Tuesday, July 17, 2012

ಜಿ.ಎಸ್.ಶರ್ಮಾ ಎಂಬ ಹೆಗ್ಗಣ...!


ಜಿ.ಎಸ್.ಶರ್ಮಾ
ಕೇವಲ 31 ಶಾಲೆಗಳು ಬೆಂಬಲ ನೀಡುತ್ತಿವೆ ಎನ್ನುವ ಒಂದೇ ಕಾರಣಕ್ಕೆ ತಮಗೇನೂ ಬಾರಿ ಬೆಂಬಲ ಸಿಕ್ಕ ಹಾಗೆ ಬೀಗುತ್ತಿರುವ ಕುಸ್ಮಾ(ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ)  ಅಮಾಯಕ ಶಾಲಾ ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಲು ಅಣಿಯಾಗಿದೆ!
ಶಿಕ್ಷಣ ಕಾಯಿದೆ ಹಕ್ಕನ್ನೇ ವಿರೋಧಿಸುತ್ತಿರುವ ಕುಸ್ಮಾ ಸಂಘಟನೆಯ ವಾದ ನಿಜಕ್ಕೂ ಕಿಡಿಗೆಡಿತನದ್ದು. ಸಾಮಾನ್ಯ ಸಾರ್ವಜನಿಕರನ್ನೇ ಮನಸೋ ಇಚ್ಛೆ ನಿಂದಿಸುವ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಜಿ.ಎಸ್.ಶರ್ಮಾ ಅವರದ್ದು ತೀರ ಬ್ಲ್ಯಾಕ್ ಮೇಲೆ ತಂತ್ರ. ಸರಕಾರದ ನೀತಿ ನಿಯಮಗಳನ್ನೇ ಗಾಳಿಗಿ ತೋರಿ ಶಾಲೆಗಳನ್ನು ನಡೆಸುತ್ತ ಅದನ್ನೇ ಉದ್ಯಮ ಮಾಡಿಕೊಂಡಿರುವ ಶಾಲೆಗಳು ಇಂಥವರ ಬೆನ್ನಿಗೆ ನಿಂತಿವೆ. ಆದರೆ ಸರಕಾರ ಹಾಗು ಇಂಥ ಸಂಘಟನೆಯ ಜಗಳದ ಮಧ್ಯೆ ಮಕ್ಕಳ ಓದು ಹಾಳಾಗುತ್ತಿದೆ. ಒಂದು ದಿನವೂ ಶಾಲೆಗೇ ತಪ್ಪಿಸದೇ ಶಾಲೆಗೇ ಮಕ್ಕಳನ್ನು ಕಲಿಸುವ ಪೋಷಕರು ಇಂಥ ವ್ಯವಸ್ಥೆಯ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ಸರಕಾರೀ ಶಾಲೆಗಳಲ್ಲಿ ಓದುವ ಮಕ್ಕಳು ಹಾಗು ಪೋಷಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಶರ್ಮಾ, ಈ ದೇಶದಲ್ಲಿ  ಇಂದು ಉನ್ನತ ಹುದ್ದೆಯಲ್ಲಿದ್ದವರೆಲ್ಲ ಒಂದು ಕಾಲದಲ್ಲಿ ಅದೇ ಸರಕಾರೀ ಶಾಲೆಯಲ್ಲಿ ಓದು ಮುಂದೆ ಮನದವರು. ಅದೇ ಸರಕಾರಿ ಶಾಲೆಯ ಶಿಕ್ಷಕರ ಕೈಲಿ ಕಲಿತವರು ಎನ್ನುವುದನ್ನು ಮರೆತಂತಿದೆ. ಅವರಿಗೆ ಈಗ ಅವರ ಬೆಲೆ ಬೆಯಬೇಕಷ್ಟೇ ಹೊರತು. ಸಾಮಾನ್ಯ ಮಕ್ಕಳ ಹಾಗು ಅವರ ಭವಿಷ್ಯದ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಹಣ ಮಾಡುವುದೊಂದೇ ಉದ್ದೇಶ ಮಾಡಿಕೊಂಡಿರುವ ಇಂಥ ಹೆಗ್ಗಣಗಳನ್ನು ಹೆಣ ಮಾಡಿ ಮಣ್ಣು ಮುಚ್ಚುವವರೆಗೆ ಈ ರಾಜ್ಯ, ದೇಶದಲ್ಲಿ ಶಿಕ್ಷಣಕ್ಕೆ ಬೆಲೆ ಬರುವುದಿಲ್ಲ...

