ಮೊನ್ನೆ ಮಾಯಾನಗರದಲ್ಲಿ ಬಿದ್ದ ಮಳೆಗೆ ತಾಯಿಯ ಕೈ ಅಂಚಿನಲ್ಲಿದ್ದ ಎಳೆಯ ಕರುಳ ಕುಡಿಯೊಂದು ಕಣ್ಣೆದುರೇ ಲಿಂಗರಾಜಪುರದ ಮೋರಿಯಲ್ಲಿ ಕೊಳಚೆ ನೀರುಪಾಲಾಗಿದೆ! ಆ ಹೆತ್ತಮ್ಮನ ಆರ್ತನಾಧ ಮುಗಿಲು ಮುಟ್ಟಿದೆ. ಆದರೆ ಮೂರು ದಿನವಾದರೂ ಆ ಮಗುವನ್ನು ಹುಡುಕುವಲ್ಲಿ ಇಲ್ಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ ವಿಫಲವಾಗಿದೆ.
ಸ್ಥಳೀಯ ಜನರು ಮಗುವಿಗಾಗಿ ನಡೆಸಿದಷ್ಟೂ ಶೋಧವನ್ನು ನುರಿತ, ಪರಿಣಿತ ಅಕಾರಿಗಳು ನಡೆಸದಿರುವುದು, ಸ್ಥಳಕ್ಕೆ ತೆರಳಿ ಹೆತ್ತ ಕರುಳಿಗೆ ಸಾಂತ್ವನ ಹೇಳಲೂ ಪುರುಸೊತ್ತಿಲ್ಲದ ಮುಖ್ಯಮಂತ್ರಿ ಹಾಗೂ ಸಚಿವರ ನಡವಳಿಕೆ ನಿಜಕ್ಕೂ ನಾಚಿಕೆಗೇಡು. ‘ಅಕಾರದ ಕೊಳಕು ಚರಂಡಿ’ಯಲ್ಲಿ ಅಸ್ತಿತ್ವಕ್ಕಾಗಿ ಒದ್ದಾಡುತ್ತಿರುವ ಜನಪ್ರತಿನಿಗಳಿಗೆ ಮುಗ್ದ ಮಗು ಅಭಿಷೇಕ್‌ನ ಸಾವಾಗಲಿ, ಅವನ ತಾಯಿಯ ಕರುಳಿನ ಕೂಗಾಗಲಿ ಎಲ್ಲಿ ಕೇಳಿಸುತ್ತದೆ?
ಮೊನ್ನೆ ಮೊನ್ನೆಯಷ್ಟೇ ‘ದಾಖಲೆ ಪ್ರಮಾಣದ ತೆರಿಗೆ ಸಂಗ್ರಹ’ ಮಾಡಿದ್ದೇವೆ ಎಂದು ಬೀಗುತ್ತ ಪ್ಯಾಲೇಸ್ ಗ್ರೌಂಡ್‌ನಲ್ಲಿ ಕಂಠಪೂರ್ತಿ ಮಾಡು ತಿಂದು, ಕುಡಿದು, ತೇಗಿರುವ ಅಕಾರಿಗಳಿಗೆ ಇನ್ನೂ ಅದರ ಕಮಟು ಇಳಿದಿಲ್ಲ; ಅಮಲಿನ್ಲಿಯೇ ತೇಲಾಡುತ್ತಿದ್ದಾರೆ. ಅದಕ್ಕಾಗಿಯೇ ಒಂದಿಡೀ ದಿನ ಚರಂಡಿಯಲ್ಲಿ ಕುಳಿತು ಮಗು ಸಿಗಲಿಲ್ಲ ಎಂದು ಎದ್ದು ಬಂದು ಕೈ ತೊಲೆದುಕೊಂಡರು. ಅನಾಹುತಗಳು ನಡೆದಾಗೆಲ್ಲ ನೆಪ ಮಾತ್ರಕ್ಕೆ ಪರಿಹಾರ ಘೋಷಿಸುವುದೊಂದೇ ‘ಸಾಧನೆ’ ಎಂದುಕೊಂಡಿರುವ ಅಕಾರಿಗಳು, ಜನಪ್ರತಿನಿಗಳಿಗೆ ಜನರೇ ಬುದ್ದಿ ಕಲಿಸಬೇಕು.
ಮಾನವೀಯತೆ ಮರೆತ ಸಿಎಂ:
ಮಗು ಚರಂಡಿಯಲ್ಲಿ ತೇಲಿ ಹೋಗಿದೆ ಎಂಬ ಬ್ರೇಕಿಂಗ್ ನ್ಯೂಸ್ ಎಲ್ಲ ಟಿವಿ ಚಾನೆಲ್‌ಗಳಲ್ಲೂ ನಿರಂತರವಾಗಿ ಪ್ರಸಾರವಾಗುತ್ತಲೇ ಇದೆ. ಆದರೆ ಮುಖ್ಯಮಂತ್ರಿ ಮಾತ್ರ ‘ಯಾತ್ರೆ’ಯಲ್ಲಿದ್ದಾರೆ! ಊರಿಗೆಲ್ಲಾ ಬೆಂಕಿ ಬಿದ್ದಾಗ ಅವನ್ಯಾವನೋ ಪಿಟೀಲು ಕೊಯ್ಯುತ್ತಿದ್ದನಂತೆ ಹಾಗೆ ಮುಖ್ಯಮಂತ್ರಿ ಎನಿಸಿಕೊಂಡ ‘ದೊರೆ’ ಬಿ.ಎಸ್.ಯಡಿಯೂರಪ್ಪ ಸಾಯಿಬಾಬಾ ಜತೆ ದರ್ಭಾರಿನಲ್ಲಿದ್ದರು. ಪತ್ನಿ ಸತ್ತಾಗಲೇ ಕಣ್ಣೀರು ಸುರಿಸದ ಕರುಣೆಯಿಲ್ಲದ ವ್ಯಕ್ತಿ ಕರುನಾಡಿಗೆ ಮುಖ್ಯಮಂತ್ರಿ(ಕೆಲವರು ಅವನೇ ಕೊಂದಿದ್ದು ಎನ್ನುತ್ತಾರೆ!?).ಪರಿಹಾರವೇ ಎಲ್ಲವನ್ನೂ ನಿವಾರಿಸಿ ಬಿಡುತ್ತದಾ? ಒಂದು ಮುಗ್ದ ಮಗುವಿನ ಸಾವಿನ ಬೆಲೆ ಕೇಲವ ಒಂದು ಲಕ್ಷ ರೂಪಾಯಿಗೆ ಮಾತ್ರ ಸೀಮಿತವಾ? ಇದೇ ಒಬ್ಬ ಜನಪ್ರತಿನಿಗಿರುವ ನಿಜವಾದಾ ಲಕ್ಷಣವಾ...? ಕಳಕಳಿಯಾ...?