‘ರಾಜಕೀಯ ಅನ್ನೋದೇ ಹೊಲಸು’ ಹೀಗಂತಾ ಸಾಮಾನ್ಯ ಜನ ಮಾತನಾಡಿಕೊಳ್ಳುತ್ತಾರೆ. ಅದಕ್ಕೆ ಕಾರಣ ನಮ್ಮ ಜನಪ್ರತಿನಿಗಳು ಹಾಗೂ ಅವರು ಆಡುವ ದೊಂಬರಾಟ. ಇಲ್ಲಿ ಯಾರೂ ಸಾಚಾ ಅಲ್ಲ, ಯಾರೂ ನಿಷ್ಠನಲ್ಲ, ಯಾರೂ ಪ್ರಮಾಣಿಕರಲ್ಲ ಎಂಬುದೇ ಅದರ ಅರ್ಥ.
ರಾಜಕಾರಣ ಎನ್ನುವುದು ಒಂದು ಸಮುದ್ರ. ಇಲ್ಲಿ ಈಜಿದಷ್ಟೂ ನಮ್ಮ ಜನಪ್ರತಿನಿಗಳಿಗೆ ಖುಷಿಯೋ ಖುಷಿ. ಮನ ತಣಿಯುವುದೇ ಇಲ್ಲ . ಏಳಲಿ, ಮುಳುಗಲಿ, ನೀರು ಕುಡಿಯಲಿ, ಕುಡಿಸಲಿ ಎಲ್ಲದೂ ಒಂದು ರೀತಿಯ ಖುಷಿ . ಅಷ್ಟೆಲ್ಲಾ ಏಳು ಬೀಳುಗಳನ್ನು ಕಂಡರೂ ಅವರನ್ನು ಒಮ್ಮೆ ಕೇಳಿ ನೋಡಿ? ‘ರಾಜಕೀಯದಲ್ಲಿದ್ದೊಷ್ಟು ಹೊಲಸು ಬೇರೆಲ್ಲೂ ಇಲ್ಲ, ಇಲ್ಲಿ ಯಾರಿಗೂ ತತ್ತ್ವ ಸಿದ್ಧಾಂತಗಳಿಲ್ಲ, ಎಲ್ಲರೂ ...ಬಿಟ್ಟಿದ್ದಾರೆ.’ ಎಂದು ಕಟುವಾಗಿ ಮಾತನಾಡುತ್ತಾರೆ.
ಈ ಸಾಗರದಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ, ಸಂಘಪರಿವಾರಕ್ಕೆ ‘ರಾಮಬಾಣ’ವೇ ಅಸ್ತ್ರ. ಕಾಂಗ್ರೆಸ್ ಬತ್ತಳಿಕೆಯಲ್ಲಿರುವುದು ‘ಗಾಂವಾದ’. ಜೆಡಿಎಸ್‌ನಲ್ಲಿರುವುದು ‘ಜಾ(ತ್ಯ)ತೀ(ತ)ವಾದ ’. ಇನ್ನು ಉಳಿದ ಪಕ್ಷಗಳು ಕೂಡ ಅವರದ್ದೇ ಆದ ಬತ್ತಳಿಕೆಯಲ್ಲಿ ಅವರದ್ದೇ ಆದ ‘ಅಸ್ತ್ರ’ಗಳನ್ನು ಇಟ್ಟುಕೊಂಡಿವೆ. ಇವರೆಲ್ಲರೂ ಹೇಳುವುದು ಒಂದೇ ‘ ಅವರು ಸರಿ ಇಲ್ಲ’. ಇವರೆಲ್ಲರೂ ಬೇರೆಯವರನ್ನು ಬೆರಳು ಮಾಡಿ ತೋರಿಸುತ್ತಾರೆ. ಆದರೆ ಅವರ ನಾಲ್ಕು ಬೆರಳುಗಳು ಮಾತ್ರ ಆಪಾದಿಸುವವರನ್ನೇ ತೋರಿಸುತ್ತಿರುತ್ತವೆ. ಇದು ಇಂದಿನ ರಾಜಕೀಯ.