Sunday, July 15, 2012

ನೆನಪಾದ ದಿ.ಲಿಂಗದೇವರು ಹಳೆಮನೆ



ನಿನ್ನೆ ಯಾಕೋ ದಿ.ಲಿಂಗದೇವರು ಹಳೆಮನೆ ತುಂಬಾ ನೆನಪಾಗುತ್ತಿದ್ದರು. ಅದಕ್ಕಾಗಿ ನನ್ನ  "ಸತ್ಯಕ್ಕ- ಕಾಯಕಕ್ಕೆ ಮತ್ತೊಂದು ಹೆಸರು" (2010 ನೆ ಸಾಲಿನ ಸದ್ಭಾವನ ಪ್ರಶಸ್ತಿ ಪುರಸ್ಕೃತ ಸಂಶೋಧನಾ ಕೃತಿ.) ಪುಸ್ತಕವನ್ನು ಹಿಡಿದು ಅವರು ಈ ಕೃತಿಯ ಬಗ್ಗ್ಗೆ ಬರೆದ ಮುನ್ನುಡಿಯನ್ನ ಓದುತಿದ್ದೆ. ಅವರು ನಿಜಕ್ಕೂ ಉತ್ತಮ ವಾಗ್ಮಿ. ಎಲ್ಲ ವಿಚಾರಗಳನ್ನೂ ಆಳವಾಗಿ ಬಲ್ಲವರು. ವಚನ ಸಾಹಿತ್ಯದ ಬಗ್ಗೆಯಂತೂ ಹೆಚ್ಹು ಆಕರ್ಷಿತರಾಗಿ ಅಧ್ಯಯನ ನಡೆಸಿದವರು. ಆ ಕಾರಣಕ್ಕೆ ಅಂದು ಈ ಕೃತಿಗೆ ಅವರಿಂದ ಮುನ್ನುಡಿ ಬರೆಸಲು ಮುಂದಾಗಿದ್ದು. ಈ ಸಲಹೆ ನೀಡಿದ್ದು ಆತ್ಮೀಯರಾದ ಬಂಜಗೆರೆ ಜಯಪ್ರಕಾಶ್ ಅವರು. ಸತ್ಯಕ್ಕನ ವಚನಗಳನ್ನು ಲಿಂಗದೇವರು ಯಾವುದೇ ಕ್ಷಣದಲ್ಲಿ ಕೇಳಿದರೂ ಪಟ ಪಟನೆ ಹೇಳುತ್ತಿದ್ದರು... ಈ ಪುಸ್ತಕ ಬರೆದಾಗ ಅವರು ತುಂಬಾ ಕುಶಿಪಟ್ಟು ಕೇವಲ ನಾಲ್ಕು ದಿನದಲ್ಲಿ ಮುನ್ನುಡಿ ಬರೆದು ಕಳುಹಿಸಿ ಫೋನ್ ಮಾಡಿ ಹೊಗಳಿದ್ದರು. ಇನ್ನು ಹೆಚ್ಹು ವಚನಗಳನ್ನು ಹುಡುಕಲು ಸಾದ್ಯವಾದರೆ ಹುಡುಕಿ ಎಂದು ಪ್ರೋತ್ಸಾಹ ನೀಡಿದ್ದರು... ಆ ಹುರುಪಿನಲ್ಲಿಯೇ ಪುಸ್ತಕ ಹೊರ ತಂದೆ. ಪ್ರಶಸ್ತಿಯೂ ಬಂತು. ಈಗ ಅವರ ಪ್ರೋತ್ಸಾಕ, ನಿಷ್ಕಲ್ಮಶವಾದ ಮಾತು ನೆನಪಾಗಿ ಏಕೋ ಕಣ್ಣುಗಳು ತೆವಗೊಂಡಿವೆ... ಅವರ ಆತ್ಮಕ್ಕೆ ಶಾಂತಿ ಸಿಗಲಿ... ಮತ್ತೆ ಹುಟ್ಟಿ ಬರಲಿ. ನನ್ನಂತ ಹಲವರಿಗೆ ಅವರು ಬೆನ್ನೆಲುಬಾಗಿ ನಿಲ್ಲಲಿ...

Saturday, April 21, 2012

ಎಂದೂ ಓದಿದ ನೆನಪು...


"ಡೊಗ್ಗಾಲು ಹಾಕಿರುವ ವಿದ್ಯಾವಂತನಿಗಿಂತ ಸ್ವಂತದ ಕಾಲುಗಳ ಮೇಲೆ ಸೆಟೆದು ನಿಂತಿರುವ ಅನಕ್ಷರಸ್ಥ ನೇಗಿಲ ಯೋಗಿಯ ಎತ್ತರ ಹೆಚ್ಚು..."

Friday, April 20, 2012

ಎಂದೋ ಓದಿದ ನೆನಪು

ಸ್ನೇಹಿತರೆ, ಇನ್ನು ಮುಂದೆ ಈ "ಮುಖ ಪುಟ"ದಲ್ಲಿ  ನಿತ್ಯ ಒಂದೊಂದು "ನೆನಪು"ಗಳನ್ನು ನಿಮ್ಮ ಮುಂದಿದುತ್ತ್ತೇನೆ. ಇದು ನಾನು ಓದಿದ್ದನ್ನು ನೆನಪಿಸಿಕೊಂಡು ಮೆಲುಕು ಹಾಕುವ ಸಣ್ಣ ಸ್ವಾರ್ಥ ಅಷ್ಟೇ...
 "ಪ್ರೀತಿ ತುಂಬಿರುವ ಮಾತುಗಳನ್ನು ಕೇಳಿದಾಗ ಎಲ್ಲ ಪ್ರಾಣಿಗಳಿಗೂ ಸಂತ್ತೋಷವಾಗುತ್ತದೆ. ಅದಕ್ಕಾಗಿ ಸದಾ ಪ್ರೀತಿಯಿಂದಲೇ ಮಾತಾಡು. ಮಾತಿಗೂ ದಾರಿದ್ರ್ಯವೇಕೆ?" 

Saturday, March 24, 2012

ಈ ರಾಘವನ್ ಇನ್ನಿಲ್ಲ...


ಈ ರಾಘವನ್  
ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕ ಈ ರಾಘವನ್ ಇಂದು(ಶನಿವಾರ ಮಾ.24 ) ಸಂಜೆ ನಿಧನರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು. ಮೂಲತಃ ಮೈಸೂರಿನವರಾದ ಅವರಿಗೆ ಪತ್ನಿ ಹಾಗು ಒಬ್ಬ ಪುತ್ರಿ ಇದ್ದಾರೆ. ಅವರ ಪುತ್ರಿ ಲಂಡನ್ ನಲ್ಲಿ ಇದ್ದಾರೆ. ರಾಘವನ್ ಈ ಹಿಂದೆ ಎಕನಾಮಿಕ್ ಟೈಮ್ಸ್ ನ ಸ್ಥಾನಿಕ ಸಂಪಾದಕರಾಗಿದ್ದರು. ಎರಡು ವರ್ಷಗಳಿಂದ ಟೈಮ್ಸ್ ಆಫ್ ಇಂಡಿಯಾ ಸಂಸ್ಥೆಯ ವಿಜಯ ಕರ್ನಾಟಕ ಹಾಗು ವಿಜಯ next ಪತ್ರಿಕೆಗಳ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ನಿಧನ ನಿಜಕ್ಕೂ ತುಂಬಲಾರದ ನಷ್ಟ.  

