
ಕಳೆದ ಬಾರಿ ಕೂಡ ಇದೆ ರೀತಿ ಅಮಾಯಕ ಯುವಕ ಯುವತಿಯರ ಮೇಲೆ ದಾಳಿ ನಡೆದಿತು. ಆಗ ಈಗಿನ ಜೆಡಿಎಸ್ ಮುಖಂಡ ಮಹೇಂದ್ರಕುಮಾರ್ ನೇತೃತ್ವ ವಹಿಸಿದ್ದರು. ಇಂದು ಅವರೇ ಇದರ ವಿರುದ್ಧ ಮಾತನಾಡಿದ್ದಾರೆ. ಅಂದರೆ ಅಲ್ಲಿಗೆ ಈ ವೇದಿಕೆ ರಾಜಕಾರಣಕ್ಕೆ ಇಲ್ಲವೇ ಅಲ್ಲಿನ ಕೆಲವು ಪುಂಡು ಪೋಕರಿಗಳಿಗೆ ಸಮಾಜದಲ್ಲಿ ದಿಡೀರ್ ಹೆಸರು ಪಡೆದುಕೊಳ್ಳಲು ಇದು ವೇದಿಕೆ ಆಗುತ್ತಿದೆ. ಇದಕ್ಕೆ ಅಮಾಯಕ ಯುವಕ ಯುವತಿಯರು ಮಾತ್ರ ಬಲಿಯಾಗುತ್ತಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಉಡುಪಿ-ಮಂಗಳೂರಿನ ಸಮುದ್ರ ತೀರದಲ್ಲಿ ಸರಕಾರವೇ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಹೆಸರಿನಲ್ಲಿ ರೇವು ಪಾರ್ಟಿಗೆ ಅವಕಾಶ ನೀಡಿ ಮೋಜು ಮಸ್ತಿಗೆ ಅನುವು ಮಾಡಿಕೊಟ್ಟಿತ್ತು. ಆಗ ಈ ಕಾರ್ಯಕರ್ತರು ಮಾತ್ರ ಅಂಡು ಸುಟ್ಟ ಬೆಕ್ಕಿನ ಹಾಗೆ ಕೂತಿದ್ದರು. ಇದೆಲ್ಲ ನೋಡಿದರೆ ಸರಕಾರದ ಕೃಪಾಪೋಷಿತ ನಾಟಕ ನಡೆಸುತಿದೆ ಎನಿಸುತ್ತದೆ.
ಹಿಂದೂ ಧರ್ಮದ ಹೆಸರಿನಲ್ಲಿ ತಾವೇ ಧರ್ಮ ರಕ್ಷಕರು ಎನ್ನುವ ಈ ಹಿಂದೂಪರ ಸಂಘಟನೆಗಳು ಮುಸ್ಲಿಂ ಹಾಗು ಕ್ರಿಶ್ಚಿಯನ್ ಸಂಘಟನೆಗಳನ್ನು ನಿಂದಿಸುತ್ತವೆ. ಹಾಗಾದರೆ ಇವರು ಮಾಡುತ್ತಿರುವುದು ಏನು? ಮತ್ತೊಂದು ತಾಲಿಬಾನ್ ಸಂಸ್ಕೃತಿ ಹುಟ್ಟು ಹಾಕುವುದಾ? ಇದು ಮನುಷ್ಯ ಸಂಸ್ಕೃತಿಯ...? ನೀ ಅತ್ತಂತೆ ಮಾಡು ನಾ ಸತ್ತಂತೆ ಮಾಡುತ್ತೇನೆ ಎನ್ನುತ್ತಿದೆ ಸರಕಾರ. ಇತ್ತ ಹಿಂದೂ ಜಾಗರಣಾ ವೇದಿಕೆಗೆ ಮಾನ ಮರ್ಯಾದೆ ಇಲ್ಲ... ಅತ್ತ ಬಿಜೆಪಿ ಸರಕಾರ ಕೂಡ ಲಜ್ಜೆಗೆಟ್ಟು ಕೂತಿದೆ... ನಿಜಕ್ಕೂ ಇವರೇನು ಆಧುನಿಕ ದುಷ್ಯಾಸನರೋ ಇಲ್ಲ ಆಧುನಿಕ ರಾವನರೋ...?
