ನಿನಗೊಂದು ಖಾಸಗಿ ಪತ್ರ ಬರೆಯುವ ತುರ್ತು ಅಗತ್ಯವಿದೆ. ಚುನಾವಣೆ ಎದುರಾಗಿದೆ. ಹಣ ಕೋಡಿಯಾಗಿ ಹರಿಯುತ್ತಿದೆ. ಅದನ್ನು ಕೊಳ್ಳೆ ಹೊಡೆದವರ್‍ಯಾರು ? ಅದೆಲ್ಲ ಯಾರ ಹಣ ಎಂಬುದು ನಮ್ಮ ಚುನಾವಣೆ ಅಕಾರಿಗಳಿಗೆ ಸಷ್ಟವಾಗಿ ಗೊತ್ತು. ಆದರೆ ಯಾವುದೂ ಬಹಿರಂಗವಾಗಿಲ್ಲ.
ಇದೂವರೆಗೆ ಕರ್ನಾಟಕದಲ್ಲೇ ೧೬ ಕೋಟಿ ರೂ. ಅಕೃತವಾಗಿ ಪೊಲೀಸರ ವಶಕ್ಕೆ ಸಿಕ್ಕಿದೆ (ಅನಕೃತವಾಗಿ ?)೨.೭೫ಕೋಟಿ ರೂ. ಮೌಲ್ಯದ ಅಕ್ರಮ ಮದ್ಯ ಹಾಗೂ ಇತರ ವಸ್ತುಗಳು ಪತ್ತೆಯಾಗಿವೆ. ಇವೆಲ್ಲವೂ ಮತದಾರರಾದ ನಿಮ್ಮನ್ನು ಓಲೈಸಲು, ತಮ್ಮ ಕಡೆ ಸೆಳೆದುಕೊಳ್ಳಲು.
ಇವರೆಲ್ಲಾ ಇಂದು ನಿಮ್ಮ ಮನೆ ಬಾಗಿಲಿಗೆ ನಾಯಿಗಳಂತೆ, ಬಿಕ್ಷುಕರಂತೆ ಅಲೆಯುತ್ತಿದ್ದಾರೆ. ಅವರು ಕೊಡುವ ಹಣ, ಹೆಂಡ ಮತ್ತಿತರೆ ವಸ್ತುಗಳನ್ನು ಒಮ್ಮೆ ನೀವು ಪಡೆದರೆ ಮತ್ತೆ ಅವರು ನಿಮ್ಮನ್ನು ಮೂಸಿಯೂ ನೋಡುವುದಿಲ್ಲ. ನೆನಪಿರಲಿ ಅವರು ಗೆದ್ದ ನಂತರ ‘ನಾನು ನಿನಗೆ ಮತ ನೀಡಿದ್ದೇನೆ, ನನ್ನದೊಂದು ಕೆಲಸ ಆಗಬೇಕು’ ಎಂದು ಹೋದರೆ ‘ನೀನೊಬ್ಬನೇ ಮತ ನೀಡಿಲ್ಲ ಹೋಗಲ್ಲೋ...’ ಎಂದು ಉತ್ತರಿಸುತ್ತಾರೆ! ಇದು ಅಕ್ಷರಶಃ ಸತ್ಯ. ಈಗಾಲೇ ಇಂತ ಹಸಿ ಕಹಿಗಳನ್ನು ಅನೇಕರು ಅನುಭವಿಸಿದ್ದಾರೆ. ಆದರೆ ಬಹಿರಂಗವಾಗಿಲ್ಲ.
ಅಭ್ಯರ್ಥಿಗಳ ಪರವಾಗಿ ಪುಡಾರಿ ರಾಜಕಾರಣಿಗಳು ನೀಡುವ ಹಣ, ಹೆಂಡ ಮತ್ತಿತರ ವಸ್ತುಗಳನ್ನು ಒಮ್ಮೆ ನೀವು ಮುಟ್ಟಿದರೆ ಈಗ ಅವರಿಗೆ ಬಂದಿರುವ ಪಾಡು (ಮನೆ ಬಾಗಿಲ ವರೆಗೆ ಅಲೆಯುವುದು) ನಾಳೆ ನಿಮಗೆ ಬರುತ್ತದೆ. ಮನುಷ್ಯನ್ನಾಗಿ ಕೊಂಚವೂ ಸ್ವಾಭಿಮಾನಿಗಳಾಗಿರದಿದ್ದರೆ ಹೇಗೆ? ಈಗಾಲೇ ಕಹಿ ಅನುಭವ ಅನುಭವಿಸಿದವರು ಅವರಿಗೆ ತಿರುಗು ಬಾಣ ನೀಡಿ.
