ಸ್ನೇಹಿತರೆ, ನಿಮೊಂದು ಸಂತಸದ ಸುದ್ದಿ! ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಇದ್ದಾಗ "ಮಾನವ" ಎಂಬ ಸಣ್ಣ ಮಾಸಿಕ ಪತ್ರಿಕೆಯೊಂದು ಹೊರಬರುತ್ತಿತ್ತು. ಅದು ನಿಜಕ್ಕೂ ಅದ್ಭುತವಾಗಿತ್ತು. ಈಗ ಅದೇ ರೀತಿಯ ಮತ್ತೊಂದು ಮಾಸಿಕ ಪತ್ರಿಕೆ "ನವ ಮಾನವ" ನಮ್ಮ ಕಣ್ಣೆದುರೇ ಇದೆ. ಆದರೆ ಅದನ್ನು ಎಷ್ಟು ಜನ ಗಮನಿಸಿದ್ದಾರೋ ಇಲ್ಲವೋ ಗೊತ್ತಿಲ್ಲ! ಅಲ್ಲಿ ಜಾಹಿರಾತುಗಳಿಲ್ಲ, ಗೊಡ್ಡು ರಾಜಕಾರಣಿಗಳ ಪೊಳ್ಳು ಭಾಷಣಗಳಿಲ್ಲ , ಬದಲಿಗೆ ಮನಸನ್ನು ಸದಾ ಕಾಡುವ ಈ ದೇಶದ ಸಮಸ್ಯೆಗಳು, ಪ್ರಗತಿಯ ಚಿಂತನೆಗಳಿವೆ. ಅದಕ್ಕೊಂದೆರಡು ಶೀರ್ಷಿಕೆಗಳನ್ನು ಉದಾಹರಿಸಿ ಹೇಳುವುದಾದರೆ "ಬೇಸಾಯ- ನೀ ಸಾಯ... ನಾ ಸಾಯ..." "ಹಸಿರು ಕ್ರಾಂತಿಯ ಜಾತ್ರೆಯಲ್ಲಿ ಕಾಣೆಯಾದವರು..." "ಅಂಬೇಡ್ಕರ್ ಹಾಗು ಲೋಹಿಯಾ: ಜಾತಿ ಕುರಿತ ಒಂದು ಸಂವಾದ" ಹೀಗೆ ಹತ್ತು ಹಲವು ಲೇಖನಗಳಿವೆ. ಇವು ನಮ್ಮ ಬುದ್ಧಿ, ವಿಚಾರ ಲಹರಿಗಳನ್ನು ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ.

ನೆನಪಿರಲಿ ಇದು ಜೋಪಾನವಾಗಿರಿಸಿಕೊಳ್ಳುವ ಪತ್ರಿಕೆ...
ಇಂತಿ ನಿಮ್ಮ ಆತ್ಮೀಯ
-ರಮೇಶ್ ಹಿರೇಜಂಬೂರು