ ನನಗೇ ಕನಸೆಂಬಂತೆ ಭಾಸವಾಗಿತ್ತು.
ಮನದಾಳದ ಎಷ್ಟೋ ನೋವು ನಲಿವುಗಳನ್ನು ಆಗ ನಿನ್ನೊಂದಿಗೆ ಬಿಚ್ಚಿಟ್ಟಿದ್ದೆ. ಆಗಾಗ ಮಾಡಿದ ತಪ್ಪಿಗೆ ಬೈಸಿಕೊಂಡಿದ್ದೆ, ಬೈದಿದ್ದೆ. ಆನಂತರ ಈ ಹಕ್ಕಿ ಮೂಕವಾಗಿತ್ತು! ನೀ ಮರೆಯಾದಾಗ ಇನ್ನೆಂದೂ ಸಿಗಲಾರೆ ಎಂಬ ಭಯ, ನಿನ್ನ ನೆನಪು ಆಗಾಗ ಕಡಲಿನಲ್ಲಿ ಭುಗಿಲೇಳುವ ಅಲೆಗಳ ಹಾಗೆ ಭೋರ್ಗರೆಯುತ್ತ ಅಪ್ಪಳಿಸುತ್ತಿದ್ದವು. ನೀನು ಬರೆದುಕೊಟ್ಟ ವಿಳಾಸದ ಆಟೋಗ್ರಾಫ್ ಡೈರಿ ಕೂಡ ನನ್ನ ದುರಾದೃಷ್ಟಕ್ಕೆ ಕಳೆದುಹೋಗಿತ್ತು. ನಿನ್ನ ಊರು ಗೊತ್ತಿದ್ದರೂ ವಿಳಾಸ ಗೊತ್ತಿರಲಿಲ್ಲ, ನೀನೆಲ್ಲಿದ್ದೆ ತಿಳಿಯಲಿಲ್ಲ. ಈಗ ನನ್ನ ಮನದಾಳದ ಸಾಗರ ಪ್ರಶಾಂತವಾಗಿದೆ. ತುಪ್ಪವೇ ಬಂದು ರೊಟ್ಟಿಗೆ ಬಿದ್ದಹಾಗೆ ನೀ ಮೊನ್ನೆ ನನ್ನ Cellಗೆ ಅದೆಲ್ಲಿಂದಲೋ "I am Kamala. how r u ?'' ಎಂಬ ಸಂದೇಶ ಕಳುಹಿಸಿದಾಗ ನನಗಾದ ಸಂತಸಕ್ಕೆ ಪಾರವೇ ಇರಲಿಲ್ಲ!
ನೀ ಸಿಕ್ಕಿದ್ದು ಕಾಯಿಲೆ ಬಿದ್ದ ಕೋಗಿಲೆಗೆ ಹುಶಾರಾಗಿ ಧ್ವನಿ ಬಂದಹಾಗಿತ್ತು, ನವಿಲಿಗೆ ನರ್ತಿಸಿದ ಖುಷಿ. ಹೆಣ್ಣು ಮಮತಾಮಯಿ, ಅವಳ ಹೃದಯ ಸಾಗರದಲ್ಲಿ ಪ್ರೀತಿ, ವಾತ್ಸಲ್ಯ, ಕರುಣೆ ಮಮತೆಗಳಿಗೆ ಅಪಾರ ಜಾಗ ಎಂದು ಕೇಳಿದ್ದೆ. ಅದು ಈಗ ಮತ್ತೆ ನಿಜವಾಯಿತು.
ನೀ ಮತ್ತೆ ಸಿಕ್ಕ ಈ ಗಳಿಗೆಯನ್ನು ನಿಜಕ್ಕೂ ನನ್ನಿಂದ ವರ್ಣಿಸಲಾಗುತ್ತಿಲ್ಲ. ನಿನ್ನ ಮಮತೆಗೆ ನಿಜಕ್ಕೂ ಈ ಹೃದಯದ ಗೆಳೆಯನ ಥ್ಯಾಂಕ್ಸ್.

Thursday, July 30, 2009
ಬೇರು ಬಿಡದ ನಾರು ಉದ್ಯಮ...
ರಾಜ್ಯದಲ್ಲಿ ನಾರು ಉದ್ಯಮ ನಲುಗುತ್ತಿದೆ. ನರಳುವಿಕೆಯಲ್ಲೇ ಇದು ಮೇಲೆದ್ದು ನಳನಳಿಸುತ್ತಾ ದೇಶದಲ್ಲಿಯೇ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ.
ಆಶ್ಚರ್ಯ ಆಗುತ್ತಿದೆಯೇ? ಹೌದು, ತೆಂಗು ಬೆಳೆಯುವಲ್ಲಿ ಕರ್ನಾಟಕಕ್ಕೆ ದೇಶದಲ್ಲೇ ೨ನೇ ಸ್ಥಾನ. ಭಾರತದಲ್ಲಿ ವಾರ್ಷಿಕ ೧೩ ಸಾವಿರ ದಶಲಕ್ಷ ತೆಂಗಿನಕಾಯಿ ಇಳುವರಿ ಬರುತ್ತಿದೆ. ಅದರಲ್ಲಿ ೧,೫೨೫ದಶಲಕ್ಷ ತೆಂಗು ಕರ್ನಾಟಕದಲ್ಲಿ ಬೆಳೆದವು !
ರಾಜ್ಯದ ೩,೮೭,೦೫೨ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಇಲ್ಲಿನ ೧೫ಜಿಲ್ಲೆಗಳಲ್ಲಿ ತೆಂಗು ಬೆಳೆಯಲಾಗುತ್ತಿದೆ. ಬೆಳೆಯ ಶೇ.೧೭ರಷ್ಟು ಮಾತ್ರ ತೆಂಗಿನ ಸಿಪ್ಪೆಗಳನ್ನು ನಾರು ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ೪,೨೦೨ ತೆಂಗು ನಾರು ಉತ್ಪನ್ನಗಳ ತಯಾರಿಕಾ ಘಟಕಗಳಿವೆ. ಈ ಘಟಕಗಳಲ್ಲಿ ೨೦ಸಾವಿರ ಪುರುಷ ಹಾಗೂ ಮಹಿಳಾ ಕಾರ್ಮಿಕರು ದುಡಿಯುತ್ತಿದ್ದಾರೆ. ಇವುಗಳಿಂದ ವಾರ್ಷಿಕ ೨೪ ಸಾವಿರ ಮೆಟ್ರಿಕ್ ಟನ್ ನಾರು ಉತ್ಪಾದಿಸಲಾಗುತ್ತಿದೆ. ಈ ನಾರಿನಲ್ಲಿ ಶೇ.೪೦ ಮಾತ್ರ ‘ರಬ್ಬರೈಸ್ಡ್ ಕಾಯರ್ ಮ್ಯಾಟ್ರೆಸ್ ’ ತಯಾರಿಸಲು ಬೇಕಾಗುವ ಸುರುಳಿ ನಾರಿನ ಹಗ್ಗವನ್ನು ತಯಾರಿಸಲಾಗುತ್ತಿದೆ.
ಉಳಿದದ್ದನ್ನು ಕಾಯರ್ ಮ್ಯಾಟ್ಸ್ , ಮ್ಯಾಟಿಂಗ್ಸ್ , ಜಿಯೋ ಟೆಕ್ಸ್‌ಟೈಲ್ಸ್ , ಕೋಕೋಲಾನ್ ಬ್ರೆಷಸ್ ಮುಂತಾದ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತಿದೆ. ರಾಜ್ಯ ತೆಂಗು ನಾರಿನ ಸಹಕಾರ ಮಹಾಮಂಡಳಿಯು ಪ್ರತಿ ವರ್ಷ ೧೮ರಿಂದ ೪೦ಲಕ್ಷ ರೂ. ಲಾಭ ಗಳಿಸುತ್ತಿದೆ. ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ನಾರು ಉತ್ಪನ್ನ ಘಟಕಗಳಿವೆ. ಉಳಿದ ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆದರೂ ನಾರು ಉತ್ಪಾದನೆಗೆ ಬೇಕಾದ ಘಟಕಗಳನ್ನು ಸ್ಥಾಪಿಸುವ ಉದ್ದೇಶ ಸರಕಾರಕ್ಕಿಲ್ಲ. ಜತೆಗೆ ಖಾಸಗಿಯವರೂ ಇಲ್ಲಿ ಘಟಕಗಳನ್ನು ಸ್ಥಾಪಿಸಲು ಹಿಂದೇಟು ಹಾಕುತ್ತಿದ್ದಾರೆ.
ನೆರೆಯ ಕೇರಳ ಹಾಗೂ ತಮಿಳುನಾಡುಗಳಲ್ಲಿ ತೆಂಗು ನಾರು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿರುವ ಪರಿಣಾಮ ಅವು ದೇಶದಲ್ಲಿಯೇ ಅತಿ ಹೆಚ್ಚು ಉತ್ಪಾದನೆ ಮಾಡುತ್ತಿವೆ. ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿವೆ. ಆ ಮೂಲಕ ಪ್ರಗತಿ ಸಾಸಿವೆ. ಆ ಇಚ್ಛಾಶಕ್ತಿ ನಮ್ಮ ರಾಜ್ಯ ಸರಕಾರಕ್ಕೆ ಏಕಿಲ್ಲ? ಕೃಷಿ, ಕೃಷಿ ಉತ್ಪನ್ನಗಳು, ಅದರ ಉಪ ಕಸುಬುಗಳು ಉದ್ಯಮವಾಗದೆ ರೈತರ ಉದ್ಧಾರ ಅಸಾಧ್ಯ. ಈ ನೀತಿ ಮಾತ್ರ ಸರಕಾರಗಳಿಗೆ ಅರ್ಥವಾಗುತ್ತಲೇ ಇಲ್ಲ.
