
ನಿಜ, ಅದೇ ನಮ್ಮದೇ ಕಲ್ಪವೃಕ್ಷ. ಅದರಲ್ಲಿ ಬೆಳೆದ ತೆಂಗಿನ ಕಾಯಿಯಿಂದ ತಯಾರಿಸುವ ಕೊಬ್ಬರಿ ಎಣ್ಣೆ ಸರ್ವ ರೋಗಕ್ಕೂ ಮದ್ದು ಎಂದರೆ ಅಚ್ಚರಿಪಡಬೇಕಿಲ್ಲ. ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಜಾಗತಿಕ ಮಟ್ಟದ ಕುತಂತ್ರಗಳಿಂದಾಗಿ ತೆಂಗಿನ ಎಣ್ಣೆ ಇಂದು ತೀರಾ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ತಲೆಯ ಕೂದಲನ್ನು ಬೆಳೆಸಲು ಬಿಟ್ಟರೆ ಬೇರೆ ಯಾವುದಕ್ಕೂ ಅದು ಉಪಯುಕ್ತವಾದುದ್ದಲ್ಲ, ಅದನ್ನು ಸೇವಿಸುವುದರಿಂದ ಬಹಳ ಬೇಗ ದೇಹದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ, ಹೃದಯಾಘಾತವಾಗುತ್ತದೆ ಎಂಬ ಸಲ್ಲದ ನಿರ್ಧಾರಕ್ಕೆ ಬಂದುಬಿಡುವಷ್ಟು ನಾವು ಅeನಿಗಳಾಗಿದ್ದೇವೆ. ಇದೆಲ್ಲ ಅಮೆರಿಕ ಹಾಗೂ ಪಶ್ಚಿಮ ರಾಷ್ಟ್ರಗಳ ಕುತಂತ್ರ. ಆದರೆ ಅದ್ಯಾವುದರ ಅರಿವೂ ಇಲ್ಲದೆ ನಾವು ನಮ್ಮದೇ ನೆಲದಲ್ಲಿ ಬೆಳೆದ ತೆಂಗಿನ ಎಣ್ಣೆಯನ್ನು ದೂರ ತಳ್ಳಿ ನಿರಾಳರಾಗಿದ್ದೇವೆ !
ತೆಂಗಿನ ಎಣ್ಣೆಯ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದ ಕೆಲವು ವೈದ್ಯರು ಕೂಡ ಕೊಬ್ಬರಿ ಎಣ್ಣೆ ಬಳಸಿದರೆ ಕೊಬ್ಬು ಹೆಚ್ಚಾಗುತ್ತದೆ ಎಂಥಲೇ ಭಯ ಹುಟ್ಟಿಸುತ್ತಿದ್ದಾರೆ. ಇದರ ಅರಿವಿದ್ದೂ ಕೆಲವು ವಿeನಿಗಳು ಅದೇ ಪಾಠ ಮಾಡುತ್ತಿದ್ದಾರೆ. ಈ ಇಡೀ ಸುಳ್ಳಿನ ಕಂತೆ ಸೃಷ್ಟಿಯಾದದ್ದು ೧೯೫೦ರಲ್ಲಿ. ಕೊಬ್ಬರಿ ಎಣ್ಣೆ ವಿಶ್ವದ ಎಲ್ಲ ಎಣ್ಣೆಗಳಿಗಿಂತ ಶ್ರೇಷ್ಠವಾದ ಎಣ್ಣೆ. ಅದು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಗಳಿಸಿದ ಕಾಲ. ಆದರೆ ಅದೇ ಸಮಯಕ್ಕೆ ಅಮೆರಿಕದ ಸೋಯಾಬೀನ್ ಹಾಗೂ ಜೋಳದ ಎಣ್ಣೆ ಮಾರುಕಟ್ಟೆಗೆ ಬಂದಿತ್ತು. ಅದಕ್ಕೆ ಬೇಡಿಕೆಯೇ ಇರಲಿಲ್ಲ. ಹೀಗಾಗಿ ಅಲ್ಲಿನ ಸೋಯಾಬೀನ್ ಅಸೋಷಿಯೇಷನ್ ತಮ್ಮ ಪದಾರ್ಥಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಳ್ಳುವ ಸಲುವಾಗಿ ಕುತಂತ್ರ ನಡೆಸಿ, ತೆಂಗಿನ ಎಣ್ಣೆಯ ವಿರುದ್ಧ ಹಾಗೂ ತಮ್ಮ ಸೋಯಾಬೀ

ಹೊಸ ಸಂಶೋಧನೆಯ ಹೆಸರಿನಲ್ಲಿ ಅಮೆರಿಕದ ವಿeನಿಗಳು ಕೊಬ್ಬರಿ ಎಣ್ಣೆಯಲ್ಲಿ ಕೊಬ್ಬಿನ ಅಂಶ ಹೆಚ್ಚಿರುತ್ತದೆ, ಅದು ದೇಹ ಹಾಗೂ ಹೃದಯ ಎರಡಕ್ಕೂ ಹಾನಿಯುಂಟು ಮಾಡುತ್ತದೆ ಎಂದರು. ಅದನ್ನು ಕಣ್ಣು ಮುಚ್ಚಿಕೊಂಡು ಎಲ್ಲರೂ ಒಪ್ಪಿಕೊಂಡರು. ನಮ್ಮ ತೆಂಗಿನ ಬಗ್ಗೆ ಸಂಶೋಧನೆ ಮಾಡಲು ಅವರ್ಯಾರು? ಅದರ ಬಗ್ಗೆ ನಾವೇ ಸಂಶೋಧನೆ ಮಾಡುತ್ತೇವೆ ಎಂದು ಒಬ್ಬರೇ ಒಬ್ಬ ಈ ದೇಶದ ವಿeನಿಗಳು ಮುಂದೆ ಬರಲಿಲ್ಲ. ಹೀಗಾಗಿ ಪಾಪ ಜನ ಸಾಮಾನ್ಯರು ಚಕಾರವೆತ್ತದೆ ಅನ್ಯರ ಸಂಶೋಧನೆಯನ್ನು ಒಪ್ಪಿಕೊಂಡು ಮನೆ ಎಣ್ಣೆಯನ್ನು ದೂರ ತಳ್ಳಿ, ಅಮೆರಿಕದ ಸೋಯಾಬೀನ್ ಹಾಗೂ ಕಾರ್ನ್ ಎಣ್ಣೆಯೆಂಬ ‘ಮಾರಿ’ಯನ್ನು ಮನೆಗೆ ಕರೆತಂದರು.
ಅಲ್ಲಿಗೆ ತೆಂಗಿನ ಎಣ್ಣೆ, ತೆಂಗಿನ ಉತ್ಪನ್ನಗಳು ಹಾಗೂ ಅವುಗಳಿಂದ ತಯಾರಾಗುವ ಸಿಹಿ ಪದಾರ್ಥಗಳೂ ಸೇರಿದಂತೆ ಎಲ್ಲ ಉತ್ಪನ್ನಗಳ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಕುಸಿದುಬಿತ್ತು. ಇದೇ ಖುಷಿಯಲ್ಲಿ ಸೋಯಾಬೀನ್ ಹಾಗೂ ಕಾರ್ನ್ ಎಣ್ಣೆಯಿಂದ ಅಮೆರಿಕ ಬರ್ಜರಿ ಲಾಭ ಮಾಡಿಕೊಂಡಿತು.