Tuesday, February 28, 2012

ಚೇತರಿಸಿಕೊಂಡ "ನಿತ್ಯೋತ್ಸವ ಕವಿ" ಮತ್ತು ಹೃದಯವಂತಿಕೆ


ಕವಿ ನಿಸಾರ್ ಅಹಮದ್
 ನಿತ್ಯೋತ್ಸವ ಕವಿ ಎಂದೇ ಕರೆಸಿಕೊಂಡಿರುವ ಕವಿ ಪ್ರೊ.ನಿಸಾರ್ ಅಹಮದ್ ಅವರು ಹುಷಾರ್ ಇಲ್ಲದಾಗಿನಿಂದ ಅವರನ್ನು ಇಷ್ಟಪಡುವ, ಪ್ರೀತಿಸುವ, ಅವರ ಬರಹಗಳಿಂದ ಪ್ರಭಾವಿತರಾಗಿರುವ ಲೆಕ್ಕವಿಲ್ಲದಷ್ಟು ಕವಿ ಪ್ರೇಮಿಗಳಿಗೆ ದಿಗಿಲು ಬದಿದಂತಾಗಿದೆ. ನನಗೆ ತಿಳಿದ ಮಟ್ಟಿಗೆ ಎಸ್ಟೋ ಜನ ಅವರು ಚೇತರಿಸಿಕೊಳ್ಳಲಿ ಎಂದು ಪೂಜೆ ಮಾಡಿದ್ದಾರೆ (ಆದರೆ ಅದು ಎಲ್ಲೂ ಸುದ್ದಿಯಾಗಿಲ್ಲ). ಅಲ್ಲಾನನ್ನು ಬೇಡಿದ್ದರೆ, ಮಂದಿರದಲ್ಲಿ ಪ್ರಾರ್ಥಿಸಿದ್ದಾರೆ. ನಿಸಾರ್ ಸರ್ ಹುಷಾರಿ ಬರಲಿ ಎಂದು ಹಾರೈಸಿದ್ದಾರೆ. ಆಧಾರ ಫಲವೋ ಏನೋ ಎಂಬಂತೆ ದಿನಗಳೆದಂತೆ ನಿಸಾರ್ ಸರ್ ಚೇತರಿಸಿಕೊಳ್ಳುತ್ತಿದ್ದಾರೆ.
ನಿಸಾರ್ ಕೇವಲ ಕವಿ ಅಥವಾ ಸಾಹಿತಿ ಮಾತ್ರವಲ್ಲ, ಉತ್ತಮ ಸಹೃದಯಿ. ಮಗು ಮನಸ್ಸಿನ "ಕವಿರಾಜ". ಅವರ ಅಂಥ ಗುಣದಿಂದಲೇ ಇಂದು ಅವರನ್ನ ಕನ್ನಡ ನಾಡು ಮಾತ್ರವಲ್ಲ ಇತರ ರಾಜ್ಯಗಳು, ಅಮೇರಿಕ, ಲಂಡನ್ದು, ಬೈ, ಕುವೈತ್ ಮುಂತಾದ ದೇಶಗಳಲ್ಲೂ ಅವರನ್ನು ಪ್ರೀತಿಸುವ ಜನರಿದ್ದಾರೆ. ಮೊದಲನೆಯದಾಗಿ ಅವರು ಚೇತರಿಸಿಕೊಳ್ಳಲಿ ಎಂದು ಹರಸಿದ ಎಲ್ಲ ಕವಿಪ್ರೀತಿ ಹೃದಯಗಳಿಗೆ ಅವರ ಹಾಗೂ ಅವರ ಶಿಷ್ಯನಾದ ನನ್ನ ಪರವಾಗಿ ಧನ್ಯವಾದಗಳು.
ನಿಸಾರ್ ಜೊತೆ ಸಮಾಲೋಚನೆ ವೇಳೆ.
ನಿಜ ಹೇಳ ಬೇಕೆಂದರೆ ಅವರು ನನ್ನಗೆ "ನಿತ್ಯೋತ್ಸವ" ಕವಿತೆಯ ಮೂಲವೇ ಪರಿಚಯವಾದದ್ದು. ಅಲ್ಲಿಂದ ನಿರಂತರವಾಗಿ ಅವರ ಸನಿಹದಲ್ಲಿಯೇ ಇದ್ದು ಅವರಿಂದ ಸಾಕಷ್ಟು ಬುದ್ದಿವಾದ ಕೇಳಿಸಿಕೊಂಡು ಬೆಳೆದವನು ನಾನು. ಪುಟ್ಟ ಮಗುವೊಂದು ಒಂದು ಹೂವು ಹಿಡಿದು "ಹ್ಯಾಪಿ ಬರ್ತ್ ಡೇ... ತಾತ" ಎಂದಾಗಲು ಅದನ್ನು ಎತ್ತಿ ಒಂದು ಮುತ್ತು ಜತೆಗೊಂದು ಜೇಬಲ್ಲಿದ್ದ ಚಾಕೊಲೆಟ್ ಕೊಟ್ಟು "ನೂರು ಕಾಲ ಬಾಳಪ್ಪ" ಎಂದು ಹರಸುವ ಮಧುರ ಮನಸ್ಸು ಅವರದ್ದು. ಅವರಿಗಿಂತ ಹಿರಿಯರಾದವರು ಅವರನ್ನು ನೋಡಲು ಹೋದಾಗಲೂ "ಇಲ್ಲಿವರೆಗೆ ಯಾಕೆ ಈ ವಯಸ್ಸಲ್ಲಿ ಬರೋಕೆ ಹೋದ್ರಿ? ಒಂದು ಫೋನ್ ಮಾಡಿದ್ರೆ ಸಾಕಿತ್ತು ಅಲ್ವ... ನಿಮ್ಮ ಆರೋಗ್ಯ ಚನ್ನಾಗಿ ನೋಡಿಕೊಳ್ಳಿ" ಎಂದು ಕಾಲಟಿ ತೋರುತ್ತಿದ್ದ ತಾಯಿ ಪ್ರೀತಿ ಅವರದು.
ನಿಸಾರ್ ಹಾಗು ಅವರ ಮಡದಿ
 ಷಾನವಾಜ್ ಬೇಗಂ ಜೊತೆ ನಾನು