ರಾಜ್ಯದಲ್ಲಿ ೩೦೨ ಕೇಂದ್ರಗಳಲ್ಲಿ ಈ ನಾರು ಹಾಗೂ ಅವುಗಳ ಉತ್ಪನ್ನಗಳ ತಯಾರಿಕೆ ನಡೆಯುತ್ತಿದೆ. ಆದರೆ ಅವುಗಳ ಜತೆಗೆ ೩,೯೦೦ ಮನೆಗಳಲ್ಲಿ ಗ್ರಾಮೀಣ ಮಹಿಳೆಯರೇ ಇದರಿಂದ ಉದ್ಯೋಗ ಕಂಡುಕೊಂಡಿದ್ದಾರೆ ! ಇದಕ್ಕೆ ಪ್ರೋತ್ಸಾಹ ನೀಡಿದರೆ ಸ್ವಯಂ ಉದ್ಯೋಗದ ಸೃಷ್ಟಿ ಹೆಚ್ಚಾಗುತ್ತದೆ ಎಂಬ ನಿದರ್ಶನ ಕಣ್ಣೆದುರೇ ಇದ್ದರೂ ರಾಜ್ಯ ಸರಕಾರ ಮಾತ್ರ ನಿರ್ಲಕ್ಷ್ಯತೋರುತ್ತಿದೆ. ಇದರಿಂದ ಇಡೀ ಉದ್ಯಮ ನಲುಗುತ್ತಿದೆ.
ರಾಜ್ಯದ ತುಮಕೂರು, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೋಲಾರ, ಹಾಸನ, ರಾಮನಗರ, ಮಂಡ್ಯ, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತಿದೆ. ಆದರೆ ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ರಾಮನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮಾತ್ರ ನಾರು ಉತ್ಪನ್ನ ಘಟಕಗಳಿವೆ. ಇದು ಈ ನಾಡಿನ ದುಸ್ಥಿತಿ.
ಆದರೂ ಭಾರತ ಪ್ರಸ್ತುತ ೬೫೦ ಕೋಟಿ ರೂ. ನಾರು ಉತ್ಪಾದನೆಯನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ. ರಫ್ತಿನಲ್ಲೂ ಕೇರಳ ಹಾಗೂ ತಮಿಳುನಾಡುಗಳದ್ದೇ ಮೇಲುಗೈ. ಕೇವಲ ಶೇ.೧೭ರಷ್ಟು ತೆಂಗು ನಾರನ್ನು ಬಳಕೆ ಮಾಡಿಕೊಳ್ಳುತ್ತಿರುವ ಕರ್ನಾಟಕಕ್ಕೆ ೩ನೇ ಸ್ಥಾನ. ಇದರ ನಡುವೆಯೂ ಒರಿಸ್ಸಾದಿಂದ ತೆಂಗು ನಾರಿನ ಕರಕುಶಲ ವಸ್ತುಗಳು ಹೆಚ್ಚು ರಫ್ತಾಗುತ್ತಿವೆ. ಕರ್ನಾಟಕದಿಂದ ಬೆಡ್ ಹಾಗೂ ಕುಷನ್ ವಸ್ತುಗಳು ಹೆಚ್ಚಾಗಿ ಹೊರ ದೇಶಗಳಿಗೆ ಸಾಗಣೆಯಾಗುತ್ತಿವೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಅತ್ಯಂತ ಬೇಡಿಕೆ ಸೃಷ್ಟಿಸಿವೆ.
ಬೆಂಗಳೂರಿನ ಯಶವಂತಪುರದಲ್ಲಿರುವ ಕುರ್ಲಾ ಬೆಡ್ ಮತ್ತು ರಸ್ಟೋಲೆಕ್ಸ್‌ಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಅರಸೀಕೆರೆ ಹಾಗೂ ತಿಪಟೂರು ನಾರು ಹಗ್ಗ ಹೆಚ್ಚು ಬಲಿಷ್ಠ ಎಂಬುದು ಜಾಗತಿಕ ಮಟ್ಟದಲ್ಲಿ ಸಾಬೀತಾಗಿದೆ. ಇಲ್ಲಿನ ಮ್ಯಾಟ್ರೆಸ್‌ಗೆ ಕೂಡ ಸೌದಿ ಅರೇಬಿಯಾದಲ್ಲಿ ಬೇಡಿಕೆ ಹೆಚ್ಚಾಗಿದೆ. ಆಶ್ಚರ್ಯದ ಅಂಶ ಎಂದರೆ ಬೇಡಿಕೆಗೆ ತಕ್ಕ ಹಾಗೆ ನಾರು ಉತ್ಪನ್ನಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ !
ಇದೆಲ್ಲದರ ನಡುವೆ ಮತ್ತೊಂದು ಆಘಾತಕಾರಿ ಅಂಶ ಎಂದರೆ ಮಲೆನಾಡು ಮತ್ತು ಕರಾವಳಿಯ ತೆಂಗು ನಾರು ಹೇಗೆ? ಅದರ ಗುಣಮಟ್ಟ ಎಷ್ಟು ? ಎಂಬುದರ ಬಗ್ಗೆ ಸಂಶೋಧನೆಗಳೇ ಆಗಲಿಲ್ಲ. ಈ ಭಾಗದಲ್ಲಿ ಹೇರಳವಾಗಿ ತೆಂಗು ಬೆಳೆದರೂ ಅದರ ನಾರು ಮಾತ್ರ ವಿನಾಕಾರಣ ಹಾಳಾಗುತ್ತಿದೆ. ಇದರ ನಡುವೆಯೂ ಬೆಂಗಳೂರಿನ ಕೆಂಗೇರಿ, ಮೈಸೂರು ರಸ್ತೆ, ಹೊರ ವಲಯದ ಹೊಸೂರುಗಳಲ್ಲಿ ಫ್ಲೈವುಡ್ ತಯಾರಿಸಲಾಗುತ್ತಿದೆ. ಹೊಸದಾಗಿ ಆವಿಷ್ಕಾರಗೊಂಡ ವಸ್ತುಗಳನ್ನು ತಯಾರಿಸಲು ಸರಕಾರದ ಪ್ರೋತ್ಸಾಹ ಹಾಗೂ ಯುವಜನತೆಯ ಆಸಕ್ತಿ ಬೇಕಿದೆ.
ರಾಜ್ಯದಲ್ಲಿ ಕೂಡ ತೆಂಗು ನಾರು ಸಹಕಾರ ಮಹಾ ಮಂಡಳಿ ೧೮ ಮಾರಾಟ ಮಳಿಗೆಗಳನ್ನು, ೨ ಸಂಚಾರಿ ಮಾರಾಟ ವಾಹನಗಳನ್ನು ಹೊಂದಿದೆ. ಆಗಾಗ ಪ್ರದರ್ಶನವೂ ನಡೆಯುತ್ತದೆ. ಆ ಮೂಲಕವೇ ಮಂಡಳಿ ೨೦೦೪ರಿಂದ ೨೦೦೮ರ ವರೆಗೆ ೭೨೬ ಲಕ್ಷ ರೂ. ವಹಿವಾಟು ನಡೆಸಿದೆ. ಆದರೂ ಬೇರೆ ಉದ್ಯಮದಂತೆ ಇದನ್ನೂ ಸರಕಾರ ಪರಿಗಣಿಸದಿರುವುದರಿಂದ ರಾಜ್ಯದ ಉದ್ಯಮಿಗಳು, ಕಾರ್ಮಿಕರು ಹೀನಾಯ ಸ್ಥಿತಿಯಲ್ಲಿದ್ದಾರೆ. ನೆರೆಯ ರಾಜ್ಯಗಳಲ್ಲಿ ಅವುಗಳಿಂದಲೇ ಅಭಿವೃದ್ಧಿ ಸಾಸಲಾಗುತ್ತಿದೆ. ಆ ಪ್ರe ಇಲ್ಲಿನ ಸರಕಾರಕ್ಕಿಲ್ಲ.
ಈ ಉದ್ಯಮದಲ್ಲಿ ದುಡಿಯುವ ರಾಜ್ಯದ ೨೦ ಸಾವಿರ ಕಾರ್ಮಿಕರಲ್ಲಿ ಶೇ.೭೫ರಷ್ಟು ಮಹಿಳೆಯರಿದ್ದಾರೆ. ಅದಲ್ಲಿ ಶೇ.೯೦ ಗ್ರಾಮೀಣ ಮಹಿಳೆಯರು. ಇದರಿಂದ ಕೇಂದ್ರ ಸರಕಾರ ಮಹಿಳಾ ಕಾಯರ್ ಯೋಜನೆ ಜಾರಿಗೊಳಿಸಿತು. ಕೇರಳ, ಒರಿಸ್ಸಾ, ತಮಿಳು ನಾಡು ಹಾಗೂ ಆಂಧ್ರಪ್ರದೇಶಗಳೇ ಹೆಚ್ಚು ಇದರ ಸದುಪಯೋಗ ಪಡೆದವು. ನಮ್ಮ ಸರಕಾರದ ತಾತ್ಸಾರದಿಂದ ಉದ್ಯಮ ಬೆಳೆಯಲೇ ಇಲ್ಲ. ೨೦೦೩ರಿಂದ ೨೦೦೭ರವರೆಗೆ ಕೇವಲ ೨,೧೮೦ ಮಹಿಳೆಯರು ಮಾತ್ರ ಈ ತರಬೇತಿ ಪಡೆದಿದ್ದಾರೆ. ಮಹಿಳೆಯರಿಗೆ ಕೇರಳ, ತಮಿಳುನಾಡು, ಆಂಧ್ರ ಸರಕಾರಗಳು ಶೇ.೭೫ ಸಬ್ಸಿಡಿ ನೀಡಿ, ಉತ್ತೇಜನ ನೀಡುತ್ತಿವೆ. ಇದರಿಂದ ವಾರ್ಷಿಕ ಹೆಚ್ಚು ಆದಾಯ ಬರುತ್ತಿದೆ. ಆದರೆ ಕರ್ನಾಟಕದಲ್ಲಿ...?