ಇಲ್ಲಿನ ಚಟವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಸರಳವಾಗಿ ಹೇಳುವುದಾದರೆ ‘ಎಲ್ಲೂ ಸಲ್ಲದವನು ಇಲ್ಲಿ ಸಲ್ಲುವನಯ್ಯ’. ರಾಜಕೀಯ ಪರಿಣಿತರು, ಧುರೀಣರೇ ಹೇಳುವ ಹಾಗೆ ರಾಜಕೀಯದಲ್ಲಿ ಯಾರೂ ಶತೃಗಳಲ್ಲ, ಯಾರೂ ಮಿತ್ರರಲ್ಲ. ಜತೆಗೆ ಇವರ್‍ಯಾರಿಗೂ ಇಂದಿನ ಸ್ಥಿತಿಯಲ್ಲಿ ರ್ನಿಷ್ಟ ತತ್ತ್ವ ಸಿದ್ಧಾಂತಗಳಿಲ್ಲ!
‘ಮೊದ ಮೊದಲು ಬಂಗಾರಪ್ಪ ಅವರನ್ನು ಪಕ್ಷಾಂತರಿ, ಒಂದು ಪಕ್ಷದಲ್ಲಿ ಉಳಿಯುವುದು ಗೊತ್ತಿಲ್ಲ. ಅವರಿಗೆ ಅಕಾರ ಬೇಕು’ ಎಂದು ಹೇಳುತ್ತಿದ್ದ ಘಟಾನುಘಟಿ ರಾಜಕಾರಣಿಗಳಲ್ಲಿ ಕೆಲವರು ಈಗ ಆಪರೇಷನ್ ಕಮಲಕ್ಕೆ ಸಿಕ್ಕಿ ಗಾಳದೊಳಗಿನ ಮೀನುಗಳಾಗಿದ್ದಾರೆ. ಮತ್ತೆ ಕೆಲವರು ತತ್ತ್ವ ಸಿದ್ಧಾಂತಗಳನ್ನೆಲ್ಲಾ ಗಾಳಿಗೆ ತೂರಿ ಒಂದು ಸುತ್ತು ಸುತ್ತಿ, ಸುಸ್ತಾಗಿ ಮತ್ತೆ ಅದೇ ಪಕ್ಷಕ್ಕೆ ಬಂದು ನೆಲೆ ನಿಂತಿದ್ದಾರೆ. ಬಂಗಾರಪ್ಪನವರನ್ನು ರಾಜಕೀಯವಾಗಿ ವಿರೋಸುತ್ತಿದ್ದವರು ಅವರನ್ನೂ ಮೀರಿಸುವಂತೆ ಪಕ್ಷಾಂತರ ಮಾಡಿ ‘ಮರಕೋತಿ’ ಎನಿಸಿಕೊಂಡಿದ್ದಾರೆ.