ಅಂಥ  ಕವಿ ಕೆಲವು ದಿನಗಳ ಹಿಂದೆ ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ನ್ಯುಮೋನಿಯಕ್ಕೆ ಚಿಕಿತ್ಸೆ ಪಡೆಯಲು ದಾಖಲಾದಾಗ ನನಗಂತೂ ಆಕಾಶವೇ ತಲೆ ಮೇಲೆ ಬಿದ್ದ ಅನುಭವ. ಅವರು ಆಸ್ಪತ್ರೆಗೆ ಸೇರಿದಾಗಿನಿಂದ ನಿತ್ಯ ನಾನು ಅವರ ಸಂಪರ್ಕದಲ್ಲಿದ್ದೇನೆ, ಅವರ ಆರೋಗ್ಯ ವಿಚಾರಿಸುತ್ತಿದ್ದೇನೆ. ಅವರಿಗೆ ಚಿಕಿತ್ಸೆ ಕೊಡುತ್ತಿರುವ ಮೂವರು ವೈದ್ಯರ ಜೊತೆ ಸಮಾಲೋಚನೆ ನಡೆಸಿದ್ದೇನೆ. ಅವರ ಪ್ರಕಾರ ಈಗ ನಿಸಾರ್ ಸರ್ ಚೇತರಿಸಿಕೊಳ್ಳುತ್ತಿದ್ದಾರೆ. ಇಸಿಯೂನಿಂದ ಈಗ ಅವರನ್ನು ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ಆದರೆ ಅಲ್ಲಿ ಅವರನ್ನು ನೋಡಲು ಬರುವರಿಂದ ಅವರು ದೂರ ಇದ್ದಾರೆ ಒಳ್ಳೆಯದು ಎಂದು ವೈದ್ಯರು ತಿಳಿಸಿದ್ದಾರೆ. ಕಾರಣ ಇಷ್ಟೇ, ಬಂದವರನ್ನು ನೋಡಿದ ತಕ್ಷಣ ನಿಸಾರ್ ಸರ್ ಸುಮ್ಮನೆ ಇರುವುದಿಲ್ಲ. ಅವರ ಜೊತೆ ಮಾತಿಗೆ ಇಳಿಯುತ್ತಾರೆ. ಅವರಿಗಿಂತ ಮೊದಲೇ ಇವರೇ ಬಂದವರ ಆರೋಗ್ಯ ವಿಚಾರಿಸುತ್ತಾರೆ. ಇದೆ ವೈದ್ಯರಿಗೆ ಸವಾಲಾಗಿದೆ. ಆದರು ಸಂದರ್ಶಕರನ್ನು ಸಾಕಷ್ಟು ಅವೈಡ್ ಮಾಡಿದ್ದಾರೆ. ಇದು ಕೇವಲ ಅವರ ಆರೋಗ್ಯಕ್ಕಾಗಿ, ಕವಿ ಬೇಗ ಚೇತರಿಸಿಕೊಳ್ಳಲಿ ಎಂಬ ಸದುದ್ದೇಶದಿಂದ. ಹಾಗಾಗಿ ವೈದ್ಯರಿಗೆ ಥ್ಯಾಂಕ್ಸ್ ಹೇಳಲೇಬೇಕು.
ಅವರ 75 ನೇ ವರ್ಷದ ನೆನಪಿಗೆ ನೀಡಿದ
 "ನಿತ್ಯೋತ್ಸವ" ಸಿಡಿ (ಚಿತ್ರ: ರವೀಂದ್ರ ನಾಯಕ್) 
ನಿತ್ಯ ಅವರನ್ನು ನೋಡಲು ಬಂದವರ ಜೊತೆ ನಿಸಾರ್ ಮಾತನಾಡದೆ ಇರಲಾರರು. ಮೊನ್ನೆ ಬೆಳಗ್ಗೆ ನಿಸಾರ್ ಅವರನ್ನು ನೋಡಲು ಎಂದಿನಂತೆ ಹೊರತು ನಿಂತಾಗ ನನ್ನ ಮಡದಿ ಉಷಾ "ನಾನು ಬರುತ್ತೇನೆ, ಅವರನ್ನೊಮ್ಮೆ ನೋಡಬೇಕು ಅನಿಸುತ್ತಿದೆ" ಎಂದು ಹಟಕ್ಕೆ ಬಿದ್ದವಳಂತೆ ಆಡತೊಡಗಿದಳು.  ಸರಿ ಇನ್ನೇನು ಮಾಡುವುದು ಎಂದು ಕರೆದುಕೊಂಡು ಹೋದೆ. ನಾವು ಅವರ ವಾರ್ಡ್ಗೆ ಕಾಲಿಡುತ್ತಿದ್ದಂತೆಯೇ ನನ್ನ ಮಡದಿಯನ್ನು ಮೊದಲೇ ಗೊತ್ತಿದ್ದಿದ್ದರಿಂದ ಹೇಗಿದ್ದೀಯಮ್ಮ, ಆರೋಗ್ಯನ... ಎಂದು ವಿಚಾರಿಸಿದರು. ಅವಳಿಗೆ ಸ್ವಲ್ಪ ಕಸಿವಿಸಿ ಆಯಿತು "ಆಸ್ಪತ್ರೆಯಲ್ಲಿರುವವರು ನೀವು, ನಾವು ನಿಮ್ಮ ಆರೋಗ್ಯ ವಿಚಾರಿಸಲು ಬಂದಿದ್ದು. ನೀವು ದಯಮಾಡಿ ಹೇಗೆಲ್ಲ ಮಾತನಾಡದೆ ವಿಶ್ರಾಂತಿ ತೆಗೆದುಕೊಳ್ಳಿ" ಎಂದಳು. ನಾನು ಕೂಡ ಅದನ್ನೇ ಬೆಂಬಲಿಸಿದೆ. ಆಗ ವೈದ್ಯರು ಹತ್ತಿರ ಬಂದು ಅವರು ಹೇಳಿದ್ದು ಸರಿ ಎಂದರು. ಆನಂತರ ಚಿಕತ್ಸೆ ಮುಂದುವರಿಯಿತು...
ಹೀಗೆ ಸದಾ ಬೇರೆಯವರಿಗೆ ಒಳಿತನ್ನೇ ಬಯಸುವ ಕವಿ ನಿಸಾರ್, ತಮ್ಮ ಬಗ್ಗೆ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರ ತಪ್ಪಿದ್ದು ನಿಜ. ಅದೂ ಈ ಇಲಿ ವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾದದ್ದು ತೀರ ಮುಖ್ಯ. ಅದನ್ನು ಬದಿಗಿಟ್ಟು ಅವರು ಹೆಚ್ಚು ಓಡಾಟದಲ್ಲಿ ತೊಡಗಿದ್ದರು. ಅದು ಜನರ ಪ್ರೀತಿಗಾಗಿ. ಆ ಪ್ರೀತಿಯೇ ಅವರನ್ನು ಇಂದು ಕಾಪಾಡಿದೆ. ಆ ಪ್ರೀತಿ ನೀಡಿದ ನಿಮ್ಮೆಲ್ಲರಿಗೂ ಅನಂತ ಅನಂತ ಧನ್ಯವಾದಗಳು...

