Sunday, July 15, 2012

ನೆನಪಾದ ದಿ.ಲಿಂಗದೇವರು ಹಳೆಮನೆ



ನಿನ್ನೆ ಯಾಕೋ ದಿ.ಲಿಂಗದೇವರು ಹಳೆಮನೆ ತುಂಬಾ ನೆನಪಾಗುತ್ತಿದ್ದರು. ಅದಕ್ಕಾಗಿ ನನ್ನ  "ಸತ್ಯಕ್ಕ- ಕಾಯಕಕ್ಕೆ ಮತ್ತೊಂದು ಹೆಸರು" (2010 ನೆ ಸಾಲಿನ ಸದ್ಭಾವನ ಪ್ರಶಸ್ತಿ ಪುರಸ್ಕೃತ ಸಂಶೋಧನಾ ಕೃತಿ.) ಪುಸ್ತಕವನ್ನು ಹಿಡಿದು ಅವರು ಈ ಕೃತಿಯ ಬಗ್ಗ್ಗೆ ಬರೆದ ಮುನ್ನುಡಿಯನ್ನ ಓದುತಿದ್ದೆ. ಅವರು ನಿಜಕ್ಕೂ ಉತ್ತಮ ವಾಗ್ಮಿ. ಎಲ್ಲ ವಿಚಾರಗಳನ್ನೂ ಆಳವಾಗಿ ಬಲ್ಲವರು. ವಚನ ಸಾಹಿತ್ಯದ ಬಗ್ಗೆಯಂತೂ ಹೆಚ್ಹು ಆಕರ್ಷಿತರಾಗಿ ಅಧ್ಯಯನ ನಡೆಸಿದವರು. ಆ ಕಾರಣಕ್ಕೆ ಅಂದು ಈ ಕೃತಿಗೆ ಅವರಿಂದ ಮುನ್ನುಡಿ ಬರೆಸಲು ಮುಂದಾಗಿದ್ದು. ಈ ಸಲಹೆ ನೀಡಿದ್ದು ಆತ್ಮೀಯರಾದ ಬಂಜಗೆರೆ ಜಯಪ್ರಕಾಶ್ ಅವರು. ಸತ್ಯಕ್ಕನ ವಚನಗಳನ್ನು ಲಿಂಗದೇವರು ಯಾವುದೇ ಕ್ಷಣದಲ್ಲಿ ಕೇಳಿದರೂ ಪಟ ಪಟನೆ ಹೇಳುತ್ತಿದ್ದರು... ಈ ಪುಸ್ತಕ ಬರೆದಾಗ ಅವರು ತುಂಬಾ ಕುಶಿಪಟ್ಟು ಕೇವಲ ನಾಲ್ಕು ದಿನದಲ್ಲಿ ಮುನ್ನುಡಿ ಬರೆದು ಕಳುಹಿಸಿ ಫೋನ್ ಮಾಡಿ ಹೊಗಳಿದ್ದರು. ಇನ್ನು ಹೆಚ್ಹು ವಚನಗಳನ್ನು ಹುಡುಕಲು ಸಾದ್ಯವಾದರೆ ಹುಡುಕಿ ಎಂದು ಪ್ರೋತ್ಸಾಹ ನೀಡಿದ್ದರು... ಆ ಹುರುಪಿನಲ್ಲಿಯೇ ಪುಸ್ತಕ ಹೊರ ತಂದೆ. ಪ್ರಶಸ್ತಿಯೂ ಬಂತು. ಈಗ ಅವರ ಪ್ರೋತ್ಸಾಕ, ನಿಷ್ಕಲ್ಮಶವಾದ ಮಾತು ನೆನಪಾಗಿ ಏಕೋ ಕಣ್ಣುಗಳು ತೆವಗೊಂಡಿವೆ... ಅವರ ಆತ್ಮಕ್ಕೆ ಶಾಂತಿ ಸಿಗಲಿ... ಮತ್ತೆ ಹುಟ್ಟಿ ಬರಲಿ. ನನ್ನಂತ ಹಲವರಿಗೆ ಅವರು ಬೆನ್ನೆಲುಬಾಗಿ ನಿಲ್ಲಲಿ...

No comments:

Powered By Blogger