Monday, August 25, 2008

ಮಲೆನಾಡು

ಮಲೆನಾಡು ಅಂದರೇನೆ ಹಾಗೆ. ಸದಾ ತಂಪು ನೀಡುವ ನವಿರಾದ ವಾತವರಣ, ಕುಳಿರ್ಗಾಳಿ, ಅದರ ನವುವೆಯೇ ಚುಮು ಚುಮು ಚಳಿ, ಹಿತವಾದ ಬೆಳಕು ಇಣುಕಿ ನೋಡುವಪರಿ ಅದನ್ನೆಲ್ಲಾ ನೋಡಿದರೆ ಅದೇನೋ ಸಂತಸ, ಮೈ ನವಿರೇಳಿಸುವ ಚುಂಬಕ ಶಕ್ತಿ ತುಂಬಿರುತ್ತದೆ.
ನಮ್ಮ ಬಹುತೇಕ ಕವಿಗಳು ಕಾವ್ಯ ಬರೆಯಲು ಪ್ರೇರಣೆ ಪಡೆದಿದ್ದೆ ಈ ಪರಿಸರ, ಕಾಡು ಅಥವಾ ಮಲೆನಾಡು ಎನ್ನುವ ಈ ನಿಸರ್ಗ ಮಡಿಲಿನಿಂದ. ಅದರ ಬಳಿ ಇದ್ದರೆ ಬೇಡ ಎಂದರೂ ಅದು ಬಂದೆ ಬರುತ್ತದೆ.
ಕವಿಗಳಿಗೆ, ಸಾಹಿತಿಗಳಿಗೆ ಪ್ರೇರಣೆ ಹುಟ್ಟುವುದೇ ಹಾಗೆ. ಮನಸಿಗೆ ಮುದ ನೀಡುವ ಯಾವುದೇ ವಾತವರನ್ ಇದ್ದರೂ ಆ ಮಳೆಯಿಂದಲೇ ಅಲ್ಲಿ ಅವರಿಗೆ ಅರಿವಿಲ್ಲದೆ ಸಾಹಿತ್ಯದ ಮೊಳಕೆಯೊಡೆಯುತ್ತದೆ. ಪರಿಸರಕ್ಕಿರುವ ಚುಂಬಕ ಶಕ್ತಿಯೇ ಅದು.
ಮಲೆನಾಡು ತನ್ನ ಹಚ್ಚ ಹಸಿರಿನ ಒಲವಿಂದ ಮನುಷ್ಯನ ಅಂತರಾಳದ್ಲ್ಲಿರುವ ಸುಪ್ತ ಪ್ರತಿಭೆಯನ್ನ ಹೊರಹಾಕಿಸುತ್ತದೆ. ನಿಜಕ್ಕೂ ಇದು ಅವಿಸ್ಮರಣೀಯ. ಅಂತಹ ಚೈತನ್ಯ ಇರುವುದು ಕೇವಲ ಮಲೆನಾಡಿಗೆ ಮಾತ್ರ....