Wednesday, February 8, 2012

ಸದನದಲ್ಲಿ "ಕಾಮ ಕಲಾಪ": ನಾವು ನೀವು ಮತ್ತು ಕರ್ನಾಟಕದ ಮಾನ

ಪ್ರಜಾಪಭುತ್ವದ ನಿಜವಾದ ದೇಗುಲ ವಿಧಾನ ಸೌಧ. ಅಲ್ಲಿ ಏನು ನಡೆಯಬಾರದಿತ್ತೋ ಅದು ನಿನ್ನೆ (ಫೆ.೭) ನಡೆದು ಹೋಗಿದೆ. ಜತೆಗೆ ಅದೇ ದಿನ ಹೋರಾಟಗಾರ್ತಿ ಮೇಧಾ ಪಾಟ್ಕರ್ ರಾಜ್ಯ ಸರಕಾರದ "ಬಸವಶ್ರೀ ಪ್ರಶಸ್ತಿ" ಯನ್ನು ತಿರಸ್ಕರಿಸಿದ್ದಾರೆ. ಅಲ್ಲಿಗೆ ಒಟ್ಟೊಟ್ಟಿಗೆ ಎರಡು ರೀತಿಯಲ್ಲಿ ಕರ್ನಾಟಕದ ಮಾನ ಹಾರಜಿಗೆ ಬಿದ್ದಿದೆ!!
ವಿಧಾನ ಸೌಧದಲ್ಲಿ ನಡೆದ "ಕಾಮ ಕಲಾಪ"ಕ್ಕೆ ಸಂಬಂದಿಸಿದಂತೆ ಮೂವರು ಸಚಿವರ ತಲೆ ದಂಡ ಕೂಡ ಆಗಿದೆ ನಿಜ. ಆದರೆ ಅವರು ಮೊದಲು ಶಾಸಕರು, ಆಮೇಲೆ ಸಚಿವರು. ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಅಲ್ಲಿಗೆ ಈ ಪ್ರಕರಣ ಮುಗಿಯಿತ...? ಒಂದು ವೇಳೆ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದರೆ ಮತ್ತೆ ಚುನಾವಣಾ, ಅಲ್ಲೊಂದಿಷ್ಟು ಹೆಂಡ- ಹಣದ ನರ್ತನ. ಮತ್ತೆ ಅದೇ ಜನಪ್ರತಿನಿಧಿಗಳು. ಆನಂತರ ಮತ್ತೆ ಯಥಾ: ಸ್ಥಿತಿ. ಇಷ್ಟೇನೆ...? ಇಂಥದ್ದೊಂದು ಪ್ರಶ್ನೆಯನ್ನ ಈ ಸಮಾಜದಲ್ಲಿ ಬದಕುವ ನಾವೆಲ್ಲರೂ ನಮಗೆ ನಾವೇ ಹಾಕಿಕೊಳ್ಳಬೇಕಿದೆ.
ಮೂರು ತಿಂಗಳ ಹಿಂದೆ ನಾನು ನನ್ನ ಸ್ನೇಹಿತರೊಬ್ಬರ ಹಳ್ಳಿ ಮನೆಗೆ ಹೋಗಿದ್ದೆ. ಅಲ್ಲಿ ಒಂದು ಕುಟುಂಬದ ನಡುವೆ ಹಹಲ ದೊಡ್ಡದಾಗಿ ಜಗಳ ನಡೆಯುತ್ತಿತ್ತು. ನಾನು ಕುತೂಹಲಕ್ಕಾಗಿ ಜತೆಗೆ ಅದು ನನ್ನ ಸ್ನೇಹಿತನ ಸಂಬಂದಿಗಳ ಜಗಳ ಎನ್ನುವ ಕಾರಣಕ್ಕೆ ಅಲ್ಲಿ ಹೋದೆ. ಆಸ್ತಿಗಾಗಿ ಅಣ್ಣ ತಮ್ಮನ ನಡುಉವೆ ಜಗಳ ನಡೆದಿತ್ತು. ತಮ್ಮ ಅಣ್ಣನ ತಲೆ ಒಡೆದಿದ್ದ...! ಅದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿರಲಿಲ್ಲ. ಬದಲಿಗೆ ಗ್ರಾಮದವರೇ ಅದನ್ನು ಪಂಚಾಯಿತಿ ಮೂಲಕ ಬಗೆಹರಿಸೋಣ, ಊರಿಗೆ ಪೊಲೀಸರು ಬರುವುದು ಬೇಡ ಎಂದು ತೀರ್ಮಾನಿಸಿ ಪಂಚಾಯಿತಿ ಕರೆದಿದ್ದರು. ಆಗ ತಮ್ಮ ಅಣ್ಣನ ತಲೆ ಒಡೆದಿದ್ದು. ಆಟ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದುದು ಎಲ್ಲವು ಕಣ್ಣ ಮುಂದೆ ಇತ್ತು. ಜತೆಗೆ ಜಗಳ ನಡೆಯುವಾಗ ಅದನ್ನ ನೋಡಿದವರು ಇದ್ದರು. ಆದರು ಆ ತಮ್ಮ ಪಂಚಾಯಿತಿಯಲ್ಲಿ ನನ್ನ ಅಣ್ಣನ ತಲೆಯನ್ನು ನಾನು ಒದೆದಿಲ್ಲ ಇದೆಲ್ಲ ಸುಳ್ಳು ಕಥೆ, ನಾನು ಯಾವ ದೇವರ ಮೇಲಾದ್ರು ಪ್ರಮಾಣ ಮಾಡಿ ಹೇಳ್ತೇನೆ. ನಾನು ಆ ತಪ್ಪು ಮಾಡಿಲ್ಲ ಎನ್ನುತ್ತಿದ್ದ.