2 comments:
ಆದ ಘಟನೆ ತುಂಬಾ ದುರದೃಷ್ಟಕರ. ತಾವು ಹಾಕಿದ ಫೋಟೋದಲ್ಲಿ ಕಾಣುವ ಮಹಿಳೆಗೆ ಜಾಗರಣ ವೇದಿಕೆಯ ಹುಡುಗರು ಎಳೆದಾಡಿದರು ಎನ್ನುವಂತೆ ನೀವು ಬರೆದಿದ್ದೀರಿ. ಇನ್ನೊಬ್ಬ ಬ್ಲಾಗರ್ ಅತ್ಯಾಚಾರ ಮಾಡಿದರು ಎಂದು ಬರೆದಿದ್ದಾರೆ. ಮತ್ತೊಬ್ಬರು ಡಾ. ಪ್ರಭಾಕರ ಭಟ್ಟರೇ ನಿಂತು ಮಾಡಿಸಿದ್ದಾರೆ ಎನ್ನುವ ರೀತಿಯಲ್ಲಿ ಬರೆದಿದ್ದಾರೆ. ಇಂದು ಘಟನೆ ಏನೇ ನಡೆದಿರಲಿ ಪತ್ರಕರ್ತರು ಹೇಳುವುದೇ ವೇದವಾಕ್ಯ, ಅದೇ ಪರಮ ಸತ್ಯ ಎಂದು ತಿಳಿಯಬೇಕು ಎಂದು ಭಾವಿಸುತ್ತೀರಿ. ಇದು ಸಲ್ಲದು. ರೆಸಾರ್ಟಿನ ಬಾಗಿಲು ಮುಚ್ಚಿದ ರೂಮಿನಲ್ಲಿ ಬೀರ್ ಮತ್ತು ಮಾಂಸದ ತುಂಡುಗಳೊಂದಿಗೆ ತುಂಡುಡುಗೆ ಉಟ್ಟು (ತಾವು ಹಾಕಿದ ಫೋಟೋ ಹೇಳುವಂತೆ), ಹಾಸಿಗೆಯ ಮೇಲೆ ಉಳ್ಳಾಡುತ್ತಾ ಹಬ್ಬದ ಆಚರಣೆ ಮಾಡುವುದನ್ನು ತಡೆಯುವುದು ಪ್ರಜಾಪ್ರಭುತ್ವಕ್ಕೆ ಅಪಮಾನ ಅಲ್ಲವೇ?. ಇಷ್ಟಾಗಿ ಅಲ್ಲಿರುವ ಗಂಡು ಹೆಣ್ಣುಗಳ ಪೈಕಿ ಯಾರ ಹುಟ್ಟು ಹಬ್ಬ ಇತ್ತು ಎಂಬುದನ್ನು ತನಿಖೆ ಮಾಡಲೇಬೇಕು. ಅಲ್ಲವೇ?
ನಿಜ, ನಿಮ್ಮ ಮಾತು ಯಾರ ಜನ್ಮ ದಿನ ಇತ್ತು ಎನ್ನುವುದನ್ನು ಪತ್ತೆ ಮಾಡಬೇಕಿತ್ತು. ಆದರೆ ಇಸ್ಟೆಲ್ಲಾ ಹೇಳಿದ ನಿಮ್ಮ ಹೆಸರು ಹೇಳಬಹುದಿತ್ತಲ್ಲವೆ? ಇಲ್ಲಿ ಪತ್ರಕರ್ತರು ಹೇಳಿದ್ದೆ ವೇದ ವಾಕ್ಯ ಎಂದು ಹೇಳಿಲ್ಲ. ಅವರು ಹಾಕಿದ್ದೆ ತುಂಡು ಉಡುಗೆ ಎಂದಾದರೆ ಬೆಂಗಳೂರಿನ ಬೀದಿ ಬೀದಿಯಲ್ಲಿ ನಿತ್ತ್ಯ ಹಾಕಿಕೊಂಡು ಓಡಾಡುತ್ತಾರಲ್ಲ ಅದು ನಡು ಬೀದಿಯಲ್ಲಿ ಅದಕ್ಕೆ ಏನು ಹೇಳುತ್ತೀರಿ. ಅದನ್ನು ತಡೆಯಲು ಯಾಕೆ ಈ ಜಾಗರಣ ವೇದಿಕೆ ಯತ್ನಿಸುತ್ತಿಲ್ಲ? ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿ ಪೌರುಷ ತೋರಿಸುವ ಮೂಲಕವೇ ಎಲ್ಲವೂ ಬಗೆ ಹರಿಯುತ್ತವೆಯೇ...? ನೀವೆ ಹೇಳಿ...?
Post a Comment