
ಆಶ್ಚರ್ಯ ಆಗುತ್ತಿದೆಯೇ ? ನಿಜ, ಇದು ರೆಡಿಮೇಡ್ ಹಸಿರು ಹಾಸಿಗೆ (Green Lawn). ಹಸಿರು ನೆಲವೇ ಕಾಣದ ಈ ದಿನಮಾನಗಳಲ್ಲಿ ಪ್ರತಿ ಮನೆಗೂ ಹೊಂದಿಕೊಳ್ಳುವಂಥ ನೈಸರ್ಗಿಕ ಹಸಿರು ಹಾಸಿಗೆಯನ್ನು ತಯಾರಿಸುವ ತಂತ್ರeನವನ್ನು ನಾರು ಮಂಡಳಿಯ ಸಂಶೋಧಕರು ಕಂಡು ಹಿಡಿದಿದ್ದು, ಅದಕ್ಕೆ ಪೇಟೆಂಟ್ ಕೂಡ ಪಡೆದಿದ್ದಾರೆ. ಕೇರಳದ ಯಾಲಪಿಯಲ್ಲಿರುವ ಕೇಂದ್ರೀಯ ನಾರು ಸಂಶೋಧನ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಈ ಆವಿಷ್ಕಾರ ಮಾಡಲಾಗಿದ್ದು, ಈಗ ಕರ್ನಾಟಕದಲ್ಲೂ ಇದರ ಪ್ರಯೋಗವಾಗಿದೆ. ಈಗಾಗಲೇ ಮೂವರು ಇದರ ಸೌಲಭ್ಯ ಪಡೆದಿದ್ದಾರೆ.
ಭಾರತದಲ್ಲಿ ನ್ಯಾಷನಲ್ ರೂರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಹಾಗೂ ನಾರು ಮಂಡಳಿ ಎರಡೂ ಕಡೆ ಇದನ್ನು ಹೇಗೆ ರೂಪಿಸುವುದು ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಈ ಹಾಸಿಗೆ ರೆಡಿ ಮಾಡಲು ಕೆಲವು ತಂತ್ರeನಗಳಿವೆ. ಅದನ್ನು ಅದೇ ಮಾದರಿಯಲ್ಲಿ ತಯಾರಿಸಬೇಕು. ಹೀಗಾಗಿ ಇದಕ್ಕೆ ಪರವಾನಗಿ ಪಡೆದು ಆರ್ಥಿಕ ಒಪ್ಪಂದಕ್ಕೆ (MOU)ಸಹಿ ಹಾಕಬೇಕು. ಜತೆಗೆ ತರಬೇತಿಯನ್ನು ಪಡೆಯಬೇಕು. ಅದನ್ನು ನಾರು ಮಂಡಳಿ ಹಾಗೂ ರೂರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಮಾಡುತ್ತಿವೆ.
ಇದರಿಂದ ಅ

ನಾರು ಹಾಗೂ ನಾರಿನ ಪುಡಿಯನ್ನು ಹಾಸಿಗೆ ರೂಪದಲ್ಲಿ ಬಳಸಿ ಹಸಿರನ್ನು ಬೆಳೆಸಲಾಗುತ್ತದೆ. ಇದರಲ್ಲಿ ಗರಿಕೆ ಸೇರಿದಂತೆ ಎಲ್ಲ ರೀತಿಯ ಹುಲ್ಲು ಹಾಸಿಗೆಯನ್ನೂ ತಯಾರಿಸಬಹುದು. ಒಂದೇ ಬಾರಿ ಹಲವು ಹಂತಗಳಲ್ಲಿ ಹಾಸಿಗೆ ತಯಾರಿಸಬಹುದು. ಇದರ ಮೇಲೆ ಹುಲ್ಲುಬೆಳೆಯಲು ಕನಿಷ್ಠ ಒಂದರಿಂದ ಒಂದೂವರೆ ತಿಂಗಳು ಬೇಕು. ಈ ಹಾಸಿಗೆಯಲ್ಲಿ ಹುಲ್ಲು ಬೆಳೆದ ನಂತರ ಅದನ್ನು ಬೆಡ್ ಶೀಟ್ ರೀತಿ ಮಡಚಿ ಇಡಬಹುದು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಲೀಸಾಗಿ ಇದನ್ನು ಸುತ್ತಿಕೊಂಡು ಹೋಗಬಹುದು ಅಥವಾ ಸ್ಥಳಾಂತರಿಸಬಹುದು. ಜತೆಗೆ ಯಾವ ಸ್ಥಳಕ್ಕೆ ಬೇಕೋ ಹಾಗೆ ಈ ಹುಲ್ಲನ್ನು ಕಟ್ ಮಾಡಿ ಜೋಡಿಸಬಹುದು. ಮನೆ ಮುಂದೆ ಈ ಹಾಸಿಗೆ ಜೋಡಿಸಿದರೆ ಇಡೀ ಮನೆ ಬೃಂದಾವನ !
