
ಹಾಗಂತ ಹಿಂದೆ ಇವೆಲ್ಲ ಇರಲಿಲ್ಲವೇ ಎಂದು ಕೇಳಬಹುದು. ‘ಊರು ಎಂದ ಮೇಲೆ ಹೊಲೆಗೇರಿ ಇದ್ದದ್ದೆ’. ಆದರೆ ಅದು ಅಷ್ಟು ಕೊಳಕಾಗಬಾರದು. ಆದರೆ ಇಂಥ ವಾತಾವರಣಕ್ಕೆ ಸಂಪೂರ್ಣ ಕಾರಣ ಬಿಜೆಪಿ ಸರಕಾರ. ಆರಂಭದಲ್ಲಿ ‘ಜೆಡಿಎಸ್ ನಮಗೆ ಮೋಸ ಮಾಡಿತು’. ‘ವಚನ ಭ್ರಷ್ಟರು ಮಾತು ತಪ್ಪಿದರು’ ಎಂದು ಅಳುತ್ತಲೇ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರಕಾರ ಇನ್ನೂ ‘ಅಳುತ್ತಲೇ ಇದೆ’. ಆರಂಭದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕುಮಾರಸ್ವಾಮಿ ಹಾಗೂ ದೇವೇಗೌಡರ ವಿಚಾರದಲ್ಲಿ ಅಳುತ್ತಿದ್ದರು. ಆನಂತರ ಗಣಿ ರೆಡ್ಡಿಗಳು ಅಳುವಂತೆ ಮಾಡಿದರು. ಮತ್ತೆ ‘ಆಪ್ತ’ ಸ್ನೇಹಿತೆ ಶೋಭಾ ಕರಂದ್ಲಾಜೆಗಾಗಿ ಯಡಿಯೂರಪ್ಪನವರೇ ಕಣ್ಣೀರಿಟ್ಟರು.
ಹೋಗಲಿ ಅದು ಮುಗಿಯಿತು ಎನ್ನುವಷ್ಟರಲ್ಲಿ ಮತ್ತೆ ರೇಣುಕಾಚಾರ್ಯನ ಪುರಾಣ ಬಿಚ್ಚಿಕೊಂಡಿತು. ಅಲ್ಲೋ ಯಡಿಯೂರಪ್ಪ ರೇಣುಕಾನನ್ನು ತಬ್ಬಿಕೊಂಡು ‘ತಂತ್ರ’ ಉಪಯೋಗಿಸಿ ಮಂತ್ರಿ ಮಾಡಿದರು. ಆದರೆ ಗಣಿ ರೆಡ್ಡಿಗಳು ಧೂಳು ಮಾತ್ರ ಕಡಿಮೆಯಾಗಲೇ ಇಲ್ಲ. ಇದೆಲ್ಲದರ ನಡುವೆ ಹಾವೇರಿ ಗೋಲಿಬಾರ್(ಅದರಲ್ಲಿ ಸತ್ತವರು ರೈತರೇ ಅಲ್ಲ ಎಂದಿದೆ ಸರಕಾರಿ ಸಮಿತಿಯ ವರದಿ!), ತಿರುಕ್ಕುರುಳ್ ಪ್ರತಿಮೆ, ಹೊಗೇನಕಲ್ ವಿವಾದ, ಕಾವೇರಿ ವಿವಾದ, ನೈಸ್ ವಿವಾದ, ನಿತ್ಯಾನಂದನ ರಾಸಲೀಲೆ ಹೀಗೆ ಒಂದಲ್ಲಾ ಒಂದು ಪ್ರಕರಣಗಳು ಬೀದಿಗೆ ಬೀಳುತ್ತಲೇ ಬಂದವು.
ಈಗ ಹಾಲಪ್ಪನ ಕಾಮ ಪುರಾಣ. ಆದರೆ ಇಷ್ಟೆಲ್ಲಾ ಘಟನೆಗಳ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ ತಮ್ಮ ಹಿತಾಸಕ್ತಿಯನ್ನು ಹಾಗೂ ಪಕ್ಷದಲ್ಲೇ ಇರುವ ಅವರ ವಿರೋ ಬಣ ಅವರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುತ್ತಲೇ ಬಂದಿದ್ದಾರೆ ! ಅಮಾಯಕರು ಮಾತ್ರ ಇಂಥವರ ಮಧ್ಯೆ ಸಿಲುಕಿ ನಲುಗುತ್ತಲೇ ಇದ್ದಾರೆ. ಬೌದ್ಧಿಕವಾಗಿ ವೀಕ್ ಇರುವವರು ಹಾಗೂ ಚೆಡ್ಡಿಗಳಲ್ಲದೆ ಚೆಡ್ಡಿ ಹಾಕಿಕೊಂಡವರು ಮಾತ್ರ ಅಲ್ಲಿ ವಿಲಿ ವಿಲಿ ಒದ್ದಾಡುತ್ತಿದ್ದಾರೆ. ಆರಂಭದಿಂದಲೂ ಚೆಡ್ಡಿಯಲ್ಲೇ ನಿಂತವರು ಬಲವಾಗಿಯೇ ನಿಂತಿದ್ದಾರೆ.