ಗ್ರಾಮೀಣ ಮಹಿಳೆಯರು ಹಾಗೂ ಯುವ ಜನರಿಗೆ ಈ ಉದ್ಯಮದ ಬಗ್ಗೆ ಸೂಕ್ತ ತರಬೇತಿ ನೀಡಿ, ಅಗತ್ಯ ಸವಲತ್ತು ನೀಡಿ, ಉದ್ಯಮವನ್ನು ಬೆಳೆಸುವುದು ಅದರ ಉದ್ದೇಶವಾಗಿತ್ತು. ರಾಜ್ಯದಲ್ಲಿ ಅರಸೀಕೆರೆಯಲ್ಲಿ ಕಚೇರಿ ತೆರೆಯಲಾಗಿತ್ತು. ತರಬೇತಿ ಹಾಗೂ ಅಭಿವೃದ್ಧಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗಿತ್ತು. ಇದಕ್ಕಾಗಿ ಕೇಂದ್ರ ಸರಕಾರದ ಹಣದಲ್ಲಿ ಒಂದು ಸುಸಜ್ಜಿತ ಕಟ್ಟಡವನ್ನೂ ಕಟ್ಟಲಾಗಿತ್ತು.
ಅಲ್ಲಿ ಮೂರು ತಿಂಗಳ ತರಬೇತಿ ಕೋರ್ಸ್ ಆರಂಭಿಸಲಾಗಿತ್ತು. ಆ ಸಮಯದಲ್ಲಿ ತರಬೇತಿ ಪಡೆದವರು ಇಂದಿಗೂ ತೆಂಗು ನಾರು ಉದ್ಯಮವನ್ನೇ ಜೀವನವನ್ನಾಗಿಸಿಕೊಂಡಿದ್ದಾರೆ. ಕೆಲವು ವರ್ಷಗಳವರೆಗೆ ಎಲ್ಲ ವಿಭಾಗೀಯ ಕಚೇರಿ ಹೊಣೆಯನ್ನು ಕೇಂದ್ರ ಸರಕಾರವೇ ಹೊತ್ತುಕೊಂಡಿತ್ತು. ಅವು ಸರಾಗವಾಗಿ ನಡೆಯುತ್ತವೆ ಎಂಬ ನಂಬಿಕೆ ಬಂದ ನಂತರ ಅವುಗಳನ್ನು ೧೦ನೇ ಪಂಚವಾರ್ಷಿಕ ಯೋಜನೆಯ ಸಮಯದಲ್ಲಿ ಆಯಾ ರಾಜ್ಯ ಸರಕಾರಗಳಿಗೆ ವಹಿಸಲಾಯಿತು. ಅಂದು ಅಕಾರದಲ್ಲಿದ್ದ ಸರಕಾರ ತೀವ್ರ ನಿರ್ಲಕ್ಷ್ಯವಹಿಸಿತು. ಇದರಿಂದಾಗಿ ಅರಸೀಕೆರೆಯ ಕಚೇರಿಯನ್ನು ಮುಚ್ಚಬೇಕಾಯಿತು !
ರಾಜ್ಯದಲ್ಲಿ ತೆಂಗು ನಾರು ಉದ್ಯಮ ಹಿಂದೆ ಬೀಳಲು ಮತ್ತೊಂದು ಪ್ರಮುಖ ಕಾರಣ ವಿದ್ಯುತ್. ರಾಜ್ಯದಲ್ಲಿ ೧೨೬.೭೩ ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ. ೭.೭೬ ದಶಲಕ್ಷ ಯೂನಿಟ್ ವಿದ್ಯುತ್ ಕೊರತೆಯಿದೆ. ಇದರಿಂದ ಸರಕಾರ ತೆಂಗುನಾರು ಉದ್ಯಮಕ್ಕೆ ವಿದ್ಯುತ್ ನೀಡುವುದಾದರೂ ಎಲ್ಲಿಂದ? ಉದ್ಯಮ ಸ್ಥಾಪಿಸುವ ಪ್ರತಿಯೊಬ್ಬ ವ್ಯಕ್ತಿಗೂ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ ರಾಜ್ಯಗಳಲ್ಲಿ ಆ ಸರಕಾರಗಳು ವಿದ್ಯುತ್ ಸಬ್ಸಿಡಿ ನೀಡುತ್ತವೆ . ನಮ್ಮಲ್ಲಿ ಅದ್ಯಾವ ಸವಲತ್ತೂ ಇಲ್ಲ. ಈ ಕಾರಣದಿಂದಲೂ ಉದ್ಯಮದಲ್ಲಿ ತೊಡಗಿಕೊಳ್ಳಲು ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯ ಸರಕಾರ ಈ ವಿದ್ಯುತ್ ಕೊರತೆಯನ್ನು ನೀಗಿಸಿಕೊಂಡು, ಉದ್ಯಮಕ್ಕೆ ಪ್ರೋತ್ಸಾಹ ನೀಡಿದರೆ ಗ್ರಾಮೀಣ ಜನರ ಬದುಕು ಹಸನಾಗುತ್ತದೆ. ಜತೆಗೆ ರಾಜ್ಯಕ್ಕೂ ಹೆಚ್ಚು ಆದಾಯ ಹರಿದು ಬರುತ್ತದೆ.
* ಕರ್ನಾಟಕ ೧.೫೦ರೂ. * ತಮಿಳುನಾಡು ೧.೦೦ರೂ.ನಿಂದ ೨.೦೦ರೂ. * ಕೇರಳ ೧.೫೦ ರೂ.ನಿಂದ ೨.೫೦ ರೂ. * ಆಂಧ್ರಪ್ರದೇಶ ೧.೦೦ರೂ. ನಿಂದ ೨.೦೦ರೂ. * ಓರಿಸ್ಸಾ ೨.೦೦ ರೂ.
ಆಶ್ಚರ್ಯ ಆಗುತ್ತಿದೆಯೇ? ಹೌದು, ತೆಂಗು ಬೆಳೆಯುವಲ್ಲಿ ಕರ್ನಾಟಕಕ್ಕೆ ದೇಶದಲ್ಲೇ ೨ನೇ ಸ್ಥಾನ. ಭಾರತದಲ್ಲಿ ವಾರ್ಷಿಕ ೧೩ ಸಾವಿರ ದಶಲಕ್ಷ ತೆಂಗಿನಕಾಯಿ ಇಳುವರಿ ಬರುತ್ತಿದೆ. ಅದರಲ್ಲಿ ೧,೫೨೫ದಶಲಕ್ಷ ತೆಂಗು ಕರ್ನಾಟಕದಲ್ಲಿ ಬೆಳೆದವು !
ರಾಜ್ಯದ ೩,೮೭,೦೫೨ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಇಲ್ಲಿನ ೧೫ಜಿಲ್ಲೆಗಳಲ್ಲಿ ತೆಂಗು ಬೆಳೆಯಲಾಗುತ್ತಿದೆ. ಬೆಳೆಯ ಶೇ.೧೭ರಷ್ಟು ಮಾತ್ರ ತೆಂಗಿನ ಸಿಪ್ಪೆಗಳನ್ನು ನಾರು ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ೪,೨೦೨ ತೆಂಗು ನಾರು ಉತ್ಪನ್ನಗಳ ತಯಾರಿಕಾ ಘಟಕಗಳಿವೆ. ಈ ಘಟಕಗಳಲ್ಲಿ ೨೦ಸಾವಿರ ಪುರುಷ ಹಾಗೂ ಮಹಿಳಾ ಕಾರ್ಮಿಕರು ದುಡಿಯುತ್ತಿದ್ದಾರೆ. ಇವುಗಳಿಂದ ವಾರ್ಷಿಕ ೨೪ ಸಾವಿರ ಮೆಟ್ರಿಕ್ ಟನ್ ನಾರು ಉತ್ಪಾದಿಸಲಾಗುತ್ತಿದೆ. ಈ ನಾರಿನಲ್ಲಿ ಶೇ.೪೦ ಮಾತ್ರ ‘ರಬ್ಬರೈಸ್ಡ್ ಕಾಯರ್ ಮ್ಯಾಟ್ರೆಸ್ ’ ತಯಾರಿಸಲು ಬೇಕಾಗುವ ಸುರುಳಿ ನಾರಿನ ಹಗ್ಗವನ್ನು ತಯಾರಿಸಲಾಗುತ್ತಿದೆ.
ಉಳಿದದ್ದನ್ನು ಕಾಯರ್ ಮ್ಯಾಟ್ಸ್ , ಮ್ಯಾಟಿಂಗ್ಸ್ , ಜಿಯೋ ಟೆಕ್ಸ್‌ಟೈಲ್ಸ್ , ಕೋಕೋಲಾನ್ ಬ್ರೆಷಸ್ ಮುಂತಾದ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತಿದೆ. ರಾಜ್ಯ ತೆಂಗು ನಾರಿನ ಸಹಕಾರ ಮಹಾಮಂಡಳಿಯು ಪ್ರತಿ ವರ್ಷ ೧೮ರಿಂದ ೪೦ಲಕ್ಷ ರೂ. ಲಾಭ ಗಳಿಸುತ್ತಿದೆ. ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ನಾರು ಉತ್ಪನ್ನ ಘಟಕಗಳಿವೆ. ಉಳಿದ ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆದರೂ ನಾರು ಉತ್ಪಾದನೆಗೆ ಬೇಕಾದ ಘಟಕಗಳನ್ನು ಸ್ಥಾಪಿಸುವ ಉದ್ದೇಶ ಸರಕಾರಕ್ಕಿಲ್ಲ. ಜತೆಗೆ ಖಾಸಗಿಯವರೂ ಇಲ್ಲಿ ಘಟಕಗಳನ್ನು ಸ್ಥಾಪಿಸಲು ಹಿಂದೇಟು ಹಾಕುತ್ತಿದ್ದಾರೆ.