ಜನವಾಗಿಯೂ ಹಣವಿಲ್ಲದೆಯೂ ನಿಮಗಾಗಿ, ನಿಮ್ಮ ಏಳಿಗೆಗಾಗಿ ಸೇವೆ ಮಾಡಲು ಮನೆ ಬಾಗಿಲಿಗೆ ಬರುವ ಜನ ಸೇವಕರಿಗೆ(ನಾಯಕರಿಗಲ್ಲ!) ಅಮೂಲ್ಯವಾದ ಮತ ನೀಡಿ.
ಬಿಜೆಪಿಗಂತೂ ಬೇಡವೇ ಬೇಡ:
ರಾಜ್ಯದಲ್ಲಿ ಈಗಾಗಲೇ ಬಿಜೆಪಿ ಅಕಾರದ ರುಚಿ ಉಂಡಿದೆ. ಅದರ ಫಲವಾಗಿ ಹಾವೇರಿಯಲ್ಲಿ ಅಮಾಯಕ ರೈತರು ಗೋಲಿಬಾರ್‌ಗೆ ತುತ್ತಾಗಿದ್ದಾರೆ. ರಾಜ್ಯಾದ್ಯಂತ ರೈತರು ಬೀಜ ಗೊಬ್ಬರಕ್ಕಾಗಿ ಹಗಲು ರಾತ್ರಿ ಬೀದಿಯಲ್ಲಿ ಕಳೆದು ಬಸವಳಿದಿದ್ದಾರೆ. ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ಯುವತಿಯರು ಬೀದಿಯಲ್ಲಿ ಹಲ್ಲೆ ಮಾಡಿಸಿಕೊಂಡಿದ್ದಾರೆ. ಸಮಾಜದಲ್ಲಿ ಜಾತಿ, ಮತ, ಧರ್ಮಗಳ ನಡುವೆ ಬೇಧವೆಂಬ ಬೆಂಕಿ ಹಚ್ಚಿ ಅದರ ಝಳದಲ್ಲಿ ಬೇಳೆ ಬೇಯಿಸಿಕೊಳ್ಳುವ ಚಡ್ಡಿಗಳಿಗೆ ಖಂಡಿತಾ ಮತ ನೀಡಬೇಡಿ.ಭಯೋತ್ಪಾದನೆಗೆ ಯಾವುದೇ ಮತದ ಹಣೆಪಟ್ಟಿಯಿಲ್ಲ, ಮುಂಬೈನಲ್ಲಿ ಮುಸ್ಲೀಮರು ಧಾಳಿ ನಡೆಸಿದರೆ ಮಲೆಗಾಂವ್‌ನಲ್ಲಿ ಹಿಂದೂಗಳು ದಾಳಿ ನಡೆಸಿದ್ದಾರೆ. ಈ ಎರಡೂ ಘಟನೆಗಳಲ್ಲಿ ಸತ್ತವರು ಮಾತ್ರ ಅಮಾಯಕ, ಮುಗ್ದ ನಾಗರಿಕರು. ಇಲ್ಲಿ ಎಲ್ಲ ಧರ್ಮೀಯರೂ ಇದ್ದಾರೆ. ಹಿಂದೂ ಹಾಗೂ ಮುಸ್ಲೀಮರ ಹೆಸರು ಹೇಳಿಕೊಂಡು ರಕ್ತ ಹರಿಸುವ ಇವರೆಲ್ಲಾ ರಾಕ್ಷಸರೆ!! ಇನ್ನೊಂದು ಖಟು ಸತ್ಯ ಎಂದರೆ ಈ ಎರಡೂ ರೀತಿ ಭಯೋತ್ಪಾದಕರಿಗೂ ‘ಲಿಂಕ್’ ಇದ್ದೇ ಇದೆ!!
ಇವರೆಲ್ಲಾ ರಾಜಕೀಯ ಧಾಳಗಳು. ಬಿಜೆಪಿಯಲ್ಲಿ ಎಂಥ ಒಳ್ಳೆಯ ಅಭ್ಯರ್ಥಿ ನಿಂತರೂ ಅದು ಮುಟ್ಟುವುದು ಕೊನೆಗೆ ರಕ್ತ ಸಿಕ್ತ ಪಾತ್ರೆಯನ್ನೆ... ಗೀಗಾಗಿ ಬಿಜೆಪಿಗೆ ಮತ ನೀಡುವುದು ಬೇಡ. ಉಳಿದಂತೆ ನಿಮ್ಮ ನಿಮ್ಮ ಪ್ರದೇಶದಲ್ಲಿ ಯಾವುದೇ ವ್ಯಕ್ತಿಗಾದರೂ ಅವನ ಗುಣಾವಗುಣಗಳನ್ನು ತುಲನೆ ಮಾಡಿ, ಪರಾಮರ್ಶಿಸಿ ಮತ ನೀಡಿ... ನೆನಪಿರಲಿ ಆಮಿಷಕ್ಕೆ ಬಲಿಯಾಗದಿರಿ.