Saturday, September 29, 2012

ನನ್ನೂರಿನ ಚಿತ್ರ ಚಿತ್ತಾರ...


ಎಲ್ಲಿ ಹೋದಳು ಇವಳು...
ಹುಡುಕಿ ಸುಸ್ತಾದೆ...

 ಎಲ್ಲಿ ಹೋದೆ ನೀ ನಲ್ಲೆ...


ಹಾರುವೇನು ನಾ... 
 ಬಂದಿದ್ದಾರ ರಾಯರು...!
 ಇನ್ನು ಯಾಕ ಬರಲಿಲ್ಲ ಇವಳು...
ಇಲ್ಲೇ ಇದ್ದೀನಿಕಣ್ರೀ... ಬಂದೆ...
ಛೀ, ನಾಚಿಕೆ ಆಗುತ್ತೆ...
ಬಣ್ಣದ ಚಿಟ್ಟೆಯ ಚಿತ್ತಾರ
ಹುಲ್ಲು ಕೂಡ ಅಂದವೆ, ನೋಡ ಬನ್ನಿ ಹೇಗಿದೆ...!
 ಹುಲ್ಲು ಎಂದು ಜರಿಯಬೇಡಿ...!

 ಹುಲ್ಲಿನ ಉಯ್ಯಾಲೆ...



ಕಾದಿರುವೆ ನಿನಗಾಗಿ...


 ಜೇಡ ಜಂಜಡ...

 ಜೇಡರ ನೆಲೆ..

ಮೀನು ಹುಡುಕಾಟ

 ಬಲಿ ಎಲ್ಲಿ...?


ಕಣಿವೆ ಕಡೆಗೆ ಕಣ್ಣು...!!

 ಏರು ಪಯಣ 

ಸುದೀರ್ಘ ಪ್ರಯಾಣ...

ದನಗಳ ಕಡೆಗೆ ದಾರಿ...
ನನ್ನ ಕಂದನಿಗಾಗಿ ಇನ್ನೂ ಹುಡುಕಬೇಕು...
ಅಮ್ಮಾ, ನನಗೂ ತಿನ್ನಲು ಬೇಕು

 ನನ್ನ ಮಡಿಲ ಗೂಡು 

 ಕಂದನ ಕಾಣಲು...






Friday, September 14, 2012

ನಾನು ಕ್ಲಿಕ್ಕಿಸಿದ ಇತ್ತೀಚಿನ ಚಿತ್ರಗಳು

 ತುಂತುರು ಇಲ್ಲಿ  ನೀರ  ಹಾಡು...
ಮಂಜುಳ ನಾದ...

ಚೆಲುವು ನನ್ನಲ್ಲೂ ಇದೆ...!

ದೂರ ತೀರ ಯಾನ...

ಸಸ್ಯ ಚಿತ್ತಾರ...!

 ಸಂಗಾತಿಗಳ ಸಂಭಾಷಣೆ !

 ವ್ಹಾ... ತುಂಬಾ ಸ್ವೀಟ್ ಆಗಿದೆ... ನಿಮಗೂ ಬೇಕಾ...!?

ಕಾದಿಹೆ ನಾ ನನ್ನಿನಿಯನಿಗಾಗಿ...

ಈ ಹೂವಿನ ಮಕರಂದ ನನಗೂ ಬೇಕು...

 ಜೊತೆಯಾಗಿ ಹಿತವಾಗಿ ಸೇರಿ ನಡೆವ... ಸೇರಿ ನುಡಿವ...

 ನಗು ನಗುತಾ ನಲಿ ನಲಿ... ಏನೇ ಆಗಲಿ... 

ಸರ್ವ ದಿಕ್ಕುಗಳು ಗೊತ್ತು... 


ಮಧುರ ಮಿಲನ...!!

ನಾವು ತ್ರಿಮೂರ್ತಿಗಳು...


ಒಂಟಿ ಒಂಟಿಯಾಗಿರುವುದು ಬಾರೋ ಬೋರು... 

ಅಂದವೋ ಅಂದ...

ಹಾಗೆ ಸುಮ್ಮನೆ ಒಂದು ಗುಟುಕು...

ಹಾರುತ ದೂರ ದೂರ... 

   ಮೇಲೇರುವ ಬಾರಾ ಬಾರಾ...

 ಸಹಸ್ರಪದಿಯ ಸರ್ಕಸ್!


Monday, August 27, 2012

ವಿಜಯ ವಾಣಿಯಲ್ಲಿ ಪ್ರಕಟವಾದ ಪಿ.ಸಾಯಿನಾಥ್ ಅವರ ಸಂದರ್ಶನ...

ಪಿ.ಸಾಯಿನಾಥ್ ಅವರೊಂದಿಗೆ ರಮೇಶ್ ಹಿರೇಜಂಬೂರು ಮಾತುಕತೆ...