ಈ ಹುಲ್ಲಿನ ಹಾಸಿಗೆಯನ್ನು ಕೇವಲ ಸಾಮಾನ್ಯ ಮನೆಗಳ ಮುಂದೆ ಹೊರಾಂಗಣಕ್ಕೆ ಮಾತ್ರವಲ್ಲ, ಮಹಡಿ ಮನೆಯಲ್ಲೂ ಅಲಂಕಾರಕ್ಕಾಗಿ ಬಳಸಬಹುದು. ಕಾಲುದಾರಿಯಲ್ಲೂ ಬಳಸಬಹುದು. ಮನೆಯ ಚಾವಣಿಗೆ ಕೂಡ ಬಳಸಬಹುದು. ಇದರಿಂದ ಮನೆ ಕೂಡ ತಂಪಾಗಿರುತ್ತದೆ. ರೆಸ್ಟೋರೆಂಟ್, ಆಸ್ಪತ್ರೆ ಹೀಗೆ ಎಲ್ಲೆಂದರೆ ಇದನ್ನು ಉಪಯೋಗಿಸಬಹುದು. ಎಲ್ಲ ಋತುಗಳಿಗೂ ಹೊಂದಿಕೊಳ್ಳುವ ಈ ಹುಲ್ಲಿನ ಹಾಸಿಗೆಯನ್ನು ಸುಲಭವಾಗಿ ಪೋಷಣೆ ಮಾಡಬಹುದು. ಜತೆಗೆ ಇದು ಶೇ. ೮೦೦ರಷ್ಟು ತಂಪಾಗಿರುವುದರಿಂದ ಸುತ್ತಮುತ್ತಲಿನ ವಾತಾವರಣ ಕೂಡ ತಂಪಾಗಿರುತ್ತದೆ.
ಹಾಸಿಗೆ ಬೆಳೆಸುವ ವಿಧಾನ:
ನಾರನ್ನು ಮೊದ

4 comments:
ಹಸಿರೆ ಮಾಯವಾಗುವ ಸಮಯದಲ್ಲಿ ಇಂತದ್ದೊಂದು ಆವಿಷ್ಕಾರವೇ...!? ನಿಜಕ್ಕೂ ತುಂಬಾ ಹೊಸತು. ನಿಮ್ಮ ಲೇಖನಿಯ ಮೊನೆಯಿಂದ ಇಂಥ ಹೊಸ ಹೊಸ ಲೇಖನಗಳು ನಮ್ಮಂಥ ಓದುಗರಿಗೆ ಸಿಗಲಿ.
-ನಿಹಾರಿಕ.
ಬದಲಾಗುತ್ತಿರುವ ದಿನಗಳಲ್ಲಿ ಇಂಥ ಹೊಸ ಹೊಸ ಆವಿಷ್ಕಾರಗಳು ಅಗತ್ಯವೇನೋ ಎನಿಸುತ್ತೆ... ಲೇಖನ ತುಂಬಾ ಚನ್ನಾಗಿದೆ. -ಸಾರಿಕಾ.
ಲೇಖನ ಚನ್ನಾಗಿದೆ. ಆದರೆ ಎಲ್ಲದಕ್ಕೂ ಹೀಗೆ ಕೃತಕತೆಯನ್ನು ಅಳವಡಿಸಿಕೊಂಡರೆ ಹೇಗೆ...? ಆದ್ದರಿಂದ ಇರುವ ಪ್ರಕೃತಿ ಸಹಜವಾದ ಹಸಿರನ್ನೇ ನಾವು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು.
-Sagar
ಲೇಖನ ಚನ್ನಾಗಿದೆ. ಇಂಥ ಹೊಸತಂಗಲೇ ಇಂದಿನ ಯಾಂತ್ರಿಕ ಜೀವನಕ್ಕೆ ಅವಶ್ಯ.
ನಿರಂಜನ.
Post a Comment