ನೆರೆಯ ಕೇರಳ ಹಾಗೂ ತಮಿಳುನಾಡುಗಳಲ್ಲಿ ತೆಂಗು ನಾರು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿರುವ ಪರಿಣಾಮ ಅವು ದೇಶದಲ್ಲಿಯೇ ಅತಿ ಹೆಚ್ಚು ಉತ್ಪಾದನೆ ಮಾಡುತ್ತಿವೆ. ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿವೆ. ಆ ಮೂಲಕ ಪ್ರಗತಿ ಸಾಸಿವೆ. ಆ ಇಚ್ಛಾಶಕ್ತಿ ನಮ್ಮ ರಾಜ್ಯ ಸರಕಾರಕ್ಕೆ ಏಕಿಲ್ಲ? ಕೃಷಿ, ಕೃಷಿ ಉತ್ಪನ್ನಗಳು, ಅದರ ಉಪ ಕಸುಬುಗಳು ಉದ್ಯಮವಾಗದೆ ರೈತರ ಉದ್ಧಾರ ಅಸಾಧ್ಯ. ಈ ನೀತಿ ಮಾತ್ರ ಸರಕಾರಗಳಿಗೆ ಅರ್ಥವಾಗುತ್ತಲೇ ಇಲ್ಲ.
ರಾಜ್ಯದಲ್ಲಿ ೩೦೨ ಕೇಂದ್ರಗಳಲ್ಲಿ ಈ ನಾರು ಹಾಗೂ ಅವುಗಳ ಉತ್ಪನ್ನಗಳ ತಯಾರಿಕೆ ನಡೆಯುತ್ತಿದೆ. ಆದರೆ ಅವುಗಳ ಜತೆಗೆ ೩,೯೦೦ ಮನೆಗಳಲ್ಲಿ ಗ್ರಾಮೀಣ ಮಹಿಳೆಯರೇ ಇದರಿಂದ ಉದ್ಯೋಗ ಕಂಡುಕೊಂಡಿದ್ದಾರೆ ! ಇದಕ್ಕೆ ಪ್ರೋತ್ಸಾಹ ನೀಡಿದರೆ ಸ್ವಯಂ ಉದ್ಯೋಗದ ಸೃಷ್ಟಿ ಹೆಚ್ಚಾಗುತ್ತದೆ ಎಂಬ ನಿದರ್ಶನ ಕಣ್ಣೆದುರೇ ಇದ್ದರೂ ರಾಜ್ಯ ಸರಕಾರ ಮಾತ್ರ ನಿರ್ಲಕ್ಷ್ಯತೋರುತ್ತಿದೆ. ಇದರಿಂದ ಇಡೀ ಉದ್ಯಮ ನಲುಗುತ್ತಿದೆ.
ರಾಜ್ಯದ ತುಮಕೂರು, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೋಲಾರ, ಹಾಸನ, ರಾಮನಗರ, ಮಂಡ್ಯ, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತಿದೆ. ಆದರೆ ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ರಾಮನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮಾತ್ರ ನಾರು ಉತ್ಪನ್ನ ಘಟಕಗಳಿವೆ. ಇದು ಈ ನಾಡಿನ ದುಸ್ಥಿತಿ.
ರಫ್ತು ಮತ್ತು ಆದಾಯ :
ಭಾರತದಲ್ಲಿ ತೆಂಗು ನಾರನ್ನು ಒಂದು ಉದ್ಯಮವಾಗಿ ರೂಪಿಸಿದ್ದು ೧೯೬೫ರಲ್ಲಿ . ಆನಂತರ ತೆಂಗುನಾರು ತಂತ್ರeನ ಸಂಶೋಧನಾ ಕೇಂದ್ರೀಯ ಸಂಸ್ಥೆಯ ಸ್ಥಾಪನೆಯಾಯಿತು. ಈ ಸಂಸ್ಥೆ ೧೯೭೮ರಲ್ಲಿ ಹಲವೆಡೆ ತರಬೇತಿ ನೀಡಲಾರಂಭಿಸಿತು. ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಆರಂಭಿಸಿದಾಗ ಅಂದಿನ ರಾಜ್ಯ ಸರಕಾರ ಪ್ರೋತ್ಸಾಹ ನೀಡಲಿಲ್ಲ.ಆದರೂ ಭಾರತ ಪ್ರಸ್ತುತ ೬೫೦ ಕೋಟಿ ರೂ. ನಾರು ಉತ್ಪಾದನೆಯನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ. ರಫ್ತಿನಲ್ಲೂ ಕೇರಳ ಹಾಗೂ ತಮಿಳುನಾಡುಗಳದ್ದೇ ಮೇಲುಗೈ. ಕೇವಲ ಶೇ.೧೭ರಷ್ಟು ತೆಂಗು ನಾರನ್ನು ಬಳಕೆ ಮಾಡಿಕೊಳ್ಳುತ್ತಿರುವ ಕರ್ನಾಟಕಕ್ಕೆ ೩ನೇ ಸ್ಥಾನ. ಇದರ ನಡುವೆಯೂ ಒರಿಸ್ಸಾದಿಂದ ತೆಂಗು ನಾರಿನ ಕರಕುಶಲ ವಸ್ತುಗಳು ಹೆಚ್ಚು ರಫ್ತಾಗುತ್ತಿವೆ. ಕರ್ನಾಟಕದಿಂದ ಬೆಡ್ ಹಾಗೂ ಕುಷನ್ ವಸ್ತುಗಳು ಹೆಚ್ಚಾಗಿ ಹೊರ ದೇಶಗಳಿಗೆ ಸಾಗಣೆಯಾಗುತ್ತಿವೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಅತ್ಯಂತ ಬೇಡಿಕೆ ಸೃಷ್ಟಿಸಿವೆ.
ಬೆಂಗಳೂರಿನ ಯಶವಂತಪುರದಲ್ಲಿರುವ ಕುರ್ಲಾ ಬೆಡ್ ಮತ್ತು ರಸ್ಟೋಲೆಕ್ಸ್‌ಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಅರಸೀಕೆರೆ ಹಾಗೂ ತಿಪಟೂರು ನಾರು ಹಗ್ಗ ಹೆಚ್ಚು ಬಲಿಷ್ಠ ಎಂಬುದು ಜಾಗತಿಕ ಮಟ್ಟದಲ್ಲಿ ಸಾಬೀತಾಗಿದೆ. ಇಲ್ಲಿನ ಮ್ಯಾಟ್ರೆಸ್‌ಗೆ ಕೂಡ ಸೌದಿ ಅರೇಬಿಯಾದಲ್ಲಿ ಬೇಡಿಕೆ ಹೆಚ್ಚಾಗಿದೆ. ಆಶ್ಚರ್ಯದ ಅಂಶ ಎಂದರೆ ಬೇಡಿಕೆಗೆ ತಕ್ಕ ಹಾಗೆ ನಾರು ಉತ್ಪನ್ನಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ !
ಇದೆಲ್ಲದರ ನಡುವೆ ಮತ್ತೊಂದು ಆಘಾತಕಾರಿ ಅಂಶ ಎಂದರೆ ಮಲೆನಾಡು ಮತ್ತು ಕರಾವಳಿಯ ತೆಂಗು ನಾರು ಹೇಗೆ? ಅದರ ಗುಣಮಟ್ಟ ಎಷ್ಟು ? ಎಂಬುದರ ಬಗ್ಗೆ ಸಂಶೋಧನೆಗಳೇ ಆಗಲಿಲ್ಲ. ಈ ಭಾಗದಲ್ಲಿ ಹೇರಳವಾಗಿ ತೆಂಗು ಬೆಳೆದರೂ ಅದರ ನಾರು ಮಾತ್ರ ವಿನಾಕಾರಣ ಹಾಳಾಗುತ್ತಿದೆ. ಇದರ ನಡುವೆಯೂ ಬೆಂಗಳೂರಿನ ಕೆಂಗೇರಿ, ಮೈಸೂರು ರಸ್ತೆ, ಹೊರ ವಲಯದ ಹೊಸೂರುಗಳಲ್ಲಿ ಫ್ಲೈವುಡ್ ತಯಾರಿಸಲಾಗುತ್ತಿದೆ. ಹೊಸದಾಗಿ ಆವಿಷ್ಕಾರಗೊಂಡ ವಸ್ತುಗಳನ್ನು ತಯಾರಿಸಲು ಸರಕಾರದ ಪ್ರೋತ್ಸಾಹ ಹಾಗೂ ಯುವಜನತೆಯ ಆಸಕ್ತಿ ಬೇಕಿದೆ.
ಮಾರುಕಟ್ಟೆ ವ್ಯವಸ್ಥೆ:
ತೆಂಗು ನಾರು ಬಳಸಿ ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ಕೇಂದ್ರ ಸರಕಾರ ದೇಶದ ೩೦ಕ್ಕೂ ಹೆಚ್ಚು ಕಡೆಗಳಲ್ಲಿ ಬೃಹತ್ ಶೋ ರೂಂ ನಿರ್ಮಾಣ ಮಾಡಿದೆ. ಇದರ ಜತೆಗೆ ದೇಶ, ವಿದೇಶಗಳಲ್ಲಿ ನಡೆಯುವ ವಸ್ತು ಪ್ರದರ್ಶನಗಳಲ್ಲಿ ನಾರು ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲು ಕೂಡ ಮಳಿಗೆ ನಿರ್ಮಿಸುತ್ತದೆ. ಒಂದು ಉದ್ಯಮ ಸಮೃದ್ಧವಾಗಿ ಬೆಳೆಯಲು ಇನ್ನೇನು ಬೇಕು ?ರಾಜ್ಯದಲ್ಲಿ ಕೂಡ ತೆಂಗು ನಾರು ಸಹಕಾರ ಮಹಾ ಮಂಡಳಿ ೧೮ ಮಾರಾಟ ಮಳಿಗೆಗಳನ್ನು, ೨ ಸಂಚಾರಿ ಮಾರಾಟ ವಾಹನಗಳನ್ನು ಹೊಂದಿದೆ. ಆಗಾಗ ಪ್ರದರ್ಶನವೂ ನಡೆಯುತ್ತದೆ. ಆ ಮೂಲಕವೇ ಮಂಡಳಿ ೨೦೦೪ರಿಂದ ೨೦೦೮ರ ವರೆಗೆ ೭೨೬ ಲಕ್ಷ ರೂ. ವಹಿವಾಟು ನಡೆಸಿದೆ. ಆದರೂ ಬೇರೆ ಉದ್ಯಮದಂತೆ ಇದನ್ನೂ ಸರಕಾರ ಪರಿಗಣಿಸದಿರುವುದರಿಂದ ರಾಜ್ಯದ ಉದ್ಯಮಿಗಳು, ಕಾರ್ಮಿಕರು ಹೀನಾಯ ಸ್ಥಿತಿಯಲ್ಲಿದ್ದಾರೆ. ನೆರೆಯ ರಾಜ್ಯಗಳಲ್ಲಿ ಅವುಗಳಿಂದಲೇ ಅಭಿವೃದ್ಧಿ ಸಾಸಲಾಗುತ್ತಿದೆ. ಆ ಪ್ರe ಇಲ್ಲಿನ ಸರಕಾರಕ್ಕಿಲ್ಲ.