Thursday, August 2, 2012

ಈ ವಂಡರ್ಫುಲ್ ಪತ್ರಿಕೆ "ನವ ಮಾನವ" ನೀವೂ ಖರೀದಿಸಿ ಓದಿ...


ಸ್ನೇಹಿತರೆ, ನಿಮೊಂದು ಸಂತಸದ ಸುದ್ದಿ! ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಇದ್ದಾಗ "ಮಾನವ" ಎಂಬ ಸಣ್ಣ ಮಾಸಿಕ ಪತ್ರಿಕೆಯೊಂದು ಹೊರಬರುತ್ತಿತ್ತು. ಅದು ನಿಜಕ್ಕೂ ಅದ್ಭುತವಾಗಿತ್ತು. ಈಗ ಅದೇ ರೀತಿಯ ಮತ್ತೊಂದು ಮಾಸಿಕ ಪತ್ರಿಕೆ "ನವ ಮಾನವ" ನಮ್ಮ ಕಣ್ಣೆದುರೇ ಇದೆ. ಆದರೆ ಅದನ್ನು ಎಷ್ಟು ಜನ ಗಮನಿಸಿದ್ದಾರೋ ಇಲ್ಲವೋ ಗೊತ್ತಿಲ್ಲ! ಅಲ್ಲಿ ಜಾಹಿರಾತುಗಳಿಲ್ಲ, ಗೊಡ್ಡು ರಾಜಕಾರಣಿಗಳ ಪೊಳ್ಳು ಭಾಷಣಗಳಿಲ್ಲ , ಬದಲಿಗೆ ಮನಸನ್ನು ಸದಾ ಕಾಡುವ ಈ ದೇಶದ ಸಮಸ್ಯೆಗಳು, ಪ್ರಗತಿಯ ಚಿಂತನೆಗಳಿವೆ. ಅದಕ್ಕೊಂದೆರಡು ಶೀರ್ಷಿಕೆಗಳನ್ನು ಉದಾಹರಿಸಿ ಹೇಳುವುದಾದರೆ "ಬೇಸಾಯ- ನೀ ಸಾಯ... ನಾ ಸಾಯ..."  "ಹಸಿರು ಕ್ರಾಂತಿಯ ಜಾತ್ರೆಯಲ್ಲಿ ಕಾಣೆಯಾದವರು..." "ಅಂಬೇಡ್ಕರ್ ಹಾಗು ಲೋಹಿಯಾ: ಜಾತಿ ಕುರಿತ ಒಂದು ಸಂವಾದ" ಹೀಗೆ ಹತ್ತು ಹಲವು ಲೇಖನಗಳಿವೆ. ಇವು ನಮ್ಮ ಬುದ್ಧಿ, ವಿಚಾರ ಲಹರಿಗಳನ್ನು ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ.
ಈ ಪತ್ರಿಕೆಗೆ ಸಂಪಾದಕರಾದ ಶಿವಮೊಗ್ಗದ ಡಿ.ಎಸ್.ನಾಗಭೂಷಣ್ ಅವರು ಹಣ ನಿಗದಿ ಮಾಡಿಲ್ಲ! "ನೀವು ಕೊಟ್ಟಷ್ಟು" ಎಂದು ನಮೂದಿಸಿದ್ದಾರೆ. ಹಾಗಂತ ನಾವು ಪುಕ್ಕಟ್ಟೆ ತೆಗೆದುಕೊಂಡು ಓದುವುದು ಸರಿಯಲ್ಲ. ಇಂಥ ವಿಚಾರಗಳನ್ನು ನಮಗೆ ತುಂಬುವ ಈ ಪತ್ರಿಕೆಗೆ ವರ್ಷಕ್ಕೆ ಕನಿಷ್ಠ 100 ರೂ. ಗಳನ್ನಾದರೂ ನೀಡಿ ಓದೋಣ... ಹಣ ನೀಡಿದರೆ ನೀವಿದ್ದಲ್ಲಿಗೆ ಪತ್ರಿಕೆ ನಿಮ್ಮ ಕೈಗೆ ತಲುಪುತ್ತದೆ.  ಈ ಪತ್ರಿಕೆ ಖರೀದಿಸಲು ಆಸಕ್ತರಿದ್ದಲ್ಲಿ ನನ್ನ ಮೊ: 94495 10318 ಸಂಖೆಗೆ ಸಂಪರ್ಕಿಸಬಹುದು. ಅಥವಾ  ಈ ಪತ್ರಿಕೆಯ ಸಂಪಾದಕರಾದ ಡಿ.ಎಸ್.ನಾಗಭೂಷಣ, ಮೊ: 94492 42284 ಅವರನ್ನಾದರೂ ನೇರವಾಗಿ ಸಂಪರ್ಕಿಸಿ. ನಿಮ್ಮ ಹಣ ಹಾಗು ವಿಳಾಸ ನೀಡಿ. ಪತ್ರಿಕೆಯನ್ನು ನಿಮ್ಮದಾಗಿಸಿಕೊಂಡು ಓದಿ... 
ನೆನಪಿರಲಿ ಇದು ಜೋಪಾನವಾಗಿರಿಸಿಕೊಳ್ಳುವ ಪತ್ರಿಕೆ...
ಇಂತಿ ನಿಮ್ಮ ಆತ್ಮೀಯ 
-ರಮೇಶ್ ಹಿರೇಜಂಬೂರು

