ಬೆಂಗಳೂರು : ಆರು ತಿಂಗಳಿನಿಂದೀಚೆಗೆ ಭಾರತ ಮಾತ್ರವಲ್ಲ ಇಡೀ ವಿಶ್ವದ ಮೇಲೆ ಆರ್ಥಿಕ ಹಿಂಜರಿತದ ಎಫೆಕ್ಟ್ ಆಗಿದೆ. ಆದರೆ ಅದು ಲೋಕಸಭೆ ಚುನವಾಣೆಯ ಮೇಲೆ ಮಾತ್ರ ಯಾವುದೇ ಪರಿಣಾಮ ಬೀರಿಲ್ಲ!
ಹೌದು, ಆರ್ಥಿಕ ಕುಸಿತರಿಂದ ಮುಂಬೈ, ಹೊಸದಿಲ್ಲಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ದೊಡ್ಡ ಶ್ರೀಮಂತರೇ ಬೀದಿಪಾಲಾಗಿದ್ದಾರೆ. ಕೆಲವರು ಕುಟುಂಬ ಸಮೇತರಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಈ ಸ್ವಯಂ ಘೋಷಿತ ಶ್ರೀಮಂತರಿಗೆ ಮಾತ್ರ ಆ ಬಿಸಿ ತಟ್ಟಿಲ್ಲ.
ಭಾರತ ಮೇಲ್ನೋಟಕ್ಕೆ ಬಡ ದೇಶವಾಗಿ ಕಾಣುತ್ತಿದೆಯೇ ಹೊರತು ಒಳಗಡೆ ಭಾರೀ ಶ್ರೀಮಂತ ದೇಶ. ಆದರೆ ಒಳ ಸೇರಿರುವ ಕಪ್ಪು ಹಣ ಮಾತ್ರ ಬೆಳಕಿಗೆ ಬರುತ್ತಲೇ ಇಲ್ಲ. ಹೊಸದಿಲ್ಲಿಯಲ್ಲಿರುವ ರಾಷ್ಟ್ರೀಯ ಪಕ್ಷಗಳ ಕಚೇರಿಗೆ ಹೋಗಿ ನಿಂತು ನೋಡಿದರೆ ಚುನಾವಣೆಗೆ ನಿಲ್ಲಲು ಅಥವಾ ಟಿಕೆಟ್‌ಗಾಗಿ ಅಭ್ಯರ್ಥಿಗಳು ಕೋಟಿ ಕೋಟಿ ಹಣವನ್ನು ಚೀಲಗಳಲ್ಲಿ, ಸೂಟ್‌ಕೇಸ್‌ಗಳಲ್ಲಿ ತಂದು ಸುರಿಯುವುದನ್ನು ಪ್ರತ್ಯಕ್ಷವಾಗಿ ಕಾಣಬಹುದು.
ಇದು ಕೇವಲ ಬಿಜೆಪಿ, ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷಗಳಿಗೆ ಮಾತ್ರ ಸೀಮಿತವಾಗಿಲ್ಲ. ಯಾವ ಪ್ರಾದೇಶಿಕ ಪಕ್ಷಗಳ ನಾಯಕರು ಕೂಡ ಆರ್ಥಿಕ ಕುಸಿತದ ಬಿಸಿಗೆ ಕರಗಿಲ್ಲ. ಅದಕ್ಕೆ ಪ್ರತ್ಯಕ್ಷ ನಿದರ್ಶನ ನೀಡಲು ಕೇವಲ ಕರ್ನಾಟಕವೊಂದೇ ಸಾಕು. ಚುನಾವಣೆ ಘೋಷಣೆಯಾದ ಕೆಲವೇ ದಿನಗಳಲ್ಲಿ ರಾಜ್ಯ ಚುನಾವಣೆ ಆಯೋಗ ಈಗಾಗಲೇ ಯಾವುದೇ ದಾಖಲೆಯಿಲ್ಲದ ೧.೨೫ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ.
ಚುನಾವಣೆ ಆರೋಗದ ಹದ್ದಿನ ಕಣ್ಣಿಗೂ ಮಣ್ಣೆರಚಿ ನಮ್ಮ ಕರುನಾಡಿನ ಜನಪ್ರತಿನಿಗಳ ವಿರುದ್ಧ ೧೦,೫೭೪ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಅಂಥವರ ವಿರುದ್ಧ ೫೨೫೧ಪ್ರಕರಣ ದಾಖಲಿಸಲಾಗಿದೆ. ರಾಜ್ಯ ಚುನಾವಣಾಕಾರಿಗಳು ಅಷ್ಟೆಲ್ಲಾ ಪ್ರಚಾರ ಮಾಡಿ ಅಬ್ಬರದ ಪ್ರಚಾರ ಮಾಡಬೇಡಿ ಎಂದರೂ ಬ್ಯಾನರ್, ಬಂಟಿಂಗ್ಸ್ ಹಾಗೂ ಪೋಸ್ಟರ್ ಅಂಟಿಸಿರುವ ವಿಚಾರಕ್ಕೆ ಸಂಬಂಸಿದಂತೆ ೫೪ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿದ್ದರೂ ೯೫ಲಕ್ಷ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದು ೮೩೪ ಪ್ರಕರಣಗಳನ್ನು ದಾಕಲಿಸಿಕೊಳ್ಳಲಾಗಿದೆ.