ಈ ಉದ್ಯಮದಲ್ಲಿ ದುಡಿಯುವ ರಾಜ್ಯದ ೨೦ ಸಾವಿರ ಕಾರ್ಮಿಕರಲ್ಲಿ ಶೇ.೭೫ರಷ್ಟು ಮಹಿಳೆಯರಿದ್ದಾರೆ. ಅದಲ್ಲಿ ಶೇ.೯೦ ಗ್ರಾಮೀಣ ಮಹಿಳೆಯರು. ಇದರಿಂದ ಕೇಂದ್ರ ಸರಕಾರ ಮಹಿಳಾ ಕಾಯರ್ ಯೋಜನೆ ಜಾರಿಗೊಳಿಸಿತು. ಕೇರಳ, ಒರಿಸ್ಸಾ, ತಮಿಳು ನಾಡು ಹಾಗೂ ಆಂಧ್ರಪ್ರದೇಶಗಳೇ ಹೆಚ್ಚು ಇದರ ಸದುಪಯೋಗ ಪಡೆದವು. ನಮ್ಮ ಸರಕಾರದ ತಾತ್ಸಾರದಿಂದ ಉದ್ಯಮ ಬೆಳೆಯಲೇ ಇಲ್ಲ. ೨೦೦೩ರಿಂದ ೨೦೦೭ರವರೆಗೆ ಕೇವಲ ೨,೧೮೦ ಮಹಿಳೆಯರು ಮಾತ್ರ ಈ ತರಬೇತಿ ಪಡೆದಿದ್ದಾರೆ. ಮಹಿಳೆಯರಿಗೆ ಕೇರಳ, ತಮಿಳುನಾಡು, ಆಂಧ್ರ ಸರಕಾರಗಳು ಶೇ.೭೫ ಸಬ್ಸಿಡಿ ನೀಡಿ, ಉತ್ತೇಜನ ನೀಡುತ್ತಿವೆ. ಇದರಿಂದ ವಾರ್ಷಿಕ ಹೆಚ್ಚು ಆದಾಯ ಬರುತ್ತಿದೆ. ಆದರೆ ಕರ್ನಾಟಕದಲ್ಲಿ...?
ರಾಜ್ಯ ಸರಕಾರದಿಂದಲೇ ಅನ್ಯಾಯ..!
ಈ ಉದ್ಯಮವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ೮ನೇ ಪಂಚವಾರ್ಷಿಕ ಯೋಜನೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ, ಒರಿಸ್ಸಾ, ಅಸ್ಸಾಂಗಳಲ್ಲಿ ತೆಂಗು ನಾರು ತರಬೇತಿ ಮತ್ತು ಅಭಿವೃದ್ಧಿ ವಿಭಾಗೀಯ ಕಚೇರಿಯನ್ನು ತೆರೆದಿತ್ತು.ಗ್ರಾಮೀಣ ಮಹಿಳೆಯರು ಹಾಗೂ ಯುವ ಜನರಿಗೆ ಈ ಉದ್ಯಮದ ಬಗ್ಗೆ ಸೂಕ್ತ ತರಬೇತಿ ನೀಡಿ, ಅಗತ್ಯ ಸವಲತ್ತು ನೀಡಿ, ಉದ್ಯಮವನ್ನು ಬೆಳೆಸುವುದು ಅದರ ಉದ್ದೇಶವಾಗಿತ್ತು. ರಾಜ್ಯದಲ್ಲಿ ಅರಸೀಕೆರೆಯಲ್ಲಿ ಕಚೇರಿ ತೆರೆಯಲಾಗಿತ್ತು. ತರಬೇತಿ ಹಾಗೂ ಅಭಿವೃದ್ಧಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗಿತ್ತು. ಇದಕ್ಕಾಗಿ ಕೇಂದ್ರ ಸರಕಾರದ ಹಣದಲ್ಲಿ ಒಂದು ಸುಸಜ್ಜಿತ ಕಟ್ಟಡವನ್ನೂ ಕಟ್ಟಲಾಗಿತ್ತು.
ಅಲ್ಲಿ ಮೂರು ತಿಂಗಳ ತರಬೇತಿ ಕೋರ್ಸ್ ಆರಂಭಿಸಲಾಗಿತ್ತು. ಆ ಸಮಯದಲ್ಲಿ ತರಬೇತಿ ಪಡೆದವರು ಇಂದಿಗೂ ತೆಂಗು ನಾರು ಉದ್ಯಮವನ್ನೇ ಜೀವನವನ್ನಾಗಿಸಿಕೊಂಡಿದ್ದಾರೆ. ಕೆಲವು ವರ್ಷಗಳವರೆಗೆ ಎಲ್ಲ ವಿಭಾಗೀಯ ಕಚೇರಿ ಹೊಣೆಯನ್ನು ಕೇಂದ್ರ ಸರಕಾರವೇ ಹೊತ್ತುಕೊಂಡಿತ್ತು. ಅವು ಸರಾಗವಾಗಿ ನಡೆಯುತ್ತವೆ ಎಂಬ ನಂಬಿಕೆ ಬಂದ ನಂತರ ಅವುಗಳನ್ನು ೧೦ನೇ ಪಂಚವಾರ್ಷಿಕ ಯೋಜನೆಯ ಸಮಯದಲ್ಲಿ ಆಯಾ ರಾಜ್ಯ ಸರಕಾರಗಳಿಗೆ ವಹಿಸಲಾಯಿತು. ಅಂದು ಅಕಾರದಲ್ಲಿದ್ದ ಸರಕಾರ ತೀವ್ರ ನಿರ್ಲಕ್ಷ್ಯವಹಿಸಿತು. ಇದರಿಂದಾಗಿ ಅರಸೀಕೆರೆಯ ಕಚೇರಿಯನ್ನು ಮುಚ್ಚಬೇಕಾಯಿತು !
ರಾಜ್ಯದಲ್ಲಿ ತೆಂಗು ನಾರು ಉದ್ಯಮ ಹಿಂದೆ ಬೀಳಲು ಮತ್ತೊಂದು ಪ್ರಮುಖ ಕಾರಣ ವಿದ್ಯುತ್. ರಾಜ್ಯದಲ್ಲಿ ೧೨೬.೭೩ ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ. ೭.೭೬ ದಶಲಕ್ಷ ಯೂನಿಟ್ ವಿದ್ಯುತ್ ಕೊರತೆಯಿದೆ. ಇದರಿಂದ ಸರಕಾರ ತೆಂಗುನಾರು ಉದ್ಯಮಕ್ಕೆ ವಿದ್ಯುತ್ ನೀಡುವುದಾದರೂ ಎಲ್ಲಿಂದ? ಉದ್ಯಮ ಸ್ಥಾಪಿಸುವ ಪ್ರತಿಯೊಬ್ಬ ವ್ಯಕ್ತಿಗೂ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ ರಾಜ್ಯಗಳಲ್ಲಿ ಆ ಸರಕಾರಗಳು ವಿದ್ಯುತ್ ಸಬ್ಸಿಡಿ ನೀಡುತ್ತವೆ . ನಮ್ಮಲ್ಲಿ ಅದ್ಯಾವ ಸವಲತ್ತೂ ಇಲ್ಲ. ಈ ಕಾರಣದಿಂದಲೂ ಉದ್ಯಮದಲ್ಲಿ ತೊಡಗಿಕೊಳ್ಳಲು ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯ ಸರಕಾರ ಈ ವಿದ್ಯುತ್ ಕೊರತೆಯನ್ನು ನೀಗಿಸಿಕೊಂಡು, ಉದ್ಯಮಕ್ಕೆ ಪ್ರೋತ್ಸಾಹ ನೀಡಿದರೆ ಗ್ರಾಮೀಣ ಜನರ ಬದುಕು ಹಸನಾಗುತ್ತದೆ. ಜತೆಗೆ ರಾಜ್ಯಕ್ಕೂ ಹೆಚ್ಚು ಆದಾಯ ಹರಿದು ಬರುತ್ತದೆ.
ತೆಂಗು ನಾರಿನಲ್ಲಿ ಹೊಸ ಆವಿಷ್ಕಾರ !
*ಬೆಡ್, ಮ್ಯಾಟ್, ಹಗ್ಗ, ಸೇರಿದಂತೆ ಕುಷನ್ ವಸ್ತುಗಳು, ಗೊಬ್ಬರ ( ಕರ್ನಾಟಕ). *ಬೊಂಬೆ, ಜೋಕಾಲಿ, ಗಡಿಯಾರ, ಕರಕುಶಲ ವಸ್ತುಗಳು (ಒರಿಸ್ಸಾ) . * ಪಿತ್ ( ಪುಡಿ ನಾರು), ಕತ್ತ , ಹಗ್ಗ, ಮ್ಯಾಟ್ (ಅಲಂಕಾರಿಕ) ಮತ್ತಿತರ ತರಹೇವಾರಿ ವಸ್ತುಗಳು (ಕೇರಳ, ತಮಿಳುನಾಡು, ಆಂಧ್ರ ,ಅಸ್ಸಾಂ ). * ಊಟದ ತಟ್ಟೆ , ಲೋಟ, ಮಡಿಕೆ, ಅಲಂಕಾರಿಕ ಪಾಟ್, ಗ್ರೀನ್ ಹೌಸ್, ಟೈಲ್ಸ್ ,ಕುರ್ಚಿ, ಮೇಜು, ಟೇಬಲ್, ಮಂಚ ,ಕಿಟಕಿ , ಬಾಗಿಲು, ಪ್ಲೇ ವುಡ್ ಮುಂತಾದ ಗಟ್ಟಿ ವಸ್ತುಗಳು ( ಕರ್ನಾಟಕದ ಹೊಸ ಆವಿಷ್ಕಾರಗಳು)ಒಂದು ತೆಂಗಿನ ಸಿಪ್ಪೆಗೆ ಎಲ್ಲೆಲ್ಲಿ ಎಷ್ಟು ದರ ?