Sunday, July 29, 2012

ಮಾನಗೆಟ್ಟ ಹಿಂದೂ ಜಾಗರಣ ವೇದಿಕೆ ಮತ್ತು ಲಜ್ಜೆಗೆಟ್ಟ ಸರಕಾರ

ಈ ಫೋಟೋ ನೋಡಿದರೆ ಸಾಕು "ಹಿಂದೂ ಜಾಗರಣ ವೇದಿಕೆ" ಕಾರ್ಯಕರ್ತರು ಎಂಥ ಹೀನಾಯ ಹಾಗು ಕೀಳು ಮನೋಸ್ಥಿತಿಯವರು ಎಂಬುದು ಅರ್ಥವಾಗುತ್ತದೆ. ಸಮಾಜದಲ್ಲಿ ಯಾವುದೇ ಕೆಟ್ಟ ವ್ಯವಸ್ಥೆ ಇದ್ದರೂ ಅದರ ವಿರುದ್ಧ ಪ್ರತಿಭಟಿಸಲು ಅದರದ್ದೇ ಆದ ವೇದಿಕೆ ಇರುತ್ತದೆ. ಅದು ಬಿಟ್ಟು ಹೀಗೆ ಏಕಾಏಕಿ ನುಗ್ಗಿ ದಾಳಿ ಮಾಡಿ ಅಮಾನುಷವಾಗಿ ಹಾಗು ಅಸಹ್ಯವಾಗಿ ನಡೆದುಕೊಳ್ಳುವುದು ತೀರಾ ನಾಚಿಕೆಗೇಡು. ಬಿಜೆಪಿ ಸರಕಾರ ಕರ್ನಾಟಕವನ್ನು ಮತ್ತೊಂದು ಗುಜರಾತ್ ಮಾಡುತ್ತೇವೆ ಎಂದು ಹೇಳುತ್ತಲೇ ಇದೆ. ಹಾಗೆಂದರೆ ಇದೆ ಮಾದರಿ ರಾಜ್ಯನ..? ವ್ಯವಸ್ಥೆ ಕೆಟ್ಟಿದೆ ನಿಜ, ಆದರೆ ಅದನ್ನು ಸರಿಪಡಿಸಲು ಹೀಗೆ ದಾಳಿ ಮಾಡುವುದಲ್ಲ... ಅಲ್ಲಿ ರೇವು ಪಾರ್ಟಿ ಮಾಡುತ್ತಿರಲಿಲ್ಲ ಹುಟ್ಟು ಹಬ್ಬದ ಸಂಬ್ರಮಾಚರಣೆ ಇತ್ತು ಎಂದು ಪಕ್ಕದ ನಿವಾಸಿಗಳು ಹೇಳುತ್ತಾರೆ. ಸರಕಾರವೇ ಉಡುಪಿ-ದಕ್ಷಿಣ ಕನ್ನಡದ ಸಮುದ್ರ ತೀರದಲ್ಲಿ ರೇವು ಪಾರ್ಟಿಗೆ ಪ್ರವಾಸೋದ್ಯನದ ಹೆಸರಿನಲ್ಲಿ ಅವಕಾಶ ನೀಡಿತ್ತಲ್ಲ ಆಗ ಎಲ್ಲಿ ಹೋಗಿದ್ದರು ಈ ಹಿಂದೂ ರಕ್ಷಕರು? ಮಂತ್ರಿಗಳೇ ಪವಿತ್ರವಾದ ವಿಧಾನ ಸೌಧದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದರಲ್ಲ ಆಗ ಎಲ್ಲಿ ಹೋಗಿದ್ದರು ಇವರೆಲ್ಲ? ಆ ಇಡೀ ಪ್ರಕರಣವನ್ನೇ ಮುಚ್ಚಿ ಹಾಕಿ ತಿಪ್ಪೆ ಸಾರಿಸಿದರಲ್ಲ ಆಗ ಎಲ್ಲಿ ಎಲ್ಲಿ ಹೋಗಿದ್ದರು ಈ ಹಿಂದೂ ಸಂಸ್ಕೃತಿಯ ರಕ್ಷಕರು...? ಈ ಸಂಘಟನೆಯ ಕಾರ್ಯ ವೈಕರಿ ನೋಡಿದರೆ ಇದು ಕೇವಲ ನಾಟಕ ಹಾಗು ತಮ್ಮ ತೆವಲು ತೀರಿಸಿಕೊಳ್ಳಲು ಬಳಸುತ್ತಿರುವ ತಂತ್ರ ಎನ್ನುವುದು ಸ್ಪಷ್ಟವಾಗುತ್ತದೆ...
