Wednesday, September 17, 2008
ಬೆಂಕಿ ಇಡುವ ಕೈಗಿಂತ ಸಾಂತ್ವನ ಹೇಳುವ ಧ್ವನಿ ಮೇಲು
ಒರಿಸ್ಸಾದ ಕಂದಮಲ್ ಜಿಲ್ಲೆಯಲ್ಲಿ ಆರಂಭವಾದ ಮತಾಂತರ ವಿವಾದದ ಬಿಸಿ ಗಾಳಿ ಈಗ ಕರ್ನಾಟಕಕ್ಕೂ ಬೀಸಿದೆ. ಈ ಬಿಸಿಗೆ ಈಗಾಗ್ಲೇ ಹಲವರು ಬೆಂದು ಹೋಗಿದ್ದಾರೆ. ಅಲ್ಲಿ ಜಾತಿ ಮತದ ಭೇದವಿಲ್ಲ. ಎಲ್ಲ ಸಮುದಾಯಕ್ಕೂ ಆ ಬಿಸಿ ತಟ್ಟುತ್ತದೆ. ಆದ್ದರಿಂದಲೇ ಇದು ಈಗ ಬಿಸಿ ತುಪ್ಪವಾಗಿದೆ.
ಕ್ರಿಶ್ಚಿಯನ್ ಸಮುದಾಯದ ಪ್ರೂತೊಷ್ಟಂತ್ ಪಂಗಡದ ಕೆಲವು ಕಾರ್ಯಕರ್ತರು ತೀರಿಸಿಕೊಂಡ ಸೇಡಿಗೆ ಅಮಾಯಕ ಜನ ಸಾಮಾನ್ಯರು ಕುಉಲಿನಾಲಿ ಬಿಟ್ಟು ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಬದುಕ್ಬೀಕಿದೆ.
ಇಲ್ಲಿ ಹಿಂದೂ ಧರ್ಮದಿಂದ ಬೇರೆ ಧರ್ಮಗಳಿಗೆ ಮತಾಂತರಗೊಂದವರೇ ಹೆಚ್ಚು . ಆದರೆ ಬೇರೆ ಮತಗಳಿಂದ ಹಿಂದೂ ಧರ್ಮಕ್ಕೆ ಬಂದವರು ತೀರ ವಿರಳ. ಅದು ಬೆರಲೆನಿಕೆಯಷ್ಟಿರಬೇಕು. ಮತಾಂತರದ ವಿಚಾರ ಬಂದಾಗಲೆಲ್ಲಾ ಎರಡು ವರ್ಗ ಕಾಣಿಸಿಕೊಳ್ಳುತ್ತವೆ. ಬಲವಂತವಾಗಿ ಮತಾಂತರ ಮಾಡುತ್ತಿರುವ ಪ್ರೂತಷ್ಟಂತರು, ಜತೆಗೆ ಮತಾನ್ತರಗೊಲ್ಲುತ್ತಿರುವ ದಲಿತ, ಹಿಂದುಳಿದ, ಬಡತನದಿಂದ ನೊಂದು ಬೀದಿಗೆ ಬಿದ್ದವರು, ಸಮಾಜದಲ್ಲಿ ಶೂಷಣೆಗೆ ಒಳಗಾದವರು, ಖಾಯಿಲೆಗೆ ತುತ್ತಾದವರು..! ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಹೀಗಿರುವಾಗ ನನ್ನ ಕಣ್ಣ ಮುಂದೆಯೇ ನಡೆದ ಒಂದು ಸತ್ಯ ಘಟನೆ ನೆನಪಿಗೆ ಬರುತ್ತದೆ. ಶಿಕಾರಿಪುರ ತಾಲೂಕಿನ ಹುಲುಗಿನಕೊಪ್ಪದಲ್ಲಿ ಹಿಂದುಳಿದ ವರ್ಗದ ಒಬ್ಬ ಮಹಿಳೆಯ ಸಹೋದರ ನಾಲ್ಕು ವರ್ಷಗಳ ಹಿಂದೆ ಖಾಯಿಲೆ ಬಿದ್ದಿದ್ದ. ಆತನನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂದು ಆಕೆ ಶಿವಮೊಗ್ಗ ಜಿಲ್ಲೆಯ ಎಲ್ಲ ವೈದ್ಯರ ಬಳಿ ಕರೆದೊಯ್ದಳು. ಕಡೆಗೆ ಬೆನ್ಗಳುಉರಿಗೆ ಕರೆ ತಂದಿದ್ದಳು. ಆದರೆ ಎಲ್ಲ ವೈದ್ಯರೂ "ಆತ ಇನ್ನು ಹೆಚ್ಚು ದಿನ ಬದುಕುವುದಿಲ್ಲ ಎಂದು