ಆದರೆ ಇಷ್ಟು ವರ್ಷಗಳಾದರೂ ತೆಂಗಿನ ಎಣ್ಣೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಅದು ರೋಗ ನಿರೋಧಕ ಶಕ್ತಿ ಹೊಂದಿದೆ. ಕೇವಲ ತಲೆಗೆ ಎಣ್ಣೆ ಹಾಕಿದರೆ ವಾರಗಟ್ಟಲೆ ನಿದ್ದೆ ಮಾಡದವನೂ ನೆಮ್ಮದಿಯಿಂದ ನಿದ್ದೆ ಮಾಡಬಲ್ಲ, ತಲೆ ನೋವು ನಿವಾರಿಸಿಕೊಳ್ಳಬಲ್ಲ

ಇದರ ಫಲವಾಗಿ ರೈತರು ಕಷ್ಟಪಟ್ಟು ಬೆಳೆದ ತೆಂಗಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಮಾತ್ರವಲ್ಲ ಸ್ಥಳೀಯ ಮಾರುಕಟ್ಟೆಯಲ್ಲೂ ಬೆಲೆ ಕುಸಿದು ಬಿದ್ದಿದೆ. ಕೇವಲ ಕಾಯಿಯನ್ನು ನಾವು ಅಡುಗೆಗೆ ಬಳಸುವಂತಾಗಿದೆ. ಸಾಲದ್ದಕ್ಕೆ ಇತ್ತೀಚೆಗೆ ತೆಂಗಿನ ಕಾಯಿನ್ನೂ ಬಳಸಿದರೆ ಕೊಬ್ಬು ಹೆಚ್ಚಾಗುತ್ತದೆ ಎನ್ನುತ್ತಲೇ ಫಾಸ್ಟ್ ಫುಡ್ ಪ್ಯಾಕೆಟ್ ಸೇವಿಸುವ ಸಂಸ್ಕೃತಿ ಮೆರೆಯುತ್ತಿದೆ. ಇದೆಲ್ಲದರಿಂದ ಲಾಭ ಮಾತ್ರ ಅಮೆರಿಕ ಹಾಗೂ ಪಶ್ಚಿಮ ರಾಷ್ಟ್ರಗಳಿಗೆ. ಇಂದಿಗೂ ಅದು ತೃತೀಯ ರಾಷ್ಟ್ರಗಳಿಗೆ ತನ್ನ ಎಣ್ಣೆಯನ್ನು ಬ್ಯಾರಲ್ಗಟ್ಟಲೆ ರಫ್ತು ಮಾಡುತ್ತ ಲಾಭ ಗಳಿಸುತ್ತಲೇ ಇದೆ. ನಮ್ಮ ತೆಂಗು ಮೂಲೆ ಸೇರಿ ಕೊಳೆಯುತ್ತಿದೆ.
ಆದರೆ ಇಷ್ಟಾದರೂ ಕರಾವಳಿ ಭಾಗದಲ್ಲಿ ಸಾವಿರಾರು ವರ್ಷಗಳಿಂದ ಕಡಲ ತೀರದ ಜನ ಅಡುಗೆಗೆ ತೆಂಗಿನ ಎಣ್ಣೆಯನ್ನೇ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಬೇರೆ ಪ್ರದೇಶದ ಜನರಿಗಿಂತ ಇಂದಿಗೂ ಅವರು ಹೆಚ್ಚು ಆರೋಗ್ಯವಾಗಿದ್ದಾರೆ. ಇದಲ್ಲದೆ ಆಯುರ್ವೇದ ಕೂಡ ತೆಂಗಿನ ಎಣ್ಣೆ ಬಳಕೆ ಒಳ್ಳೆಯದು ಎನ್ನುತ್ತದೆ. ಅನಾದಿ ಕಾಲದಿಂದಲೂ ಸಕಲ ರೋಗ ನಿವಾರಣೆಗೂ ಆಯುರ್ವೇದದಲ್ಲಿ ತೆಂಗಿನ ಎಣ್ಣೆಯನ್ನೇ ಬಳಕೆ ಮಾಡಲಾಗುತ್ತಿದೆ. ಇಷ್ಟಾದರೂ ತೆಂಗಿನೆಣ್ಣೆ ಬಳಕೆ ಬಗ್ಗೆ ಯಾಕೆ ತಾತ್ಸಾರ...?