ಕಳೆದ ಬಾರಿ ಕೂಡ ಇದೆ ರೀತಿ ಅಮಾಯಕ ಯುವಕ ಯುವತಿಯರ ಮೇಲೆ ದಾಳಿ ನಡೆದಿತು. ಆಗ ಈಗಿನ ಜೆಡಿಎಸ್ ಮುಖಂಡ ಮಹೇಂದ್ರಕುಮಾರ್ ನೇತೃತ್ವ ವಹಿಸಿದ್ದರು. ಇಂದು ಅವರೇ ಇದರ ವಿರುದ್ಧ ಮಾತನಾಡಿದ್ದಾರೆ. ಅಂದರೆ ಅಲ್ಲಿಗೆ ಈ ವೇದಿಕೆ ರಾಜಕಾರಣಕ್ಕೆ ಇಲ್ಲವೇ ಅಲ್ಲಿನ ಕೆಲವು ಪುಂಡು ಪೋಕರಿಗಳಿಗೆ ಸಮಾಜದಲ್ಲಿ ದಿಡೀರ್ ಹೆಸರು ಪಡೆದುಕೊಳ್ಳಲು ಇದು ವೇದಿಕೆ ಆಗುತ್ತಿದೆ. ಇದಕ್ಕೆ ಅಮಾಯಕ ಯುವಕ ಯುವತಿಯರು ಮಾತ್ರ ಬಲಿಯಾಗುತ್ತಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಉಡುಪಿ-ಮಂಗಳೂರಿನ ಸಮುದ್ರ ತೀರದಲ್ಲಿ  ಸರಕಾರವೇ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಹೆಸರಿನಲ್ಲಿ ರೇವು ಪಾರ್ಟಿಗೆ ಅವಕಾಶ ನೀಡಿ ಮೋಜು ಮಸ್ತಿಗೆ ಅನುವು ಮಾಡಿಕೊಟ್ಟಿತ್ತು. ಆಗ ಈ ಕಾರ್ಯಕರ್ತರು ಮಾತ್ರ ಅಂಡು ಸುಟ್ಟ ಬೆಕ್ಕಿನ ಹಾಗೆ ಕೂತಿದ್ದರು. ಇದೆಲ್ಲ ನೋಡಿದರೆ ಸರಕಾರದ ಕೃಪಾಪೋಷಿತ ನಾಟಕ ನಡೆಸುತಿದೆ ಎನಿಸುತ್ತದೆ.
ಹಿಂದೂ ಧರ್ಮದ ಹೆಸರಿನಲ್ಲಿ ತಾವೇ ಧರ್ಮ ರಕ್ಷಕರು ಎನ್ನುವ ಈ ಹಿಂದೂಪರ ಸಂಘಟನೆಗಳು ಮುಸ್ಲಿಂ ಹಾಗು ಕ್ರಿಶ್ಚಿಯನ್ ಸಂಘಟನೆಗಳನ್ನು ನಿಂದಿಸುತ್ತವೆ. ಹಾಗಾದರೆ ಇವರು ಮಾಡುತ್ತಿರುವುದು ಏನು? ಮತ್ತೊಂದು ತಾಲಿಬಾನ್ ಸಂಸ್ಕೃತಿ ಹುಟ್ಟು ಹಾಕುವುದಾ? ಇದು ಮನುಷ್ಯ ಸಂಸ್ಕೃತಿಯ...? ನೀ ಅತ್ತಂತೆ ಮಾಡು ನಾ ಸತ್ತಂತೆ ಮಾಡುತ್ತೇನೆ ಎನ್ನುತ್ತಿದೆ ಸರಕಾರ. ಇತ್ತ ಹಿಂದೂ ಜಾಗರಣಾ ವೇದಿಕೆಗೆ ಮಾನ ಮರ್ಯಾದೆ ಇಲ್ಲ... ಅತ್ತ ಬಿಜೆಪಿ ಸರಕಾರ ಕೂಡ ಲಜ್ಜೆಗೆಟ್ಟು ಕೂತಿದೆ... ನಿಜಕ್ಕೂ ಇವರೇನು ಆಧುನಿಕ ದುಷ್ಯಾಸನರೋ ಇಲ್ಲ ಆಧುನಿಕ ರಾವನರೋ...?
Powered By Blogger