ಹೇಳಿ ಕಳುಹಿಸಿದ್ದರು. ಅವಳ ಇಡೀ ಕುಟುಂಬ ಈ ವಿಚಾರ ತಿಳಿದು ನಿತ್ಯವೂ ಕೊರಗುತ್ತಿತ್ತು. ಕೆಲ ದಿನಗಳ ನಂತರ ಯಾಕೂ ಆಕೆಗೆ ಶಿಕಾರಿಪುರದಲ್ಲಿ ಒಬ್ಬ ಪಾದ್ರಿ ಇದ್ದಾರೆ, ಅವರ ಬಳಿ ಹೋದರೆ ರೋಗ ಗುನಮುಖವಾಗಬಹುದು ಎಂದಿದ್ದರು. ಹಾಗೆ ಹೇಳಿದವರು ಕುಉದ ಹಿಂಡುವೆ.
ಇದನ್ನು ಕೇಳಿದ ಆಕೆ ತನ್ನ ತಮ್ಮನನ್ನು ಆ ಪಾದ್ರಿಯ ಮನೆಗೆ ಕರೆದುಕೊವು ಹೋಗಿದ್ದಳು. ಪಾದ್ರಿ ತನ್ನ ಕೈಯಿಂದ ಹಣ ಕರ್ಚು ಮಾಡಿ ಆಸ್ಪತ್ರೆಗೆ ಸೇರಿಸಿದನೂ ಅಥವಾ ಗಿದಮುಉಲಿಕೆಅವ್ಶಧ ನೀಡಿದನೂ ಗೊತ್ತಿಲ್ಲ. ಆದರೆ ಒಂದು ತಿಂಗಳಲ್ಲಿ ಆಕೆಯ ತಮ್ಮ ಸಂಪುಉರ್ಣ ಗುಣಮುಖನಾದ. ಈಗ ಆತನಿಗೆ ತನ್ನ ಹಿರಿಯ ಮಗಳನ್ನೇ ಕೊಟ್ಟು ಮಾಡುವೆ ಮಾಡಿದ್ದಾಳೆ. ಆ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಇದರ ನಡುವೆ ಆಕೆಯ ಇಡೀ ಕುಟುಂಬ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದೆ . ಎಲ್ಲರೂ ಚನ್ನಾಗಿದ್ದರೆ ! ಇಡೀ ಗ್ರಾಮದ ಜನತೆಯ ಜತೆ ಅವರು ಸಹಜೀವನ ನಡೆಸುತ್ತಿದ್ದಾರೆ. ಯಾವುದೇ ಗಲಭೆಗಲಾಗಿಲ್ಲ...
ಈ ಘಟನೆ ಹೇಳಲು ಕಾರಣ. ಹಳ್ಳಿಗಳಲ್ಲಿ ಜನ ಜಾತಿ , ಧರ್ಮ, ಯಾವುದು ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ತಮ್ಮ ಜೀವನ ಮುಖ್ಯವಾಗಿರುತ್ತದೆ. ಎಷ್ಟೂ ಕಡೆಗಳಲ್ಲಿ ಸಣ್ಣ ಸಣ್ಣ ಮುಸ್ಲಿಂ ದರ್ಗ್ಹಾಗಲಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದವಿಲ್ಲದೆ ಸಕ್ಕರೆ ಓಡಿಸುತ್ತಾರೆ. ಕಾಯಿಲೆಗೆ ತುತ್ತಾದರೆ ಹೋಗಿ ನಡೆದುಕೊಳ್ಳುತ್ತಾರೆ. ಇದನ್ನು ಧರ್ಮ ಅಥವಾ ವೈಗ್ಜಾನಿಕ ದೃಷ್ಟಿಕೋನದಿಂದ ನೋಡಬೇಕಿದೆ. ಸಹಾಯಕ ಸ್ತಿದಿಯಲ್ಲಿರುವವರಿಗೆ ಸಹಾಯ ಮಾಡುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕಿದೆ. ಆದರೆ ಕೆಲವರು ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ಜನರ 'ನೆಮ್ಮದಿ' ಕದದುತ್ತಾರೆ ಅಷ್ಟೆ.