ರಾಜ್ಯಗಳು ದರ* ಕರ್ನಾಟಕ ೧.೫೦ರೂ. * ತಮಿಳುನಾಡು ೧.೦೦ರೂ.ನಿಂದ ೨.೦೦ರೂ. * ಕೇರಳ ೧.೫೦ ರೂ.ನಿಂದ ೨.೫೦ ರೂ. * ಆಂಧ್ರಪ್ರದೇಶ ೧.೦೦ರೂ. ನಿಂದ ೨.೦೦ರೂ. * ಓರಿಸ್ಸಾ ೨.೦೦ ರೂ.
Friday, July 24, 2009
ರಾಜಕೀಯ ಪುಡಾರಿಗಳಾಗುತ್ತಿರುವ ಗುರುಗಳು...!?
ಭಾರತದಲ್ಲಿ ಗುರುವಿಗೆ ತನ್ನದೇ ಆದ ಸ್ಥಾನಮಾನ ನೀಡಲಾಗಿದೆ. ಈ ಸಮಾಜವನ್ನು ಯಾವ ದಿಕ್ಕಿಗೆ ಬೇಕಾದರೂ ಕೊಂಡೊಯ್ಯುವ ‘ತಾಕತ್’ ಇರುವುದು ಅವನೊಬ್ಬನಿಗೆ ಮಾತ್ರ. ಹೌದು, ಗುರು ಒಬ್ಬ ಶಿಲ್ಪಿ, ಕಲಾಕಾರ. ತಾಯಿ ಮಗುವನ್ನು ಹೆತ್ತು ಸಮಾಜಕ್ಕೆ ನೀಡುತ್ತಾಳೆ. ತಾಯಿ ತಾನೆ ಮೊದಲ ಗುರು ಎಂದರೂ ಅನಂತರದ ದಿನಗಳಲ್ಲಿ ಮಕ್ಕಳು ಹೆಚ್ಚು ಕಲಿಯುವುದು ಗುರುವಿನಿಂದ. ಎಳೆಯ ಮಕ್ಕಳೆಂಬ ಕಲ್ಲನ್ನು ಹೇಗೆ ಬೇಕೋ ಹಾಗೆ ಕೆತ್ತಿ, ತಿದ್ದಿ, ತೀಡಿ ಸಮಾಜಕ್ಕೆ ಕೊಡುವ ಅಭೂತಪೂರ್ವ ಕಲೆಗಾರಿಕೆ, ಸದವಕಾಶ ಇರುವುದು ಅವನೊಬ್ಬನಿಗೆ. ಆ ಹಿನ್ನೆಲೆಯಲ್ಲಿಯೇ ಗುರುಕುಲಗಳು ತಲೆ ಎತ್ತಿದ್ದು, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅದಿರಲಿ, ಇಲ್ಲಿ ಚರ್ಚಿಸಬೇಕಾದ ವಿಚಾರ ಗುರುಕುಲಗಳ ಬಗ್ಗೆ ಅಲ್ಲ, ಗುರುವಿನ ಬಗ್ಗೆ. ಹಿಂದೆ ಗುರುವಿಗಿದ್ದ ಗೌರವಗಳು ಈಗಿವೆಯಾ...?
ಇಂಥದ್ದೊಂದು ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಅದು ಸಿಗುವುದೇ ಕಷ್ಟ. ಹಾಗೇ ಆ ಗೌರವ ಕಡಿಮೆಯಾಗಲು ಕಾರಣವೇನು? ಎಂಬುದಕ್ಕೆ ಮಾತ್ರ ಉತ್ತರ ಒಂದೇ ‘ಗುರು ಬದಲಾಗಿದ್ದಾನೆ’. ಹೌದು, ಗುರುಕುಲಗಳು ಮಾಯವಾದ ಬೆನ್ನಲ್ಲೇ ಗುರುವೂ ಬದಲಾಗಿದ್ದಾನೆ. ಆತನ ಸ್ಥಿತಿಗತಿಗಳೂ ಬದಲಾಗಿವೆ. ಹಿಂದೆ ಗುರುವಿಗೆ ಸಂಬಳವೇ ಇರಲಿಲ್ಲ. ಅಂಥದರಲ್ಲೂ ಗುರುಗಳು ಮಕ್ಕಳಿಗೆ ಶ್ರದ್ಧೆಯಿಂದ ಪಾಠ ಮಾಡುತ್ತಿದ್ದರು. eನವನ್ನು ಧಾರೆ ಎರೆಯುತ್ತಿದ್ದರು. ಈಗ ಒಳ್ಳೆಯ ಶಿಕ್ಷಕರಿಲ್ಲ ಪಾಠ ಮಾಡುತ್ತಿಲ್ಲ ಎಂದಲ್ಲ; ಇದ್ದಾರೆ, ಆದರೆ ಸ್ವರೂಪ ಬದಲಾಗಿದೆ. ಕೈತುಂಬ ಸಂಬಳ ಬರುತ್ತಿದ್ದರೂ ಪಾಠ ಪ್ರವಚನಗಳ ಶೈಲಿ ಹಿಂದಿನಂತಿಲ್ಲ. ಅದಕ್ಕೆ ಕಾರಣ ಹುಡುಕಲು ಹೊರಟರೆ ದೊಡ್ಡ ಪರ್ವತವೇ ಎದುರಾಗುತ್ತದೆ, ಅಷ್ಟೊಂದು ಕಾರಣಗಳಿವೆ.
ಮೊನ್ನೆ ಮೊನ್ನೆಯಷ್ಟೆ ನಡೆದ ಶಿಕ್ಷಕರ ಸಂಘದ ತಾಲೂಕು ಮಟ್ಟದ ಚುನಾವಣೆಗಳನ್ನು ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಆ ಎಲ್ಲ ಕಾರಣಗಳು ಎದುರಿಗೆ ಧುತ್ತೆಂದು ಬೀಳುತ್ತವೆ. ಶಿಕ್ಷಕರು ಹಿಂದೆ ಪಾಠದ ಜತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುತ್ತಿದ್ದರು. ಆದರೆ ಈಗ ಪಾಠದ ಜತೆಗೆ ರಾಜಕೀಯ ! ಮೊದಲ ಆದ್ಯತೆ ರಾಜಕೀಯಕ್ಕೆ ನಂತರ ಪಾಠಕ್ಕೆ(!?) ಎಂಬಂತಾಗಿದೆ. ಸಂವಿಧಾನದಲ್ಲಿ ಶಿಕ್ಷಕರಿಗೆ ಎಲ್ಲ ರೀತಿಯ ಸವಲತ್ತುಗಳನ್ನೂ ನೀಡಲಾಗಿದೆ. ಅವರ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಂಘದ ನಿರ್ಮಾಣಕ್ಕೆ ಅವಕಾಶ ನೀಡಿದೆ. ಆದರೆ ಈಗ ಅದರ ಹೆಸರಿನಲ್ಲಿ ಪಾಠ ನಿಧಾನವಾಗಿ, ಸಂಘದ (ರಾಜಕೀಯ) ಚಟುವಟಿಕೆಗಳೇ ಪ್ರಧಾನವಾಗಿವೆ.
ಯಾವುದೇ ರಾಜಕೀಯ ನಾಯಕರಿಗೂ ಸಾಟಿಯಿಲ್ಲದಂತೆ ತಾಲೂಕು ಮಟ್ಟದ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಹಣ, ಹೆಂಡ ಹಂಚಿಕೆ ಮಾಡಿದ್ದಾರೆ. ಬಾಡೂಟ ಹಾಕಿಸಿ, ‘ಹಬ್ಬ’ ಮಾಡಿದ್ದಾರೆ. ಸಮಾಜ ಶಿಕ್ಷಕರಿಗೆ ಅಪಾರ ಗೌರವ ನೀಡುತ್ತದೆ. ಅದನ್ನು ಉಳಿಸಿಕೊಳ್ಳುವ ಸಲುವಾಗಿ ಹಿಂದೆ ಶಿಕ್ಷಕರು ಹರ ಸಾಹಸ ಮಾಡುತ್ತಿದ್ದರು. ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುತ್ತಿದ್ದರು. ಆದರೆ ಈಗ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಸಾರಾಯಿ ಅಂಗಡಿಗಳ ಕೌಂಟರ್‌ಗಳಲ್ಲಿಯೇ ಬಹಿರಂಗವಾಗಿ ಕುಡಿದು, ಕುಣಿದು ಕುಪ್ಪಳಿಸುವ ಹಂತಕ್ಕೆ ಬಂದಿದ್ದಾರೆ ಎಂದರೆ ಇಡೀ ಸಮಾಜವೇ ತಲೆ ತಗ್ಗಿಸುವ ವಿಚಾರ.