ತೆಂಗಿನ ಅನುಕೂಲ:
*ತೆಂಗಿನ ಎಣ್ಣೆಯಿಂ

ಜನಜಾಗೃತಿ ಆಂದೋಲನ:
ಸೆ.೨ ವಿಶ್ವ ತೆಂಗು ದಿನ. ಹೀಗಾಗಿ ನಮ್ಮ ತೆಂಗು ಹಾಗೂ ಅದರ ಎಣ್ಣೆ ಮತ್ತು ಅದರಿಂದ ತಯಾರಿಸುವ ಉತ್ಪನ್ನಗಳ ಬಗ್ಗೆ ಜನ ಜಾಗೃತಿ ಮೂಡಿಸಲು ಇಂದಿನಿಂದ ಎರಡು ದಿನಗಳ ಕಾಲ ಸೈಕಲ್ ಜಾಥಾ ಆಯೋಜಿಸಲಾಗಿದೆ. ಬೆಳಗ್ಗೆ ೧೦ಕ್ಕೆ ಚಿಕ್ಕನಾಯಕನ ಹಳ್ಳಿಯಿಂದ ಜಾಥಾ ಆರಂಭವಾಗಿದೆ. ತಿಪಟೂರು, ತುರುವೆಕೆರೆ, ಗುಬ್ಬಿ, ದೊಡ್ಡಬಳ್ಳಾಪುರ ಮಾರ್ಗವಾಗಿ ತುಮಕೂರು ವರೆಗೆ ಜಾಥಾ ಆಗಮಿಸಲಿದೆ.
ಸೆ.೨ರ ಬೆಳಗ್ಗೆ ೧೦ಕ್ಕೆ ಜಾಥಾ ತುಮಕೂರಿಗೆ ಆಗಮಿಸಿದ ನಂತರ ಅಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಈ ಜಾಥಾ ಹಾಗೂ ಸಮಾವೇಶದಲ್ಲಿ ರೈತರು, ಗ್ರಾಹಕರು, ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ತೆಂಗಿನೆಣ್ಣೆ ಹೃದಯಾಘಾತಕ್ಕೆ ಹೇಗೆ ಔಷಧವಾಗಿ ಬಳಕೆಯಾಗುತ್ತದೆ, ಅದರಲ್ಲಿನ ಕೊಬ್ಬಿನಂಶದ ವಾಸ್ತವಾಂಶ ಏನು? ತೆಂಗಿನೆಣ್ಣೆ ಬೇಡಿಕೆ ಹಾಗೂ ಬೆಲೆ ಎರಡನ್ನೂ ಕಳೆದುಕೊಳ್ಳಲು ಜಾಗತಿಕ ಕಾರಣಗಳೇನು? ಇದರ ಗುಣಗಳ ಬಗ್ಗೆ ಜಾಗೃತಿ ಮೂಡದಿರಲು ಹಿಂದಿರುವ ರಾಜಕೀಯವೇನು? ಎಂಬುದರ ಬಗ್ಗೆ ಹೃದಯ ತಜ್ಞ ಡಾ.ಬಿ.ಎಂ.ಹೆಗಡೆ, ಆಹಾರ ತಜ್ಞರಾದ ಕೆ.ಸಿ.ರಘು ಮಾತನಾಡಲಿದ್ದಾರೆ.
ಜಾಥಾದಲ್ಲಿ ಭಾಗವಹಿಸುವವರು ಆಯೋಜಕರಾದ ವಿಶ್ವನಾಥ್ ಅಣೆಕಟ್ಟೆ, ರಘುರಾಮ್( ಮೊ:೮೦೯೫೨೨೨೭೨೮)ಅವರನ್ನು ಸಂಪರ್ಕಿಸಬಹುದು.
ಪ್ರದರ್ಶನ ಮತ್ತು ಮಾರಾಟ:
ಅಂದು ತುಮಕೂರಿನಲ್ಲಿ ತೆಂಗು, ತೆಂಗಿನೆಣ್ಣೆ, ಫಲಪಾಕ, ಸಾಬೂನು, ನಾರು ಉತ್ಮನ್ನಗಳು, ಸಿಹಿ ಪದಾರ್ಥ ಮುಂತಾದ ತೆಂಗು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಕೂಡ ನಡೆಯುತ್ತದೆ.