ನಿಸ್ಸಹಾಯಕಲಾದ ಆ ಮಹಿಳೆಗೆ ಗ್ರಾಮದ ಒಬ್ಬರಾದರೂ ಸಹಾಯ ಮಾಡಿ ಸಾಂತ್ವನ ಹೇಳಿದ್ದರೆ, ಆರ್ತಿಕ ಸಹಾಯ ಮಾಡಿದ್ದರೆ ಆಕೆ ಪಾದ್ರಿಯ ಮಾತು ಕೇಳುತ್ತಿರಲಿಲ್ಲ. ಮತಾನ್ತರಗೊಲ್ಲುತ್ತಿರಲಿಲ್ಲ. ಅಲ್ಲಿ ಯಾರು ತನಗೆ ಸಹಾಯ ಮಾಡಿದ್ರೂ ಆಕೆ ಅವರಿಗೆ ರುನಿಯಾಗಿದ್ದಾಳೆ.
ಕಾರಣ ಇಷ್ಟೇ .. ನಿರ್ಗತಿಕರ ಅಸಹಾಯಕತೆಯನ್ನು ಪ್ರೂತೆಷ್ಟೇಂತರು ಬಳಸಿಕೊಂಡು ಮತಾಂತರ ಮಾಡುತ್ತಾರೆ. ಆದರೆ ಈ ಅಮಾಯಕರಿಗೆ ಅದರ ಅರಿವಿರುವುದಿಲ್ಲ. 'ಜಾತಿ ಯಾವುದಾದರೇನು ನಾತರದು ಸಾಲದೇ' ಎಂಬಂತೆ ಅವರಿಗೆ ಜಾತಿ, ಧರ್ಮ ಮುಖ್ಯವಾಗುವುದಿಲ್ಲ. ಸಿಗುವ ಸವ್ಳಬ್ಯಾಗಳು, ಸಾಂತ್ವನ, ಕಣ್ಣೀರು ಒರೆಸುವ ಕೈಗಳು ಮುಖ್ಯವಾಗುತ್ತವೆ.
ಇದು ಒಂದೆಡೆಯಾದರೆ ಮತ್ತೊಂದೆಡೆ ಇದನ್ನೇ ನೆಪ ಮಾಡಿಕೊಂಡು ಕೆಲವು ಪಕ್ಕಾ ಹಿಂದುವಾಡಿ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತಾರೆ. ಹೀಗೆ munduvaridare ಶಾಂತಿ ನೆಲೆಸುವುದಾದರು ಎಂದು ? ಅಸಹಾಯಕತೆಯಿಂದ ಬಳಲುವವರಿಗೆ ಸಾಂತ್ವನ ಹೇಳುವ ಧ್ವನಿಗಳು ಬೇಕಿದೆ. ಸರಕಾರ ಕುಉದ ಸಮಾಜದಲ್ಲಿ ಬೆಂಕಿ ಉಂಡೆ ಉಗುಳಿ ಅದರ ಝಾಲದಲ್ಲಿ ಮೈ kaayisikolluvudannu ಬಿಟ್ಟು ಬಡತನ, ದಾರಿದ್ರ್ಯಗಳ ನಿರ್ಮುಉಲನೆಗೆ ಕ್ರಮ ಕೈಗೊಳ್ಳಬೇಕು.
ಹಿಂಸೆ ಯಾರೇ ಮಾಡಿದರೂ ಅದು ಹಿಂಸೆಯೇ. ಇದರಲ್ಲಿ ಮತ್ತೆ ಬಳಲುವವರು ಜನ ಸಾಮಾನ್ಯರೇ. ಕೊಲ್ಲಿ ಇತ್ತವರು ದುಉರ ನಿಲ್ಲುತ್ತಾರೆ. ಅಮಾಯಕರು ಉರಿದು ಕರಕಲಾಗುತ್ತಾರೆ.ಇದೆಲ್ಲ ಯಾವ ಸ್ವಾರ್ಥಕ್ಕಾಗಿ... ?
Subscribe to:
Posts (Atom)