ಇದರಿಂದ ಸಿಟ್ಟಿಗೆದ್ದ ಪಂಚಾಯಿತಿಯ ಹಿರಿಯರು "ಅಲ್ಲಯ್ಯ ಊರವರೆ ಎಸ್ಟೋ ಜನ ನೀವು ಜಗಳ ಆಡಿದ್ದು, ನೀನು ತಲೆ ಒಡೆದಿದ್ದು ಎಲ್ಲ ನೋಡಿದಾರೆ. ಆದರು ಹೀಗೆ ಹೇಳ್ತಿಯಲ್ಲ" ಎಂದಾಗ ಆಟ ಹೇಳಿದ " ಈ ರಾಜ್ಯದ ಮುಕ್ಯಮಂತ್ರಿಯಾದವ್ರೆ ದೇವರ ಮೇಲೆ ಆನೆ ಮಾಡಿ ಹೇಳ್ತಾರೆ, ನಾನು ಆಣೆ ಮಾಡಿ ಹೇಳಿದ್ರೆ ತಪ್ಪೇನು. ನಾನು ಆ ಕೆಲಸ ಮಾಡೇ ಇಲ್ಲ..." ಎಂದ. ನಾನು ಮಾತ್ರವಲ್ಲ ಅಲ್ಲಿ ನೆರೆದ ಅಷ್ಟೂ ಜನ ಅವನ ಮಾತಿನಿಂದ ಬೆಚ್ಚಿ ಬಿದ್ದಿದ್ದರು.( ಇದು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರ ಆಣೆ ಪ್ರಮಾಣದ ಎಫೆಕ್ಟ್.)
****
ಇದಾಗಿ ಸ್ವಲ್ಪ ದಿನದ ಹಿಂದೆ... ಅದೇ ಊರಿನಲ್ಲಿ ಮತ್ತೊಂದು ಘಟನೆ ನಡೆದಿತ್ತು. ಅಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಪತ್ನಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಆಗ ಈ ವಿಚಾರ ಪಂಚಾಯಿತಿಗೆ ಬಂದಿತ್ತು. ಆಗ ಆ ಪ್ರಕರಣದಲ್ಲಿ ಅದಕ್ಕೂ ಕೂಡ ಗ್ರಾಮದ ಸಾಕಷ್ಟು ಜನ ಸಾಕ್ಷಿಯಿದ್ದರು. ಆದರೂ ಪಂಚಾಯಿತಿಯಲ್ಲಿ ಅವರಿಬ್ಬರೂ "ಈ ವಿಚಾರ ಆಕೆಯ ಗಂಡನಿಗೂ ಗೊತ್ತು. ಹೌದು, ಇದು ನಮ್ಮ ವಯಕ್ತಿಕ ವಿಚಾರ. ಇದು ನನ್ನ ಅವಳ ಇಷ್ಟ, ಕೇಳೋಕೆ ನೀವ್ಯಾರು?" ಎಂದು ಒಮ್ಮೆ ಹೇಳುತ್ತಿದ್ದನಂತೆ, ಇನ್ನೊಮ್ಮೆ ನಮ್ಮಿಬ್ಬರ ನಡುವೆ ಅಂತ ಯಾವ "ಕ್ರಿಯೆ" ಯೂ ನಡೆದೇ ಇಲ್ಲ. ನಾವು ನಿರಪರಾದಿಗಳು ಎಂದು ವಾದಿಸುತ್ತಿದ್ದರಂತೆ. ಇದೆಲ್ಲವನ್ನು ನೋಡಿ ಅಲ್ಲಿಯ ಜನ ಬೇಸತ್ತು ಹೋಗಿದ್ದಲ್ಲದೇ. ನಮ್ಮ ಊರು ಈ ಮಟ್ಟಕ್ಕೆ ಹಾಲಯಿತಲ್ಲ ಎಂದು ನೊಂದುಕೊಲ್ಲುತ್ತಿದ್ದಾರೆ. (ಇದು ಬಹುಶ: ರೇಣುಕಾಚಾರ್ಯ ಹಾಗು ಹಾಲಪ್ಪನ ಕಾಮ ಪ್ರಕರಣದ ಎಫೆಕ್ಟ್)
****
ಇನ್ನು ಮುಂದೆ ಹರೆಯದ ಯುವಕರು ತಮ್ಮ ಮೊಬೈಲ್ ಗಳಲ್ಲಿ ನೀಲಿ ಚಿತ್ರಗಳನ್ನು ಮನೆಯಲ್ಲೇ ನೋಡುತ್ತಾ ಇರುವಾಗ ಅಪ್ಪ ಅಮ್ಮ ಕೇಳಿದರೆ "ನೋಡಿದರೆ ತಪ್ಪೇನು...!?" ಎಂದರೂ ಆಶ್ಚರ್ಯ ಇಲ್ಲ. ಯಾಕಂದ್ರೆ ಇದೆಲ್ಲ. ರಾಜ್ಯ ಸರಕಾರದ ಹಾಗು ನಮ್ಮ ಜನಪ್ರತಿನಿಧಿಗಳ ಮಾದರಿಗಳು.