ಈಗತಾನೆ ಶಾಲೆಗಳು ಆರಂಭವಾಗಿವೆ. ಮಕ್ಕಳು ರಜೆಯ ಗುಂಗಿನಲ್ಲಿಯೇ ಇದ್ದಾರೆ. ಅವರನ್ನು ಪಠ್ಯದೆಡೆಗೆ ಕೈ ಹಿಡಿದು ಕರೆತರುವ ಜವಾಬ್ದಾರಿ ಶಿಕ್ಷಕರದ್ದು. ಆದರೆ ಈಗ ಶಿಕ್ಷಕರು ಚುನಾವಣೆಯಲ್ಲಿ ಫುಲ್ ಬಿಸಿ! ಈಗತಾನೆ ತಾಲೂಕು ಮಟ್ಟದ ಚುನಾವಣೆ ನಡೆದಿದೆ. ಇನ್ನೂ ಜಿಲ್ಲೆ ಹಾಗೂ ರಾಜ್ಯ ಮಟ್ಟದ ಚುನಾವಣೆ ಬಾಕಿ ಇದೆ!! ಹೀಗಾದರೆ ಪಾಠ ಪ್ರವಚನಗಳ ಗತಿ ಏನು? ಈ ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಬಹುದೊಡ್ಡ ಜವಾಬ್ದಾರಿ ಹಾಗೂ ಅಂಥ ಸೌಭಾಗ್ಯ ಸಿಗುವುದು ಶಿಕ್ಷಕನಿಗೆ ಮಾತ್ರ. ಏಕೆಂದರೆ ಅವರಿಗೆ ಮಕ್ಕಳು ಸಿಗುವಷ್ಟು ಹೊತ್ತು ಪೋಷಕರಿಗೂ ಸಿಗುವುದಿಲ್ಲ. ಆದರೆ ಈಗ ಶಿಕ್ಷಕರು ಮಾಡುತ್ತಿರುವುದಾದರೂ ಏನು? ಪ್ರತಿ ತಾಲೂಕಿನಲ್ಲೂ ಒಬ್ಬೊಬ್ಬ ಮುಖಂಡರ ಹೆಸರಿನಲ್ಲಿ ಗುಂಪು ಗುಂಪಾಗಿ ರಾಜಕೀಯ...
ರಾಜ್ಯದಲ್ಲಿ ಪ್ರೌಢ ಶಾಲೆಯ ೬೪,೨೫೫ ಶಿಕ್ಷಕರಿದ್ದಾರೆ. ಪ್ರಾಥಮಿಕ ಶಾಲೆಯ ೨,೩೮,೯೦೯ ಶಿಕ್ಷಕರಿದ್ದಾರೆ. ಇವುಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪೈಕಿ ಪ್ರತಿ ಐವತ್ತು ಶಿಕ್ಷಕರಿಗೆ ಒಬ್ಬರಂತೆ ಎಲ್ಲ ತಾಲೂಕುಗಳಿಂದಲೂ ೬ ಮಂದಿ ಶಿಕ್ಷಕರಂತೆ ಒಟ್ಟು ೪೦೦೦ ಶಿಕ್ಷಕರು ತಾಲೂಕು ಪ್ರತಿನಿಗಳಾಗಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಎಲ್ಲ ತಾಲೂಕಿನ ಪ್ರತಿನಿಗಳು ಸೇರಿ ಜಿಲ್ಲೆಗೆ ೬ ಮಂದಿ ಪದಾಕಾರಿಗಳನ್ನು ಆಯ್ಕೆ ಮಾಡುತ್ತಾರೆ. ಅನಂತರ ರಾಜ್ಯ ಸಂಘಕ್ಕೆ ೬ ಮಂದಿ ಪದಾಕಾರಿಗಳನ್ನು ಆಯ್ಕೆ ಮಾಡಲಾಗುವುದು. ಆದರೆ ಇದಕ್ಕೆ ನಡೆಯುವ ಹೋರಾಟ, ರಾಜಕೀಯ, ತಂತ್ರಗಾರಿಕೆಗಳನ್ನು ನೋಡಿದರೆ ನಮ್ಮ ರಾಜಕೀಯ ಪಕ್ಷಗಳ ನಾಯಕರೂ ನಾಚಿಕೊಂಡಾರು!
ಈ ಚುನಾವಣೆಯಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಪ್ರತಿ ತಾಲೂಕಿನಲ್ಲಿಯೂ ೧೦೦ ರಿಂದ ೧೫೦ ಕುಲಗೆಟ್ಟ ಮತಗಳು ಕಂಡು ಬಂದಿವೆ. ಕೋಲಾರ ಜಿಲ್ಲೆಯೊಂದರಲ್ಲಿಯೇ ೬೦೦೪ ಶಿಕ್ಷಕರಲ್ಲಿ ೪೬೦ ಮತಗಳು ಕುಲಗೆಟ್ಟಿವೆ. (ಇದೇ ಅತಿ ಹೆಚ್ಚು) ಆದರೆ ಇದಕ್ಕೆ ರಾಜ್ಯ ಸರಕಾರಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ಗುರಿಕಾರ್ ಅವರು ‘ರಾಜ್ಯದ ಗಡಿ ಪ್ರದೇಶ ಹಾಗೂ ಇತರ ಭಾಷಾ ಶಾಲೆ ಶಿಕ್ಷಕರಿಗೆ ಕನ್ನಡದ ಅರಿವಿನ ಕೊರತೆಯಿದೆ. ಆ ಕಾರಣಕ್ಕೆ ಈ ರೀತಿಯ ಸಮಸ್ಯೆಯಾಗಿದೆ ಎನ್ನುತ್ತಾರೆ. ಅದೇನೇ ಇರಲಿ. ಇದು ಶಿಕ್ಷಕರ eನ ಮಟ್ಟವನ್ನೂ ಎತ್ತಿ ತೋರಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಇದು ಪ್ರಜಾಪ್ರಭುತ್ವ. ಇಲ್ಲಿ ಎಲ್ಲರಿಗೂ ಹಕ್ಕುಗಳಿವೆ. ಅವುಗಳನ್ನು ರಕ್ಷಿಸಿಕೊಳ್ಳಲೇಬೇಕು. ಹಾಗಂತ ಸ್ವಾತಂತ್ರ್ಯ ಸ್ವೇಚ್ಛಾಚಾರಕ್ಕಲ್ಲ. ಅಕಾರ ದರ್ಪಕ್ಕಲ್ಲ. ಶಿಕ್ಷಕರ ವರ್ತನೆಗಳು ಮಕ್ಕಳಿಗೆ ಆದರ್ಶ. ಅವರು ಹಸಿ ಗೋಡೆಗಳಂತೆ. ಯಾವುದನ್ನಾದರೂ ಸಲೀಸಾಗಿ ಸ್ವೀಕರಿಸುತ್ತಾರೆ. ಅವರ ಮುಂದಿರುವ ಆದರ್ಶ ಜೀವಿ ಒಬ್ಬನೇ, ಅದು ಶಿಕ್ಷಕ. ಆದರೆ ಇದನ್ನು ಮರೆತ ಇಂದಿನ ಬಹುತೇಕ ಶಿಕ್ಷಕರು ದೇಶ ಕಟ್ಟುವ ಉತ್ತಮ ಪ್ರಜೆಗಳನ್ನು ಸೃಷ್ಟಿಸುವ ಬದಲು ‘ಹೊಲಸು ರಾಜಕೀಯ’ಕ್ಕೆ ಹುರಿಯಾಳುಗಳನ್ನು ತಯಾರು ಮಾಡುತ್ತಿರುವಂತೆ ಕಾಣುತ್ತದೆ.
ಶಿಕ್ಷಕ ಹುದ್ದೆ ಕೇವಲ ಉದ್ಯೋಗವಲ್ಲ, ಅದೊಂದು ವಿಶೇಷ ಕರ್ತವ್ಯ. ಉತ್ತಮ ವ್ಯಕ್ತಿಗಳನ್ನು ಈ ದೇಶಕ್ಕೆ ತಯಾರು ಮಾಡುವ ಸುವರ್ಣಾವಕಾಶ. ಜಗತ್ತಲ್ಲಿ ಯಾರಿಗೂ ಸಿಗದ ಅಪರೂಪದ ಅವಕಾಶ. ಅದನ್ನು ಬಹುತೇಕರು ಮರೆತ ಹಾಗೆ ಕಾಣುತ್ತದೆ. ಇಂಥ ಅನುಮಾನಗಳಿಗೆ ಮೊನ್ನೆ ನಡೆದ ಚುನಾವಣೆ ಬಹಳಷ್ಟು ಕಡೆ ಎಡೆ ಮಾಡಿಕೊಟ್ಟಿದೆ.
ಜವಾಬ್ದಾರಿ ಮರೆತು ವರ್ತಿಸುವ ಶಿಕ್ಷಕರೇ ಇತ್ತೀಚೆಗೆ ಹೆಚ್ಚಾಗುತ್ತಿರುವುದರಿಂದ ಅವರ ಮೇಲೆ ಅನೇಕ ಆರೋಪಗಳು ಕೇಳಿಬರುತ್ತಲೇ ಇವೆ. ಅತ್ಯಾಚಾರವೂ ಸೇರಿದಂತೆ ಅನೇಕ ಕಳಂಕವನ್ನು ಹೊತ್ತ ಶಿಕ್ಷಕರು ರಾಜ್ಯ ಹಾಗೂ ರಾಷ್ಟ್ರಾದ್ಯಂತ ಕಾಣುತ್ತಿದ್ದಾರೆ. ಅವು ಗುಟ್ಟಾಗಿಯೂ ಉಳಿದಿಲ್ಲ. ಮಾಧ್ಯಮಗಳಲ್ಲಿ ಇಂಥ ಸುದ್ದಿಗಳು ಆಗಾಗ ಪ್ರಕಟವಾಗುತ್ತಲೇ ಇದ್ದರೂ ಕೆಲವು ಶಿಕ್ಷರು ಮಾತ್ರ ತಮ್ಮ ವರ್ತನೆಗಳನ್ನು ತಿದ್ದಿಕೊಳ್ಳುವ ಗೋಜಿಗೇ ಹೋಗುತ್ತಿಲ್ಲ. ಇದು ಈ ಕಾಲದ ಬಹುದೊಡ್ಡ ದುರಂತ.