ಕಾಂಗ್ರೆಸ್, ಜೆಡಿಎಸ್, ಜೆಡಿಯು, ಬಿಜೆಪಿ ಯಾವುದೇ ಪಕ್ಷಕ್ಕೆ ಹೋದರೂ ಅಲ್ಲಿ ಎಲ್ಲರೂ ಕನವರಿಸುವುದು ಅಕಾರದ ಗದ್ದುಗೆಯನ್ನೇ. ಆದರೆ ಹೆಸರಿಗೆ ಮಾತ್ರ, ಜನಸಾಮಾನ್ಯರನ್ನು ಯಾಮಾರಿಸಲು, ತೋರುಗಾಣಿಕೆಗೆ ತತ್ತ್ವ ಸಿದ್ಧಾಂತ ಹಾಗೂ ವ್ಯಕ್ತಿಗತ ವಿಚಾರಗಳನ್ನು ಮುಂದಿಡುತ್ತಾರಷ್ಟೆ. ಅದು ಈಗ ಮತ್ತೆ ಸಾಭೀತಾಗಿದೆ. ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಹೆಚ್ಚಾಗಿದೆ ಎಂದು ಒಂದು ಕಾಲದಲ್ಲಿ ಬೊಬ್ಬೆ ಹೊಡೆಯುತ್ತಿದ್ದ ಗೌಡರು ಜನತಾ ದಳ ಛದ್ರವಾದ ನಂತರ ಜಾ(ತ್ಯ)ತೀ(ತ) ಜನತಾದಳ ಮಾಡಿ, ಅದರ ನೆರಳಲ್ಲೇ ತಮ್ಮ ಮಕ್ಕಳಾದ ಕುಮಾರಸ್ವಾಮಿ, ರೇವಣ್ಣ ಅವರನ್ನು ಪೋಷಿಸಿ ಬೆಳೆಸಿದರು. ಅದು ನಡೆದದ್ದು ಅಕಾರ ಬಂದ ನಂತರವೇ...
ಈಗ ಅದೇ ಕೆಲಸವನ್ನು ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮಾಡಿದ್ದಾರೆ. ತಮ್ಮ ಪುತ್ರ ಇದೂವರೆಗೆ ಬಿಜೆಪಿಗಾಗಿ ಏನನ್ನೂ ಮಾಡದಿದ್ದರೂ ಶಿಕಾರಿಪುರ ಪುರಸಭೆಯ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದರು. ಈಗ ನೇರವಾಗಿ ದಿಲ್ಲಿಗೆ ದಿಬ್ಬಣ ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕುಟುಂಬ ರಾಜಕಾರಣವನ್ನು ವಿರೋಸುತ್ತಿದ್ದ ಯಡಿಯೂರಪ್ಪನವರೇ ಈಗ ತಮ್ಮ ಮಗನಿಗೆ ಲೋಕಸಭೆಗೆ ಟಿಕೆಟ್ ಕೊಡಿಸುವ ಮೂಲಕ ‘ಪುತ್ರ ವಾತ್ಸಲ್ಯ’ ಮೆರೆಯುತ್ತಿದ್ದಾರೆ.
ಇದರಿಂದ ಎಲ್ಲ ರಾಜಕೀಯ ಪಕ್ಷಗಳು, ನಾಯಕರೂ ಪರಿತಪಿಸುವುದು ಅಕಾರಕ್ಕಾಗಿ ಎಂಬುದು ಸಾಭೀತಾಗಿದೆ. ಎಲ್ಲರ ಮನದಾಳದ ಮೂಲೆಯಲ್ಲಿರುವುದು ದೇಶದ ಅಥವಾ ರಾಜ್ಯದ ಹಿತಕ್ಕಿಂತ ಕುಟುಂಬದ ಹಿತ ಎನ್ನುವುದು ಮತ್ತೊಮ್ಮೆ ರುಜುವಾತಾಗಿದೆ. ಇವರೆಲ್ಲಾ ಒಂದೇ ದೋಣಿಯಲ್ಲಿ ಬಂದಿರುವ, ನಾನಾ ಮುಖವಾಡಗಳನ್ನು ಅಂಟಿಸಿಕೊಂಡಿರುವ ಕಳ್ಳರು ಎನ್ನುವುದು ಧೃಡಪಟ್ಟಿದೆ.
ಚುನಾವಣೆ ಮತ್ತೆ ಜನರ ಮುಂದೆ ಬಂದಿದೆ. ಮುಗ್ದ ಮತದಾರನ ಮತವನ್ನು ಕೊಳ್ಳೆ ಹೊಡೆದ ಅಥವಾ ಕೊಳ್ಳೆ ಹೊಡೆಯುವ ಖದೀಮರು ಯಾರು ಎಂದರೆ ಉತ್ತರ ಅದೇ. ಒಂದೇ ದೋಣಿಯ ಕಳ್ಳರು...!
No comments:
Post a Comment