ಹಿಂದೆ ಸಿನಿಮಾ ರಂಗದ ನಾಯಕ, ನಾಯಕಿಯರನ್ನು ಅನುಕರಿಸುವ ಸಂಪ್ರದಾಯ ಇತ್ತು. ಆದರೆ ಈಗ ಜನ "ಚುನಾವಣೆಯಲ್ಲಿ ಆಯ್ಕೆಯಾದ ನಾಯಕರು"ಗಳನ್ನೂ ಬಹು ಬೇಗ ಅನುಕರಿಸುತ್ತಿದ್ದಾರೆ. ಅವರೇ ಇವರಿಗೆ ನಾಯಕರಾಗುತ್ತಿದ್ದಾರೆ. ಇಂಥ ಸಂಧರ್ಭದಲ್ಲಿ ತಳಮಟ್ಟದ ಜನ ಸಮುದಾಯವನ್ನು, ಸಮಾಜವನ್ನು ತಮ್ಮ ಸಚ್ಚಾರಿತ್ರ್ಯದ ಮೂಲಕ ಒಳ್ಳೆಯ ದಿಕ್ಕಿನ ಕಡೆಗೆ ನಡೆಸಿಕೊಂಡು ಹೋಗಬೇಕಾದ ಜನಪ್ರತಿನಿದಿಗಳು ಅವರನ್ನು ಹೇಗೆ ದಿಕ್ಕು ತಪ್ಪಿಸಿ, ತಾವು ಮಾಡುತ್ತಿರುವುದೇ ಸರಿ ಎಂದು ವಾದಿಸುವ ಕ್ರಮ ಇದೆಯಲ್ಲ ಅದಕ್ಕಿಂತ ಬೇರೆ ನಾಚಿಕೆಗೇಡಿನ ಕೆಲಸ ಇನ್ನೊಂದಿಲ್ಲ ಎನಿಸುತ್ತದೆ.
ಈ ಬಿಜೆಪಿ ಸರಕಾರ ಬಂದಂದಿನಿಂದ ಇಲ್ಲಿರುವ ಸಚಿವ, ಶಾಸಕರಿಗೆ ಅರ್ಧ ರಾತ್ರಿಯಲ್ಲಿ ಐಶ್ವರ್ಯ ಬಂದ ಹಾಗಾಗಿದೆ. ಅದಕ್ಕಾಗಿ ಇವರೆಲ್ಲ ಏನು ಮಾಡಿದರು ಅದು ಸರಿ ಎನ್ನುವಂತಾಗಿದೆ. ಸಚಿವ ರೇಣುಕಾಚಾರ್ಯ ತಮ್ಮ ಹಾಗು ಜಯಲಕ್ಷ್ಮಿ ಸೆಕ್ಸ್ ಪ್ರಕರಣವನ್ನು ಸಮರ್ತಿಸಿಕೊಂಡು ಮಂತ್ರಿಯಾದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಾವು ಏನೇ ತಪ್ಪು ಮಾಡಿದರು ಅದು ಸರಿ ಎಂದು ಭಂಡತನದಲ್ಲಿ ವಾದಿಸುತ್ತಲೇ ಕೆಳಗಿಳಿದರು. ಹಾಲಪ್ಪ ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳದೆ ನಾನು "ಮಾಡೇ ಇಲ್ಲ" ಎಂದು ವಾದಿಸುತ್ತಲೇ ಹೋದರು. ಕಟ್ಟಾ, ಜನಾರ್ಧನ ರೆಡ್ಡಿ ತಾವು ಯಾವ ತಪ್ಪೂ ಮಾಡಿಲ್ಲ. ಇದು ಪ್ರತಿ ಪಕ್ಷಗಳ ಕೈವಾಡ ಎಂದು ತಿಪ್ಪೆ ಸಾರಿಸಲು ಯತ್ನಿಸಿ ಜೈಲು ಸೇರಿದರು.
ಮೊನ್ನೆ ಮೊನ್ನೆಯಷ್ಟೇ ಕರಾವಳಿಯಲ್ಲಿ ನಡೆದ ಸೈಂಟ್ ಮೇರೀಸ್ ದ್ವೀಪದಲ್ಲಿ ನಡೆದ ರೇವು ಪಾರ್ಟಿಯನ್ನು ಮುಖ್ಯಮಂತ್ರಿ ಸದಾನದ ಗೌಡ "ಇದು ಪ್ರವಾಸೋದ್ಯಮದ ಸಂಸ್ಕೃತಿ" ಇಲ್ಲಿ ಯಾವುದೇ ಅನಾಚಾರ ನಡೆದಿಲ್ಲ ಎಂದು ಸಮರ್ತಿಸಿಕೊಂಡರು. ಅದರ ಬೆನ್ನಲ್ಲೇ ಈಗ ಸಚಿವರಾದ ಲಕ್ಷ್ಮಣ ಸವದಿ "ಸಹಕಾರ" ದಿಂದ ಸಿ.ಸಿ.ಪಾಟೀಲ್ ಹಾಗು ಕೃಷ್ಣ ಪಾಲೆಮಾರ್ ವಿಧಾನ ಸೌಧದಲ್ಲಿಯೇ ನೀಲಿ ಚಿತ್ರ ವೀಕ್ಷಣೆ ಮಾಡಿ "ಹೊಸ ಸಂಸ್ಕೃತಿ" ಗೆ ನಾಂದಿ ಹಾಡಿದ್ದಾರೆ. ಜೊತೆಗೆ ಅದು ತಪ್ಪೇ ಅಲ್ಲ, ನಾವು ನಿರಪರಾದಿಗಳು. ಇದು ಮಾದ್ಯಮಗಳ ಪಿತೂರಿ ಎನ್ನುವಂತೆ ನಾಚಿಕೆ ಬಿಟ್ಟು ಸಮರ್ಥಿಸಿಕೊಂಡಿದ್ದಾರೆ! ಜೊತೆಗೆ ಅದಕ್ಕೆ ಮುಸ್ಲಿಂ ದೇಶದಲ್ಲಿ ಒಬ್ಬ ಮಹಿಳೆಯ ಮೇಲಿನ ದೌರ್ಜನ್ಯವನ್ನು ವೀಕ್ಷಿಸುತ್ತಿದ್ದೆ ಎಂದು ಹೇಳುವ ಮೂಲಕ ಇಲ್ಲೂ ಕೂಡ ತಮ್ಮ ಕೊಮುವಾದಿತನವನ್ನು ಪ್ರದರ್ಶಿಸಲು ಮುಂದಾಗಿ ಸೋತಿದ್ದಾರೆ.