ಶಿಕ್ಷಕರಿಗೆ ಸಮಸ್ಯೆಗಳಿವೆ ನಿಜ, ಆದರೆ ಅವುಗಳನ್ನು ಸರಕಾರದ ಅಥವಾ ಮೇಲಕಾರಿಗಳ ಮುಂದಿಟ್ಟು ಬಗೆಹರಿಸಿಕೊಳ್ಳಬಹುದು. ಆದರೆ ಅದಕ್ಕೆಂದು ಪಾಠ ಪ್ರವಚನಗಳನ್ನು, ವಿದ್ಯಾರ್ಥಿಗಳನ್ನು ನಿರ್ಲಕ್ಷಿಸಿ ಬೇಜವಾಬ್ದಾರಿಯಿಂದ ವರ್ತಿಸುವುದು ತರವಲ್ಲ.
ಯಥಾ ಗುರು ತಥಾ ಶಿಷ್ಯ ಎಂಬುದನ್ನು ಮರೆಯದೆ ಶಿಕ್ಷಕರು ವರ್ತಿಸುವುದನ್ನು ಕಲಿತರೆ ಈ ಸಮಾಜಕ್ಕೆ ಒಳ್ಳೆಯದು. ಇಲ್ಲದಿದ್ದರೆ ಅವರೇ ಸೃಷ್ಟಿಸಿದ ಬಲೆಯಲ್ಲಿ ಅವರೇ ಆಹುತಿಯಾಗುವುದು ನಿಶ್ಚಿತ.

Thursday, June 25, 2009
ಸಂಗೀತ ನಿರ್ದೇಶಕ ಹಂಸಲೇಖ ಜೊತೆ ಹಾಗೆ ಸುಮ್ಮನೆ...
ಕನ್ನಡ ಚಿತ್ರ ರಂಗದ ದಿಗ್ಗಜ, ಸಂಗೀತ ನಿರ್ದೇಶಕಹಂಸಲೇಖ ಅವರ ಜೊತೆ ಹಾಗೆ ಸುಮ್ಮನೆ ಮಾತಿಗಿಳಿದಾಗ... ಕೇಳಿದ ಕೆಲವು ಪ್ರಶ್ನೆಗಳು, ಅವುಗಳಿಗೆ ತುಂಬಾ ಜಾಣತನದಿಂದ ಅವ್ರು ನೀಡಿದ ಉತ್ತರಗಳು ಇಲ್ಲಿವೆ. ನೀವು ಹಾಗೆ ಸುಮ್ಮನೆ ಕಣ್ಣಾಯಿಸಿ....
೧.ಕನ್ನಡ ಚಿತ್ರರಂಗದಲ್ಲಿ ಸಾಹಿತ್ಯ ‘ಕಳವು’ ಹೆಚ್ಚಾಗಿದ್ದೇಕೆ ?
*ಈಗ ಹೊಸ ಟ್ರೆಂಡ್ ಶುರುವಾಗಿದೆ. ಜಯಂತ ಕಾಯ್ಕಿಣಿ, ನಾಗೇಂದ್ರ ಪ್ರಸಾದ್‌ರಂಥ ಉತ್ತಮ ಸಾಹಿತಿಗಳು ಅತ್ಯುತ್ತಮ ಗೀತೆ ಬರೆಯುತ್ತಿದ್ದಾರೆ. ಕದ್ದು ಸಾಹಿತ್ಯ ಬರೆಯುವವರು ಸಾಹಿತಿಗಳೇ ಅಲ್ಲ, ಟೆಕ್ನಿಷಿಯನ್ಸ್. ಬೇರೆ ಯಾವುದೋ ಕಾರಣಕ್ಕೆ ಬಂದವರು. ಆದರೆ ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ರೀಮೇಕ್ ಹಾಗೂ ಕದಿಯುವ ಸಾಹಿತ್ಯವನ್ನು ಮೊದಲಿನಿಂದಲೂ ನಾನು ವಿರೋಸಿದ್ದೇನೆ.
೨.ಹಿಂದಿನ ಹಂಸಲೇಖ ಎಲ್ಲೋದರು ?
*ಇಲ್ಲ, ನಾನು ಇನ್ನೂ ನನ್ನ ಟ್ರೆಂಡ್‌ನಲ್ಲಿದ್ದೇನೆ. ಕೆಲವರು ಹೊಸ ಟ್ರೆಂಡ್‌ನಲ್ಲಿದ್ದಾರೆ. ಆಗ ಪ್ರೇಮ, ಯುಗಳ ಗೀತೆಗಳೇ ಹೆಚ್ಚಾಗಿದ್ದವು. ರವಿಚಂದ್ರನ್ ಹಾಗೂ ನನ್ನದು ಒಂದು ಕಮರ್ಷಿಯಲ್ ಕಾಂಬಿನೇಷನ್ ಅಷ್ಟೇ. ಅನಂತರವೂ ‘ನೆನಪಿರಲಿ’ವರೆಗೆ ಒಳ್ಳೆ ಗೀತೆ ನೀಡಿದ್ದೇನೆ, ಜನ ಒಪ್ಪಿದ್ದಾರೆ. ಆ ಕಾರಣಕ್ಕಾಗಿಯೇ ನಾನು ಇನ್ನೂ ಚಿತ್ರರಂಗದಲ್ಲಿ ಜೀವಂತವಾಗಿದ್ದೇನೆ.
೩.ಈಗಿನ ಕನ್ನಡ ಸಿನಿಮಾರಂಗ ಹೇಗೆನಿಸುತ್ತದೆ ?
*ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ಇದು ಪುಣ್ಯ ಕಾಲ; ಜತೆಗೆ ಅಂಜಿಕೆ ಹುಟ್ಟಿಸುವ ಕಾಲ! ಚಿತ್ರರಂಗ ಸ್ವಂತ ಕಾಲ ಮೇಲೆ ನಿಲ್ಲಲು ಹಣ ಬೇಕಿತ್ತು. ಅದನ್ನು ಕಳೆದ ಏಳೆಂಟು ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ತಂದು ಸುರಿದಿದ್ದಾರೆ. ಆ ಮೂಲಕ ನೆಲೆ ಒದಗಿಸಿಕೊಟ್ಟಿದ್ದಾರೆ. ಆದರೆ ಅವರಿಗೆ ಗುಣಮಟ್ಟ ನೀಡಲು ಆಗಿಲ್ಲ. ಅದು ಅವರ ಕೆಲಸವೂ ಅಲ್ಲ. ಪ್ರಯೋಗಗಳಿಗೆ ಇದು ಪರ್ವ ಕಾಲ. ಭಾರತದ ಏಳು ರಾಜ್ಯಗಳಲ್ಲಿ ಪ್ರಾದೇಶಿಕ ಚಿತ್ರರಂಗ ನೆಲಕಚ್ಚಿದೆ. ಆದರೆ ಕನ್ನಡದಲ್ಲಿ ನೆಲೆ ನಿಂತಿದೆ. ಅದೊಂದೇ ಅವರಿಂದ ಆದ ಉಪಯೋಗ.
೪.ಪಾಶ್ಚಾತ್ಯ ಸಂಸ್ಕೃತಿ ಚಿತ್ರ ಸಾಹಿತ್ಯದ ಮೇಲೆಷ್ಟು ಪರಿಣಾಮ ಬೀರಿದೆ ?
*ನಮ್ಮ ಬಂಗಾರವನ್ನು ನಾವೇ ನವೀಕರಿಸಬೇಕು, ಎಸೆಯಬಾರದು. ಜಾಗತಿಕ ಪ್ರತಿರೋಧವನ್ನು ಎದುರಿಸುವ ಎದೆಗಾರಿಕೆ, ಲಯ ನಮ್ಮಲ್ಲಿ ಹುಟ್ಟಬೇಕು. ನಮ್ಮ ದೇಸೀತನ ದೊಡ್ಡದಾಗಿ ಎದ್ದೇಳಬೇಕು. ಬುದ್ಧಿವಂತ ನಿರ್ದೇಶಕರು ನಾಯಕರ ಮಾತು ಕೇಳದೆ, ಕಥೆಯ ಮತ್ತು ಹೃದಯದ ಮಾತು ಕೇಳಬೇಕು. ಆಗ ಮತ್ತೊಂದು ಸುವರ್ಣಯುಗ ಬರುವುದರಲ್ಲಿ ಅಚ್ಚರಿಯಿಲ್ಲ.
೫.ದೇಸೀ ವಿದ್ಯಾಸಂಸ್ಥೆ ಸ್ಥಾಪನೆಯ ಉದ್ದೇಶ ?
*ಇದು ನನ್ನ ಪಾರ್ಟ್ ಆಫ್ ಜಾಬ್. ಕಲೆ ಇಷ್ಟು ವರ್ಷ ನನಗೆ ಗೌರವ, ಪುರಸ್ಕಾರ ತಂದುಕೊಟ್ಟಿದೆ. ಅದನ್ನು ಈಗ ಶಿಕ್ಷಣದ ಮೂಲಕ ಮರಳಿಸಬೇಕಿದೆ. ನಮ್ಮ ವಿ.ವಿಗಳು ೫೦ ವರ್ಷಗಳಿಂದ ದೇಸೀ ವಿಮರ್ಶಕರು, ಪಂಡಿತರನ್ನು ಸೃಷ್ಟಿಸಿವೆ. ಆದರೆ ದೇಸೀ ಕಲಾವಿದರನ್ನು ಹುಟ್ಟು ಹಾಕಿಲ್ಲ. ದೇಸೀಯತೆ ನಮ್ಮ ರಕ್ತದಲ್ಲಿದೆ. ಆದ್ದರಿಂದ ಶಿಕ್ಷಣದ ಮೂಲಕ ಕಲೆ, ಕಲೆ ಮೂಲಕ ಶಿಕ್ಷಣ ನೀಡಿ ದೇಸೀಯ ಕಲಾವಿದರನ್ನು ಹುಟ್ಟು ಹಾಕುವ ಸಲುವಾಗಿ ಈ ವಿದ್ಯಾಸಂಸ್ಥೆ ಸ್ಥಾಪಿಸಿದ್ದೇನೆ.

Subscribe to:
Posts (Atom)