ಇಷ್ಟಾದರೂ ಚುನಾವಣೆಗೆ ರ್ಸ್ಪಸಿದ ಅಭ್ಯರ್ಥಿಗಳು ತಮ್ಮ ಕಾಯಕರ್ತರ ಮೂಲಕ ಪ್ರತೀ ಹಳ್ಳಿ ಹಳ್ಳಿಗಳಲ್ಲಿ ಹಣ, ಹೆಂಡ ಶೇಖರಿಸಿಟ್ಟಿದ್ದಾರೆ. ಮನೆ ಮನೆಗೂ ಹಂಚುತ್ತಿದ್ದಾರೆ. ಜತೆಗೆ ಮತಗಳನ್ನು ತಮ್ಮ ಕಡೆ ಸೆಳೆಯಲು ಅವರಿಗೆ ಸೀರೆ, ಪಂಚೆ ಹಾಗೂ ಗೃಹ ಬಳಕೆಯ ವಸ್ತುಗಳನ್ನು ತಂದು ವಿತರಿಸಿದ್ದಾರೆ, ವಿತರಿಸುತ್ತಿದ್ದಾರೆ.
ಆರ್ಥಿಕ ಕುಸಿತದಿಂದ ಇಂಗ್ಲೆಂಡ್‌ನಲ್ಲಿ ೩೫ಸಾವಿರ ಕಂಪನಿಗಳು ದಿವಾಳಿಯಾಗಿವೆ. ಇದರಿಂದ ಅಲ್ಲಿನ ೧.೨೫ಲಕ್ಷ ಶ್ರೀಮಂತರು ಬೀದಿಗೆ ಬಂದಿದ್ದಾರೆ. ಭಾರತದಲ್ಲಿ ಕೂಡ ಉದ್ಯಮಿಗಳ ಹಾಗೂ ಜನ ಸಾಮಾನ್ಯರ ಮೇಲೆ ಆರ್ಥಿಕ ಕುಸಿತದಿಂದ ಭಾರೀ ನಷ್ಟವಾಗಿದೆ. ಕಾರ್ಮಿಕ ವರ್ಗ ಕೂಡ ಇದರಿಂದ ಕಂಗಾಲಾಗಿದೆ. ಆದರೆ ಇಲ್ಲಿನ ಜನ ಪ್ರತಿನಿಗಳಿಗೆ ಮಾತ್ರ ಆದರ ಯಾವುದೇ ಎಫೆಕ್ಟ್ ಇಲ್ಲ.
ರಾಜ್ಯಸಭೆಯ ಅರ್ಧದಷ್ಟು ಹಾಗೂ ಲೋಕಸಭೆಯ ಮೂರನೇ ಒಂದರಷ್ಟು ಸದಸ್ಯರು ಬಾರೀ ಶ್ರೀಮಂತರೆ. ಇವರೆಲ್ಲರೂ ಕಪ್ಪು , ಬಿಳುಪು ಹಣ ಇಟ್ಟುಕೊಂಡು ದರ್ಬಾರು ಮಾಡುವವರೆ. ಜನ ಪ್ರತಿನಿಗಳು ತೆರಿಗೆ ಇಲಾಖೆಗೆ ಲೆಕ್ಕಪತ್ರ ಸಲ್ಲಿಸುತ್ತಾರಾದರೂ ಕಪ್ಪು ಹಣದ ಬಗ್ಗೆ ಯಾವುದೇ ಲೆಕ್ಕ ಇರುವುದಿಲ್ಲ. ಅದನ್ನು ಕೇಳುವವರೂ ಇಲ್ಲ. ಹೀಗಾಗಿ ಇವರ್‍ಯಾರಿಗೂ ಆರ್ಥಿಕ ಕುಸಿತದಿಂದ ಯಾವುದೇ ತೊಂದರೆಯಾಗಿಲ್ಲ. ಆ ಕಾರಣಕ್ಕಾಗಿಯೇ ಮತದಾರರನ್ನು ಇವರು ತಮ್ಮ ನೋಟಿನ ಮೊನೆಯಲ್ಲಿಯೇ ಕುಣಿಸುತ್ತಿದ್ದಾರೆ. ಮತಗಳನ್ನು ಕೊಂಡುಕೊಳ್ಳುತ್ತಿದ್ದಾರೆ.