ಅಲ್ಲಿಗೆ ಬಿಜೆಪಿಯ ಒಳಗೆ "ನಿಜ ರಾಮನಿಲ್ಲ" ಇಲ್ಲಿರುವುದು "ಕಾಮ" ಮಾತ್ರ ರಾವನಿನ ಹೊಲಿಕೆಗೂ ಇವರು ಸಮರ್ತರಲ್ಲ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ.
ಇದಕ್ಕೆ ಸರಿ ಹೊಂದುವಂತೆ ಬಿಜೆಪಿಯ ರಾಜ್ಯಾದ್ಯಕ್ಷ ಈಶ್ವರಪ್ಪ, ಮುಖ್ಯ ಮಂತ್ರಿ ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲರು "ಅವರೇ ಸ್ವಯಂಪ್ರೇರಿತರಾಗಿ ರಾಜೆನಾಮೆ ನೀಡಿದ್ದಾರೆ" ಎಂದು ಹೇಳುವ ಮೂಲಕ ತಿಪ್ಪೆ ಸಾರಿಸಲು ಯತ್ನಿಸುತ್ತಿದ್ದಾರೆ.
ಪಕ್ಷೇತರ ಶಾಸಕರನ್ನು ರಾತ್ರೋ ರಾತ್ರಿ ವಜಾಗೊಳಿಸಿ ತಮ್ಮದು ಸಮರ್ಥ ನಿರ್ಧಾರ ಎಂದು ಹೇಳಿಕೊಂಡಿದ್ದ ಸ್ಪೀಕರ್ ಭೂಪಯ್ಯ ಕೂಡ ಮಾಧ್ಯಮದಲ್ಲಿ ಅಸ್ಟೆಲ್ಲ ಸುದ್ದಿಯಾಗಿದ್ದರು "ಅದು ನನ್ನ ಗಮನಕ್ಕೆ ಬಂದಿಲ್ಲ" ಎಂದರು. ಆನತರ "ಕಾನೂನು ಏನು ಹೇಳುತ್ತದೆ ನೋಡಿ ಅದರ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ" ಎಂದರು. ಅಂದರೆ ಅಲ್ಲಿ ಸ್ಪೀಕರ್ ಗೂ ಸಂಪೂರ್ಣ ಅಧಿಕಾರ ಇಲ್ಲ ಎನ್ನುವುದು ಶ್ರೀರಾಮುಲು ಪ್ರಕರಣದ ನಟರ ಮತ್ತೊಮ್ಮೆ ಸಾಬೀತಾಗಿದೆ ಇಲ್ಲವೇ ಸ್ಪೀಕರ್ ಕೂಡ ಬಿಜೆಪಿ ಪಕ್ಷದ ಪರವಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.
ಬಿಜೆಪಿ ಹಾಗು ಸಂಘ ಪರಿವಾರದ "ಯೋಗ ಶಿಬಿರ" ನಡೆದ ದಿನವೇ ವಿಧಾನ ಸೌಧದಲ್ಲಿ ಮತ್ತೊಂದು "ಯೋಗ ಪುರಾಣ" ಹೊರಬಿದ್ದಿದ್ದು. ಅದೇ ದಿನ ರಾಜ್ಯ ಸರಕಾರ ನೀಡಲು ಇಚ್ಚಿಸಿದ್ದ "ಬಸವಶ್ರೀ ಪ್ರಶಸ್ತಿ"ಯನ್ನು ನರ್ಮದ ಬಚಾವೋ ಅಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್ "ಕರ್ನಾಟಕ ಸರಕಾರ ತನ್ನ ಹಗರಣಗಳ ಬಗ್ಗೆಯೇ ಸರಿಯಾದ ತನಿಖೆ ನಡೆಸಿಲ್ಲ ಅಂತ ಸರಕಾರ ನೀಡುವ ಪ್ರಶಸ್ತಿ ನನಗೆ ಬೇಡ" ಎಂದು ತಿರಸ್ಕರಿಸಿರುವುದು ಈ ರಾಜ್ಯದ ಜನತೆಗೆ ತೀರ ನಾಚಿಕೆಗೇಡಿನ ಸಂಗತಿ.
ಇಂಥ ಹೀನ ಜನಪ್ರತಿನಿಧಿಗಳಿಗೆ ಜನಸಾಮಾನ್ಯರು ಮುಂದೆಯಾದರೂ ಸರಿಯಾದ ಪಾಠ ಕಲಿಸಲೇಬೇಕು. ಇಲ್ಲದೆ ಹೋದರೆ ಅದರ ಪರಿಣಾಮವನ್ನು ಜನಸಾಮಾನ್ಯರೇ ಉಣ್ಣಬೇಕಾದ ದಿನ ದೂರವಿಲ್ಲ... ಎಚ್ಚ್ಚರ...
Powered By Blogger