ಮೊನ್ನೆ ನೋಡಿ ಶ್ರೀರಾಮನ ಹೆಸರು ಹೇಳಿಕೊಂಡು ನೈತಿಕತೆ ಭೋದಿಸುತ್ತ ಇಡೀ ರಾಮಾಯಣ, ಮಹಾಭಾರತಗಳನ್ನು ಗುತ್ತಿಗೆ ಪಡೆದವರ ಹಾಗೆ ವರ್ತಿಸುತ್ತಲೇ ಪಾಕಿಸ್ತಾನದ ಮುಸ್ಲೀಂ ಟೆರರಿಸ್ಟ್ ಗಳಂತೆಯೇ ಬೆಳೆದು ನಿಂತಿರುವ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಬಂಡವಾಳ ಬಟಾಬಯಲಾಗಿದೆ(ಹೆಡ್ಲೈನ್ಸ್ ಟುಡೆ ಹಾಗೂ ತೆಹಲ್ಕಾ ಕಾರ್ಯಾಚರಣೆ ವೇಳೆ). ಗುಟ್ಟು ರಟ್ಟಾಗುತ್ತಿದ್ದಂತೆ ಆತನ ಕಿರುಚಾಟ, ಅರಚಾಟ ಜೊರಾಗಿಯೇ ಸಾಗಿದೆ. ಬೆಂಗಳೂರಿನ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಕಲಾ ಪ್ರದರ್ಶನವೊಂದರಲ್ಲಿ ಕೋಮು ದಳ್ಳುರಿ ಹಚ್ಚಲು ೬೦ಲಕ್ಷಕ್ಕೆ ಡೀಲ್ ಮಾಡಿ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದಾನೆ. ಆದರೆ ಸರಕಾರ ಮಾತ್ರ ಕೇವಲ ಒಂದು ಪ್ರತಿಕ್ರಿಯೆ ನೀಡಿ ಸ್ಥಬ್ದವಾಗಿದೆ. ಯಾಕೆ ?
ನಿತ್ಯಾನಂದನೇನೋ ಧರ್ಮ, ದ್ಯಾನದ ಹೆಸರಿನಲ್ಲಿ ಅಮಾಯಕ ಮಹಿಳೆಯರಿಗೆ ‘ಯೋಗ’ ಹೇಳಿಕೊಟ್ಟು ಕೆಡ್ಡಾಗೆ ಬಿದ್ದಿದ್ದ. ಆದರೆ ಆಹಾರ ಹಾಗೂ ನಾಗರಿಕ ಸರಬರಾಜು ಖಾತೆ ಸಚಿವನಾಗಿದ್ದ ಹರತಾಳು ಹಾಲಪ್ಪ ‘ಊಟ’ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ! ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಗೊತ್ತಾಗದು ಎನ್ನುವಂತಿದ್ದ ಹಾಲಪ್ಪ ಈಗ ಬೀದಿಗೆ ಬಂದಿದ್ದಾನೆ. ಆದರೆ ಇದು ‘ಒಪ್ಪಿತ ಯೋಗ ಪುರಾಣ’.
ಹಾಗಂತ ಇಲ್ಲಿ

ಆದರೆ ಹಾಲಪ್ಪನ ಪ್ರಕರಣಕ್ಕೂ ‘ಮುತಾಲಿಕ್ ಲಂಚ ಪ್ರಕರಣ’ಕ್ಕೂ ಹೋಲಿಸಿದರೆ ಮುತಾಲಿಕ್ ಪ್ರಕರಣ ಬಹಳ ಮುಖ್ಯ. ಆದರೆ ಅವನನ್ಯಾಕೆ (ಏಕವಚನಕ್ಕೆ ಕ್ಷಮೆ ಇರಲಿ) ಬಂಸಿ ತನಿಖೆ ನಡೆಸುತ್ತಿಲ್ಲ ? ಆತ ಬಿಜೆಪಿಯ ಬಲಪಂಥೀಯ, ಜತೆಗೆ ಪಕ್ಷದ ಸಂಘಟನೆಗಳಲ್ಲಿ ಇಂದಿಗೂ ಒಡನಾಟ ಇದೆ ಎಂದೆ ? ತಪ್ಪು ಯಾರು ಮಾಡಿದರೂ ತಪ್ಪೆ. ಹಾಲಪ್ಪ ಒಬ್ಬಳ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆದರೆ ಮುತಾಲಿಕ್ ನಿತ್ಯ ಸಾವಿರಾರು, ಲಕ್ಷಾಂತರ ಜನರ ಮರ್ಯಾದೆಯ, ಮುಗ್ದತೆ, ಭಾವನೆಗಳ ಮೇಲೆ ಅತ್ಯಾಚಾರ ಮಾಡುತ್ತಲೆ ಇದ್ದಾನೆ. ಅನೇಕರ ಹತ್ಯೆಗೆ ಕಾರಣವಾಗುತ್ತಿದ್ದಾನೆ. ಇದು ನ್ಯಾಯವೇ ?
ಲವ್ ಜಿಹಾ

ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತ ಏನೂ ತಿಳಿಯದು ಎನ್ನುವ ರೀತಿ ವರ್ತಿಸುವ ಈ ಬಿಜೆಪಿ ಸರಕಾರ ತಕ್ಷಣ ಬುದ್ದಿ ಕಲಿಯದಿದ್ದರೆ ಜನಸಾಮಾನ್ಯರೇ ಬುದ್ದಿ ಕಲಿಸುವ ಕಾಲ ಇಂದಲ್ಲ ನಾಳೆ ಬಂದೇ ಬರುತ್ತದೆ. ನೆನಪಿರಲಿ...