Friday, February 3, 2012

ಕನ್ನಡದ ಹಾಸ್ಯ ನಟ ಕರಿಬಸವಯ್ಯ ಇನ್ನಿಲ್ಲ

ಕನ್ನಡದ ಹಾಸ್ಯ ನಟ ಕರಿಬಸವಯ್ಯ ಇಂದು ಮಧ್ಯಾನ ನಿಧನರಾಗಿದ್ದಾರೆ. ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಬೆಂಗಳೂರಿನ Pristine ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಸೋಮವಾರ ಕನಕಪುರ ರಸ್ತೆಯಲ್ಲಿ ಅವರ ವಾಹನ ಆಳವಾದ ತಗಿಗೆ ಬಿದ್ದು ಅಪಘಾತಕ್ಕೆ ಈಡಾಗಿತ್ತು. ಇದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದರು. ಮಂಗಳವಾರ ಬೆಳಗಿನ ಜಾವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ (ಇಂದು) ಮಧ್ಯಾನ ಕೊನೆಯುಸಿರೆಳೆದಿದ್ದಾರೆ.
ರಂಗಭೂಮಿಯಿಂದ ಕನ್ನಡ ಚಿತ್ರ ರಂಗಕ್ಕೆ ಬಂದ ಅವರು, ನಾಗತಿ ಹಳ್ಳಿ ಚಂದ್ರಶೇಖರ್ ನಿರ್ದೇಶನದ "ಉಂಡು ಹೋದ ಕೊಂದು ಹೋದ" ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಅಲ್ಲಿಂದ 100 ಕ್ಕೂ ಹೆಚ್ಹು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಜನಪದ ಕಲೆಯಾದ ಹರಿಕತೆಯಲ್ಲಿ ವಿದ್ವಾನ್ ಆಗಿದ್ದವರು. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲವರ್ಷಗಳ ಕಾಲ ಕೆಲಸ ಮಾಡಿದವರು. ತಾಯಿ, ಉಲ್ಟಾ ಪಲ್ಟಾ, ಪರಿಚಯ, ಸ್ಟೋರಿ, ಯಾರಿಗೆ ಸಾಲುತ್ತೆ ಸಂಬಳ, ಜನಪದ, ಮ್ಯಾಜಿಕ್ ಅಜ್ಜಿ, ರೈಟ್ ಅಂದ್ರೆ, ದುರ್ಗಿ, ಗಲಾಟೆ ಅಳಿಯಂದ್ರು, ಕ್ರೇಜಿ ಕುಟುಂಬ, ಹೋಳಿ, ನೂರು ಜನ್ಮಕು, ಐತಲಕಡಿ, ಉಲ್ಲಾಸ ಉತ್ಸಾಹ, ಶ್ರೀ ಮೋಕ್ಷ, 5 ಈಡಿಯಟ್ಸ್ ಮುಂತಾದವು ಅವರ ಪ್ರಮುಖ ಚಿತ್ರಗಳು. ಅವರ ಸಹಜ ಅಬಿನಯದಿಂದಲೇ ಜನಮನ ಗೆದ್ದಿದ್ದರು.
ಅವರ ಮಗಳು 2009 ರಲ್ಲಿ ರಾಧ ಮದುವೆಯ ನಂತರ ಆತ್ಮಹತ್ಯೆ ಮಾಡಿಕೊಂಡ ನಂತರ ಅವರು ಮಾನಸಿಕವಾಗಿ ನೊಂದಿದ್ದರು. ಅವರ ಆಸ್ಪತ್ರೆಯ ವೆಚವನ್ನು ನಿರ್ದೇಶಕ ನಾಗಿತಿಹಳ್ಳಿ ಚಂದ್ರಶೇಖರ ಅವರು ತಮ್ಮ ಅಭಿವ್ಯಕ್ತಿ ಸಾಂಸ್ಕೃತಿಕ ವೇಧಿಕೆ ವತಿಯಿಂದ ಭರಿಸಲು ಮುಂದೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಅವರು ಕನ್ನಡ ಹಾಸ್ಯ ನಟ ಮಾತ್ರವಲ್ಲ ರಂಗ ಭೂಮಿಯಲ್ಲೂ ಅಪಾರ ಸೇವೆ ಸಲ್ಲಿಸಿದವು. ಅವರ ಆತ್ಮಕ್ಕೆ ಶಾಂತಿ ಸಿಗಲಿ.

No comments:

Powered By Blogger